ವಸ್ತುಪ್ರದರ್ಶನದಲ್ಲಿ ಮನಸೂರೆಗೊಂಡಭರತನಾಟ್ಯ ಪ್ರದರ್ಶನ

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಚಾಮರಾಜನಗರದ ಶ್ರೀ‌ ಶಾರದ ನೃತ್ಯಾಲಯದವರು ನಡೆಸಿಕೊಟ್ಟ ಭರತನಾಟ್ಯ ನೃತ್ಯವೈಭವ ಎಲ್ಲರ ಮನ ಸೂರೆಗೊಂಡಿತು.

ಈ ಪ್ರದರ್ಶನವನ್ನ ವಿದ್ವಾನ್ ಮಹೇಶ್ ವಿ ಮತ್ತು ತಂಡ ನಡೆಸಿಕೊಟ್ಟಿತು.

ಬಸವಣ್ಣನವರ ವಚನ ಆಧಾರಿತ ನೃತ್ಯ ಕರ್ನಾಟಕ ಸಂಭ್ರಮ, ಕೃಷ್ಣಲೀಲಾ ಹಾಗೂ ಮಹಿಷಮರ್ಧಿನಿ, ಶಬರಿಮಲೆ ಸ್ವಾಮಿ ಅಯ್ಯಪ್ಪ ಕುರಿತಾದ ಹರಿವರಾಸನಂ ನೃತ್ಯಗಳನ್ನ ನಾಟ್ಯ ಶಾಲಾ ಮಕ್ಕಳು ಪ್ರದರ್ಶಿಸಿದರು.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್ ಅವರು ಪ್ರದರ್ಶನ ನಡೆಸಿದ‌ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದರು

ಈ ಸಂಧರ್ಭದಲ್ಲಿ ಸಾಂಸ್ಕೃತಿಕ ಸಮಿತಿ ಉಪಾಧ್ಯಕ್ಷ ರಾಜೇಶ್ ಸಿ ಗೌಡ, ಚಂದ್ರಕಲಾ ನಿರೂಪಕ ಅಜಯ್ ಶಾಸ್ತ್ರಿ, ಈಶ್ವರ್ ಮತ್ತಿತರರು ಹಾಜರಿದ್ದರು,

ವಸ್ತುಪ್ರದರ್ಶನದಲ್ಲಿ ಮನಸೂರೆಗೊಂಡಭರತನಾಟ್ಯ ಪ್ರದರ್ಶನ Read More

ವಸ್ತುಪ್ರದರ್ಶನದಲ್ಲಿ ಮನ ರಂಜಿಸಿದ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ ಕಾರ್ಯಕ್ರಮ ಎಲ್ಲರ ಮನ ರಂಜಿಸಿತು.

ಜನಪ್ರಿಯ ಕಲಾವಿದ ಮಿಮಿಕ್ರಿ ಗೋಪಿ ಮಾತನಾಡಿ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು, ಗಂಡ್ ಮಕ್ಕಳು ಈಗೀಗ ರಾಂಗು ಗುರು ಎಂದು ಪ್ರಾಸ್ತಾಪಿಸುತ್ತಿದ್ದಂತೆ ಜನ ಖುಷಿ ಪಟ್ಟರು.

ಇತ್ತೀಚಿನ ದಿನಗಳಲ್ಲಿ ಪುರುಷರು ಸಾಧನೆ, ಸಂಪಾದನೆ, ದುಡಿಯುವ ಜವಬ್ದಾರಿ ಮರೆತು, ಅತಿಯಾಸೆಗೆ ಜೂಜು ಮೋಜು ಮತ್ತು ವ್ಯಸನದ ಅಮಲಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರಪಟ್ಟರು.

ಯಾವ ವೃತ್ತ ನೋಡಿದರೂ ಮತ್ತೆ ಹುಟ್ಟಿ ಬಾ ಗೆಳೆಯ ಎಂದು ಯುವಕರ ಶ್ರದ್ದಾಂಜಲಿ ಫ್ಲೆಕ್ಸ್ ರಾರಾಜಿಸುತ್ತಿದೆ, ಪೋಷಕರಿಗೆ ಕಣ್ಣೀರು ಹಾಕಿಸಿ ಹೋದವರಲ್ಲಿ ಯುವಕರೇ ಹೆಚ್ಚು. ಆದರೆ ಯುವತಿಯರು ಹಾಗಲ್ಲ ಬೆಳಗಿನ ಜಾವವೇ ಸ್ವಚ್ಚವಾಗಿ ಮನೆಗೆಲಸ ಮಾಡಿ, ಮನೆಯವರಿಗೆಲ್ಲಾ ಅಡುಗೆ ಊಟೋಪಚಾರ ಕೊಟ್ಟು, ದೀಪ ಬೆಳಗುತ್ತಾ ಮನೆ ಕಾಪಾಡುತ್ತಾರೆ ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂದು ನಗುವಿನ ಚಟಾಕಿ ಹಾರಿಸಿದರು.

ಯುವಕರಿಗೆ ಆರೋಗ್ಯ ಮತ್ತು ಭವಿಷ್ಯದ ಕುಟುಂಬ ನಿರ್ವಹಣೆ ಜವಬ್ದಾರಿ ಸಂದೇಶ ಸಾರಿದರು.ಆಗ ಚಪ್ಪಾಳೆಯ ಸುರಿಮಳೆ ಸುರಿಯಿತು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಕಲಾವಿದರನ್ನ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು ಪ್ರತಿಯೊಂದು ಜೀವಕ್ಕೂ ಆರೋಗ್ಯ ಬಹಳ ಮುಖ್ಯ, ದುಡಿಮೆಯ ಒತ್ತಡದ ಬದುಕಿನಲ್ಲಿ ನೆಮ್ಮದಿ, ಆರೋಗ್ಯ ಕಾಪಾಡಿಕೊಳ್ಳದೇ ದೇಹ ಹದಗೆಡಿಸಿಕೊಂಡು ಔಷಧಿ ವಿಮೆ ಲ್ಯಾಬ್ ಟೆಸ್ಟ್ ಎಂದು ದಾರಿ ಹಿಡಿಯುವ ಬದಲು, ಪ್ರತಿದಿನ ಧ್ಯಾನ, ಸಂಗೀತ, ಕ್ರೀಡೆ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರು ಹಿರಿಯರು ಮಕ್ಕಳೊಂದಿಗೆ ಸಂಸಾರಕ್ಕೆ ಸಮಯ ನಿಗಧಿಪಡಿಸಿಕೊಳ್ಳಬೇಕು, ಮಧುಮೇಹ ರಕ್ತದೊತ್ತಡ ಹತೋಟಿಗೆ ಬರಲು ನಗು ಸಂತೋಷ ಬಹಳ ಮುಖ್ಯ, ಹಾಸ್ಯ ಕಾಲಾವಿದರಿಗೆ ನಮ್ಮ ಆರೋಗ್ಯವನ್ನ ಮಾನಸಿಕವಾಗಿ ಗುಣಪಡಿಸುವ ಶಕ್ತಿಯಿದೆ ಎಂದು ಹೇಳಿದರು.

ಮೆಲ್ಲಹಳ್ಳಿ ರಾಜೇಶ್. ಸಿ ಗೌಡ ನೇತೃತ್ವದಲ್ಲಿ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ ಕಾರ್ಯಕ್ರಮ ನಡೆಯಿತು.

ಮಿಮಿಕ್ರಿ ಗೋಪಿ, ಡಿಂಗ್ರಿ ನಾಗರಾಜ್, ರೇಖಾ ದಾಸ್, ಸಿಲ್ಲಿಲಲ್ಲಿ ಗೌಡ್ರು, ಜ್ಯೂನಿಯರ್ ಮಾಲಾಶ್ರೀ (ಮಂಜುಳ), ನಿರೂಪಕರಾದ ಶಿವಮೊಗ್ಗ ಭಾಸ್ಕರ್, ಅಜಯ್ ಶಾಸ್ತ್ರಿ, ಜ್ಯೂನಿಯರ್ ರಕ್ಷಿತಾ (ಲತಾ), ಜ್ಯೂನಿಯರ್ ರ್ವಿಷ್ಣುವರ್ಧನ್ (ಲಕ್ಷ್ಮಣ್), ಜ್ಯೂನಿಯರ್ ಅಂಬರೀಶ್ (ಸುರೇಶ್), ಜ್ಯೂನಿಯರ್ ಶಂಕರನಾಗ್, ವಿದ್ಯಶ್ರೀ, ಅಕ್ಷತಾ, ಅರ್ಪಿತಾ, ವರ್ಷನಂದಿನಿ, ಶಿಲ್ಪಾ, ಪ್ರಶಾಂತ್, ಅಭಿಲಾಷ್, ಐಶ್ವರ್ಯ ಮತ್ತು ಸಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕೆ. ರುದ್ರೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಕಾರ್ಯಾಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷರುಗಳಾದ ಸಯ್ಯದ್ ಅಶ್ರತುಲ್ಲಾ, ಗಯಾಜ್ ಅಹಮದ್, ಮಲ್ಲಿಕಾರ್ಜುನ ಮಲ್ಲಿಕ್, ರಾಜೇಶ್ ಸಿ ಗೌಡ, ಫಾಸಿಲ್ ಖಾನ್, ಫೈರೋಜ್ ಖಾನ್, ಪದ್ಮಾನಾಭನ್ ಗುಂಡಾ, ಮಹೇಂದ್ರ ಕಾಗಿನಲೆ, ರಂಗಸ್ವಾಮಿ ಪಾಪು, ಸದಸ್ಯರುಗಳಾದ ಮಹೇಶ್, ಚಂದ್ರಕಲಾ, ಕೋಮಲಾ, ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.

ವಸ್ತುಪ್ರದರ್ಶನದಲ್ಲಿ ಮನ ರಂಜಿಸಿದ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ Read More

ದಸರಾ ವಸ್ತು ಪ್ರದರ್ಶನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ

ಮೈಸೂರು: ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ‌ ಹಮ್ಮಿಕೊಳ್ಳಲಾಗಿದ್ದು,ಶನಿವಾರ ಚಾಲನೆ ನೀಡಲಾಯಿತು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ದಸರಾ ವಸ್ತು ಪ್ರದರ್ಶನದ ಆರೋಗ್ಯ ಮತ್ತು ಸ್ವಚ್ಛತಾ ಉಪಸಮಿತಿ ವತಿಯಿಂದ ವಸ್ತು ಪ್ರದರ್ಶನ ಆವರಣದಲ್ಲಿ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮಳಿಗೆಯನ್ನ ಉದ್ಘಾಟಿಸಲಾಯಿತು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಮಾತನಾಡಿ ಸಮಾಜದಲ್ಲಿ ಆರ್ಥಿಕ ಶ್ರೀಮಂತನಿಗಿಂತ ಆರೋಗ್ಯವಂತ ಮನುಷ್ಯನೇ ನಿಜವಾದ ಭಾಗ್ಯವಂತ ಎಂದು ಹೇಳಿದರು.

ಕಾಂಕ್ರಿಟ್ ಕಟ್ಟಡ, ವಾಯು ಮಾಲಿನ್ಯ ಹೆಚ್ಚಾಗಿ ನೈಜ ಪರಿಸರವನ್ನ ಹಾಳುಮಾಡಕೊಳ್ಳುತ್ತಿದ್ದೇವೆ, ಪ್ರತಿಯೊಬ್ಬರು ಆರೋಗ್ಯ ವಿಮೆ ಮಾಡಿಸಲು ಮುತುವರ್ಜಿ ವಹಿಸುವಷ್ಟೇ ಗಿಡ ನೆಡಲು ಮುಂದಾಗಬೇಕು
ಎಂದು ಕರೆ ನೀಡಿದರು.

ಪ್ರತಿಯೊಬ್ಬ ನಾಗರೀಕನೂ ಸಹ ಆರೋಗ್ಯ ಕಾಳಜಿ ವಹಿಸಬೇಕು,ವ್ಯಾಯಾಮ ಧ್ಯಾನ, ಆಹಾರ ಪದ್ದತಿಯ ಬಗ್ಗೆ ಹೆಚ್ಚು ಗಮನವಹಿಸಬೇಕು, ಕನಿಷ್ಠ 3ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಿಕೊಂಡರೆ‌ ನೆಮ್ಮದಿಯ ಆರೋಗ್ಯದೊಂದಿಗೆ ಬದುಕಬಹುದು ನಮ್ಮ ದಸರಾ ವಸ್ತುಪ್ರದರ್ಶನದಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿಯ ವತಿಯಿಂದ ಪ್ರತಿ ಶನಿವಾರ, ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಪ್ರವಾಸಿಗರು, ಪ್ರೇಕ್ಷಕರು ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಯೂಬ್ ಖಾನ್ ಕೋರಿದರು.

ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಗಂಧನಹಳ್ಳಿ ವೆಂಕಟೇಶ್ ಮಾತನಾಡಿ ಒತ್ತಡದ ದುಡಿಮೆಯ ವ್ಯಕ್ತಿಗಳ ಕುಟುಂಬಕ್ಕೆ ಆರೋಗ್ಯ ಬಹಳ ಮುಖ್ಯ, ಆರೋಗ್ಯ ಕೈಕೊಟ್ಟಾಗ ಮಾತ್ರ ಆಸ್ಪತ್ರೆ ಚಿಕಿತ್ಸೆ ಎಂದು ಅಲೆಯುವ ಬದಲು, ಆರೋಗ್ಯ ವೈಫಲ್ಯ ಸೂಕ್ಷ್ಮಗಳು ಬರುವ ಮುನ್ನವೇ ಆರೋಗ್ಯ ತಪಾಸಣೆಗೆ ಮುಂದಾದರೆ ಎಷ್ಟೋ ಪ್ರಾಣ ಉಳಿಯುತ್ತದೆ, ಈ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಿ ಇ ಒ ರುದ್ರೇಶ್,ಮಾಜಿ ಉಪ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಕುರುಬರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ, ಅಲ್ಪಸಂಖ್ಯಾತ ಅಧ್ಯಕ್ಷರಾದ ಆರಿಫ್ ಪಾಷಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿರಿಹುಂಡಿ ಬಸವಣ್ಣ, ಹಿನಕಲ್ ಉದಯ್, ದಕ್ಷಿಣಾಮೂರ್ತಿ, ಶೌಕತ್ ಅಲಿಖಾನ್, ಆರೋಗ್ಯ ಮತ್ತು ಸ್ವಚ್ಛತಾ ಉಪ ಸಮಿತಿಯ ಕಾರ್ಯಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಪದ್ಮನಾಭನ್, ಮೊಸಿನ್ ಖಾನ್, ನಾಜೀರ್ ಖಾನ್, ಮಹೇಂದ್ರ ಕಾಗಿನೆಲೆ, ಮಲ್ಲಿಕಾರ್ಜುನ್, ಜಗದೀಶ್, ರಂಗಸ್ವಾಮಿ, ಮತ್ತಿತರರು ಹಾಜರಿದ್ದರು.

ದಸರಾ ವಸ್ತು ಪ್ರದರ್ಶನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ Read More

ಮದ್ಯ,ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮುಖ್ಯ: ಅಯೂಬ್ ಖಾನ್

ಮೈಸೂರು: ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಅತೀ ಮುಖ್ಯವಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಜಾಗೃತರಾಗಬೇಕು ಎಂದು ಹೇಳಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜನರಲ್ಲಿ‌ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ನಿರ್ಮಿಸಿರುವ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಹಾಗೂ ವಿಶೇಷವಾಗಿ ದೇಶದ ಮುಂದಿನ ಜವಾಬ್ದಾರಿಯುತ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಮದ್ಯ ಮತ್ತು ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ, ಪ್ರಸ್ತುತ ಮುಖ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಜಾಗೃತಿ ಮಳಿಗೆ ಬಹಳ ಅರ್ಥಪೂರ್ಣವಾಗಿದೆ. ಮಳಿಗೆಯಲ್ಲಿ ಅನಾವರಣಗೊಳಿಸಿರುವ ವಿಷಯಗಳು, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಸೇರಿದಂತೆ ಸಮಾಜದಲ್ಲಿ ಉತ್ತುಂಗ ಸ್ಥಾನದಲ್ಲಿರುವ ಗಣ್ಯರ ಜಾಗೃತಿ ಸಂದೇಶ, ಸಮಾಜದಲ್ಲಿ ಗಟ್ಟಿಯಾಗಿ ಬೇರೂರಲು ಪ್ರಯತ್ನಿಸುತ್ತಿರುವ ದುಷ್ಟ ಚಟಗಳನ್ನು ನಿಯಂತ್ರಿಸುವ ಸಂಬಂಧ ಒಳ್ಳೆಯ ಕಾರ್ಯವಾಗಿದೆ ಎಂದು ‌ಶ್ಲಾಘಿಸಿದರು.

ಎಕ್ಸಿಬಿಷನ್ ಬರುವ ಪ್ರತಿಯೊಬ್ಬರೂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಳಿಗೆಗೆ ಭೇಟಿ ನೀಡಬೇಕು ಮತ್ತು ಇಲ್ಲಿ ಅನಾವರಣಗೊಳಿಸಿರುವ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದರಿಂದ ಮದ್ಯ ಮತ್ತು ಮಾದಕವಸ್ತುಗಳಿಂದ ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮಾಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಅಯೂಬ್ ಖಾನ್ ಅವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಕಟಿಸಿರುವ ಮದ್ಯ ಮತ್ತು ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪುಸ್ತಕ ಮತ್ತು ಮಡಕೆ ಪತ್ರವನ್ನು ಬಿಡುಗಡೆ ಗೊಳಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮಹೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಮದ್ಯ,ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮುಖ್ಯ: ಅಯೂಬ್ ಖಾನ್ Read More

ಮಹನೀಯರ‌ ನಾಮಫಲಕಗಳ ತೆರವು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ದಸರಾ ವಸ್ತುಪ್ರದರ್ಶನದ ಆವರಣದಲ್ಲಿ, ಕನ್ನಡ ನಾಡಿನ ನುಡಿ, ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತು ಹಾಕಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಜತೆಗೆ ಇದನ್ನು ಆಸ್ವಾದಿಸಲು ಬರುವವರಿಗೆ ಕನ್ನಡ ನಾಡಿನ ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಂದರೆ ಪುರಂದರದಾಸರು, ಕನಕದಾಸರು, ದರಾ ಬೇಂದ್ರೆ, ಕುವೆಂಪು, ಡಾ. ರಾಜಕುಮಾರ್ ವಿಕೃ ಗೋಕಾಕ್, ಟಿಎನ್ ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ ಪಿಟೀಲು ಚೌಡಯ್ಯ ಇವರ ಹೆಸರುಗಳನ್ನು ಇಲ್ಲಿನ ರಸ್ತೆಗಳಿಗೆ ನಾಮಪಲಕಗಳಾಗಿ ಅಳವಡಿಸಲಾಗಿದೆ.

ಆದರೆ ಸರ್ಕಾರ ಈಗ ಏಕಾಏಕಿ ನಾಡಹಬ್ಬ ದಸರಾ ದಿನವೇ ನಮ್ಮ ಸಂಸ್ಕೃತಿ ಪರಂಪರೆ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿರುವ ಮಹನೀಯರು ಗಳನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತೆಸೆದು ವಿಕೃತಿ ಮೆರೆಯಲಾಗಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ಕೂಡಲೇ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಿತ್ತು ಹಾಕಿರುವ ನಾಮಪಲಕಗಳನ್ನು ಅಳವಡಿಸಿ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಸೇನಾ ಪಡೆ ವತಿಯಿಂದ ವಸ್ತು ಪ್ರದರ್ಶನದ ಅಧ್ಯಕ್ಷರಿಗೆ ಮನವಿ ನೀಡಲಾಯಿತು.

ಈ ಮನವಿಗೆ ಸ್ಪಂದಿಸಿದ ವಸ್ತು ಪ್ರದರ್ಶನದ ಅಧ್ಯಕ್ಷರು, ಸಂಜೆಯೊಳಗೆ ಹೆರಿಟೇಜ್ ಮಾದರಿಯಲ್ಲಿ ಉನ್ನತ ದರ್ಜೆಯ ನಾಮಫಲಕಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಸುರೇಶ್ ಗೋಲ್ಡ್, ಪ್ರಭುಶಂಕರ್, ರಘು ಅರಸ್, ರಾಧಾಕೃಷ್ಣ ಹನುಮಂತಯ್ಯ ಅಕ್ಬರ್, ವಿಜಯೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಹನೀಯರ‌ ನಾಮಫಲಕಗಳ ತೆರವು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More

ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ-ಚೇತನ್ ಕಾಂತರಾಜ್ ಸ್ವಾಗತ

ಮೈಸೂರು: ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜನೆ ಮಾಡಲು ಹೊರಟಿರುವುದನ್ನು
ಜೈ ಭೀಮ್ ಜನಸ್ಪಂದನ ವೇದಿಕೆಯ ಅಧ್ಯಕ್ಷ ಚೇತನ್ ಕಾಂತರಾಜ್ ಸ್ವಾಗತಿಸಿದ್ದಾರೆ.

ಅದಕ್ಕಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್ ಅವರ ನಡೆ ಸ್ವಾಗತಾರ್ಹ ಎಂದ ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನದ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಮೊದಲು ಮೈಸೂರು ನಗರವು ಇಡಿ ಭಾರತದಲ್ಲಿ ಸ್ವಚ್ಛ ನಗರ ಎಂದು ಹೆಸರು ಪಡೆದಿತ್ತು, ಆದುದರಿಂದ ಈ ಬಾರಿಯ ದಸರಾ ಹಬ್ಬವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಚೇತನ್ ಕಾಂತರಾಜ್ ಕರೆ ನೀಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ-ಚೇತನ್ ಕಾಂತರಾಜ್ ಸ್ವಾಗತ Read More

ಗಜಪಡೆ,ಅಶ್ವಾರೋಹಿ ದಳದ ಮುಂದೆಕುಶಾಲತೋಪು ಅಂತಿಮ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಗಜಪಡೆ ಮತ್ತು ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಅಂತಿಮ ಹಂತದ ತಾಲೀಮು ನೆರವೇರಿಸಲಾಯಿತು.

ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಡೆದ ತಾಲೀಮಿನಲ್ಲಜ
ಗಜಪಡೆಯ ಅತ್ಯಂತ ಹಿರಿಯ ಆನೆ ವರಲಕ್ಷ್ಮಿ ಹೊರತುಪಡಿಸಿ ಉಳಿದ 13 ಆನೆಗಳು ಹಾಗೂ ಅಶ್ವಾರೋಹಿ ದಳದ 30 ಕ್ಕೂ ಹೆಚ್ಚು ಕುದುರೆಗಳು ಪಾಲ್ಗೊಂಡಿದ್ದವು.

ಈ ವೇಳೆ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಏಳು ಫಿರಂಗಿ ಗಾಡಿಗಳಿಂದ ತಲಾ ಮೂರು ಬಾರಿ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದರು.

ಕುಶಾಲತೋಪು ಸಿಡಿತಕ್ಕೂ ಮುನ್ನಾ ಆನೆಗಳ ಬಳಿ ಆಟಂಬಾಂಬ್ ಕೂಡಾ ಸಿಡಿಸಲಾಯಿತು,ಈ ವೇಳೆ ಗಜಪಡೆ ಹಾಗೂ ಅಶ್ವಾರೋಹಿ ದಳ ಶಬ್ದಕ್ಕೆ ಅಂಜದೇ ಧೈರ್ಯದಿಂದ‌ ನಿಂತಿದ್ದವು ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಸಿಎಫ್ ಡಾ ಮಾಲತಿಪ್ರಿಯಾ, ಡಿಸಿಎಫ್ ಡಾ ಐ ಬಿ ಪ್ರಭುಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಜಪಡೆ,ಅಶ್ವಾರೋಹಿ ದಳದ ಮುಂದೆಕುಶಾಲತೋಪು ಅಂತಿಮ ತಾಲೀಮು Read More

ಅ.3ಕ್ಕೆ ಎಕ್ಸಿಬಿಷನ್ ಪ್ರಾರಂಭ: ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ-ಅಯೂಬ್ ಖಾನ್

ಮೈಸೂರು: ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಬಾರಿ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲಾಗುವುದು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕರ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ ಅಗತ್ಯ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್ ಗಳು ಮತ್ತು ಹೋಟೆಲ್ ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಟೋಬರ್ 3 ರಂದು ಸಂಜೆ 8 ಗಂಟೆಗೆ ದಸರಾ ವಸ್ತು ಪ್ರದರ್ಶನ ಪ್ರಾರಂಭವಾಗಲಿದೆ, ಅಂದೇ ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್ ಗಳು ಉದ್ಘಾಟನೆಯಾಗಲಿವೆ. ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ., ವಯಸ್ಕರು ಹಾಗೂ ಇನ್ನಿತರರಿಗೆ 5 ರೂ. ಗಳನ್ನು ಹೆಚ್ಚಿಸಿ 35 ರೂ. ಟಿಕೆಟ್ ದರವನ್ನು ನಿಗಧಿ ಮಾಡಲಾಗಿದೆ ಎಂದು ಆಯೂಬ್ ಖಾನ್ ತಿಳಿಸಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏರ್ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನ ಕಾರ್ಯಕ್ರಮಗಳು ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್ ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂದು ವಿವರಿಸಿದರು.

ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಸಿ.ಇ.ಒ ರುದ್ರೇಶ್, ಲಯನ್ಸ್ ಕ್ಲಬ್ ಸಂಸ್ಥೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಅ.3ಕ್ಕೆ ಎಕ್ಸಿಬಿಷನ್ ಪ್ರಾರಂಭ: ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ-ಅಯೂಬ್ ಖಾನ್ Read More

ಎಂ.ಜೆ ಸೂರ್ಯನಾರಾಯಣ್ ಗೆ ಶುಭ ಹಾರೈಕೆ

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ನೌಕರ ಎಂ.ಜೆ ಸೂರ್ಯನಾರಾಯಣ್ ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಮೂರ್ತಿ ಅವರು ಸನ್ಮಾನಿಸಿ ಶುಭ ಹಾರೈಸಿದರು.

ಈ ವೇಳೆ ಆರ್. ಮೂರ್ತಿ ಅವರು ಮಾತನಾಡಿ, ಮೈಸೂರು ದಸರಾ ವಸ್ತುಪ್ರದರ್ಶನ ದೊಡ್ಡಕೆರೆ ಮೈದಾನದಲ್ಲಿ ನಿರಂತರವಾಗಿ ನಡೆಯಬೇಕೆಂದು ಕರ್ನಾಟಕ ಸರ್ಕಾರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ರಚಿಸಿತು ಅದಕ್ಕೆ ಪ್ರಪ್ರಥಮ ಅಧ್ಯಕ್ಷನಾಗಿ ನಾನು ಅಧಿಕಾರ ವಹಿಸಿಕೊಂಡು ಕಾರ್ಯಚಟುವಟಿಕೆ ಪ್ರಾರಂಭಿಸಿದೆ ಎಂದು ಸ್ಮರಿಸಿದರು.

40ವರ್ಷಗಳಿಂದ ಪ್ರಾಧಿಕಾರದಲ್ಲಿ ದುಡಿದು ನಿವೃತ್ತಿಯಾಗುತ್ತಿರುವ ಪ್ರಾಧಿಕಾರದ ಕೊನೆಯ ಸರ್ಕಾರಿ ನೌಕರ ಎಂ.ಜೆ ಸೂರ್ಯನಾರಾಯಣ್ ಅಧಿಕಾರಿಗಳೊಂದಿಗೆ ಆಪ್ತ ಸಹಾಯಕರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಅವರ ನಿವೃತ್ತಿ ಜೀವನದ ದಿನಗಳು ಸಂತೋಷದಾಯಕ ವಾಗಿರಲಿ ಎಂದು ಶುಭ ಹಾರೈಸಿದರು

ಈ ಸಂಧರ್ಭದಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಗಿರೀಶ್, ಸಿಎಸ್. ರಘು, ಕೆ‌ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಂಗಸ್ವಾಮಿ ಪಾಪು, ಗುರುರಾಜ್ ಹಾಜರಿದ್ದರು.

ಎಂ.ಜೆ ಸೂರ್ಯನಾರಾಯಣ್ ಗೆ ಶುಭ ಹಾರೈಕೆ Read More

ವಸ್ತು ಪ್ರದರ್ಶನ ಆವರಣದ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಮೈಸೂರು: ಶ್ರಾವಣ ಶನಿವಾರ ಪ್ರಯುಕ್ತ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಏರಗಪಡಿಸಲಾಗಿತ್ತು

ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು, ಅವಧೂತ ಅರ್ಜುನ ಗುರೂಜಿ ಮತ್ತು ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಅವರು‌ ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಿದರು.

ಈ‌‌ ವೇಳೆ ಅವಧೂತ ಅರ್ಜುನ ಗುರೂಜಿ ಅವರು ಮಾತನಾಡಿ ವೀಣೆ ಕುಪ್ಪಣ ಅವರ ಸುಪುತ್ರ ವೀಣೆ ವೆಂಕಟಕೃಷ್ಣ ಸುಬ್ಬಯ್ಯ ಮೈಸೂರು ಸಂಸ್ಥಾನದಲ್ಲಿ ಸಂಗೀತ ಆಸ್ಥಾನ ಪಂಡಿತರಾಗಿದ್ದರು ಅವರ ನಿಧನದ ಬಳಿಕ 1840ರಲ್ಲಿ ಅವರ ಧರ್ಮಪತ್ನಿ ವೀಣೆ ವೆಂಕಮ್ಮ ಅವರು ಶ್ರೀ ಸಾಂಬಸದಾಶಿವ ದೇವಾಲಯ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇವಾಲಯವನ್ನ ದೊಡ್ಡಕೆರೆ ದಡದಲ್ಲಿ ನಿರ್ಮಿಸಿದರು ಎಂದು ಮಾಹಿತಿ ನೀಡಿದರು.

ಈ ಪುಣ್ಯಸನ್ನಿಧಿಯಲ್ಲಿ ನೂರಾರು ವರುಷಗಳು ಸಾವಿರಾರು ಮದುವೆಗಳು, ನಾಮಕರಣದಂತಹ ಶುಭಸಮಾರಂಭಗಳು ಜರುಗಿದೆ, ಪಕ್ಕದಲ್ಲಿ ಕುಸ್ತಿ ಅಖಾಡ ಅಭ್ಯಾಸ ಮಾಡುತ್ತಿದ್ದ ಪೈಲ್ವಾನರು ಪ್ರತಿದಿನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಬಡಜನರಿಗೆ ಅನೂಕೂಲವಾಗುವಂತೆ ಆಚರಣೆಗಳು ಕಾರ್ಯಕ್ರಮಗಳಿಗೆ ಈ ಜಗವನ್ನು ನೀಡಿದರೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್ ಕುಮಾರ್, ವಿನಯ್ ಕಣಗಾಲ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಿ.ಎಸ್ ರಘು, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಜಿ.ರಾಘವೇಂದ್ರ, ರಂಗಸ್ವಾಮಿ ಪಾಪು, ಗುರುರಾಜ್, ರಂಗನಾಥ್, ನವೀನ್, ಭರತ್ ಮತ್ತಿತರರು ಹಾಜರಿದ್ದರು.

ವಸ್ತು ಪ್ರದರ್ಶನ ಆವರಣದ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ Read More