ಶಾಮನೂರು ಶಿವಶಂಕರಪ್ಪ ಅವರಿಗೆದಸರಾ ವಸ್ತುಪ್ರದರ್ಶನದಲ್ಲಿ ಶ್ರದ್ದಾಂಜಲಿ

ಮೈಸೂರು: ಶಾಸಕರು, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ರವರಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಸಾಂಸ್ಕೃತಿಕ ಸಮಿತಿ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಸೋಮವಾರ ಭಾವಪೂರ್ಣ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ದಸರಾ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್. ಎಸ್, ಉಪಾಧ್ಯಕ್ಷರುಗಳಾದ ರಂಗಸ್ವಾಮಿ ಪಾಪು, ರಾಜೇಶ್ ಸಿ ಗೌಡ, ಶಿವಲಿಂಗಯ್ಯ, ರೇಷ್ಮಾ, ನಾಸೀರ್ ಖಾನ್, ನಿರೂಪಕ ಅಜಯ್ ಶಾಸ್ತ್ರಿ, ಶುಭಪಲ್ಲವಿ, ಗುರುರಾಜ್, ಸದಸ್ಯರುಗಳಾದ ಶ್ರೀಕಾಂತ, ಮೊಹಮ್ಮದ್ ಸಿದ್ದಿಖ್, ಚಿಕ್ಕಣ್ಣ ಶಿವರುದ್ರ, ರಾಜಶೇಖರ್ ಕಾರ್ತಿಕ್ ಲೋಕೇಶ್ ಮತ್ತಿತರರು ಹಾಜರಿದ್ದರು

ಶಾಮನೂರು ಶಿವಶಂಕರಪ್ಪ ಅವರಿಗೆದಸರಾ ವಸ್ತುಪ್ರದರ್ಶನದಲ್ಲಿ ಶ್ರದ್ದಾಂಜಲಿ Read More

ವಸ್ತುಪ್ರದರ್ಶನದಲ್ಲಿ ಡ್ರ್ಯಾಗನ್ ಬೋಟಿಂಗ್ ಪಾಯಿಂಟ್‌ ನಿರ್ಮಾಣ

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನದಲ್ಲಿ ಈ ಬಾರಿ ಡ್ರ್ಯಾಗನ್ ಬೋಟಿಂಗ್ ಪಾಯಿಂಟ್‌ ಹೆಚ್ಚು ಆಕರ್ಶಣೆಯಾಗಲಿದೆ.

ಈವರೆಗೆ ವಸ್ತುಪ್ರದರ್ಶನವನ್ನು ಅಂದಾಜು ೨೦ ಲಕ್ಷ ಮಂದಿ ವೀಕ್ಷಿಸಿದ್ದು, ಡಿಸೆಂಬರ್ ಹೊತ್ತಿಗೆ ೫೦ ಲಕ್ಷ ದಾಟುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಮಳಿಗೆಗಳು ಬೇಗ ಶುರುವಾಗಿವೆ. ಜತೆಗೆ ಮಕ್ಕಳ ಮನರಂಜನೆಗಾಗಿ ಹತ್ತಾರು ಅಮ್ಯೂಸ್‌ಮೆಂಟ್ ಆಟಿಕೆಗಳು ಇರುವುದರಿಂದ ವಸ್ತು ಪ್ರದರ್ಶನ ಹೆಚ್ಚು ಜನಾಕರ್ಷಣೆಯಾಗಿದೆ.

ನವರಾತ್ರಿಯ ದಿನಗಳಲ್ಲಿ ಪ್ರತಿನಿತ್ಯ ಮೈಸೂರಿಗೆ ಸಾಗರೋಪಾದಿ ಯಲ್ಲಿ ಜನತೆ ಹರಿದು ಬಂದಿದ್ದರು. ದಸರಾ ಮುಗಿದ ಮೇಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡುತ್ತಿರುವುದು ವಿಶೇಷ.

ಕಳೆದ ಮೂರ‍್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ.ವಸ್ತು ಪ್ರದರ್ಶನದಲ್ಲಿ ಹಲವು ವರ್ಷಗಳಿಂದ ಇದ್ದ ಮಳಿಗೆಗಳನ್ನು ತೆರವುಗೊಳಿಸಿ ಬೇಲೂರು- ಹಳೇಬೀಡು ಮಾದರಿಯಲ್ಲಿ ನಿರ್ಮಿಸಿರುವ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಅಲ್ಲಿಗೆ ಭೇಟಿ ನೀಡುವ ಸ್ಥಳೀಯರು, ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವ ಜತೆಗೆ, ಮಳಿಗೆಗಳನ್ನು ನೋಡಿ ಖುಷಿಪಡುತ್ತಿದ್ದಾರೆ. ವಸ್ತು ಪ್ರದರ್ಶನದಲ್ಲಿ ಅಳವಡಿಸಿರುವ ಸಂಗೀತ ಕಾರಂಜಿಯು ಹೊಸತನದಿಂದ ಕೂಡಿದ್ದು ವೀಕ್ಷಕರಿಗೆ ಚೇತೋಹಾರಿಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ವಿದೇಶಿ ಆಕರ್ಷಣೆ ಮಾದರಿಯೊಂದನ್ನು ಪ್ರಾಧಿಕಾರ ರೂಪಿಸಿದೆ. ಪ್ರಾಧಿಕಾರದ ಆವರಣದಲ್ಲಿನ ಒಂದು ಎಕರೆ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಡ್ರ್ಯಾಗನ್ ಬೋಟಿಂಗ್ ಪಾಯಿಂಟ್‌ ನಿರ್ಮಿಸಲಾಗುತ್ತಿದೆ.ಇದುಇನ್ನೆರಡು ವಾರಗಳಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡಲು ಸಿದ್ಧವಾಗಲಿದೆ.

ಅಂದಾಜು ೫.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪಾಯಿಂಟ್‌ನಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರಕ್ಕೆ ಅವಕಾಶವಾಗುವಂತಹ ಬೃಹತ್ ಕೊಳವನ್ನು ನಿರ್ಮಿಸ ಲಾಗುತ್ತಿದೆ. ಕೊಳದಲ್ಲಿ ಪ್ರವಾಸಿಗರು ಸೈಕ್ಲಿಂಗ್ ಮಾಡುವುದರೊಂದಿಗೆ. ಕಿರು ಬೋಟಿಂಗ್‌ನಲ್ಲಿ ಸಂಚಾರ ಕೂಡ ನಡೆಸಬಹುದಾಗಿದೆ.

ದೋಣಿ ವಿಹಾರಕ್ಕೆ ಪ್ರವಾಸಿಗರನ್ನು ಸೆಳೆಯಲು ಕೊಳದ ಮಧ್ಯೆ ಬೃಹತ್ ಡ್ರ್ಯಾಗನ್ ಮಾದರಿ ನಿರ್ಮಿಸಲಾಗುತ್ತಿದೆ. ಇದು ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಪ್ರಾಧಿಕಾರವೇ ಈ ಪಾಯಿಂಟ್‌ಅನ್ನು ನಿರ್ಮಿಸುತ್ತಿದ್ದು, ಅದೇ ನಿರ್ವಹಣೆ ಮಾಡಲಿದೆ.ಇನ್ನೆರಡು ವಾರಗಳಲ್ಲಿ ಪ್ರವಾಸಿಗರ ಮನರಂಜನೆಗೆ ಮುಕ್ತವಾಗಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದ್ದಾರೆ.

ಫೈರ್ ಶೋ ಆಕರ್ಷಣೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶೀಘ್ರದಲ್ಲೇ ನಿತ್ಯ ಫೈರ್ ಶೋ ಮತ್ತು ಲೇಸರ್ ಶೋ ಆರಂಭಿಸುವ ಸಾಧ್ಯತೆ ಇದೆ. ಜತೆಗೆ ವಿಶಾಲವಾದ ಕೊಳದಲ್ಲಿ ದೋಣಿ ವಿಹಾರ ನಡೆಸಬಹುದು. ಹಾಗೆಯೇ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಜಗಜಗಿಸುವ ಲೋಕದ ಮಾದರಿಯನ್ನೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ನಿರ್ಮಿಸುತ್ತಿದೆ.

ವಸ್ತುಪ್ರದರ್ಶನದಲ್ಲಿ ಡ್ರ್ಯಾಗನ್ ಬೋಟಿಂಗ್ ಪಾಯಿಂಟ್‌ ನಿರ್ಮಾಣ Read More

ಆಹಾರ ಮಳಿಗೆ ವಸ್ತುಪ್ರದರ್ಶನ ಉದ್ಘಾಟನೆ

ಮೈಸೂರು: ದಸರಾ ಪ್ರಯುಕ್ತ ಸ್ಥಾಪಿಸಲಾಗಿರುವ ಆಹಾರ ಮಳಿಗೆಯ ವಸ್ತುಪ್ರದರ್ಶನವನ್ನು ಸಚಿವರಾದ ಹೆಚ್.ಸಿ ಮಹದೇವಪ್ಪ ಹಾಗೂ ಕೆ.ಹೆಚ್. ಮುನಿಯಪ್ಪ ಉದ್ಘಾಟಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಕುರಿತು ವಸ್ತು ಪ್ರರ್ದಶನದಲ್ಲಿ ಹಳ್ಳಿಯ ಜೀವನಶೈಲಿಯ ಕುರಿತ ಪ್ರದರ್ಶನ ಮಾಡಲಾಗಿದ್ದು ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ, ಜೋಳ ,ರಾಗಿಯ ಕುರಿತು ಹಾಗೂ ಕಾನೂನು ಮಾಪನ ಶಾಸ್ತ್ರದ ಇಲಾಖೆಯ ತೂಕದ ಸಾಮಗ್ರಿಗಳ ಕುರಿತು ವಸ್ತು ಪ್ರದರ್ಶನವನ್ನು ಮಾಡಲಾಗಿದೆ.

ಹಸಿವು ಮುಕ್ತ ಕರ್ನಾಟಕ ಸಂಕಲ್ಪದೊಂದಿಗೆ ಸಮೃದ್ದ ಹಳ್ಳಿಯ ಚಿತ್ರಣವನ್ನು ಪ್ರದರ್ಶಿಸಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಮುನಿಯಪ್ಪ, ಪಡಿತರ ಕಾರ್ಡ್ ಗಳನ್ನು ಪರಿಷ್ಕರಣೆ ನಡೆಸಲಾಗುತ್ತಿದ್ದು ಅರ್ಹರು ಒಂದು ವೇಳೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆ ಯಾಗಿದ್ದರೆ ಸಂಬಂದಿಸಿದ ತಾಲ್ಲೂಕಿನಲ್ಲಿ ತಹಶಿಲ್ದಾರರನ್ನ ಬೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಪರಿಶೀಲನೆ ನಡೆಸಿ ಪುನಃ ಕಾರ್ಡ್ ವಿತರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಅರ್ಹ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್
ವಿತರಿಸಲು ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ,
ಪ್ರತಿಯೊಬ್ಬರಿಗೂ ಆಹಾರ ಬಹಳ ಮುಖ್ಯ, ಆಹಾರವನ್ನು ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು ಚಲ್ಲದಿರಿ ಅನ್ನ ಬಡವರಿಗದೇ ಚಿನ್ನ ಎಂದು ಹೇಳಿದರು.

ಅಂತ್ಯೋದಯ ಅಂದರೆ ಹಸಿವನ್ನು ಅಂತ್ಯ ಮಾಡುವುದು ಆಹಾರ ನಾಗರಿಕ ಸರಬರಾಜು ಸಚಿವರಾಗಿ ಮುನಿಯಪ್ಪ‌ ಅವರು ಬಿಪಿಎಲ್ ಅಂತ್ಯೋದಯ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ತಂದರು. ಇದನ್ನು ಈಗ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಗೆ ಇಂದಿರಾ ಕಿಟ್ ಮೂಲಕ ಬೇಳೆ ಎಣ್ಣೆ ಅಂತಹ ಆಹಾರಧಾನ್ಯ ನೀಡಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್,
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್ ಹಾಗೂ ಜಿಲ್ಲಾ ಜೆಂಟಿ ಉಪ ನಿರ್ದೇಶಕ ಮಂಟೇಸ್ವಾಮಿ, ತೂಕ ಮತ್ತು ಮಾಪನ‌ ಇಲಾಖೆ ಅಧಿಕಾರಿ ಮಹದೇವ ಸ್ವಾಮಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಆಹಾರ ಮಳಿಗೆ ವಸ್ತುಪ್ರದರ್ಶನ ಉದ್ಘಾಟನೆ Read More

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ: ಕ್ರಮಕ್ಕೆಆಗ್ರಹ

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ ಮಾಡಲಾಗಿದ್ದು, ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ‌

ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ ಡಾಕ್ಟರ್ ಶಿವರಾಜು ಅವರಿಗೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ನೇತೃತ್ವದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ ಮಾಡಿದ್ದು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಮನವಿ
ಮಾಡಿದರು.

ಈ ವೇಳೆ ಮಾತನಾಡಿದ ವಿನಯ್ ಕುಮಾರ್,
ರಾಷ್ಟ್ರಕವಿ ಕುವೆಂಪು ರವರು 1924ರಲ್ಲಿ ರಚಿಸಿದ ಜಯಭಾರತ ಜನನಿಯ ತನುಜಾತೆ ನಾಡಗೀತೆ ಶತಮಾನೋತ್ಸವ ಕಂಡಿದೆ, ಇದನ್ನ ಈ ಭಾರಿ ದಸರಾ ಕವಿಗೋಷ್ಠಿ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸಾವಿರ ಕಂಠಗಳ ಸಮೂಹ ಗಾಯನ ಮೂಲಕ ಮೈಸೂರು ಜಿಲ್ಲಾಡಳಿತ ತುಂಬಾ ಚೆನ್ನಾಗಿ ಆಯೋಜನೆ ಮಾಡಿ ನಾಡಗೀತೆಗೆ ಮತ್ತು ರಚಿಸಿದ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ರಾಗ ಸಂಯೋಜನೆ ಮಾಡಿದ ಮೈಸೂರು ಅನಂತಸ್ವಾಮಿ ರವರಿಗೆ ಗೌರವ ಸೂಚಿಸಿತು ಎಂದು ಹೇಳಿದರು.

ಆದರೆ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ಅಧಿಕಾರಿಗಳಿಂದ ನಾಡಗೀತೆಗೆ ಪ್ರತಿದಿನ ಅಪಮಾನ ವಾಗುತ್ತಿದೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ 9ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಜೀಜ್ ಸೇಠ್ ಮ್ಯೂಸಿಕಲ್ ಫೌಂಟೇನ್ ಪ್ರದರ್ಶನದಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿದ ಜಯಭಾರತ ಜನನೀಯ ತನುಜಾತೆ ನಾಡಗೀತೆ ಹಾಡಿನ ಧ್ವನಿಸುರಳಿ ಶಿಷ್ಠಾಚಾರವಿಲ್ಲದೇ ಮನಸೋಯಿಚ್ಛೆ ಚಿತ್ರಗೀತೆಗಳ ಮಧ್ಯದಲ್ಲಿ ಪ್ರತಿದಿನ 4 ಭಾರಿ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಜನಪ್ರತಿನಿಧಿಗಳ ಉಪಸ್ಥಿತರಿರುವ ಕಾರ್ಯಕ್ರಮಗಳು ಅಥವಾ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಅಥವಾ ಅಂತ್ಯದಲ್ಲಿ ಮಾತ್ರ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯ ದಾಟಿ 150sec ಸಮಯ ನಿಗಧಿಯ ಅಧಿಕೃತ ನಾಡಗೀತೆಯನ್ನ ಹಾಡಬೇಕು ಅಥವಾ ಅಧಿಕೃತ ನಾಡಗೀತೆ ಹಾಡಿನ ಧ್ವನಿಸುರಳಿ ಹಾಕಬೇಕು ಎಂದು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಮ ಗೊತ್ತಿಲ್ಲವೇ‌ ಎಂದು ವಿನಯ್ ಕುಮಾರ್ ಪ್ರಶ್ನಿಸಿದರು.

ಅನ್ಯರು ಬೇರೆ ಶೈಲಿಯಲ್ಲಿ ಹಾಡಿರುವ 6ನಿಮಿಷದ ಹಾಡನ್ನ ಪ್ರಸಾರ ಮಾಡುತ್ತಿರುವುದು ನಾಡಗೀತೆಗೆ ಮತ್ತು ಕುವೆಂಪು ಅವರಿಗೆ ಮೈಸೂರು ಅನಂತಸ್ವಾಮಿ ಅವರಿಗೆ, ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದರು ‌

ಮೈಸೂರು ದಸರಾ ವಸ್ತುಪ್ರದರ್ಶನ ಉದ್ಘಾಟನೆ ದಿನವೇ ಮುಖ್ಯ ಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಿದ್ದ ವೇದಿಕೆಯಲ್ಲೇ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಇಲ್ಲದ ಹಾಡನ್ನ ಹಾಕಿ ಎಡವಟ್ಟು ಮಾಡಿದೆ ಪ್ರಾಧಿಕಾರ, ಸೆಪ್ಟಂಬರ್ 2ರಿಂದ ಇಲ್ಲಿಯವರೆಗೂ ಪ್ರತಿದಿನ 4ಭಾರಿ ನಾಡಗೀತೆ ಪ್ರಸಾರದ ಸಂಧರ್ಭದಲ್ಲಿ ಅಪಮಾನ ಮಾಡುತ್ತಿದ್ದು ಈ ಕೂಡಲೇ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಸರ್ಕಾರ ಅಧಿಕೃತ ಮಾಡಿರುವ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ಹಾಡನ್ನೇ ಪ್ರಸಾರ ಮಾಡಬೇಕು, ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳು ಕನ್ನಡಿಗರ ಕಣ್ಣಿಗೆ ಗುರಿಯಾಗ ಬೇಕಾಗುತ್ತದೆ ಮುಂದಕ್ಕೆ ಆಗುವ ಸಮಸ್ಯೆಯನ್ನು ಈಗಲೇ ಸರಿಪಡಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮುಖಂಡರಾದ ರಮೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಎಸ್ಎನ್ ರಾಜೇಶ್, ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ: ಕ್ರಮಕ್ಕೆಆಗ್ರಹ Read More

ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ

ಮೈಸೂರು: ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಧನಂಜಯ ನಿಶಾನೆ ಆನೆಯ ಕಾರ್ಯ ನಿರ್ವಹಿಸಲಿದ್ದು, ಗೋಪಿ ಆನೆ ನೌಪತ್ ಆನೆಯ ಸ್ಥಾನ ಪಡೆದಿದ್ದಾನೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಈ ಕುರಿತು ವಿವರ ನೀಡಿದ ಸಚಿವರು, ಮಹೇಂದ್ರ, ಶ್ರೀಕಂಠ ಮತ್ತು ಲಕ್ಷ್ಮೀ ಸಾಲಾನೆ 1ನೇ ತಂಡದಲ್ಲಿದ್ದರೆ, ಕಂಜನ್, ಭೀಮ, ಏಕಲವ್ಯ ಸಾಲಾನೆ 2ರಲ್ಲಿ ಸಾಗಲಿವೆ ಎಂದು ತಿಳಿಸಿದರು.

ಸಾಲಾನೆ 3ರ ತಂಡದಲ್ಲಿ ಪ್ರಶಾಂತ್, ಸುಗ್ರೀವ, ಹೇಮಾವತಿ ಇದ್ದರೆ, ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಹೆಣ್ಣಾನೆಗಳು ಹೆಜ್ಜೆ ಹಾಕಲಿವೆ ಎಂದು ಹೇಳಿದರು.

ವಸ್ತುಪ್ರದರ್ಶನ ಆವರಣದಲ್ಲಿ ಸೋಮವಾರ ರಾತ್ರಿ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.

ಈ ಮಳಿಗೆಯಲ್ಲಿ ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿ, ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂವರ್ಧನೆ ಕುರಿತ ಮಾಹಿತಿಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಸೆರೆ ಕಾರ್ಯಾಚರಣೆ, ಕಾಡ್ಗಿಚ್ಚು ನಂದಿಸುವ ಹಾಗೂ ಕಾಡುಗಳ್ಳರೊಂದಿಗೆ ಹೋರಾಡಿ ಮೃತಪಟ್ಟ ಅರಣ್ಯ ಹುತಾತ್ಮರ ಮಾಹಿತಿಯೂ ಇದ್ದು, ಸಚಿವರು ಈ ವಸ್ತುಪ್ರದರ್ಶನ ವೀಕ್ಷಿಸಿ, ಹುತಾತ್ಮರಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಗೌರವಿಸಿದರು.

ನಂತರ ಮೈಸೂರಿನ ಕಲಾ ಮಂದಿರದಲ್ಲಿ ಏರ್ಪಡಿಸಿರುವ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವನ್ನೂ ಖಂಡ್ರೆ ವೀಕ್ಷಿಸಿ ಪ್ರಶಂಸಿಸಿದರು.

ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ Read More

ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ

ಮೈಸೂರು: ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ
ಸ್ವಾಮಿ ವಿವೇಕಾನಂದರ 163ನೇ ಜನ್ಮದಿನೋತ್ಸವ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದರ 163ನೇ ಜನ್ಮದಿನೋತ್ಸವದ ಪ್ರಯುಕ್ತ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ್ ರಾಮಪ್ಪ, ಮಂಜುನಾಥ್ ಗೌಡ ಮರಟಿಕ್ಯಾತನಹಳ್ಳಿ, ಗಾಂಧಿನಗರ ಪ್ರಕಾಶ್ ಮಾಲಾರ್ಪಣೆ ಮಾಡಿ ನಮಿಸಿದರು.

ಈ ವೇಳೆ ಸ್ವಾಮಿ ವಿವೇಕಾನಂದರ ಆದರ್ಶ,ಸಂದೇಶಗಳನ್ನು ಯುವಜನತೆ ಪಾಲಿಸಬೇಕೆಂದು ಕರೆ ನೀಡಲಾಯಿತು.

ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ Read More

ವಸ್ತು ಪ್ರದರ್ಶನದಲ್ಲಿ ಮನ ರಂಜಿಸಿದಹಳೇ ಚಿತ್ರಗೀತೆಗಳ ಗಾಯನ


ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಸಂಗೀತ ಪ್ರಿಯರ ಬಳಗದ ವತಿಯಿಂದ ನಡೆದ ಹಳೇ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಎಲ್ಲರ ಮನ ರಂಜಿಸಿತು.

ಡಾ. ರಾಜಕುಮಾರ್, ಪಿ.ಬಿ.ಶ್ರೀನಿವಾಸ್, ಗಂಟಸಾಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಇಳಿಯರಾಜ, ಜಾನಕಿ, ಸುಷಿಲಾ, ಚಿತ್ರಾ ಸೇರಿದಂತೆ ಮತ್ತಿತರ‌ ಖ್ಯತ ಗಾಯಕರು ಹಾಡಿರುವ ಜನಪ್ರಿಯ ಚಿತ್ರಗೀತೆಗಳ ಹಾಡುಗಳನ್ನ ಹಾಡಿ ವಸ್ತು ಪ್ರದರ್ಶನಕ್ಕೆ ಬಂದವರಿಗೆಲ್ಲ ಖುಷಿ ನೀಡಿದರು.

ಕಲಾವಿರಾದ ಸೇತುರಾಮ್ ಎಸ್, ನಾಗಲಕ್ಷ್ಮಿ, ವಿಶ್ವನಾಥ್, ಮೋಹನ್ ಕುಮಾರ್ ಎಸ್.ಕೆ, ಶ್ರೀನಿವಾಸ್ ಜಗದೀಶ್, ಶಾರದಾಂಬ, ಮೀನಾಕ್ಷಿ ಚಟ್ನಿ ಶೋಭಾ, ಸದಾಶಿವ ಚಟ್ನಿ, ನಿರೂಪಕ ಅಜಯ್ ಶಾಸ್ತ್ರಿ, ಸಮಿತಿ ಪದಾಧಿಕಾರಿಗಳಾದ ರಾಜೇಶ್ ಸಿ ಗೌಡ, ಚಂದ್ರಕಲಾ, ಸುಬ್ರಹ್ಮಣ್ಯ, ರಂಗಸ್ವಾಮಿ ಪಾಪು ಮತ್ತಿತರರು ಇದ್ದರು.

ವಸ್ತು ಪ್ರದರ್ಶನದಲ್ಲಿ ಮನ ರಂಜಿಸಿದಹಳೇ ಚಿತ್ರಗೀತೆಗಳ ಗಾಯನ Read More

ಅಯೂಬ್ ಖಾನ್ ಅವರಿಗೆ ಶುಭ ಹಾರೈಕೆ

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಅಯೂಬ್ ಖಾನ್ ಅವರ ಜನುಮದಿನದ ಪ್ರಯುಕ್ತ ದಸರಾ ವಸ್ತುಪ್ರದರ್ಶನದ ಜಿಪಿಎ ಫನ್ ವರ್ಲ್ಡ್ ಮಲ್ಲಿಕಾರ್ಜುನ, ಮೈಸೂರು ದಸರಾ ವಸ್ತುಪ್ರದರ್ಶನ ನಿರೂಪಕ ಅಜಯ್ ಶಾಸ್ತ್ರಿ, ಆಪ್ತ ಕಾರ್ಯದರ್ಶಿ ನಾಗೇಶ್, ಕೆಪಿಸಿಸಿ ಸದಸ್ಯ ರಾಕೇಶ್ ಅವರುಗಳು
ಶುಭ ಹಾರೈಸಿದರು.

ಈ ವೇಳೆ ಅಯೂಬ್ ಖಾನ್ ಅವರಿಗೆ ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ ಹೂ ಗುಚ್ಛ ನೀಡಿ ಅಭಿನಂದಿಸಿ ಸಂತಸ ಪಟ್ಟರು.

ಅಯೂಬ್ ಖಾನ್ ಅವರಿಗೆ ಶುಭ ಹಾರೈಕೆ Read More

ನಾಳೆ ಮಹಿಳೆಯರು,ಮಕ್ಕಳಿಗೆ ಆಟೋಟ ಸ್ಪರ್ಧೆ

ಮೈಸೂರು: ದಸರಾ ವಸ್ತುಪ್ರದರ್ಶನದ ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ವತಿಯಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಮಧ್ಯಾಹ್ನ 2-00 ಗಂಟೆಯಿಂದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಾಗೂ ದೇಸಿ ಆಟಗಳನ್ನು ಪ್ರಾಧಿಕಾರದ ಆವರಣದಲ್ಲಿನ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಏರ್ಪಡಿಸಲಾಗಿದೆ.

ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಹೊಡೆಯುವುದು,
ಅಳಿಗುಳಿ ಮನೆ ಆಟ,
ಸೂಜಿಗೆ ದಾರ ಪೋಣಿಸುವುದು,ಚೌಕಾಬಾರ
ಚಮಚದಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂಡು ಓಡುವುದು,ಘಟ್ಟಮನೆ ಗ್ಲಾಸ್‌ನಲ್ಲಿ ಪಿರಾಮಿಡ್ ಜೋಡಿಸುವುದು,ಆಣೆ ಕಲ್ಲು,
ಗುಂಡು ಎಸೆತ,ಕೆರೆದಡ ಆಟ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿದೆ.

ಆಸಕ್ತರು ಹೆಸರನ್ನು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ
9611600103 ಸಂಪರ್ಕಿಸುವಂತೆ ಸಮಿತಿಯ ಅಧ್ಯಕ್ಷರು ಕೋರಿದ್ದಾರೆ.

ನಾಳೆ ಮಹಿಳೆಯರು,ಮಕ್ಕಳಿಗೆ ಆಟೋಟ ಸ್ಪರ್ಧೆ Read More

ಎಸ್.‌ಎಂ ಕೃಷ್ಣ ಅವರು ಯುವ ರಾಜಕಾರಣಿಗಳಿಗೆ ಮಾದರಿ- ಅಯೂಬ್ ಖಾನ್

ಮೈಸೂರು: ಹಿರಿಯ ರಾಜಕೀಯ ಮುತ್ಸದ್ದಿ ಎಸ್.‌ಎಂ ಕೃಷ್ಣ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.‌ಎಂ ಕೃಷ್ಣ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರ ನಿಧನಕ್ಕೆ ಪಿ‌ ಕಾಳಿಂಗರಾವ್ ಗಾನಮಂಟಪ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಅಯೂಬ್ ಖಾನ್ ಮಾತನಾಡಿದರು.

2004ನೇ ಇಸವಿಯಲ್ಲಿ ನಾನು ಮೈಸೂರಿನ ಉಪ ಮಹಾಪೌರ ನಾಗಲು ಮುಖ್ಯಮಂತ್ರಿಯಾಗಿದ್ದ ಎಸ್
ಎಂ ಕೃಷ್ಣ ಅವರು ನನ್ನ ನಾಯಕತ್ವವನ್ನು ಗುರುತಿಸಿ ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ಮೈಸೂರಿನಲ್ಲಿ ಹೊರವರ್ತುಲ ರಸ್ತೆ, ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ಅಭಿವೃದ್ಧಿ, ಮೈಸೂರಿನ ಇನ್ಪೋಸಿಸ್ ಸೇರಿದಂತೆ ಐಟಿ ಬಿಟಿ ಕ್ಷೇತ್ರಕ್ಕೆ ಪ್ರೋತ್ಸಾಹ, ಚಾಮುಂಡಿ ಬೆಟ್ಟ, ನಂಜನಗೂಡು ದೇವಸ್ಥಾನ ಅಭಿವೃದ್ದಿ, ಸಹಾಕರಿ ಕ್ಷೇತ್ರದಲ್ಲಿ ಯಶಸ್ವಿನಿ ಯೋಜನೆ, ಆರ್ಥಿಕವಾಗಿ ನೆರವಾಗಲು ಸ್ತ್ರಿಶಕ್ತಿ ಸಂಘಗಳ ಸ್ಥಾಪನೆ,ಬರಗಾಲದಲ್ಲಿ ಬಿತ್ತನೆ ಮೋಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು.

ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ, ವಿಧಾನ ಸಭಾಧ್ಯಕ್ಷರಾಗಿ, ಕೇಂದ್ರದ ಮಾಜಿ ಸಚಿವರಾಗಿ ಅಜಾತಶತ್ರು ಎನ್ನಿಸಿಕೊಂಡು ಮೌಲ್ಯಯುತ ರಾಜಕಾರಣದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ ಎ ಇಂದಿನ‌ಯುವ ರಾಜಕಾರಣಿಗಳಿಗೆ ಅವರು ಆದರ್ಶವಾಗಿದ್ದಾರೆ ಎಂದು ಆಯೂಬ್ ಖಾನ್ ಹೇಳಿದರು.

ಮಾಜಿ ಶಾಸಕರು ಮತ್ತು ಹಾಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರು ಸಾಕಷ್ಟು ಸಾಮಜಮುಖಿ ಕೆಲಸಗಳನ್ನ ಮಾಡಿ ಹಲವಾರು ಶ್ರಮಿಕ ವರ್ಗದವರನ್ನ ಮುಖ್ಯವಾಹಿಮಿಗೆ ತಂದಿದ್ದಾರೆ ಎಂದು ತಿಳಿಸಿದರು ‌

ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಫೈರೋಜ್ ಖಾನ್, ರಘುರಾಜೇ ಅರಸ್, ಶೌಕತ್ ಅಲಿಖಾನ್, ಜಿಪಿಎ ಮಲ್ಲಿಕಾರ್ಜುನ, ರಂಗಸ್ವಾಮಿ ಪಾಪು, ಪದ್ಮನಾಭನ್ ಗುಂಡಾ, ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಮಹೇಂದ್ರ ಕಾಗಿನೆಲೆ, ಸುಬ್ರಹ್ಮಣ್ಯ, ಹರೀಶ್ ಮೊಗ್ಗಣ್ಣಚಾರ್, ಪ್ರವೀಣ್, ಜಯಲಕ್ಷ್ಮಿ, ವನಜಾಕ್ಷಿ, ಎಸ್. ಪಿ ಸಿದ್ದರಾಜೆ ಅರಸ್, ನಾಗೇಶ್, ಗುರುರಾಜ್ , ಈಶ್ವರ್ ಚಕ್ಕಡಿ ಮತ್ತಿತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಸ್.‌ಎಂ ಕೃಷ್ಣ ಅವರು ಯುವ ರಾಜಕಾರಣಿಗಳಿಗೆ ಮಾದರಿ- ಅಯೂಬ್ ಖಾನ್ Read More