ಜೀ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131ನೆ ರ‍್ಯಾಂಕ್ ಪಡೆದ ತನ್ಮಯ್

ಕೊಳ್ಳೇಗಾಲ: ಚಾಮರಾಜನಗರ ತಾಲೂಕಿನ ಕೋಡಿ ಉಗ್ಗನೆ ಗ್ರಾಮದ ಕೆ ಎಸ್. ತನ್ಮಯ್ ಅವರು‌ ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಉಗ್ಗನೆ ಗ್ರಾಮದ ಸರ್ವೆಶ್ ಸಿದ್ದಯ್ಯ ಅವರ ಮಗ ಎಸ್ ಶ್ರೀಧರ್ ಮತ್ತು ಮಂಜುಳಾ ದಂಪತಿಗಳ ಪುತ್ರ ಕೆ ಎಸ್. ತನ್ಮಯ್ ಇತ್ತೀಚಿಗೆ ನಡೆದ ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ‍್ಯಾಂಕ್ ಪಡೆದಿದ್ದಾರೆ.

ಕೇರಳದ ಕೊಟ್ಟಾಯಮ್ ನ ಪಿ ಎಂ ಶ್ರೀ ಜವಹರ್ ನವೋದಯ ವಿದ್ಯಾಲಯದಲ್ಲಿ ಐ ಐ ಟಿ ಸಿ ಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದು ಜಿಲ್ಲೆಗೆ ಕೀರ್ತಿ ತಂದಿರುವ ತನ್ಮಯ್ ಅವರ ಸಾಧನೆಯನ್ನು ನಾಗರಿಕರು ಹಾಗೂ ಕುಟುಂಬದವರು ಬಂಧು ಬಳಗದವರು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಜೀ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131ನೆ ರ‍್ಯಾಂಕ್ ಪಡೆದ ತನ್ಮಯ್ Read More

ಪಿಯುಸಿ ವಿದ್ಯಾರ್ಥಿಗಳಿಗೆ ಗುಲಾಬಿ ಕೊಟ್ಟು ಶುಭ ಕೋರಿದ ಕಾಂಗ್ರೆಸ್ ನ ಹೊಯ್ಸಳ

ಮೈಸೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು,ವಿಧ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಪೆನ್ ನೀಡಿ ಕೆ ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎಂ ಆರ್ ಹೊಯ್ಸಳ ಅವರು ಶುಭ ಕೋರಿದರು.

ಮೈಸೂರಿನ ರಮಾ ವಿಲಾಸ ರಸ್ತೆಯಲ್ಲಿರುವ ಮರಿಮಲ್ಲಪ್ಪ ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿಧ್ಯಾರ್ಥಿಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ಯರು ಗುಡ್ ಲಕ್ ಹೇಳಿದರು ಜತೆಗೆ ಮೈಸೂರಿಗೆ ಉನ್ನತ ಫಲಿತಾಂಶ ಬರಲಿ ಎಂದು ಹಾರೈಸಿದರು.

ನಿಮ್ಮೊಂದಿಗೆ ನಾವಿದ್ದೇವೆ ಎಂದು ಈ‌ ವೇಳೆ ವಿಧ್ಯಾರ್ಥಿಗಳಿಗೆ ನಾಗರೀಕರು ಅಭಯ‌ ನೀಡಿದರು

ನಂತರ ಕೆ ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ ಎಂ ಆರ್ ಮಾತನಾಡಿ,
ಪರೀಕ್ಷೆ ಸಂಭ್ರಮದಿಂದ ಬರೆಯಿರಿ
ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಿಂದ ಬರೆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆ ಶತ್ರು ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳೆಲ್ಲ ಮರೆತು ಹೋಗುತ್ತವೆ, ಯಾವುದೇ ಕಾರಣಕ್ಕೂ ಪರೀಕ್ಷೆ ಭೂತ ಎಂದುಕೊಳ್ಳಬೇಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುವಂತೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ಪೋಷಕರು ತುಂಬಬೇಕು ಎಂದು ಸಲಹೆ ನೀಡಿದರು.

ಸಂಕುಚಿತ ಮನೋಭಾವದಿಂದ ಸುಮ್ಮನೆ ಕುಳಿತರೆ ಆತ್ಮವಂಚನೆ
ಮಾಡಿಕೊಂಡಂತಾಗುತ್ತದೆ ದೊಡ್ಡ ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೇ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು,ಪರೀಕ್ಷೆ ಎಂಬ ಭಯ, ಒತ್ತಡದಿಂದ ಮೊದಲು ಹೊರ ಬನ್ನಿ. ಎಂತಹ ಕಠಿಣ ಸಂದರ್ಭದಲ್ಲಿಯೂ ನೀವು ಕೀಳರಿಮೆ ಇಟ್ಟುಕೊಳ್ಳಬಾರದು. ಪೋಷಕರು ಕೂಡ ಮಕ್ಕಳ ಮೇಲೆ ನಂಬಿಕೆ ಇಡಬೇಕು ಎಂದು ಹೊಯ್ಸಳ ಹೇಳಿದರು.

ಈ ಸಂದರ್ಭದಲ್ಲಿ ಶಶಾಂಕ್ ಎಂ. ಎಸ್, ಹೇಮಾ, ಕಾರ್ತಿಕ್, ಅಭಿ, ಅರ್ಜುನ್, ಶಾಯೂಬ್ ಖಾನ್ ಸತೀಶ್ ಮತ್ತಿತರರು ಹಾಜರಿದ್ದರು.

ಪಿಯುಸಿ ವಿದ್ಯಾರ್ಥಿಗಳಿಗೆ ಗುಲಾಬಿ ಕೊಟ್ಟು ಶುಭ ಕೋರಿದ ಕಾಂಗ್ರೆಸ್ ನ ಹೊಯ್ಸಳ Read More