ಗೌರಿ ಗಣೇಶ ಹಬ್ಬ: ಪೌರಕಾರ್ಮಿಕರಿಗೆ ಸತ್ಕರಿಸಿದ ನಿರ್ಮಲ ಹರೀಶ್
ಮೈಸೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಮಾಜಿ ನಗರ ಪಾಲಿಕೆ ಮಾಜಿ ಸದಸ್ಯರಾದ ನಿರ್ಮಲ ಹರೀಶ್ ಹಾಗೂ ಅವರ ಪತಿ ಹರೀಶ್ ಅವರು ಪೌರಕಾರ್ಮಿಕರನ್ನು ಮನೆಗೆ ಕರೆಸಿ ಸತ್ಕರಿಸಿ ಮಾದರಿಯಾಗಿದ್ದಾರೆ.
ಪೌರ ಕಾರ್ಮಿಕರನ್ನು
ಮನೆಗೆ ಕರೆಸಿ ಕುಂಕುಮ, ಅರಿಶಿಣ
ಬಳೆ ಸೀರೆ ಸಹಿತ ಬಾಗಿನ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲ ಹರೀಶ್, ನಾವು ಪೌರಕಾರ್ಮಿಕರನ್ನು ನಮ್ಮ ಸ್ವಂತ ಸಹೋದರಿ ಸಹೋದರ ರಂತೆ ಕಾಣುತ್ತೇವೆ ಪ್ರತಿಯೊಂದು ಹಬ್ಬವನ್ನು ಸಹ ಅವರ ಜೊತೆಯಲ್ಲೇ ವಿಶೇಷವಾಗಿ ಆಚರಿಸುತ್ತಾ ಬಂದಿದ್ದೇವೆ, ನಮ್ಮ ಮೈಸೂರು ಸುಂದರವಾಗಿರಲು ಅವರ ಪರಿಶ್ರಮ ಹೆಚ್ಚು, ಅವರೊಡನೆ ನಾವು ಇರುತ್ತೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ ಮತ್ತಿತರರು ಹಾಜರಿದ್ದರು.
ಗೌರಿ ಗಣೇಶ ಹಬ್ಬ: ಪೌರಕಾರ್ಮಿಕರಿಗೆ ಸತ್ಕರಿಸಿದ ನಿರ್ಮಲ ಹರೀಶ್ Read More