ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್

ಮೈಸೂರು: ಧರ್ಮಸ್ಥಳದ ಬಗ್ಗೆಯಾಗಲಿ, ಶ್ರೀ ಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ ಎಂಬುದನ್ನ ಮೊದಲು ತಿಳಿದುಕೊಳ್ಳಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆಮ

ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ನೀವು ಎಂದು ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಮತ್ತು ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಧರ್ಮಸ್ಥಳದ ಬಗ್ಗೆಯಾಗಲಿ, ಧರ್ಮಸ್ಥಳದ ಶ್ರೀಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ. ಅನಾಮಿಕನ ದೂರು ಹಾಗೂ ಕರ್ನಾಟಕದ ಮಹಿಳಾ ಆಯೋಗದ ದೂರಿನ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸರ್ಕಾರವು ಎಸ್‌ಐಟಿ ರಚಿಸಿದೆ. ಎಸ್ಐಟಿ ತನ್ನ ಕೆಲಸ ಮಾಡುತ್ತಿದೆ. ಇದರಲ್ಲಿ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷವಾಗಲಿ, ಹಿಂದೂ ಧರ್ಮದ ಅವಹೇಳನವಾಗಲಿ ಇಲ್ಲ. ಎಸ್.ಐ.ಟಿ. ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳೇ ಸ್ವಾಗತಿಸಿದ್ದಾರೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಈವರೆಗೆ ಯಾರೊಬ್ಬರೂ ಸಹ ಹಿಂದೂ-ಮುಸ್ಲಿಂ ಎಂಬ ವಿಚಾರವನ್ನ ಈ ಪ್ರಕರಣದಲ್ಲಿ ತಂದಿಲ್ಲ. ಆದರೆ ಬಿಜೆಪಿಯವರು ಹಾಗೂ ಬಿಜೆಪಿ ಪಟಾಲಂ ಇದರಲ್ಲಿ ಧರ್ಮವನ್ನು ಎಳೆದು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಯೂಟ್ಯೂಬರ್ಸ್‌ಗಳಾಗಲಿ, ಮಾಧ್ಯಮಗಳಾಗಲಿ ಸುಳ್ಳು ಸುದ್ದಿಗಳನ್ನ ಬಿತ್ತರಿಸಿದ್ದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಬೇಕಿದ್ದರೆ ನೀವೂ ದೂರು ಕೊಡಿ. ಅದನ್ನ ಬಿಟ್ಟು  ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಏಕೆ ಮಾಡುತ್ತೀರಿ ಸದಾ ಹಿಂದೂ-ಮುಸ್ಲಿಮರ ನಡುವೆ ಕೋಮುದ್ವೇಷ ಹರಡುವುದೇ ನಿಮ್ಮ ಕೆಲಸವೆ ಎಂದು ಸುಬ್ರಮಣ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂಬುದರ ಬಗ್ಗೆ ರಾಹುಲ್‌ ಗಾಂಧಿ ಅವರು ದಾಖಲೆ ಸಮೇತ ವಿವರಣೆಗಳನ್ನ ನೀಡಿದ್ದಾರೆ. 6 ತಿಂಗಳ ಕಾಲ ಸಂಶೋಧನೆ ಮಾಡಿ ದಾಖಲೆ ಸಮೇತ ಮಾತನಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ನಡೆದಿಲ್ಲವೆ ಅಂತ ಕೈ ತೋರಿಸುತ್ತಿದ್ದೀರೆಯೇ ಹೊರತು, ಅದು ಸುಳ್ಳು ಎಂದು ಹೇಳುವ ಧೈರ್ಯ ನಿಮ್ಮಲ್ಲಿ ಯಾರೊಬ್ಬರಿಗೂ ಇಲ್ಲ ಎಂದು ಕುಟುಕಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ವೇಳೆ ಪೀಟರ್‌ ಚುನಾವಣಾಧಿಕಾರಿಯಾಗಿ ಬಂದು ಪಾರದರ್ಶಕತೆಯಿಂದ ಚುನಾವಣೆ ನಡೆಸಿದ್ದಾರೆ ಇದು ನೆನಪಿಲ್ಲವೆ, ರಾಹುಲ್‌ಗಾಂಧಿ ಅವರು ಸತ್ಯ ಹೇಳಿದ್ದಾರೋ, ಸುಳ್ಳು ಹೇಳಿದ್ದಾರೋ ಅನ್ನೋದನ್ನ ತಿಳಿಯಲು ಹಾಲಿ ನ್ಯಾಯಾಧೀಶರಿಂದಲೇ ತನಿಖೆಯಾಗಲಿ ಅವರು ಹೇಳಿದ್ದು ಸುಳ್ಳು ಅನ್ನೋದಕ್ಕೆ ನೀವು ದಾಖಲೆ ಕೊಡಿ ಎಂದು ಸುಬ್ರಹ್ಮಣ್ಯ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಬಿಜೆಪಿ ಸಂಸದ ಕೆ. ಸುಧಾಕರ್‌ ಅವರ ಹೆಸರಲ್ಲಿ ಡೆತ್‌ನೋಟ್‌ ಬರೆದಿಟ್ಟು ಡ್ರೈವರ್‌ ಬಾಬು ನೇಣಿಗೆ ಶರಣಾಗಿದ್ದಾರೆ. ಹಾಗಾಗಿ ಸುಧಾಕರ್‌ ವಿರುದ್ಧ ಎಫ್‌ಐಆರ್‌ ಆಗಿದೆ. ಇದಕ್ಕೆ ಬಿಜೆಪಿಯವರು ಏನು ಕ್ರಮ ಕೈಗೊಂಡರು ಎಂದು ಪ್ರಶ್ನಿಸಿರುವ ಅವರು,
ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ಬಿದ್ದಿರೋ ನೊಣಗಳ ಬಗ್ಗೆಯೇ ಇವರಿಗೆ ಚಿಂತೆ, ನೈತಿಕತೆ ಇಲ್ಲದೇ ಸಿದ್ದರಾಮಯ್ಯರ ವಿರುದ್ಧ ಸಾರಾಸಗಟಾಗಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್ Read More

ಉದಯಗಿರಿ ಪೋಲಿಸ್ ಠಾಣೆ ಬಳಿ ಕಲ್ಲುತೂರಾಟ:ಪ್ರತಾಪ್ ಸಿಂಹ ಕಿಡಿ

ಮೈಸೂರು: ಮೈಸೂರಿನ ಉದಯಗಿರಿ ಪೋಲಿಸ್ ಠಾಣೆ ಬಳಿ ನಡೆದ ಕಲ್ಲು ತೂರಾಟದ ಘಟನೆಯನ್ನ ಮಾಜಿ ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ.

ನಿನ್ನೆ ಮುಸ್ಲೀಂ ಸಮುದಾಯದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಪೊಲೀಸರನ್ನೆ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಈಗಲೂ ಅದೇ ಮುಂದುವರಿದಿದೆ. ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ಪೊಲೀಸರು ಆಳುವ ಸರಕಾರದ ಅಣತಿಯಂತೆ ನಡೆಯುವುದನ್ನು ಮೊದಲು ಬಿಡಬೇಕು ಎಂದು ಆಗ್ರಹಿಸಿದರು.

ಅರವಿಂದ್ ಕೇಜ್ರಿವಾಲ್ ಸೋತರೆ ಉದಯಗಿರಿ ಮುಸಲ್ಮಾನರಿಗೆ ಯಾಕೆ ರೋಷ ಬರುತ್ತದೆ ಅವರ ಮನೆಯಲ್ಲಿ ಯಾಕೆ ಸೂತಕ ಬರುತ್ತೆ ಎಂದು ಪ್ರಶ್ನಿಸಿದರು.

ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೂಬಿಂಗ್ ಮಾಡಬೇಕು. ಸಿದ್ದರಾಮಯ್ಯ ಅವರು ಎಷ್ಟು ದಿನ ಸಿಎಂ ಆಗಿ ಇರುತ್ತಾರೊ ಗೊತ್ತಿಲ್ಲ. ಈಗಲಾದರೂ ಖಡಕ್ ಆಗಿ ಕೆಲಸ ಮಾಡಲಿ. ಸಿದ್ದರಾಮಯ್ಯ ಎಷ್ಟು ಅಸಮರ್ಥ ಸಿಎಂ ಎಂಬುದಕ್ಕೆ ಅವರ ತವರೂರಿನಲ್ಲಿ ನಡೆದ ಈ ಘಟನೆ ಸಾಕ್ಷಿ ಎಂದು ಕಿಡಿಕಾರಿದರು.

ಈಗಲೂ‌ ಒಂದು ವಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ, ನಮ್ಮ ಪೊಲೀಸರು ಸಮರ್ಥರಿದ್ದಾರೆ,ಅವರಿಗೆ ಅವಕಾಶ ಮಾಡಿಕೊಟ್ಟು ನೋಡಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.

ಉದಯಗಿರಿ ಪೋಲಿಸ್ ಠಾಣೆ ಬಳಿ ಕಲ್ಲುತೂರಾಟ:ಪ್ರತಾಪ್ ಸಿಂಹ ಕಿಡಿ Read More

ಪ್ರತಾಪ ಸಿಂಹ ಉಚ್ಚಾಟನೆಗೆ ಬಿಜೆಪಿ ಎಸ್ ಟಿ ಮೋರ್ಚಾ ಒತ್ತಾಯ

ಮೈಸೂರು: ಮಾಜಿ ಸಂಸದ ಪ್ರತಾಪ ಸಿಂಹ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾ ವತಿಯಿಂದ ಪಕ್ಷದ ನಗರ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ.

ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಮೈ.ಕಾ. ಪ್ರೇಮ್ ಕುಮಾರ್ ಹಾಗೂ ಬಿಜೆಪಿ ಚಾಮರಾಜ ಕ್ಷೇತ್ರ ನಿಕಟಪೂರ್ವ ಉಪಾಧ್ಯಕ್ಷ ಕುಮಾರ್ ಗೌಡ
ಅವರುಗಳು ಪಕ್ಷದ ಮೈಸೂರು ನಗರಾಧ್ಯಕ್ಷ
ಎಲ್.ನಾಗೇಂದ್ರ ಮತ್ತು ಮೈಸೂರು ಗ್ರಾಮಂತರ (ಮೈಸೂರು ಜಿಲ್ಲಾ) ಅಧ್ಯಕ್ಷ
ಎಲ್.ಆರ್.ಮಹದೇವ ಸ್ವಾಮಿ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.

ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದರು.

ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಾವು ಹಿಂದೂ ಸಂಘಟನೆ ಸೇರಿದಂತೆ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮತ್ತು ಬ್ಲಾಕ್ ಮಟ್ಟ,ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದ್ದೇವೆ,ಆದರೆ ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ‌ ಅವರ ನಡೆಯಿಂದ ಪಕ್ಷಕ್ಕೆ ಹಾನಿ ಆಗುತ್ತಿದೆ ಮತ್ತು ನಮಗೆ ತೀವ್ರ ಬೇಸರವನ್ನು ಉಂಟುಮಾಡಿವೆ ಎಂದು ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಅವರು ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ದೇಶದ ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ಮುಜುಗರಸೃಷ್ಟಿಸಿತ್ತು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮದಲ್ಲದ ವರುಣಾ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಪ್ರಚಾರ ನಡೆಸಿ, ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಚಾರದಿಂದ ಹಿಂದೆ ಸರಿದಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಿಜೆಪಿಯ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ.

ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾದ ಸಂದರ್ಭದಲ್ಲಿ ನ್ಯಾಯವಾದಿಗಳ ವಿರುದ್ಧ ಹೇಳಿಕೆ ನೀಡುವ ಮುಖಾಂತರ ಸಾವಿರಾರು ಮತಗಳು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಮೈ.ವಿ.ರವಿ ಶಂಕರ್ ವಿರುದ್ಧ ಮತ ಬೀಳುವಂತೆ ಮಾಡುವ ಕೃತ್ಯವನ್ನು ಮಾಡಿದ್ದಾರೆ‌

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿರುದ್ಧ ಹಲವಾರು ರೀತಿಯ ಅಪಪ್ರಚಾರಗಳನ್ನು ನಡೆಸಿದ್ದರು ಹೀಗೆ ಹಲವಾರು ಅಸರೋಪಗಳನ್ನು ಪಟ್ಟಿಮಾಡಿ ಪ್ರತಾಪ್ ಸಿಂಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,ಪಕ್ಷ ದಿಂದ‌ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಾಪ ಸಿಂಹ ಉಚ್ಚಾಟನೆಗೆ ಬಿಜೆಪಿ ಎಸ್ ಟಿ ಮೋರ್ಚಾ ಒತ್ತಾಯ Read More

ಮಹಾರಾಜರ ಕಾಲದಲ್ಲೇ ಪ್ರಿನ್ಸೆಸ್ ರಸ್ತೆ ಹೆಸರಿದ್ದರೆ ಬದಲಾವಣೆ ಬೇಡ‌:ಪ್ರತಾಪ್

ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ‌ ಮಾಡುವ ವಿಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಯೂ ಟರ್ನ್ ಹೊಡೆದಿದ್ದಾರೆ.

ದಾಖಲೆಗಳಲ್ಲಿ ಮಹಾರಾಜರ ಕಾಲದಲ್ಲೇ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ‌ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೇ ಬದಲಾವಣೆ ಮಾಡುವುದು ಬೇಡ. ಈ ವಿಚಾರಕ್ಕೆ ನನ್ನ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಸರು ಬದಲಾವಣೆ ಮಾಡುವುದು ಬೇಡ‌ ಎಂದು ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ನಾನೇ ಮನವಿ ಮಾಡುತ್ತೇನೆ ಎಂದು ಕೂಡಾ ಹೇಳಿದರು.

ಕೆಆರ್‌ಎಸ್ ರಸ್ತೆಗೆ ಅಧಿಕೃತ ಹೆಸರಿಲ್ಲ, ಖಾಲಿ‌ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಬಹುದು ಎಂದು ಹೇಳಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ತೆಗೆದುಕೊಳ್ಳಿ. ತಕರಾರು ಸಲ್ಲಿಸುವವರು ದಾಖಲೆಯನ್ನ ಒದಗಿಸಿ. ವಿವಾದವನ್ನು ಇಲ್ಲಿಗೆ ಮುಗಿಸೋಣ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು

ಮೈಸೂರಿಗೆ ಮಹಾರಾಜರ ಕೊಡುಗೆ ಬಹಳ ಇದೆ, ಜನಪ್ರತಿನಿಧಿಗಳ ಕೊಡುಗೆ ಕೂಡ ಇದೆ. ಇಟ್ಟಿರುವ ಹೆಸರನ್ನು ಬದಲಾಯಿಸುವ ದಾಷ್ಟ್ಯ ನಮಗೆ ಬೇಡ‌ ಹೇಳಿದರು.

ಹೊಸ ಬಡಾವಣೆ ಮಾಡಿ ಅಲ್ಲಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟರೇ ಅರ್ಥ ಪೂರ್ಣ ಆಗುತ್ತದೆ ಎಂದು ಕೂಡಾ ಸಿಂಹ ಸಲಹೆ ನೀಡಿದರು.

ಮಹಾರಾಜರ ಕಾಲದಲ್ಲೇ ಪ್ರಿನ್ಸೆಸ್ ರಸ್ತೆ ಹೆಸರಿದ್ದರೆ ಬದಲಾವಣೆ ಬೇಡ‌:ಪ್ರತಾಪ್ Read More