ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಮೈಸೂರು: ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮ ಕೈಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್ ಪಥ ಸಂಚಲನ ಬ್ಯಾನ್ ಮಾಡುವಂತೆ ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಚಾರವನ್ನು ಮರೆತು ಬಿಡಿ‌ ನೆಹರು ಕೈನಲ್ಲೇ ಆಗಿಲ್ಲ. ಇನ್ನೂ ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

ಪ್ರಿಯಾಂಕ್ ಖರ್ಗೆ ಅವರು 3 ತಿಂಗಳಿಗೊಮ್ಮೆ ಆರ್‌ಎಸ್‌ಎಸ್ ಅನ್ನು ಬೈಯ್ದು ತಮ್ಮ ಅಸ್ತಿತ್ವ ತೋರಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೆ. ಎಮ್ಮೆ ಮೇಲೆ ಮಳೆ ಸುರಿದರೆ ಪ್ರಯೋಜನವಿಲ್ಲ. ಅದೇ ರೀತಿ ಪಿಯುಸಿ ಫೇಲ್ ಆಗಿರುವ ಪ್ರಿಯಾಂಕ್ ಖರ್ಗೆಗೆ ಎಷ್ಟೇ ಬುದ್ಧಿ ಹೇಳಿದರು ಅರ್ಥವಾಗಲ್ಲ. ಪ್ರಚಾರದ ಹುಚ್ಚು, ಗೀಳು ಜಾಸ್ತಿಯಾಗಿ ಈ ರೀತಿ ಆಡ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಖರ್ಗೆ ಕುಟುಂಬ ಕಲಬುರಗಿಯನ್ನು ಕೊಚ್ಚೆ ಮಾಡಿದೆ. ಮೈಸೂರಲ್ಲಿ ಅತ್ಯಾಚಾರಕ್ಕೆ ಒಳಗಾದ ಹಕ್ಕಿ-ಪಕ್ಕಿ ಜನಾಂಗದ ಬಾಲಕಿ ಕಲಬುರಗಿ ಮೂಲದವರು. ಆ ಬಾಲಕಿ ಬಗ್ಗೆ ಪ್ರಿಯಾಂಕ್ ಧ್ವನಿ ಎತ್ತಿದ್ರಾ ಎಂದು ಕಾರವಾಗಿ ಪ್ರಶ್ನಿಸಿದರು.

ಪ್ರಿಯಾಂಕ್ ಪಿಯುಸಿ ಫೇಲ್ ಆಗಿ ಅನಿಮೇಷನ್ ಸರ್ಟಿಫಿಕೇಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ,ಅವರಂತೂ ಓದಿಲ್ಲ, ತಮ್ಮ ಕ್ಷೇತ್ರದ ಮಕ್ಕಳು ಓದುವಂತೆ ಮಾಡುವ ವಾತಾವರಣವನ್ನೂ ಸೃಷ್ಟಿ ಮಾಡ್ತಿಲ್ಲ.ತಮ್ಮ ಖಾತೆಯಲ್ಲಿ ಏನೂ ಕಡಿದು ಕಟ್ಟೆ ಹಾಕಿದ್ದೀರಾ ಹೇಳಿ ಎಂದು ಫ್ರತಾಒ್ ಸಿಂಹ ಸವಾಲು ಹಾಕಿದರು.

ನೆಹರು ಕುಟುಂಬಕ್ಕೆ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಆಗಿಲ್ಲ. ಇನ್ನೂ ಸಿದ್ದರಾಮಯ್ಯ ಕೈಯಲ್ಲಿ ಆಗುತ್ತಾ, ಸಿದ್ದರಾಮಯ್ಯ ಅವರಂತೂ ಸಮಾಜವಾದಿ ಹೆಸರೇಳಿಕೊಂಡು ಮಜಾವಾದಿ ಆಗಿದ್ದಾರೆ. ಸಿಎಂ ಕೈಯಲ್ಲಿ ಬೆಂಗಳೂರಿನ ಗುಂಡಿ ಮುಚ್ಚಿಸಲು ಆಗ್ತಿಲ್ಲ. ಕಾಂಗ್ರೆಸ್‌ನ ಕೂಗು ಮಾರಿಗಳ ಬಾಯಿಯಾದರೂ ಮುಚ್ಚಿಸಿ ಎಂದು ವ್ಯಂಗ್ಯ ಸಲಹೆ ನೀಡಿದರು.

ಭಾನುವಾರ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಮುನಿರತ್ನರನ್ನು ಕರಿಟೋಪಿ ಎಂಎಲ್‌ಎ ಎಂದು ಕರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರೇ ರೌಡಿಸಂ ಥರ ಮಾತಾಡುವುದು ನಿಲ್ಲಿಸಿ. ಸಿಎಂ ಸ್ಥಾನಕ್ಕೆ ಬೇಕಾದ ಘನತೆ, ಗಾಂಭೀರ್ಯವನ್ನು ಬೆಳೆಸಿಕೊಳ್ಳಿ. ಆರ್.ಆರ್ ನಗರದಲ್ಲಿ ಕುಸುಮಾರನ್ನು ಗೆಲ್ಲಿಸಲು ಹಣ ಬಲ, ತೋಳ್ಬಲ ಪ್ರಯೋಗ ಮಾಡಿದರೂ, ಜನ ಅವರನ್ನು ಗೆಲ್ಲಿಸಲಿಲ್ಲ ಎಂದು ತಿರುಗೇಟು ನೀಡಿದರು.

ಸ್ಥಳೀಯ ಶಾಸಕರಿಗೆ, ಸಂಸದರಿಗೆ ಗೌರವ ಕೊಡಿ. ಈ ಗುಂಪಲ್ಲಿ ಜಮೀರ್ ಕೂತಿದ್ರೆ ಹೇ ಬಿಳಿ ಟೋಪಿ ಸಾಬಣ್ಣ ಬಾ ಅಂತಾ ಕರೀತಿರಾ ಕರೆಯುವ ಧಮ್ ಇದ್ಯಾ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕಿಡಿ Read More

ಧ್ರುವನಾರಾಯಣ್ ಸ್ಮರಣೆ

ಮೈಸೂರು: ಮಾಜಿ ಸಂಸದರು ಹಾಗೂ
ಕೆಪಿಸಿಸಿ ಕಾರ್ಯಧ್ಯಕ್ಷರಾದ ದಿವಂಗತ ಧ್ರುವನಾರಾಯಣ್ ಅವರ ಹುಟ್ಟುಹಬ್ಬ ಅಂಗವಾಗಿ ಮೈಸೂರಿನಲ್ಲಿ ಅವರನ್ನು ಸ್ಮರಿಸಲಾಯಿತು.

ನಗರದ ಚಾಮುಂಡೇಶ್ವರಿ ಬಳಗದ ವತಿಯಿಂದ ಸಿದ್ದಪ್ಪ ವೃತ್ತದಲ್ಲಿರುವ ಕಚೇರಿಯಲ್ಲಿ ದಿವಂಗತ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ರಾಮಪ್ಪ ರಮೇಶ್, ಲೋಕೇಶ್, ಕೃಷ್ಣಪ್ಪ
(ಗಂಟಯ್ಯ),ಕಡಕೋಳ ಶಿವು, ಸೇವಾದಳ ಮೋಹನ, ಜಿ ರಾಘವೇಂದ್ರ, ರವಿಚಂದ್ರ, ದೀಪು ಮತ್ತಿತರರು ಹಾಜರಿದ್ದು ದೃವನಾರಾಯಣ್ ಅವರ ಭಾವಚಿತ್ರ ಹಿಡಿದು ಅವರ ಗುಣಗಾನ ಮಾಡಿದರು.

ಧ್ರುವನಾರಾಯಣ್ ಸ್ಮರಣೆ Read More

ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ: ಪ್ರತಾಪ್ ಸಿಂಹ

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು
ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಶಿವನ ದರ್ಶನ ಮಾಡಿದರು.

ಪ್ರತಾಪ್ ಸಿಂಹ ಅವರು ಅಶೋಕ ರಸ್ತೆಯಲ್ಲಿರುವ ಶ್ರೀ ಕನಿಕಾ ಪರಮೇಶ್ವರಿ ದೇವಸ್ಥಾನ, ಹಳೆ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಶ್ರೀ ಅಮೃತೇಶ್ವರ ದೇವಸ್ಥಾನ ಹಾಗೂ ಮೇಟಗಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.

ಈ‌ ವೇಳೆ ಮಾತನಾಡಿದ ಅವರು ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ
ಎಂದು ಹೇಳಿದರು.

ಧಾರ್ಮಿಕ ನಂಬಿಕೆಯಲ್ಲಿ ಬದುಕಿನ ಶ್ರೇಷ್ಠತೆ‌ ಅಡಗಿದೆ ಎಂದು ಹೇಳಿದ ಅವರು,
ಪ್ರತಿ ಜೀವಿಯಲ್ಲಿಯೂ
ದೇವರಿದ್ದಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಎಸ್ ಕೆ ದಿನೇಶ್, ರಾ ಪರಮೇಶ್ ಗೌಡ, ಸಂದೇಶ್, ಸತೀಶ್, ಬ್ರಹ್ಮಚಾರ್, ವಿ ಎಸ್ ಕಿರಣ್, ರಾಮು, ಅರುಣ್, ವಿನೋದ್ ಅರಸ್, ಪ್ರಮೋದ್ ಗೌಡ, ಮಲ್ಲಿಕ್, ಕಾಂತ , ದೇವರಾಜ್, ಸಂಜೀವಿನಿ ಕುಮಾರ್, ದಿವಾಕರ್, ಟೆನ್ನಿಸ್ ಗೋಪಿ, ರವಿಕುಮಾರ್, ಚಿಕ್ಕ ರಾಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ: ಪ್ರತಾಪ್ ಸಿಂಹ Read More

ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌

ಮೈಸೂರು: ಉದಯ ಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಪ್ರಕರಣ ಸಂಬಂಧ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮೈಸೂರು ಯುವ ಕಾಂಗ್ರೆಸ್‌ ಮುಖಂಡ ಸೈಯದ್‌ ಅಬ್ರರ್ ಅವರು ಪ್ರತಾಪ್ ಸಿಂಹ ವಿರುದ್ಧ ನೀಡಿದ ದೂರಿನ ಮೇರೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದೇ ಫೆ.10ರಂದು ಮುಸ್ಲಿಂ ಯುವಕರ ಗುಂಪು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ನಡೆಸಿತ್ತು. ಈ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರತಾಪ್‌ ಸಿಂಹ ಅವರು ಮುಸ್ಲಿಮರ ಬಗ್ಗೆ ಅವಹೇಳಕಾರಿ ಹೇಳಿಕೆ ನಿಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ Read More