ಕಾಡನೆ ದಾಳಿಗೆ ಮಹಿಳೆ ಸಾವು: ಪ್ರತಿಭಟನೆಯಲ್ಲಿ ಪಾಲ್ಗೊಂಡ ನಿಖಿಲ್

ಚಿಕ್ಕಮಗಳೂರು: ಅರಣ್ಯ ಸಚಿವರಿಗೆ ಮಲೆನಾಡು ಭಾಗಕ್ಕೂ, ಬಯಲು ಸೀಮೆಗೂ ಇರೋ ವ್ಯತ್ಯಾಸವೇ ಗೊತ್ತಿಲ್ಲ ಎಂದು ಜೆಡಿಎಸ್ ಯುವ‌ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.

ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಬಾಳೆಹೊನ್ನೂರು ಉಪ ವಿಭಾಗ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಮಳೆಯಲ್ಲೂ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿರಂತರವಾಗಿ ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಇದಕ್ಕೆ ಶಾಶ್ವತವಾಗಿ ಪರಿಹಾರ ಒದಗಿಸಬೇಕೆಂದು ನಿಖಿಲ್ ಒತ್ತಾಯಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿಖಿಲ್,
ಕೂಡಲೇ ಅರಣ್ಯ ಸಚಿವರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಬೇಕು ಬೇಕೆಂದು ಆಗ್ರಹಿಸಿದರು.

ನಿರಂತರವಾಗಿ ಈ ಭಾಗದ ರೈತರು ಆನೆದಾಳಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.ಕೂಡಲೇ ಕಾಡನೆಯನ್ನ ಹಿಡಿದು ಆನೆ ಶಿಬಿರಕ್ಕೆ ಬಿಡಬೇಕು,
ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಬೇಕು ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸರ್ವ ಪಕ್ಷದ ಮುಖಂಡರ ಜೊತೆ ಸಭೆ ನಡೆಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

ಈ ಭಾಗದಲ್ಲಿ ಕಾಡನೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡ‌ಬೇಕು,ಇಲ್ಲದಿದ್ದಲ್ಲಿ ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತೇವೆ. ಇದನ್ನ ವಿಧಾನಮಂಡಲದಲ್ಲೂ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಅವರು ಹೇಳಿದರು.

ಈ ವೇಳೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಂಜನ್‌ ಅಜಿತ್‌ ಕುಮಾರ್‌, ರಾಜ್ಯ ಉಪಾಧ್ಯಕ್ಷರಾದ ಸುಧಾಕರ್‌ ಶೆಟ್ಟಿ , ಮುಖಂಡರಾದ ವಿನಯ್‌ ಕಣಿವೆ, ಕೊಪ್ಪ, ಎನ್‌.ಆರ್.‌ ಪುರ ಕ್ಷೇತ್ರದ ಮುಖಂಡರು ಹಾಜರಿದ್ದರು.

ಕಾಡನೆ ದಾಳಿಗೆ ಮಹಿಳೆ ಸಾವು: ಪ್ರತಿಭಟನೆಯಲ್ಲಿ ಪಾಲ್ಗೊಂಡ ನಿಖಿಲ್ Read More

ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ (ಗುಂಡ್ಲುಪೇಟೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಆನೆ ಕಂಡ ಯುವಕ ಕಾರಿಂದಿಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಹೋಗಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ನಡೆದಿದೆ.

ಬಂಡೀಪುರ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಗುಂಡ್ಲುಪೇಟೆ ನಿವಾಸಿ ಸಾಹುಲ್ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಆನೆ ಜೊತೆ ಕೀಟಲೆ ಮಾಡುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಪೀಕಿಸಿದ್ದಾರೆ.

ಪ್ರವಾಸಿಗರು ಇತ್ತೀಚೆ ಅರಣ್ಯ ಹಾಗೂ ಕಾಡುಪ್ರಾಣಿಗಳೊಂದಿಗೆ ಪೊಟೊ ವಿಡಿಯೊ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಗಸ್ತು ನಿರ್ಲಕ್ಷ್ಯವೆ ಇದಕ್ಕೆ ಕಾರಣವಾಗಿದೆ.

ಇದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿರುವುದು ವಿಪರ್ಯಾಸ.

ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ! Read More