ಅ ಕ ಬ್ರಾ ಮಹಾಸಭ ರಾಜ್ಯಾಧ್ಯಕ್ಷ ಸ್ಥಾನದ ರಘುನಾಥ್ ಬೆಂಬಲಕ್ಕೆ ನವೀನ್ ಕುಮಾರ್ ಮನವಿ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಅಧಿಕೃತ ಅಭ್ಯರ್ಥಿಯಾಗಿ ಆರ್.ಎಸ್ ಸತ್ಯ ನಾರಾಯಣ್ ಸ್ಪರ್ಧಿಸಿದ್ದಾರೆ ಎಂದು ವಿಪ್ರ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನವೀನ್ ಕುಮಾರ್,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಏಪ್ರಿಲ್ 13 ರಂದು ರಾಜ್ಯದಂತ ನಡೆಯಲಿದ್ದು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್ ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಧಿಕೃತ ಅಭ್ಯರ್ಥಿ ಆರ್.ಎಸ್ ಸತ್ಯ ನಾರಾಯಣ್ ಅವರನ್ನು ಗೆಲ್ಲಿಸಬೇಕೆಂದು ಕೋರಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ
ಕೆಲವರನ್ನು ರಘುನಾಥ್ ಬೆಂಬಲಿತ ಅಭ್ಯರ್ಥಿಯೆಂದು ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ವಿಪ್ರ ಸಮುದಾಯದವರು ಕಿವಿಗೊಡದೆ
ಮೈಸೂರಿನ ರಘುನಾಥ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಆರ್. ಎಸ್ ಸತ್ಯ ನಾರಾಯಣ ಅವರನ್ನು ಬೆಂಬಲಿಸಬೇಕು ಹಾಗೂ ಮತ್ತೊಂದು ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಭಾಗ್ಯ ಶ್ರೀ ಭಟ್ ಅವರನ್ನು ಬೆಂಬಲಿಸಬೇಕೆಂದು ನವೀನ್ ಕುಮಾರ್ ಮನವಿ ಮಾಡಿದರು.

ಏ.13 ರಂದು ಮೈಸೂರಿನ ಕೃಷ್ಣಮೂರ್ತಿ ಪುರಂ ನಲ್ಲಿರುವ ಬಗನಿ ಸೇವಾ ಸಮಾಜದಲ್ಲಿ ಬೆಳಗೆ 8ರಿಂದ ಸಂಜೆ 4 ರವರೆಗೂ ಮತದಾನ ನಡೆಯಲಿದೆ, ಬ್ರಾಹ್ಮಣ ಬಂಧುಗಳು ತಪ್ಪದೇ ಆಗಮಿಸಿ ಮತದಾನ ಮಾಡುವುದರ ಮೂಲಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಬೇಕೆಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಆರ್.ಎಸ್ ಸತ್ಯನಾರಾಯಣ್, ಭಾಗ್ಯಶ್ರೀ ಭಟ್, ಹಿರಿಯ ವಿಪ್ರ ಮುಖಂಡರಾದ ಸಿ ವಿ ಪಾರ್ಥಸಾರಥಿ, ಎಸ್ ಬಿ. ವಾಸುದೇವ್ ಮೂರ್ತಿ, ನಾಗಚಂದ್ರ, ರಾಜಕುಮಾರ್, ಜಗದೀಶ್ ಹಾಜರಿದ್ದರು.

ಅ ಕ ಬ್ರಾ ಮಹಾಸಭ ರಾಜ್ಯಾಧ್ಯಕ್ಷ ಸ್ಥಾನದ ರಘುನಾಥ್ ಬೆಂಬಲಕ್ಕೆ ನವೀನ್ ಕುಮಾರ್ ಮನವಿ Read More

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಿಂದ ಬಿರುಸಿನ ಪ್ರಚಾರ

ಮೈಸೂರು, ಏ.4: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಏಪ್ರಿಲ್ 13ರಂದು ಏಕಕಾಲಕ್ಕೆ ರಾಜ್ಯಾದ್ಯಂತ ನಡೆಯಲಿದ್ದು,ಮೈಸೂರು ಜಿಲ್ಲಾ ಪ್ರತಿನಿಧಿಗಳು ಬಿರುಸಿನ ಮತಯಾಚನೆ ಮಾಡಿದರು.

ಈ ಚುನಾವಣೆಯಲ್ಲಿ
ಹಾಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ
ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಾ. ಭಾನುಪ್ರಕಾಶ್ ಶರ್ಮ
ಹಾಗೂ ಮೈಸೂರಿನ 2 ಜಿಲ್ಲಾಪ್ರತಿನಿಧಿ ಸ್ಥಾನಕ್ಕೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಕಡಕೋಳ ಜಗದೀಶ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅಗ್ರಹಾರದ ಶಂಕರ ಮಠದಲ್ಲಿ ಶಾರದಾಂಬೆಗೆ ಪೂಜೆ ಸಲ್ಲಿಸಿ ನಂತರ ಬಿರುಸಿನ ಪ್ರಚಾರ ಪ್ರಾರಂಭಿಸಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರು,
ಡಾ. ಭಾನುಪ್ರಕಾಶ್ ಶರ್ಮಾ ಅವರು ಕಳೆದ 30 ವರ್ಷಗಳಿಂದ ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗಾಗಿ, ಎಕೆಬಿಎಂಎಸ್‌ನಲ್ಲಿ 3 ಬಾರಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ವಿಶ್ವಹಿಂದು ಪರಿಷತ್‌ನೊಂದಿಗೆ ಗುರುತಿಸಿ ಕೊಂಡಿದ್ದಾರೆ. ವಿಪ್ರರ ಸೇವೆಯನ್ನೇ ಪ್ರಮುಖ ಎಂದು ತಿಳಿದುಕೊಂಡಿದ್ದಾರೆ. ಧರ್ಮಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಹೀಗೆ ಹಲವು ಸಮಾಜಮುಖಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಧರ್ಮ, ಗೋಸಂರಕ್ಷಣೆ ವಿಚಾರದಲ್ಲಿ ಅನೇಕ ಗೋಷ್ಠಿಗಳನ್ನು ಮಾಡಿದ್ದಾರೆ. ಮೈಸೂರು ರಾಜ ಮನೆತನದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಮಾಡಿದ್ದಾರೆ.1995 ರಲ್ಲಿ ಶ್ರೀ ರಂಗಪಟ್ಟಣದಲ್ಲಿ ಅತಿರುದ್ರ ಮಹಾಯಾಗ ಮಾಡಿ ಯಶಸ್ವಿಯಾಗಿದ್ದಾರೆ, ಕೈಲಾಸ ಮಾನಸ ಸರೋವರದಲ್ಲಿ ಅತಿರುದ್ರ ಮಹಾಯಾಗ ಯಶಸ್ವಿಯಾಗಿ ಮಾಡಿ ದ್ದಾರೆ. ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ವಿಪ್ರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ನಾಗರಾಜು, ಮುಳ್ಳೂರು ಸುರೇಶ್,
ಅಜಯ್ ಶಾಸ್ತ್ರಿ, ಜಯಸಿಂಹ, ವಿಜಯ್ ಕುಮಾರ್, ಸುಚೇಂದ್ರ, ನಾಗೇಂದ್ರ ಬಾಬು, ಚಕ್ರಪಾಣಿ, ಮಹೇಶ್ ಕುಮಾರ್, ಜ್ಯೋತಿ,ರಶ್ಮಿ, ಶ್ರೀನಾಥ್, ಲತಾ ಬಾಲಕೃಷ್ಣ, ನಾಗಶ್ರೀ, ಮಂಜುನಾಥ್ ಮತ್ತಿತರರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಿಂದ ಬಿರುಸಿನ ಪ್ರಚಾರ Read More

ಸಿಟಿ ಕೋಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಿಗೆ ಅಭಿನಂದನೆ

ಮೈಸೂರು: ಮೈಸೂರಿನ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ನೂತನ ನಿರ್ದೇಶಕರಾಗಿ
ನಿರಂಜನ್ ಆಯ್ಕೆಯಾಗಿದ್ದಾರೆ.

ಮೈಸೂರಿನ ಗಾಂಧಿ ಚೌಕದಲ್ಲಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿಗೆ 2025-30 ಸಾಲಿಗೆ ಚುನಾವಣೆ ನಡೆದು ನಿರ್ದೇಶಕರಾಗಿ ನಿರಂಜನ್ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾದ ನಿರಂಜನ್ ಅವರನ್ನು ನಜರ್ ಬಾದ್ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು.

ಈ ವೇಳೆ ವಾರ್ಡ್ 40 ಹಿರಿಯ ಕಾಂಗ್ರೆಸ್ ಮುಖಂಡ ಎನ್. ರಾಜು, ವಾರದರಾಜು, ಚಾಮುಂಡಯ್ಯ ಮತ್ತಿತರರು ಅಭಿನಂದಿಸಿದರು.

ಸಿಟಿ ಕೋಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಿಗೆ ಅಭಿನಂದನೆ Read More

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ

ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸೋಲನುಭವಿಸಿದ್ದು ಆಪ್ ಗೆ ತೀವ್ರ ಮುಖ‌ಭಂಗ ವಾದಂತಾಗಿದೆ

ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ ಅರವಿಂದ್ ಕೇಜ್ರಿವಾಲ್ ಸೋಲನು ಭವಿಸಿದ್ದು, ದೆಹಲಿಗೆ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.

ಕಳೆದ 2 ಚುನಾವಣೆಗಳಲ್ಲೂ ನವದೆಹಲಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಕೇಜ್ರಿವಾಲ್‌ ಸತತ 2 ಬಾರಿ ಸಿಎಂ ಆಗಿದ್ದರು. 3ನೇ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪರ್ವೇಶ್‌ ವಿರುದ್ಧ 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ Read More

ಖಾತೆ ತೆರೆಯದ ಕಾಂಗ್ರೆಸ್‌: ಕೈ ನಾಯಕರಿಗೆ ಮುಖಭಂಗ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಚುನಾವಣೆ ಫಲಿತಾಂಶ‌ ಪ್ರಕಟವಾಗಿದ್ದು,ಕಾಂಗ್ರೆಸ್ ಖಾತೆಯನ್ನೇ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.

ಉಚಿತ ಗ್ಯಾರಂಟಿ ಘೋಷಿಸಿ ಸೀಮಿತ ಹೋರಾಟ ನಡೆಸಿದ ಕಾಂಗ್ರೆಸ್‌ ಒಂದೂ ಕ್ಷೇತ್ರದಲ್ಲೂ ಖಾತೆ ತೆರೆದಿಲ್ಲ,ಹಾಗಾಗಿ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಮುಖಭಂಗವಾದಂತಾಗಿದೆ.

ಆರಂಭದಿಂದಲೂ ಬಿಜೆಪಿ-ಆಪ್‌ ನಡುವೆ ಪೈಪೋಟಿ ಮುಂದುವರಿದಿತ್ತು,

ಮ್ಯಾಜಿಕ್‌ ನಂಬರ್‌ ತಲುಪಿರುವ ಬಿಜೆಪಿ 27‌ ವರ್ಷಗಳ ಬಳಿಕ ದೆಹಲಿಯಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.

ಖಾತೆ ತೆರೆಯದ ಕಾಂಗ್ರೆಸ್‌: ಕೈ ನಾಯಕರಿಗೆ ಮುಖಭಂಗ Read More

ಜನರು ಬಿಜೆಪಿಯ ಸುಳ್ಳಿನ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ:ಸಿಎಂ

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ, ಜನರು ಬಿಜೆಪಿಯ ಸುಳ್ಳಿನ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ಫಲಿತಾಂಶ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣ, ಅಪಪ್ರಚಾರದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಕಟ್ಟಿಹಾಕಲು ಪ್ರತಿಪಕ್ಷದವರು ಯತ್ನಿಸಿದರು ಎಂದು ಬೇಸರದಲ್ಲೇ ಹೇಳಿದರು.

ರಾಜಭವನದಿಂದ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಬಿಜೆಪಿ, ಜೆಡಿಎಸ್‌ನವರಿಗೆ ಮತದಾರರು ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

ನಾನು 2ನೇ ಬಾರಿಗೆ ಸಿಎಂ ಆದ ಬಳಿಕ ಬಿಜೆಪಿ, ಜೆಡಿಎಸ್‌ನವರು ನನ್ನನ್ನು ಮತ್ತು ನನ್ನ ಪತ್ನಿಯನ್ನು ಸುಳ್ಳುಗಳಿಂದ ಹಣಿಯಲು ಯತ್ನಿಸಿದರು ಎಂದು ಆರೋಪಿಸಿದರು.

40 ವರ್ಷಗಳ ನನ್ನ ರಾಜಕೀಯ ಜೀವನ ನೋಡಿರುವ ಜನರು ಬಿಜೆಪಿಯ ಸುಳ್ಳುಗಳ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ.ಎಲ್ಲ ನ್ಯಾಯಾಲಯಗಳಿಗಿಂತ ಶ್ರೇಷ್ಠ ನ್ಯಾಯಾಲಯ ಜನತಾ ನ್ಯಾಯಾಲಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಜನತಾ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ ಎಂದು ಅದೇ ಸಮಾಧಾನ ಎಂದು ಸಿದ್ದರಾಮಯ್ಯ ತಿಳಿಸಿದರು.

ಜನರು ಬಿಜೆಪಿಯ ಸುಳ್ಳಿನ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ:ಸಿಎಂ Read More