ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ-ಬಿ ಸುಬ್ರಹ್ಮಣ್ಯ ಟಾಂಗ್

ಮೈಸೂರು: ಮುಡಾ ವಿಚಾರದಲ್ಲಿ ಸಿಎಂ ವಿರುದ್ಧ ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಟಾಂಗ್ ನೀಡಿದ್ದಾರೆ.

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ವಿರುದ್ಧ ತನಿಖೆ ನಡೆಸಲು ಜಾರಿ ನಿರ್ದೇಶನಾಲಯದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ ವಜಾ ಮಾಡಿದ್ದು,
ಬಿಜೆಪಿಗೆ ಕಪಾಳ ಮೋಕ್ಷ ಆದಂತಾಗಿದೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನ ನಾವೆಲ್ಲ ಸ್ವಾಗತಿಸುತ್ತೇವೆ. ಮುಖ್ಯಮಂತ್ರಿಗಳ ಪತ್ನಿ ಯಾವುದೇ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡವರಲ್ಲ, ಪ್ರಚಾರಕ್ಕೂ ಬಂದವರಲ್ಲ, ಆದಾಗ್ಯೂ ಕಾನೂನಿನ ಅನ್ವಯ ಪಡೆದಿದ್ದ 14 ಸೈಟುಗಳನ್ನು ಹಿಂದಿರುಗಿಸಿ ಘನತೆ ಮೆರೆದಿದ್ದರು. ಆದರೆ ವಿಪಕ್ಷಗಳ ಕುತಂತ್ರ ಅವರನ್ನು ಜೈಲಿಗೆ ಕಳಿಸುವುದಾಗಿತ್ತು. ಜೊತೆಗೆ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಹುನ್ನಾರವೂ ನಡೆದಿತ್ತು ಇದೀಗ ನ್ಯಾಯ ದೇವತೆಯೇ ಬಿಜೆಪಿಗೆ ತಪರಾಕಿ ಹಾಕಿದೆ ಎಂದು ಅವರು ಕುಟುಕಿದ್ದಾರೆ.

ಬಿಜೆಪಿಯವರು ಹಿಂದುಳಿದ ವರ್ಗದ ನಾಯಕ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಿದ್ದರು, ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನ ಎದುರಿಸಲಾಗದೇ ಇಡಿಯನ್ನ ದುರ್ಬಳಕೆ ಮಾಡಿಕೊಂಡು, ಪಾರ್ವತಿ ಅವರ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ಮಾನಸಿಕವಾಗಿಯೂ ಕಿರುಕುಳ ನೀಡಿದ್ದರು. ಸುಪ್ರೀಂ ಆದೇಶದಿಂದ ವಿರೋಧಿಗಳಿಗೆ ಮುಖಭಂಗವಾಗಿದೆ ಎಂದು ಸುಬ್ರಮಣ್ಯ ತಿಳಿಸಿದ್ದಾರೆ.

ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ. ಇನ್ನಾದರೂ ಬಿಜೆಪಿಯವರು ವೈಯಕ್ತಿಕ, ದ್ವೇಷ ರಾಜಕಾರಣ ಬಿಟ್ಟು, ಆಡಳಿತ ವಿಚಾರದ ಬಗ್ಗೆ ಚರ್ಚೆ ಮಾಡಲಿ ಎಂದು ಸುಬ್ರಮಣ್ಯ ಸಲಹೆ ನೀಡಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಹೂಡಲಾದ ಹಣ ವರ್ಗಾವಣೆ ಪ್ರಕರಣವನ್ನು ನ್ಯಾಯಾಲಯ ರದ್ದು ಪಡಿಸಿರುವುದನ್ನು ಸ್ವಾಗತಿಸುತ್ತೇವೆ ಬಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ-ಬಿ ಸುಬ್ರಹ್ಮಣ್ಯ ಟಾಂಗ್ Read More

ಉದ್ದೇಶಪೂರ್ವಕವಾಗಿ ನನ್ನ ಟಾರ್ಗೆಟ್ ಮಾಡಿ ಇಡಿ ತನಿಖೆ ನಡೆಸುತ್ತಿದೆ:ಸಿಎಂ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿ ಇಡಿ ತನಿಖೆ ನಡೆಸುತ್ತಿದೆ, ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನನ್ನನ್ನೆ ಟಾರ್ಗೆಟ್ ಮಾಡಿ ಇಡಿಯವರು ತನಿಖೆ ಮಾಡುತ್ತಿದ್ದಾರೆ, ತನಿಖೆ ಮಾಡುತ್ತಿರುವ ಲೋಕಾಯುಕ್ತ ಸ್ವತಂತ್ರ ತನಿಖೆ ಅಲ್ಲವೇ, ಬೇಕು ಅಂತಾನೆ ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಇಡಿ ರಿಲೀಸ್ ಮಾಡಿರುವುದು ಸೀಜ್ ರಿಪೋರ್ಟ್ ಅಷ್ಟೇ, ಅಕ್ರಮ ಹಣ ವರ್ಗಾವಣೆ ಆಗಿರುವುದಕ್ಕೆ ಸಾಕ್ಷಿ ಏನಿದೆ, ಇದು ಮನಿ ಲ್ಯಾಂಡರಿಂಗ್ ಗೆ ಬರಲ್ಲ ಎಂದು ಕೋರ್ಟ್ ಹೇಳಿದೆ ಎಂದು ತಿಳಿಸಿದರು.

ಉದ್ದೇಶಪೂರ್ವಕವಾಗಿ ರಾಜಕೀಯ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಪತ್ನಿಗೆ ಇಡಿಯವರು 2 ಬಾರಿ ನೋಟಿಸ್ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ ನನ್ನ ಪತ್ನಿ ನ್ಯಾಯಾಲಯ ಮೊರೆಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಉದ್ದೇಶಪೂರ್ವಕವಾಗಿ ನನ್ನ ಟಾರ್ಗೆಟ್ ಮಾಡಿ ಇಡಿ ತನಿಖೆ ನಡೆಸುತ್ತಿದೆ:ಸಿಎಂ Read More

ಮುಡಾ‌ 9 ಕಡೆ ಇಡಿ ಅಧಿಕಾರಿಗಳ ದಾಳಿ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಳಿ ಮುಂದುವರಿಸಿದ್ದಾರೆ.

ಇಡಿ ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸೇರಿ 9 ಕಡೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಇಡಿ ಅಧಿಕಾರಿಗಳು ಮುಡಾದ 50:50 ನಿವೇಶ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ಮುಡಾ ಮಾಜಿ ಆಯುಕ್ತರಾದ ಡಾ.ನಟೇಶ್, ದಿನೇಶ್ ಹಾಗೂ ಬಿಲ್ಡರ್ ಮಂಜುನಾಥ್ ಅವರುಗಳ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು ಜತೆಗೆ ಸಿಎಂ ಆಪ್ತ ರಾಕೆಶ್ ಪಾಪಣ್ಣ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.

ಮೈಸೂರಿನ ಹಿನಕಲ್ ಗ್ರಾಮದಲ್ಲಿರುವ ರಾಕೇಶ್ ಪಾಪಣ್ಣ ನಿವಾಸದ ಮೇಲೆ ಹೆಚ್ಚು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ,ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ‌ಸಾಮಾಜಿಕ ಕಾರ್ಯಕರ್ತ‌ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಮುಡಾ‌ 9 ಕಡೆ ಇಡಿ ಅಧಿಕಾರಿಗಳ ದಾಳಿ Read More

ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿಕೆ

ಮೈಸೂರು: ಮೈಸೂರಿನ ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿದಿದೆ.

ಶನಿವಾರ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿರುವ ಹದಿನಾಲ್ಕು ನಿವೇಶನಗಳ ದಾಖಲಾತಿಯಲ್ಲಿ ಒಂದು ಪತ್ರಕ್ಕೆ ವೈಟ್ನರ್ ಹಾಕಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ವೈಟ್ನರ್ ಹಿಂದೆ ಇರುವ ಪದಗಳ ಬಗ್ಗೆ ಇಡಿ ಅಧಿಕಾರಿಗಳು ಮೂಡ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಮೂಲ ದಾಖಲಾತಿಯನ್ನು ನೀಡುವಂತೆ ಇಡಿ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬದಲಿ ನಿವೇಶನಕ್ಕೆ ಯಾರು,ಯಾರು ಶಿಫಾರಸು ಮಾಡಿದ್ದಾರೆ,ಮೂಡದಲ್ಲಿ ಈ ನಿವೇಶನಕ್ಕಾಗಿ ಶಿಫಾರಸು ಮಾಡಿರುವ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಮೂಡ ಆಯುಕ್ತ ರಘು ನಂದನ್ ಅವರು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಡಾ ಕಚೇರಿ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿಕೆ Read More

ಮುಡಾ ಕಚೇರಿ‌‌ ಮೇಲೆ ಇಡಿ ದಾಳಿ:ದಾಖಲೆ ಪರಿಶೀಲನೆ

ಮೈಸೂರು: ಮೈಸೂರಿನ ಮೂಡ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ಶುಕ್ರವಾರ ಇ.ಡಿ ಅಧಿಕಾರಿಗಳು ಮುಡಾ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ ನಡೆದಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಮುಡಾ ಅಧಿಕಾರಿಗಳಿಗೆ ಇಡಿ 3 ಬಾರಿ ನೋಟೀಸ್ ನೀಡಿ, ಒಂದು ಬಾರಿ ಸಮನ್ಸ್ ಕೊಟ್ಟಿತ್ತು, ದಾಖಲಾತಿ ನೀಡುವಂತೆ ಸೂಚಿಸಿತ್ತು.ಆದರೆ ದಾಖಲೆ ಕೊಡದ ಹಿನ್ನೆಲೆಯಲ್ಲಿ ಮುಡಾ ಮೇಲೆ ದಾಳಿ ಮಾಡಲಾಗಿದೆ.

೨೦ ಇಡಿ ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದ್ದು ಮುಡಾದಲ್ಲಿನ ಸೈಟು ಹಂಚಿಕೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮುಡಾದಲ್ಲಿ ೨ ಸಾವಿರ ಕೋಟಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿಕೊಂಡು ದಾಖಲಾತಿಗಳಪರಿಶೀಲಿಸುತ್ತಿದ್ದಾರೆ.
ಶನಿವಾರ ಕೂಡಾ ಪರಿಶೀಲನೆ ಮುಂದುವರಿಯಲಿದೆ.

ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರದಲ್ಲಿ ೧೪ ಸೈಟುಗಳನ್ನು ನೀಡಲಾಗಿದೆ ಎಂಬ ಪ್ರಕರಣ ಸೇರಿದಂತೆ ಮುಡಾದಲ್ಲಿ ನಡೆದಿರುವ ಹಗರಣಗಳನ್ನು ಬಗ್ಗೆ ಇಡಿ ತನಿಖೆ ನಡೆಸಲಿದೆ.

ಇದೇ ವೇಳೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದೆ.

ಮುಡಾ ಮೇಲಿನ ಇಡಿ ದಾಳಿಯಿಂದ ಎಲ್ಲಾ ಪಕ್ಷಗಳ ಮುಖಂಡರ ಬಣ್ಣ ಬಯಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ದಾಳಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಇಡಿ ಅಧಿಕಾರಿಗಳು ಬೆಳಿಗ್ಗೆ ಕಚೇರಿ ವೇಳೆಯಲ್ಲಿ ಆಗಮಿಸಿದ್ದಾರೆ. ದಾಖಲೆ ಪರಿಶೀಲಿಸುತ್ತಿದ್ದು,ತನಿಖೆ ಕೈಗೊಂಡಿದಾರೆ. ಅವರು ಕೇಳುವ ಎಲ್ಲಾ ಮಾಹಿತಿಯನ್ನು ನಾವು ಒದಗಿಸುತ್ತೇವೆ ಎಂದು ತಿಳಿಸಿದರು.

ಮುಡಾ ಕಚೇರಿ‌‌ ಮೇಲೆ ಇಡಿ ದಾಳಿ:ದಾಖಲೆ ಪರಿಶೀಲನೆ Read More

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತಿತರರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.

ರಾಷ್ಟ್ರೀಯ ರಾಜಧಾನಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಬೆಳಗ್ಗೆ ಶೋಧ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್ ಐಆರ್ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದೆಹಲಿ ಎಸಿಬಿ ದಾಖಲಿಸಿರುವ ಮತ್ತೊಂದು ಎಫ್ ಐಆರ್ ನಿಂದ ಅಮಾನತುಲ್ಲಾ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೊನೆಯದಾಗಿ ಪ್ರಶ್ನಿಸಿದಾಗಿನಿಂದ ಖಾನ್ ಕನಿಷ್ಠ ಹತ್ತು ಇಡಿ ಸಮನ್ಸ್‌ಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ Read More