ಚುನಾವಣೆಯಲ್ಲಿ ರಾಜಕಾರಣ ಮಾಡೋಣ; ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ

ಮೈಸೂರು: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಕರೆ ನೀಡಿದರು.

ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ದಸರಾ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು,ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ, ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ ಎಂದು ಟಾಂಗ್ ನೀಡಿದರು.

ನಾಡಿನ ಬಹುಸಂಖ್ಯಾತ ಸಮುದಾಯದವರು ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದ್ದಾರೆ ಇದು ಹೆಮ್ಮೆಯ ಸಂಗತಿ. ಅಂತಾರಾಷ್ಡ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು, ನಾವು ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು, ದ್ವೇಷ ಮನುಷ್ಯತ್ವದ ವಿರೋಧಿ ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು ಎಂದು ಹೇಳಿದರು ‌

ಸಂವಿಧಾನದ ಮೌಲ್ಯಗಳಾದ ಸಹಿಷ್ಣುತೆ-ಸಹಬಾಳ್ವೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು,
ನಮ್ಮ ಸಂವಿಧಾನ ಜಾತ್ಯತೀತ ಮತ್ತು ಧರ್ಮಾತೀತ, ಇದನ್ನೇ ಹೈಕೋರ್ಟ್- ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ಸಿಎಂ ತಿಳಿಸಿದರು.

ಯಾರಿಗೆ ಭಾರತೀಯರು ಎನ್ನುವ ಹೆಮ್ಮೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ.
ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ಗೊತ್ತಿರಬೇಕು ಎಂದು ಹೇಳಿದರು.

ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ: ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತನ್ನು ಉಲ್ಲೇಖಿಸಿ ಸಿದ್ದರಾಮಯ್ಯ
ಚಾಟಿ ಬೀಸಿದರು.

ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಮತ್ತು ಎಲ್ಲಾ ಪಕ್ಷದ ಬಡವರಿಗೆ ನಾವು ಗ್ಯಾರಂಟಿ ಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ ಎಂದು‌ ಇದೇ ವೇಳಡ ಸಿಎಂ ಪ್ರಶ್ನಿಸಿದರು.

ಈ ಗ್ಯಾರಂಟಿಗಳು ಖಂಡಿತಾ ನಿಲ್ಲುವುದಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ರಾಜ್ಯದ ಜನಗಳ ತಲಾ ಆದಾಯ ದೇಶದಲ್ಲೇ ನಂಬರ್ ಒನ್ ಆಗಿದೆ. ಈಗ ಜಿಡಿಪಿ ಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಒಂದು ಕಡೆ ನಮ್ಮ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿಯವರೇ ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಚುನಾವಣೆಯಲ್ಲಿ ರಾಜಕಾರಣ ಮಾಡೋಣ; ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ Read More

ದಸರಾ ದೀಪಾಲಂಕಾರ‌ಪೂರ್ಣ;ಮನಸೆಳೆಯುತ್ತಿದೆ ಮೈಸೂರು ದೀಪಗಳು

ಮೈಸೂರು: ಈ ಬಾರಿಯ‌ ದಸರಾ ಮಹೋತ್ಸವದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು,ದೀಪಾಲಂಕಾರ ಎಲ್ಲರ ಮನಸೂರೆಗೊಳ್ಳುತ್ತಿದೆ.

ನಗರದ ಎಲ್‌ಐಸಿ ವೃತ್ತ, ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ದೊಡ್ಡಕೆರೆ ಮೈದಾನ, ಜಯಚಾಮರಾಜ ವೃತ್ತ, ಗನ್‌ ಹೌಸ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.

ಈ ಬಾರಿ 136 ಕಿ. ಮೀ. ಉದ್ದದ ದೀಪಾಲಂಕಾರ,116 ವೃತ್ತಗಳಲ್ಲಿ ಕಣ್ಮನ ಸೆಳೆಯುವ ಮೂವ್‌ಮೆಂಟ್ ದೀಪಗಳನ್ನು ಅಳವಡಿಸಲಾಗಿದೆ.

ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

ಈ ಬಾರಿ 35 ರಿಂದ 40ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿವೆ.

ಉತ್ತನಹಳ್ಳಿಯಲ್ಲಿ ಯುವ ದಸರಾ ಯುವ ದಸರಾವನ್ನು ಈ ಬಾರಿಯೂ ಉತ್ತನಹಳ್ಳಿ ಸಮೀಪ ಆಯೋಜಿಸುತ್ತಿದ್ದು, ಅರ್ಜುನ್ ಜನ್ಯ, ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ದಿಗ್ಗಜರ ರಸಸಂಜೆ ಕಾರ್ಯಕ್ರಮ ನಿಗದಿಯಾಗಿರುವುದರಿಂದ ಯುವಕರು ಕಾತುರದಿಂದ ಕಾಯುತ್ತಿದ್ದಾರೆ.

ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ.

948.65 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮೈಸೂರು ದಸರಾ ಮಹೋತ್ಸವದ ನಿಮಿತ್ತ ಮೈಸೂರು ಮಹಾನಗರಪಾಲಿಕೆ ವತಿಯಿಂದ ಒಟ್ಟು 948.65 ಲಕ್ಷ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ದಸರಾ ಜಂಬೂಸವಾರಿ ಸಾಗುವ ಮಾರ್ಗ, ಅರಮನೆ ಸುತ್ತ ಹಾಗೂ ಇತರ ಕಡೆಗಳಲ್ಲಿ 114.66 ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡಿಂಗ್ ಕಾಮಗಾರಿ, 588.70 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗದ ದುರಸ್ತಿ, ನಗರದ ಪ್ರಮುಖ ರಸ್ತೆಗಳಲ್ಲಿ ಲೇನ್, ಕರ್ಬ್ ಪೇಂಟಿಂಗ್ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿ, 14.75 ಲಕ್ಷ ರೂ. ವೆಚ್ಚದಲ್ಲಿ ಒಡೆಯರ್ ಪ್ರತಿಮೆಗಳು, ಅಂಬೇಡ್ಕರ್ ಪ್ರತಿಮೆಗಳು, ವೃತ್ತಗಳಲ್ಲಿ ಗೋಪುರಗಳಿಗೆ ಬಣ್ಣ ಬಳಿಯುವುದು 90 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸ್ವಚ್ಛತಾ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ನಿರ್ಮಾಣ ಮಾಡುವುದು. 88.04 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಕಾಮಗಾರಿ, 20 ಕ್ಕೂ ಮೇಲ್ಪಟ್ಟ ಉದ್ಯಾನವನಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡುವುದು.15 ಲಕ್ಷ ರೂ. ವೆಚ್ಚದಲ್ಲಿ ಶ್ವಾನ ಪ್ರದರ್ಶನ, 12.50 ಲಕ್ಷ ರೂ. ವೆಚ್ಚದಲ್ಲಿ ಯುವಸಂಭ್ರಮ ಹಾಗೂ 25 ಲಕ್ಷ ರೂ.ಗಳನ್ನು ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳ ನಿರ್ಮಾಣ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ದಸರಾ ಮಹೋತ್ಸವಕ್ಕೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಆನ್​​ಲೈನ್‌ನಲ್ಲಿ ಗೋಲ್ಡ್ ಕಾರ್ಡ್, ಟಿಕೆಟ್‌ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಯುವ ಸಂಭ್ರಮ’ವನ್ನು ನಿತ್ಯ 50 ಸಾವಿರ ಜನರು ವೀಕ್ಷಿಸಿದ್ದಾರೆ.

ದಸರಾ ಮಹೋತ್ಸವದ ಸಂಬಂಧ ನಗರದ ರಸ್ತೆಗಳ ಗುಂಡಿ ದುರಸ್ತಿಪಡಿಸಲಾಗಿದೆ. ರಾಜ ಮಾರ್ಗದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದೆ. ಫುಟ್ ಪಾತ್​​ನಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ನವರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕಾಗಿ ಹೆಚ್ಚುವರಿ ಪೌರಕಾರ್ಮಿಕರು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದು
ನಗರಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.

ದಸರಾ ದೀಪಾಲಂಕಾರ‌ಪೂರ್ಣ;ಮನಸೆಳೆಯುತ್ತಿದೆ ಮೈಸೂರು ದೀಪಗಳು Read More

ದಸರಾ ಗಜಪಡೆಯ ಗಾಂಬೀರ್ಯ ನಡೆ ನೋಡುವುದೇ ಕಣ್ಣಿಗೆ ಹಬ್ಬ

ಮೈಸೂರು: ನಾಡಹಬ್ಬ‌ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಪ್ರಾರಂಭವಾಗಿದ್ದು‌ ಜನರ ಗದ್ದಲಕ್ಕೆ ಹೊಂದಿಕೊಳ್ಳಲು ಗಜಪಡೆಗೆ ಪ್ರತಿದಿನ ತಾಲೀಮು ನೀಡಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದಸರಾ ಗಜಪಡೆಯನ್ನು‌ ಮೈಸೂರು ಅರಮನೆ‌ ಆವರಣದಿಂದ ಬನ್ನಿಮಂಟಪದ ವರೆಗೆ ಕರೆದೊಯ್ಯಲಾಗುತ್ತದೆ.

ಸಂಜೆ ಅರಮನೆಯಿಂದ ಗಜಪಡೆಯನ್ನು ಮಾವುತರು ಕಾವಾಡಿಗಳು ಅತಿ ಎಚ್ಚರಿಕೆಯಿಂದ ಕರೆದೊಯ್ಯುತ್ತಾರೆ. ಈ ವೇಳೆ ಪೊಲೀಸರು ಜನರು ಆನೆಗಳ‌ ಬಳಿ ಬರದಂತೆ ಪದೇ ಪದೇ ಮನವಿ ಮಾಡುತ್ತಲೇ ಇರುತ್ತಾರೆ.

ಆದರೂ ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ನೋಡುವುದೇ ಕಣ್ಣಿಗೆ ಹಬ್ಬ.ಅವು ಮರೆಯಾಗುವ ತನಕ ನೋಡುತ್ತಲೇ ಇರೋಣ ಅನಿಸುತ್ತದೆ.

ನಗರ ಬಸ್ ನಿಲ್ದಾಣದ ಬಳಿ ಯುವ ಪಡೆಯಂತೂ ತಮ್ಮ ಮೊಬೈಲ್ ನಲ್ಲಿ ಆನೆಗಳನ್ನು ಸರೆಹಿಡಿಯಲು ಮುನ್ನುಗ್ಗುತ್ತಾರೆ.ಅಂತೂ ದೀಪದ ಬೆಳಕಲ್ಲಿ ಗಾಂಬೀರ್ಯದಿಂದ ಸಾಲಾಗಿ ಸಾಗುವ ಆನೆಗಳನ್ನು ನೋಡುವುದೇ ಅದೃಷ್ಟ.

ದಸರಾ ಗಜಪಡೆಯ ಗಾಂಬೀರ್ಯ ನಡೆ ನೋಡುವುದೇ ಕಣ್ಣಿಗೆ ಹಬ್ಬ Read More

ಶ್ರೀರಂಗಪಟ್ಟಣದ ದಸರಕ್ಕೆ ಬಂದ ಗಜರಾಜನಿಗೆ ಅದ್ದೂರಿ ಸ್ವಾಗತ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ‌ ಗಜರಾಜನನ್ನು
ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಗಜರಾಜನಿಗೆ ಮೊದಲು ಶ್ರೀರಂಗನಾಥನ ದರ್ಶನವನ್ನು ಮಾಡಿಸಿ‌ ನಂತರ ಪೂಜೆ ಪುನಸ್ಕಾರಗಳನ್ನು ಮಾಡಿಸಿ ಹಣ್ಣು,ಹಂಪಲು ಕಬ್ಬು ನೀಡಿ‌ ಸಾಮೂಹಿಕವಾಗಿ ಪೂಜೆಯನ್ನು ಸಲ್ಲಿಸಿ‌ ಬರಮಾಡಿಕೊಳ್ಳಲಾಯಿತು.

ಶ್ರೀರಂಗಪಟ್ಟಣದ ಜನತೆ ಹಾಗೂ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಡ್ಡಿ ಸಿದ್ದೇಗೌಡ ಹಾಗೂ ರಂಗನಾಥ ಸ್ವಾಮಿ ದೇವಸ್ಥಾನದ ಆಡಳಿತ ವರ್ಗದವರು ಗಜರಾಜ ರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಶ್ರೀರಂಗಪಟ್ಟಣದ ದಸರಕ್ಕೆ ಬಂದ ಗಜರಾಜನಿಗೆ ಅದ್ದೂರಿ ಸ್ವಾಗತ Read More

ಮುಂದಿನ ಒಂದು ವರ್ಷದವರೆಗೂ ಒಳ್ಳೆಯ ಕೆಲಸ ಮಾಡಲು ಅವಕಾಶ ನೀಡು ತಾಯಿ-ಚಾಮುಂಡಿಗೆ ಸಿಎಂ ಮೊರೆ

ಮೈಸೂರು: ಮುಂದಿನ ಒಂದು ವರ್ಷದವರೆಗೂ ನಮ್ಮೆಲ್ಲರಿಗೂ ಒಳ್ಳೆಯ ಕೆಲಸ ಮಾಡಲು ಅವಕಾಶ ನೀಡು
ತಾಯಿ ಎಂದು ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಪ್ರಾರ್ಥನೆ ಮಾಡಿದರು.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ,ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೇ 5 ವರ್ಷ ಸಿಎಂ ಆಗಿದ್ದೂ ನಾನೇ ಅದು ಸಿದ್ದರಾಮಯ್ಯ‌ ಎಂದು ತಿಳಿಸಿದರು.

ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಸಿಎಂ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ನಾನು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ಪೂಜೆ ಮಾಡಿ 5 ಗ್ಯಾರಂಟಿಗೆ ಶಕ್ತಿ ಕೊಡಮ್ಮ ಅಂತ ಕೇಳಿದ್ದವು. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ ಇದು ಚಾಮುಂಡಿಯ ಆಶೀರ್ವಾದ,ಈಗಲೂ ಎಷ್ಟೇ ತೊಡಕು ಬಂದರೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನಗೆ ಇದೆ
ಎಂದು ಹೇಳಿದರು.

ಚಾಮುಂಡಿ ಕೃಪೆಯಿಂದ ಇಲ್ಲಿವರೆಗೂ ತಪ್ಪು ಮಾಡಿಲ್ಲ,ಜನರ, ದೇವರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂದರು‌ ಸಿಎಂ.

ಏನಪ್ಪಾ ಜಿ.ಟಿ ದೇವೇಗೌಡ ನೀನೇ ನನ್ನ ಒಂದು ಬಾರಿ ಸೋಲಿಸಿದ್ದೆ ಎಂದು ಇದೇ ವೇಳೆ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ, ಒಟ್ಟು 9 ಚುನಾವಣೆ ಗೆದ್ದಿದ್ದೇನೆ. 40 ವರ್ಷ ಮುಖ್ಯಮಂತ್ರಿ,ಉಪ ಮುಖ್ಯ ಮಂತ್ರಿ,ಮುಖ್ಯ ಮಂತ್ರಿ ಆಗಿದ್ದೇನೆ. ಚಾಮುಂಡಿ ಕೃಪೆಯಿಂದ ಇಲ್ಲಿವರೆಗೂ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ವರ್ಷ ಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ‌ ಹೇಳಿದರು.

ನಾನು ಯಾವ ತಪ್ಪು ಮಾಡಿಲ್ಲ ಮಾಡಿದ್ದರೆ ಸುದೀರ್ಘ ರಾಜಕೀಯದಲ್ಲಿ ಇರುತ್ತಿರಲಿಲ್ಲ, ಜಿ.ಟಿ ದೇವೇಗೌಡ ಸತ್ಯಕ್ಕೆ ಜಯ ಸಿಗಬೇಕು ಎಂದಿರುವುದು ನನಗೆ ಮತ್ತಷ್ಟು ಬಲ ಬಂದಿದೆ ಎಂದರು ಸಿಎಂ.

ಮುಂದಿನ ಒಂದು ವರ್ಷದವರೆಗೂ ಒಳ್ಳೆಯ ಕೆಲಸ ಮಾಡಲು ಅವಕಾಶ ನೀಡು ತಾಯಿ-ಚಾಮುಂಡಿಗೆ ಸಿಎಂ ಮೊರೆ Read More

ದಸರಾ ಮಹೋತ್ಸವಕ್ಕೆ ಭಾರೀ ಭದ್ರತೆ:ಸೀಮಾ ಲಾಟ್ಕರ್

ಮೈಸೂರು: ಅಕ್ಟೋಬರ್ ಮೂರರಿಂದ 12ರವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಭಾರೀ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಅವರು ತಿಳಿಸಿದ್ದಾರೆ.

ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ‌ ಭದ್ರತೆ ಕೈಗೊಳ್ಳಲಾಗಿದೆ, 27 ಎಸ್ಪಿ ಮಟ್ಟದ ಅಧಿಕಾರಿಗಳು, 989 ಅಡಿಷನಲ್ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ಗಳು, 3981 ಸಿಬ್ಬಂದಿ ಸೇರಿ ಈ ಬಾರಿ 5000ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ದಸರಾ ವಿಶೇಷ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

13,670 ಸಿಸಿ ಕ್ಯಾಮೆರಾ ಕಣ್ಗಾವಲನ್ನು ಮೈಸೂರಿನಾದ್ಯಂತ ಅಳವಡಿಸಲಾಗಿದೆ, ಪೊಲೀಸ್ ಸಹಾಯ ಕೇಂದ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ತೆಗೆಯಲಾಗಿದೆ, ಪ್ರಮುಖ ಸ್ಥಳಗಳಲ್ಲಿ ವಾಚ್ ಟವರ್ ಗಳನ್ನು ಸಹ ಸ್ಥಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮಹಿಳೆಯರ ರಕ್ಷಣೆಗಾಗಿಯೇ ಚಾಮುಂಡಿ ಕಾರ್ಯ ಪಡೆಯನ್ನು ಸಹ ದಸರಾ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಅವರು ಸೀಮಾ ಲಾಟ್ಕರ್ ವಿವರಿಸಿದರು.

ದಸರಾ ಮಹೋತ್ಸವಕ್ಕೆ ಭಾರೀ ಭದ್ರತೆ:ಸೀಮಾ ಲಾಟ್ಕರ್ Read More