ನುಗ್ಗೇಕಾಯಿ ಕೆಜಿಗೆ 600 – 700ರೂ!
ಮೈಸೂರು: ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದ್ದು, ನುಗ್ಗೇಕಾಯಿ ಬೆಲೆ ಮಟನ್ ದರದಷ್ಟು ಏರಿಕೆಯಾಗಿದೆ ಅಂದ್ರೆ ನಂಬ್ತೀರಾ ಖಂಡಿತಾ ನಂಬಲೇಬೇಕು!
ನುಗ್ಗೇಕಾಯಿ ಕೆಜಿಗೆ 600 ರಿಂದ 700ರೂಗೆ ಮಾರಾಟವಾಗುತ್ತಿದ್ದು, ನುಗ್ಗೇಕಾಯಿ ಖರೀದಿ ಅಸಾಧ್ಯ ಎಂದು ಜನ ಬೇಸರ ಪಡುತ್ತಿದ್ದಾರೆ.
ಇದುವರೆಗಿನ ತರಕಾರಿ ಇತಿಹಾಸದಲ್ಲೇ ಈ ಮಟ್ಟದ ರೇಟ್ ನೋಡಿಯೇ ಇರಲಿಲ್ಲ ಎನ್ನುತ್ತಿದ್ದಾರೆ ನುಗ್ಗೆಕಾಯಿ ಪ್ರಿಯರು.
ಹವಾಮಾನ ವೈಪರೀತ್ಯದಿಂದ ಈ ಬಾರಿ ನುಗ್ಗೇಕಾಯಿ ಬೆಳೆ ಬಂದಿಲ್ಲ. ಆದ್ದರಿಂದ ನುಗ್ಗೇಕಾಯಿ ಹೆಚ್ಚು ಸರಬರಾಜಾಗುತ್ತಿಲ್ಲ. ಬೆಲೆ ಕೂಡ ಗಗನಕ್ಕೇರಿದೆ.ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿಗಳ ಬೆಲೆ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಹಿಂಗಾರು ಮಳೆ ವಿಳಂಬದಿಂದ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಬಂದ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತಿಲ್ಲ.ಹಾಗಾಗಿ ಬೆಲೆ ಗಗನಕ್ಕೇರಿದೆ.
ಆದರೂ ನುಗ್ಗೇಕಾಯಿ ಬೆಲೆ ಈ ಪಾಟಿ ಏರಿಬಿಟ್ಟೈತಲ್ಲಾ ಅದೇ ಮಹಿಳೆಯರ ತಲೆ ಕೆಡಿಸಿದೆ.
ಆದರೆ ಮಾಲ್ ಗಳಲ್ಲಿ ಆಫರ್ ಬಿಟ್ಟಿದ್ದಾರೆ ಒಂದು ಕೆಜಿ ನುಗ್ಗೆಕಾಯಿ ಬೆಲೆ 380 ರಿಂದ 400 ರೂ.ಕೊಳ್ಳೊರು ಕೊಳ್ಳಬಹುದು.