ಚರಂಡಿ ಹೂಳು ತೆಗೆದು ಸಾಗಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು!

ಹುಣಸೂರು: ಹುಣಸೂರಿನ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದೆ. ಇದಕ್ಕೆ ತಾಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿ ಸ್ಪಷ್ಟ ಉದಾಹರಣೆಯಾಗಿದೆ.

ತಟ್ಟೆಕೆರೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿಯೇ ಚರಂಡಿಗಳು ಹೂಳು ತುಂಬಿಕೊಂಡು ಕೆಟ್ಟ ವಾಸನೆ ಬರುತ್ತಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಲೇ ಇಲ್ಲ.

ಇದರಿಂದ ಬೇಸತ್ತ ತಟ್ಟೆಕೆರೆ ಗ್ರಾಮದ ಯುವಕರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾಗಿದ್ದರೂ ಲೆಕ್ಕಿಸದೆ‌ ಗ್ರಾಮ ಪಂಚಾಯಿತಿ ಮುಂಭಾಗದ ಚರಂಡಿಯ ಹೂಳನ್ನು ತಾವೇ ತೆಗೆದು ಟ್ರ್ಯಾಕ್ಟರ್ ನಲ್ಲಿ ಸಾಗಿಸುವ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಡ್ಡು ಹೊಡೆದಿದ್ದಾರೆ ಹಾಗೂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಚರಂಡಿ ಹೂಳು ತೆಗೆದು ಸಾಗಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡದ ಕಾರಣ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಯುವಕರು ಮಡಿಯಲ್ಲಿ ಇರುತ್ತಾರೆ, ಜೊತೆಗೆ ಇಂದು ಅನ್ನದಾನ ಕೂಡ ಇದೆ, ಅದನ್ನೆಲ್ಲ ಬಿಟ್ಟು ಚರಂಡಿಯ ಕಬ್ಬು ವಾಸನೆ ತಡೆಯಲಾರದೆ ತಾವೇ ಮುಂದಾಗಿ ಹೂಳು ತೆಗೆದು ಸಾಗಿಸುವ ಮೂಲಕ ಮಾದರಿಯಾಗಿದ್ದಾರೆ. ಇದನ್ನು ಕಂಡೂ ಕಾಣದಂತೆ ಕುಳಿತಿರುವ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಧಿಕ್ಕಾರವಿರಲಿ ಎಂದು ಚೆಲುವರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಟ್ಟೆಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಚರಂಡಿ ಹೂಳು ತೆಗೆದು ಸಾಗಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು! Read More

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ!

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದುದನ್ನು ಸರಿಪಡಿಸಲಾಗಿದ್ದು, ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿ ಕಸ ತೆಗೆದು ಯಾವದೋ ಕಾಲವಾಗಿತ್ತು,ಈಗ ಸತತ ಮಳೆ ಬರುತ್ತಿದ್ದು,ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು‌ ವಾಸನೆ ಬರುತ್ತಿತ್ತು.

ಚರಂಡಿಯಲ್ಲಿ ಹುಳು,ಹುಪ್ಪಟಿ ತುಂಬಿತ್ತಲ್ಕದೆ ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿತ್ತು.

ಇದರಿಂದಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದರು.

ಜನರ ಆತಂಕ ಗಮನಿಸಿ ವರ್ಷಿಣಿ ನ್ಯೂಸ್ ನವರು ಸುದ್ದಿ ಪ್ರಕಟಿಸಿದ್ದರು.ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ
ಚರಂಡಿ ಹೂಳು ತೆಗೆಸಿ ಸಾಧ್ಯವಾದಷ್ಟು ಸರಿಪಡಿಸಿದ್ದಾರೆ.

ಚರಂಡಿ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು,ಪಿಡಿಒ ಹಾಗೂ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನವರಿಗೆ ಸ್ಥಳೀಯ ಜನರು ಮತ್ತು ಚೆಲುವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ! Read More