ಸಸಿಗಳನ್ನು ನೆಟ್ಟು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸ್ಮರಣೆ
ಮೈಸೂರು: ಡಾ. ಶ್ಯಾಮ ಪ್ರಸಾದ್ ಮುಖರ್ಜಿರವರ ಬಲಿದಾನ ದಿನದಿಂದ ಜುಲೈ 6ರ ಹುಟ್ಟುಹಬ್ಬದವರೆಗೂ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರ ಭಾಗವಾಗಿ ಇಂದು ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ 44 ಬೋಗಾದಿ ಎರಡನೇ ಹಂತದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನೇರಳೆ, ಹಲಸು ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಯಿತು.
ಈ ವೇಳೆ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ, ಏನಾದರೂ ಮಾಡಿ ಅಧಿಕಾರ ಪಡೆಯಬೇಕು ಅನ್ನುವ ಇಂದಿನ ಕಾಲದಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಎಲ್ಲರೂ ನೆನೆಯಬೇಕು ಎಂದು ತಿಳಿಸಿದರು.
ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರು
ಕಾಶ್ಮೀರಕ್ಕೆ 370ನೇ ವಿಧಿ ವಿರೋಧಿಸಿ ತಮ್ಮ ಮಂತ್ರಿಗಿರಿಗೆ ರಾಜೀನಾಮೆ ಸಲ್ಲಿಸಿ ಕೇಂದ್ರ ಸಂಪುಟದಿಂದ ಹೊರಬಂದು ಹೋರಾಟಕ್ಕಿಳಿದರು.
ಒಂದು ದೇಶದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಹಾಗೂ ಎರಡು ಪ್ರಧಾನಮಂತ್ರಿಗಳು ಇರಲು ಸಾಧ್ಯವಿಲ್ಲ ಎಂದು ಘೋಷಿಸಿ ಕಾಶ್ಮೀರಕ್ಕೆ ತೆರಳಿ ಬಂಧನಕ್ಕೊಳಪಟ್ಟರು. ನಂತರ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅಂತ ಮಹನೀಯರ ಬಲಿದಾನ ಹಾಗೂ ಹೋರಾಟವನ್ನು ನೆನೆದು ಪರಿಸರ ದಿನಾಚರಣೆ ಸಂದರ್ಭದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್. ತ್ಯಾಗರಾಜ್, ಮಂಡಲದ ಉಪಾಧ್ಯಕ್ಷರಾದ ಬಿ.ಸಿ ಶಶಿಕಾಂತ್, ಶಿವು ಪಟೇಲ್, ಕಾರ್ಯದರ್ಶಿ ಸೋಮಣ್ಣ, ಒಬಿಸಿ ಮೋರ್ಚಾ ಅಧ್ಯಕ್ಷ ರಂಗೇಶ್, ಎಸ್ ಟಿ ಮೋರ್ಚಾ ಅಧ್ಯಕ್ಷ ರಾಜ ನಾಯಕ್, ವಾರ್ಡ್ ಅಧ್ಯಕ್ಷರಾದ ಭಾರ್ಗವ್ ಗೌಡ, ಕಾರ್ಯದರ್ಶಿ ಭೈರೇಗೌಡ, ಮುಖಂಡರಾದ ರಾಘವೇಂದ್ರ, ಮಹೇಶ್, ಸಾಗರ್ ಸಿಂಗ್, ಪ್ರವೀಣ್, ನಾಗೇಶ್, ಮಧು, ಸುಪ್ರೀತ್, ಪ್ರಜ್ವಲ್, ಮಹದೇವ್ ಸೇರಿದಂತೆ ವಾರ್ಡಿನ ನಾಗರೀಕರು ಭಾಗವಹಿಸಿದ್ದರು.
ಸಸಿಗಳನ್ನು ನೆಟ್ಟು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸ್ಮರಣೆ Read More