ಡಾ. ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

ಹುಬ್ಬಳ್ಳಿ: ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಹುಬ್ಬಳ್ಳಿ ವಿಭಾಗದಿಂದ
ಎಂಟು ವರ್ಷದ ಬಾಲಕ ಡಾ. ಪೃಥು ಪಿ ಅದ್ವೈತ್ ವಾಮನ ಪ್ರಿಯ ಬಿರುದನ್ನು ಮುಡಿಗೇರಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ನೆಡೆದ ಶ್ರೀಮತ್ ಭಾಗವತ ಸಮ್ಮೇಳನದಲ್ಲಿ ಮೈಸೂರಿನಿಂದ ಭಾಗವಹಿಸಿದ ಬಾಲಕ ಡಾ. ಪೃಥು ಪಿ ಅದ್ವೈತ್ ಸಭೆಯಲ್ಲಿ ವಿವಿಧ ಮಂತ್ರಗಳನ್ನು ಪಠಿಸಿ ಪ್ರಶಂಸೆ ಪಡೆದರು.

ಡಾ. ಪೃಥು ಪಿ ಅದ್ವೈತ್ ಈಗಾಗಲೇ ಸ್ತೂತ್ರ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದನ್ನು ಗುರುತಿಸಿ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರಾದ ವಿದ್ಯಾವಾಚಸ್ಪತಿ ಡಾ ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಡಾ. ಪೃಥು ಪಿ ಅದ್ವೈತ್ ಗೆ “ವಾಮನ ಪ್ರಿಯ” ಎಂಬ ಬಿರುದು ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೃಥುವಿನ ಪೋಷಕರಾದ ಪುನೀತ್ ಜಿ, ಪೂಜಾ ಎನ್, ಡಾ. ಸತ್ಯ ಮೂರ್ತಿ ಆಚಾರ್ಯ, ಅಚ್ಯುತ ಭಟ್, ದ.ಕ. ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಐ‌.ಪಿ. ಐತಾಳ್, ಬೆಂಗಳೂರಿನ ಭಾನುಪ್ರಕಾಶ್ ಶರ್ಮ, ಮಂಗಳಾ ಭಾಸ್ಕರ್, ಮೈಸೂರಿನ ಡಾ. ರಮಾಕಾಂತ್ ಶೆಣೈ, ಸುಮತಿ ಸುಬ್ರಹ್ಮಣ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾ. ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ Read More

ಮಹಾಸ್ವಾಮಿಗಳ ಪ್ರಶಂಸೆಗೆ ಪಾತ್ರನಾದಡಾ. ಪೃಥು ಪಿ ಅದ್ವೈತ್

ಮೈಸೂರು: ಡಾ. ಪೃಥು ಪಿ ಅದ್ವೈತ್ ಅವರು ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ
ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ ಚಾತುರ್ಮಾಸ್ಯದಲ್ಲಿ ಡಾ. ಪೃಥು ಪಿ ಅದ್ವೈತ್ ಸ್ತೋತ್ರ ಪಠಿಸಿ ಗುರುಗಳ ಪ್ರಶಂಸೆಗೆ ಪಾತ್ರನಾಗಿದ್ದಾರೆ.

ಈ ವೇಳೆ ಶ್ರೀಗಳು ಪೃಥುವಿಗೆ ಗೌರವ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈಗಾಗಲೇ ಸ್ತೂತ್ರ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಎಂಟು ವರ್ಷದ ಬಾಲಕ ಪೃಥು ಪಿ ಅದ್ವೈತ್ ನನ್ನು ಶ್ರೀಗಳು ಆಶೀರ್ವದಿಸಿ ಅನುಗ್ರಹಿಸಿ ಮತ್ತಷ್ಟು ಆಧ್ಯಾತ್ಮಿಕ ವಿಚಾರಗಳಲ್ಲಿ ಸಾಧನೆ ಮಾಡುವಂತೆ ಹರಸಿದ್ದಾರೆ.

ಮಹಾಸ್ವಾಮಿಗಳ ಪ್ರಶಂಸೆಗೆ ಪಾತ್ರನಾದಡಾ. ಪೃಥು ಪಿ ಅದ್ವೈತ್ Read More