ಡಾ.ನಮನ ಚಂದ್ರು ಸಾಧನೆಯ ಅಭಿನಂದನ ಕೃತಿ ಯುವ ಜನಾಂಗಕ್ಕೆ ಸ್ಪೂರ್ತಿ:ಡಾ.ಬಾಲಾಜಿ
ಬೆಂಗಳೂರು: ಗ್ರಾಮೀಣ ಪ್ರತಿಭೆ ಜಾನಪದ ಪರಿಚಾರಕ ಡಾ.ನಮನ ಚಂದ್ರು ಸಾಧನೆಯ ಸೃಜನವಂತ ಅಭಿನಂದನ ಕೃತಿ ಯುವ ಜನಾಂಗಕ್ಕೆ ಸ್ಪೂರ್ತಕ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ತಿಳಿಸಿದರು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಧಮ್ಮಭೂಮಿ ಚಾರಿಟಬಲ್ ಟ್ರಸ್ಟ್ ಹಾಗೂ ಡಾ. ನಮನ ಚಂದ್ರು ಸ್ನೇಹ ಬಳಗ ಏರ್ಪಡಿಸಿದ್ದ ಸಾಮಾಜಿಕ ಚಿಂತಕ,ಬರಹಗಾರ ಡಾ. ಚಂದ್ರ ಎಂ ಜೀವನ ಸಾಧನೆ ಕುರಿತಾದ ಸೃಜನವಂತ ಅಭಿನಂದನ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ವಜನರ ಕಲ್ಯಾಣಕ್ಕಾಗಿ ನಿರಂತರವಾಗಿ ನಾಡಿನ ನೆಲ ಜಲ ಭಾಷೆ ಜಾನಪದ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ನಮನ ಚಂದ್ರು ನಿಸ್ವಾರ್ಥ ಸಮಾಜ ಸೇವಾ ಕಾಯಕಗಳನ್ನು ಗುರುತಿಸಿ ಸರ್ಕಾರ ಉತ್ತಮ ಸ್ಥಾನಮಾನ ನೀಡಬೇಕು ಎಂದು ಡಾ.ಜನಪದ ಎಸ್ ಬಾಲಾಜಿ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಉದ್ಘಾಟಿಸಿ ಮಾತನಾಡಿ,ಜನಹಿತಕ್ಕಾಗಿ ಸಮಾಜಮುಖಿ ಕಾಯಕ ಮಾಡುತ್ತಿರುವ ಬಹುಮುಖ ಪ್ರತಿಭೆ ಬರಹಗಾರ ಡಾ. ನಮನ ಚಂದ್ರು ಅವರ ಸೇವಾ ಕಾರ್ಯಗಳು ಪ್ರಸ್ತುತ ಸಮಾಜಕ್ಕೆ ಆದರ್ಶವಾಗಿವೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಕೃತಿ ಬಿಡುಗಡೆ ಮಾಡಿ ಧನಿ ಇಲ್ಲದ ಧಮನಿತ ಶೋಷಿತ ವರ್ಗದ ಅಭಿವೃದ್ಧಿಗೆ, ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ.ನಮನ ಚಂದ್ರು ಸೇವಾ ಸಾಧನೆ ಕುರಿತು ಸೃಜನವಂತ ಕೃತಿ ಭವಿಷ್ಯದಲ್ಲಿ ವಿದ್ಯಾರ್ಥಿ, ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ ಸದಾಶಯಗಳನ್ನು ನೀಡುತ್ತದೆ ಎಂದು ತಿಳಿಸಿದರು.
ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕಡು ಬಡತನದ ಜೀತಗಾರ ಮಗನಾಗಿ ಹುಟ್ಟಿ ಬೆಳೆದ ಚಂದ್ರು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಸಂಸ್ಕಾರ, ವಿನಯಶೀಲ ಮಾನವೀಯ ಮೌಲ್ಯಗಳ ಸರದಾರನಾಗಿ ಕನಕಪುರದ ಕನಕನಾಗಿರುವುದು ಬಹಳ ಸಂತೋಷದ ವಿಷಯ ಎಂದು ಶುಭ ಹಾರೈಸಿದರು.
ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ ಪ್ರಭಾಕರ್ ಮಾತನಾಡಿ, ಕಲಾವಿದರ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರ ಜೊತೆಗೆ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಚಂದ್ರು ಸಾಧನೆ ಕುರಿತು ಪುಸ್ತಕ ಹೊರ ತರುವುದು ಪ್ರಸ್ತುತ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ. ವಿವೇಕ್ ದೊರೈ, ಸಮಾಜಸೇವಕ ಕನಕಪುರ ಡಾ. ಡಿ ವೆಂಕಟರಮಣಸ್ವಾಮಿ ಡಾ. ನಮನ ಚಂದ್ರ ವಿ.ಟಿ ಬಿಡುಗಡೆ ಮಾಡಿದರು.
ಜಯನಗರ ಸರ್ಕಾರಿ ಆಸ್ಪತ್ರೆ ಆರ್ ಎಂ ಒ ಡಾ. ಪದ್ಮ ಜಿ.ಎಲ್ ,ಹೊಸಕೋಟೆ ಯೋಜನಾ ಪ್ರಾಧಿಕಾರದ ಜಂಟಿ ನಿರ್ದೇಶಕಿ ಎಂ.ಆರ್ ನಾಗರತ್ನ, ಸಂಸ್ಥೆ ಅಧ್ಯಕ್ಷ ಬಿ. ಅನ್ನದಾನಪ್ಪ, ಕೆ ನಾಗರಾಜ್, ಶಿವಮ್ಮ,ವೆಂಕಟೇಶ್, ಸ್ನೇಹ ಬಳಗದ ಡಾ.ಬಿ ಆರ್ ಶಿವಕುಮಾರ್, ಟಿ. ಕೃಷ್ಣಮೂರ್ತಿ, ಡಾ. ಸುರೇಶ್ ಗೌತಮ್, ಎಚ್ ಪ್ರವೀಣ್ ಕುಮಾರ್,ಎಚ್.ಎಸ್ ಲೋಕೇಶ್, ವೆಂಕಟಚಲ,ಸರ್ವೋತ್ತಮ್, ಅರುಣ್ ವೇಜಿ, ಎಂ ನಾಗೇಶ್, ಸಂಪಾದಕರಾದ ಡಾ. ಸಿಸಿರಾ, ಎನ್.ಗೋವಿಂದರಾಜು ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಡಾ. ನಮನ ಚಂದ್ರುರವರಿಗೆ ನಮನ ಕಾವ್ಯನಾಮ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು.
ಹೆಸರಂತ ಕಲಾವಿದರಿಂದ ಜಾನಪದ ಗೀತೆ, ಸುಗಮ ಸಂಗೀತ, ಡೊಳ್ಳು ಕುಣಿತ, ಗೊಂಬೆ ಪ್ರದರ್ಶನ, ಭರತನಾಟ್ಯ, ಜಾನಪದ ನೃತ್ಯದೊಂದಿಗೆ ಜಾನಪದ ಸಂಭ್ರಮ ಏರ್ಪಡಿಸಲಾಗಿತ್ತು.
ಡಾ.ನಮನ ಚಂದ್ರು ಸಾಧನೆಯ ಅಭಿನಂದನ ಕೃತಿ ಯುವ ಜನಾಂಗಕ್ಕೆ ಸ್ಪೂರ್ತಿ:ಡಾ.ಬಾಲಾಜಿ Read More