ರನ್ಯಾ‌ ವಿವಾಹಕ್ಕೆ ಪರಮೇಶ್ವರ್‌ 20 ಲಕ್ಷ ಗಿಫ್ಟ್‌ ಕೊಟ್ಟಿರಬಹುದು: ಡಿಕೆಶಿ

ಬೆಂಗಳೂರು: ರನ್ಯಾ ಮದುವೆಗೆ ಪರಮೇಶ್ವರ್‌ 15- 20 ಲಕ್ಷ ರೂ ಗಿಫ್ಟ್‌ ಕೊಟ್ಟಿರಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ,ರನ್ಯಾಗೆ 15 ರಿಂದ 25 ಲಕ್ಷ ರೂ. ನೀಡಿದ್ದಾರಂತೆ. ಆಕೆಯ ಮದುವೆಗೆ ಗಿಫ್ಟ್‌ ಮಾಡಿರಬಹುದು. ನಾನು ಅವರ ಬಳಿ ಮಾತಾಡಿದ್ದೇನೆ ಎಂದು ಹೇಳಿದರು.

ಪರಮೇಶ್ವರ್‌ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ, ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ, ಅವರು ಗೌರವಾನ್ವಿತ ವ್ಯಕ್ತಿ, ನಾನು ಅವರ ಜೊತೆ ಇರುತ್ತೇನೆ. ರನ್ಯಾ ತಪ್ಪು ಮಾಡಿದ್ದರೆ ಕ್ರಮ ಆಗಲಿ ಎಂದು ತಿಳಿಸಿದರು.

ರನ್ಯಾ‌ ವಿವಾಹಕ್ಕೆ ಪರಮೇಶ್ವರ್‌ 20 ಲಕ್ಷ ಗಿಫ್ಟ್‌ ಕೊಟ್ಟಿರಬಹುದು: ಡಿಕೆಶಿ Read More

ಪರಮೇಶ್ವರ್‌ಗೆ ಇಡಿ ಶಾಕ್

ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ಗೆ ಜಾರಿ ನಿರ್ದೇಶನಾಲಯ ಬೆಳ್ಳಂಬೆಳಿಗ್ಗೆ ಶಾಕ್‌ ನೀಡಿದೆ.

ಪರಮೇಶ್ವರ್‌ ಒಡೆತನದ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ‌

ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್, ಎಂಜಿನಿಯರಿಂಗ್‌ ಕಾಲೇಜು ಅಲ್ಲದೇ ನೆಲಮಂಗಲದ ಟಿ ಬೇಗೂರು ಬಳಿ ಇರುವ ಕಾಲೇಜಿನ ಮೇಲೂ ಇಡಿ ದಾಳಿ ನಡೆದಿದೆ.

9 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನಾಲ್ಕು ವರ್ಷದ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.ಆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಪರಮೇಶ್ವರ್ ಒಡೆತನದ ಸಂಸ್ಥೆ ಮೇಲೆ ಆಗ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು.

ಪರಮೇಶ್ವರ್‌ಗೆ ಇಡಿ ಶಾಕ್ Read More

ಕಾನೂನು ಎಲ್ಲರಿಗೂ ಒಂದೇ:ಪರಮೇಶ್ವರ್

ಬೆಂಗಳೂರು,ಏ.5: ಕಾನೂನು ಎಲ್ಲರಿಗೂ ಒಂದೇ. ಪೊನ್ನಣ್ಣಾಗೂ ಒಂದೇ, ಮಂಥರ್ ಗೌಡಾಗೂ ಒಂದೇ ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಸೋಮಯ್ಯ‌ ಡೆತ್‌ನೋಟ್‌ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಎಲ್ಲರಿಗೂ ಒಂದೇ ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ ನೀಡುವ ವಿಚಾರದ ಬಗ್ಗೆ ನಿರ್ಧಾರ ಆಗಿಲ್ಲ, ಅಗತ್ಯವಿದ್ದರೆ ನೋಡೋಣ ಎಂದು ಹೇಳಿದರು.

ಹಿಂದೆ ಫೆಬ್ರವರಿಯಲ್ಲಿ ನಡೆದಿರುವ ಘಟನೆಯಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ಮಾಡಲಾಗುತ್ತದೆ. ವಾಟ್ಸಪ್‌ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲೂ ಎಫ್‌ಐಆರ್ ಆಗಿದೆ. ಇಲ್ಲೂ ಎಫ್‌ಐಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ. ತನಿಖೆ ಆದಮೇಲೆ ಇವರಿಬ್ಬರೂ, ವಿನಯ್ ಆತ್ಮಹತ್ಯೆಗೆ ಕಾರಣರಾಗಿದ್ದರಾ ಎಂದು ತಿಳಿದುಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಡೆತ್‌ನೋಟ್ ಎನ್ನುವುದೇ ಇಲ್ಲ ಎಂದು ಹೇಳುತ್ತಾರೆ. ವಾಟ್ಸಪ್‌ನಲ್ಲಿ ಅವರು ಮಾಡಿದ್ದಾರೆ ಎಂದು ಮೊದಲು ಸಾಬೀತು ಆಗಬೇಕಲ್ಲ. ಡೆತ್‌ನೋಟ್ ಅಥವಾ ವಾಟ್ಸಪ್ ಡೆತ್‌ನೋಟ್ ಎಂದು ತಗೆದುಕೊಳ್ಳಬಹುದಾ ಎಂದು ಗೊಂದಲವಿದೆ. ಇದರಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡೋಕೆ ಅವಕಾಶ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ಕೊಡಬೇಕು ಎಂದು ನಾನು ಸೂಚನೆ ಕೊಟ್ಟಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಸೋಶಿಯಲ್ ಮೀಡಿಯಾವನ್ನು ಸಾಕ್ಷಿಯಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಕಾನೂನಿನಲ್ಲಿ ಇದ್ದರೆ ಅದನ್ನ ಕನ್ಸಿಡರ್ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾನೂನು ಎಲ್ಲರಿಗೂ ಒಂದೇ:ಪರಮೇಶ್ವರ್ Read More

ಹನಿಟ್ರ್ಯಾಪ್; ಉನ್ನತ ಮಟ್ಟದ ತನಿಖೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಹನಿಟ್ರ್ಯಾಪ್ ಆರೋಪ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಶೀಘ್ರವೇ ಆದೇಶಿಸಲಾಗುವುದು. ರಾಜಣ್ಣ ಅವರು ದೂರು ನೀಡಿದ ಕೂಡಲೇ ತನಿಖೆ ಮಾಡಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.

ಈ ವೇಳೆ‌ ಸಭಾಧ್ಯಕ್ಷ ಯು.ಟಿ.ಖಾದರ್ ಪರಮೇಶ್ವರ್ ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿ ಆಗಲಿ ಎಂದು ಹೇಳಿದರು.

ಹನಿಟ್ರ್ಯಾಪ್‌ಗೆ ಫುಲ್‌ ಸ್ಟಾಪ್ ಹಾಕಬೇಕು, ಹನಿಟ್ರ್ಯಾಪ್ ಎನ್ನುವುದು ಸದನದ ಎಲ್ಲ ಸದಸ್ಯರ ಮರ್ಯಾದೆ ಪ್ರಶ್ನೆ, ಗೌರವ ಗಳಿಸಿಕೊಂಡಿರುವ ನಾಯಕರ ಘನತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಒಬ್ಬರು, ಇಬ್ಬರು ಸಚಿವರಿಗೆ ಹನಿಟ್ರಾಪ್ ಅಂತಲ್ಲಾ ಇದು ಎಲ್ಲರ ಮರ್ಯಾದೆಯ ಪ್ರಶ್ನೆ. ಸದನದ ಮರ್ಯಾದೆಯೂ ಹೌದು. ಹೀಗಾಗಿ ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಪರಮೇಶ್ವರ್ ಹೇಳಿದರು.

ಹನಿಟ್ರ್ಯಾಪ್; ಉನ್ನತ ಮಟ್ಟದ ತನಿಖೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ Read More

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿಲ್ಲ: ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿಲ್ಲ,ಪ್ರತಿಪಕ್ಷದ ನಾಯಕರು ಸುಮ್ಮನೆ ಆರೋಪ ಮಾಡಬಾರದು ಎಂದು ಗೃಹಸಚಿವ
ಡಾಕ್ಟರ್ ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ನಿನ್ನೆಯಷ್ಟೇ ಸುದ್ದಿಗೋಷ್ಠಿ ಕರೆದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ರಾಜ್ಯದಲ್ಲಿ ಕಾನೂನು‌‌ ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಸರೋಪಿಸಿದ್ದರು.

ಈ ಬಗ್ಗೆ ಇಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಪರಮೇಶ್ವರ್,
ಜನರ ರಕ್ಷಣೆ ಮಾಡುವವರೇ ಇಲ್ಲದಂತಾಗಿದೆ ಎಂದು ಹೇಳಿರುವುದು ಸರಿಯಲ್ಲ,ಬಿಜೆಪಿ ಅವಧಿಯಲ್ಲಿ ಎಷ್ಟು ದರೋಡೆ,ಎಷ್ಟು ಅತ್ಯಾಚಾರಗಳು ನಡೆದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ.ಬೇಕಾಬಿಟ್ಟಿ ಆರೋಪ ಮಾಡಬೇಡಿ ಎಂದು ಹೇಳಿದರು.

ಬಿಜೆಪಿ ಅವಧಿಯಲ್ಲಿ ನಡೆದ ದರೋಡೆಗಳು,ಅತ್ಯಾಚಾರಗಳ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂದು ‌ತಿಳಿಸಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿಲ್ಲ: ಪರಮೇಶ್ವರ್ Read More

ಸಿ.ಟಿ ರವಿ ಪ್ರಕರಣ ಸಿಐಡಿಗೆ: ಪರಮೇಶ್ವರ್ಸ್ಪಷ್ಟ ನುಡಿ

ಹುಬ್ಬಳ್ಳಿ: ಸಿಟಿ ರವಿ ಕೆಟ್ಟ‌ ಪದ ಬಳಸಿಲ್ಲ ಎನ್ನುತ್ತಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎಂದು ಹೇಳುತ್ತಾರೆ ಸತ್ಯ ತಿಳಿಯಲು ತನಿಖೆ ಆಗಲೆಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಪ್ರಕರಣದ ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.

ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು, ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ ಎಂದು ತಿಳಿಸಿದರು.

ಸಿಟಿ ರವಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಕೆಲವೊಂದು ಕಾರಣಕ್ಕೆ ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡಲ್ಲ, ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಜಿ.ಪರಮೇಶ್ವರ್ ಅಸಮರ್ಥ ಗೃಹ ಸಚಿವ ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಂ, ಪ್ರಹ್ಲಾದ್ ಜೋಶಿ ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪುತ್ತಾರಾ, ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.

ಸಿ.ಟಿ ರವಿ ಪ್ರಕರಣ ಸಿಐಡಿಗೆ: ಪರಮೇಶ್ವರ್ಸ್ಪಷ್ಟ ನುಡಿ Read More

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ:ಜಿ.ಪರಮೇಶ್ವರ್

ಮೈಸೂರು: ಮುಖ್ಯ ಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಸಿದ್ದರಾಮಯ್ಯ ಅವರೇ‌ ಸಿಎಂ‌ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಈ‌ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು,
ಮಹದೇವಪ್ಪ ಅವರ ಮನೆಯಲ್ಲಿ ಡಿನ್ನರ್ ಮಾಡಿದೆವು.ಆದರೆ ಯಾವ ಮೀಟಿಂಗ್ ಮಾಡಲಿಲ್ಲ ಎಂದು ‌ತಿಳಿಸಿದರು.

ಮಹದೇವಪ್ಪ ಮನೆಯಲ್ಲಿ ಡಿನ್ನರ್ ಅರೆಂಜ್ ಆಗಿತ್ತು, ಊಟಕ್ಕೆ ಹೋಗಿದ್ವಿ.
ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ,ಹಾಗಂತ ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಡಿನ್ನರ್ ನಲ್ಲಿ ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಇದ್ದೆವು,ಆದರೆ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಬದಲಾವಣೆಯೂ ಇಲ್ಲ
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ,
ನಾವು ಆಗಾಗಗ ಸೆರ್ತಾ ಇರ್ತಾ ಇರ್ತೀವಿ.
ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

ದಲಿತ ಸಿಎಂ ಚರ್ಚೆ ವಿಚಾರ‌ ಕುರಿತು
ಯಾವುದೇ ಚರ್ಚೆ ಮಾಡಿಲ್ಲ ಎಂದರು.

ನಿಮಗೆ ಸಿಎಂ ಅಗುವ ಆಸೆ ಇಲ್ವಾ ಎಂಬ ಮಾಧ್ಯಮಗಳ ಪ್ರಶ್ನೆಗೆ
ಅದರ ಪ್ರಶ್ನೆಯೇ ಅನಗತ್ಯ ಎಂದು ಉತ್ತರಿಸಿದರು.

ಹರಿಯಾಣ ಸೋಲಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು,
ಮುಡಾ ಹಗರಣ ಮೈಸೂರಿನ ಬಹಳಷ್ಟು ಜನರಿಗೆ ಗೊತ್ತಿಲ್ಲ,ಇನ್ನು ಹರಿಯಾಣ‌ ಜನರಿಗೆ
ಗೊತ್ತಿರುತ್ತಾ,ಕೋಳಿವಾಡ ಅವರ ಹೇಳಿಕೆ ವೈಯಕ್ತಿಕವಾದುದು ಎಂದು ತಿಳಿಸಿದರು.

ಜಾತಿ ಗಣತಿ ವರದಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್,
18 ರಂದು ಸಂಪುಟದ ಮುಂದೆ ಇಡ್ತೀನಿ ಎಂದು ಸಿಎಂ ಹೇಳಿದ್ದಾರೆ.
ಅಲ್ಲಿ ಚರ್ಚೆ ಮಾಡಲಾಗುತ್ತದೆ,
ವರದಿ ಬಿಡುಗಡೆ ಬಗ್ಗೆ ಸಚಿವ ಸಂಪುಟ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ:ಜಿ.ಪರಮೇಶ್ವರ್ Read More