ಪ್ರೇಕ್ಷಕರ ಮನಸೂರೆಗೊಂಡ ಮುದ್ದು ಶ್ವಾನಗಳು

ಮೈಸೂರು: ದೇಶ, ವಿದೇಶದ ಮುದ್ದು ಶ್ವಾನಗಳು ತಮ್ಮ ತುಂಟಾಟ, ಬೆಡಗು ಬಿನ್ನಾಣದಿಂದ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದವು.

ಶ್ವಾನಗಳ ಆಟ-ಪಾಠ, ಬುದ್ಧಿವಂತಿಕೆ, ಜಾಣ್ಮೆ, ಮುಗ್ಧತೆ, ತುಂಟಾಟ, ತಾಳ್ಮೆ ಹಾಗೂ ಅವುಗಳ ಪ್ರೀತಿಯನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.

ಪ್ರಾಣಿಪ್ರಿಯರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು,ಮುದ್ದಾದ ಶ್ವಾನಗಳನ್ನು ಕಂಡು ಪ್ರಾಣಿ ಪ್ರಿಯರು ಖುಷಿ ಪಟ್ಟರು.

ಕೆಲವು ಶ್ವಾನಗಳು ಪಿಂಕ್ ಮತ್ತು ಪರ್ಪಲ್ ಕಲರ್ ಬಟ್ಟೆ ಧರಿಸಿ ಪ್ರದರ್ಶನ ನೀಡುವುದರ ಮೂಲಕ ಹೆಚ್ಚು ಆಕರ್ಶಿಸಿದವು,ಅದರಲ್ಲೂ ಮಕ್ಕಳು ಚಪ್ಪಾಳೆ‌ ತಟ್ಟಿ ಸಂತೋಷ ಪಟ್ಟರು.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ. ಕೆ ಮೈದಾನದಲ್ಲಿ ಭಾನುವಾರ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಸಿಲುಕಿ, ಮುಧೋಳ ಹೌಂಡ್, ಸೈಬೀರಿಯನ್ ಹಸ್ಕಿ, ಗ್ರೇಟ್ ಡೆನ್, ಪೂಡ್ಲೀ, ಡಾಗೂ ಅರ್ಜೆಂಟೀನಾ, ರಾಜ ಪುಲಿಯಂ, ಪಿಟ್ ಬುಲ್, ಕಾಕರ್ ಸ್ಪ್ಯಾನಿಯಲ್, ಬಾಕ್ಸರ್, ಪಗ್, ಕೊಕ್ಕೊಪೋ, ಪ್ರೆಂಚ್ ಬುಲ್ ಡಾಗ್, ಓಲ್ಡ್ ಶೀಪ್ ಡಾಗ್, ಐರಿಷ್ ಸೆಟ್ಟರ್ ಬೀಗಲ್, ಡಚ್ ಶೆಪರ್ಡ್, ಜರ್ಮನ್ ಶೆಪರ್ಡ್, ಚೌ ಚೌ, ಗೋಲ್ಡನ್ ರಿಟ್ರೀವರ್, ಬಾರ್ಡರ್ ಕೋಲಿ, ಬರ್ಮೀಸ್ ಮೌಂಟೇನ್ ಡಾಗ್, ಲಾಸ್ ಅಪ್ಸೋ ಮತ್ತಿತರ ಶ್ವಾನಗಳು ಪ್ರದರ್ಶನ ನೀಡಿದವು.

ಮೈಸೂರಿನ ಡಾಗ್ ಸ್ಕ್ವಾಡ್ ಪೊಲೀಸ್ ಶ್ವಾನಗಳು ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆದು ಚಾಪ್ಪಾಳೆ ಗಿಟ್ಟಿಸಿದವು.

ಕಳೆದ ಬಾರಿ ದಸರಾದಲ್ಲಿ ಸುಮಾರು 45 ತಳಿಗಳ ಶ್ವಾನಗಳು ನೋಂದಣಿಯಾಗಿತ್ತು, ಆದರೆ ಈ ಬಾರಿ 650 ತಳಿಗಳು ಪ್ರದರ್ಶನದಲ್ಲಿ ನೋಂದಣಿಯಾಗಿವೆ. ಅದರಲ್ಲಿ 450 ತಳಿಗಳನ್ನು ಒಳಗೊಂಡಿದ್ದು, ವಿವಿಧ ತಳಿಯ ಶ್ವಾನಗಳು ಪ್ರದರ್ಶನ ನೀಡಿದವು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ತಳಿಗಳ ಶ್ವಾನಗಳಿಗೆ ಶ್ವಾನ ವೈದ್ಯಾಧಿಕಾರಿಗಳು ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವ ತೀರ್ಪುಗಾರರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಿದರು.

ಪ್ರೇಕ್ಷಕರ ಮನಸೂರೆಗೊಂಡ ಮುದ್ದು ಶ್ವಾನಗಳು Read More

ಐರಿಸ್ ಶ್ವಾನಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಟ್ಟ ಸುಧಾ ಮೂರ್ತಿ

ಮೈಸೂರು: ಈ ಬಾರಿಯ ದಸರಾ ಶ್ವಾನ ಪ್ರದರ್ಶನದಲ್ಲಿ ನಗರದ ಸಿದ್ದಾರ್ಥ ಬಡಾವಣೆಯ ಸುಜಾತ ಅಶ್ವಿನ್ ಅವರ ಟಾಯ್‌ಪೂಡಲ್ ತಳಿಯ ಐರಿಸ್ ಶ್ವಾನ ಪ್ರಥಮ ಸ್ಥಾನ ಗಳಿಸಿತು.

ಕಳೆದ ಮೂರು ವರ್ಷಗಳಿಂದ ದಸರಾ ಶ್ಚಾನ ಪ್ರದರ್ಶನದಲ್ಲಿ‌ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಈ ಶ್ವಾನಕ್ಕಿದೆ.

ಈರೋಪ್ ಮೂಲದಿಂದ ದೆಹಲಿಯ ಬ್ರೀಡರ್ ಮೂಲಕ ತರಿಸಿಕೊಳ್ಳಲಾದ ಈ ತಳಿಯು ಬುದ್ದಿವಂತ ಶ್ವಾನವೆಂದೆ
ಜನಪ್ರಿಯವಾಗಿದೆ.

ರಾಜ್ಯಸಭಾ ಸದಸ್ಯರು ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಶ್ವಾನವನ್ನು ಅಪ್ಪಿ ಮುದ್ದಾಡಿ ಖುಷಿ ಪಟ್ಟರು.

ಕೆಎಂಪಿಕೆ ಚಾರಿಟಬಲ್
ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ವೈ ಡಿ ರಾಜಣ್ಣ, ಉಪವಿಶೇಷಾಧಿಕಾರಿ
ಡಾ. ಕೃಷ್ಣಂರಾಜು, ಉಪನಿರ್ದೆಶಕ ಡಾ ನಾಗರಾಜು ಉಪಸ್ಥಿತರಿದ್ದರು.

ಐರಿಸ್ ಶ್ವಾನಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಟ್ಟ ಸುಧಾ ಮೂರ್ತಿ Read More

ಸೆ.16 ಶ್ವಾನ ಪ್ರದರ್ಶನ: ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶ್ರೀವತ್ಸ

ಮೈಸೂರು: ಮಲೆ ಮಾದೇಶ್ವರ ಸಂಸ್ಥೆ ವತಿಯಿಂದ ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಸೆಪ್ಟೆಂಬರ್ 16ರ ಸಂಜೆ 5 ಗಂಟೆಗೆ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದ ಪ್ರಚಾರ ಸಾಮಗ್ರಿಗಳನ್ನು ನಗರ ಪಾಲಿಕೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ಬದುಕಿನ ಭದ್ರತೆ ಜೊತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನಗಳು ಹೆಸರುವಾಸಿಯಾಗಿವೆ ಎಂದು ಬಣ್ಣಿಸಿದರು.

ಮಾನವ ಸಹೋದ್ಯೋಗಿಗಳು ಮತ್ತು ಬಂಧುಗಳೊಂದಿಗೆ ಸ್ನೇಹ ಭಾವನೆಯನ್ನು ತೊರೆಯುತ್ತಿದ್ದಾನೆ. ನಾಯಿಗಳು ಜೀವನ ಸಂಗಾತಿಯ ಸ್ನೇಹವನ್ನು ನೀಡುವುದರ ಜೊತೆಗೆ ಬದುಕಿಗೆ ಭದ್ರತೆ ನೀಡುತ್ತವೆ ಎಂದು ತಿಳಿಸಿದರು.

ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಅಚ್ಚು ಮಾತನಾಡಿ ನೊಂದಣಿ ಶುಲ್ಕ 500 ರೂಪಾಯಿ ಇರುತ್ತದೆ, ವಿಜೇತರಿಗೆ 3 ಅತ್ಯುತ್ತಮ ಟ್ರೋಫಿ ಹಾಗು ಪ್ರಮಾಣ ಪತ್ರ ಹಾಗೂ ಸ್ಪರ್ಧಿಸಿದ ಎಲ್ಲಾ ಶ್ವಾನಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ಹೆಸರು ನೊಂದಾವಣಿಗೆ 7829340020 ಮೊಬೈಲ್ ನಂಬರ್ ಸಂಪರ್ಕಿಸಿ

ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಲೋಹಿತ್, ನಾಗರಾಜ್, ಮೋಹನ್, ಕಿಶೋರ್ ಮತ್ತಿತರರು ಹಾಜರಿದ್ದರು.

ಸೆ.16 ಶ್ವಾನ ಪ್ರದರ್ಶನ: ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶ್ರೀವತ್ಸ Read More