ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ
ಹುಣಸೂರು: ಹುಣಸೂರು ತಾಲೂಕು,ಹೊನ್ನಿಕುಪ್ಪೆ ಗ್ರಾಮದ ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀ ದೊಡ್ಡಮ್ಮತಾಯಿ ದೇವಾಲಯ ನಿರ್ಮಾಣಕ್ಕೆ ಅಂದಿನ ಮುಖ್ಯ ಮಂತ್ರಿಯಾಗಿದ್ದ ಡಿ.ದೇವರಾಜ ಅರಸರು ಕಾರಣಕರ್ತರು.
ಸುತ್ತಲಿನ ಹಳ್ಳಿಗಳ ಜನರು ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವರಾಜ ಅರಸು ಅವರು ಜಾಗ ಕೊಟ್ಟು, ದೊಡ್ಡದಾದ ಬೆಳ್ಳಿಯ ಮುಖವಾಡವನ್ನು ಕೊಡುಗೆಯಾಗಿ ನೀಡಿದ್ದರು.
ಮತ್ತು ಲೋಹದ ಕುದುರೆ ಹಾಗೂ ಕತ್ತಿಯನ್ನು ಕೊಟ್ಟಿದ್ದರು.ಅಂದಿನಿಂದ ಇದೇ ಜಾಗದಲ್ಲಿ ಗುಡಿ ಕಟ್ಟಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ ದೇವರನ್ನು ನಾವೆಲ್ಲ ಹಳ್ಳಿವರು ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದೇವೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಹೊನ್ನಿಕುಪ್ಪೆ ಗ್ರಾಮದವರೇ ಆದ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದರು
ನಿನ್ನೆ ರಾತ್ರಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ ದೇವರಿಗೆ ಕಾರ್ತೀಕ ಮಾಸದ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ Read More