ಮುಡಾ ಹಗರಣ:ಮಹತ್ವದ ದಾಖಲೆ ಲಭ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಹತ್ವದ ದಾಖಲೆ ಲಭ್ಯವಾಗಿದೆ.

ಮುಡಾದಿಂದ ಒಟ್ಟು 1095 ಸೈಟುಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಅಕ್ರಮವಾಗಿ ನೀಡಲಾಗಿರುವ ಸೈಟ್ ಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಗೆ 14 ಸೈಟ್ ಗಳನ್ನು ಹಸ್ತಾಂತರಿಸಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಮೂಲಗಳು‌ ತಿಳಿಸಿವೆ

ಮುಡಾದಲ್ಲಿ ನಡೆದಿರುವ ಅಕ್ರಮ ಸೈಟುಗಳ ತನಿಖೆ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ನೀಡಿ ಈ ಕುರಿತು ತನಿಖೆ ನಡೆಸುವಂತೆ ಇಡಿ ಸೂಚಿಸಿದೆ

1095 ಸೈಟುಗಳ ಬೇನಾಮಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ, ಭೂ ಪರಿವರ್ತನೆ, ಸಹಿಗಳ ಫೋರ್ಜರಿ ಸೇರಿದಂತೆ ಇನ್ನೂ ಹಲವು ಸಾಕ್ಷಾಧಾರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್‌.ಜಿ ದಿನೇಶ್ ಕುಮಾರ್ (ಕುಮಾರ್) ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯವಾಗಿ ಪ್ರಭಾವ ಬೀರಿದ್ದಾರೆ ಎಂಬುದಕ್ಕೂ ಸಾಕ್ಷಿಗಳು ದೊರೆತಿವೆ ಎಂದು ಇಡಿ ತನ್ನ ವರದಿಯಲ್ಲಿ ತಿಳಿಸಿದೆ.

ಮುಡಾ ಹಗರಣ:ಮಹತ್ವದ ದಾಖಲೆ ಲಭ್ಯ Read More

ದಾಖಲೆಗಳ ಪರಂಪರೆ ಕೂಡಾ ಇತಿಹಾಸದ ಭಾಗ:ಡಾ. ಗವಿಸಿದ್ದಯ್ಯ

ಮೈಸೂರು: ಇತಿಹಾಸದ ಪರಂಪರೆಯೆoದರೆ ಕಟ್ಟಡಗಳು, ಉಡುಗೆ–ತೊಡುಗೆ, ಸ್ಮಾರಕ,ನಾಣ್ಯ ಅಷ್ಟೇ ಅಲ್ಲ, ದಾಖಲೆಗಳ ಪರಂಪರೆಯೂ ಇತಿಹಾಸದ ಭಾಗವಾಗಿವೆ ಎಂದು ಕರ್ನಾಟಕ ರಾಜ್ಯ ಪಾತ್ರಗಾರ ಇಲಾಖೆ ನಿರ್ದೇಶಕ ಡಾ. ಗವಿಸಿದ್ದಯ್ಯ ತಿಳಿಸಿದರು.

ಮೈಸೂರಿನ ಎಂ.ಎo.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾ ವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಐತಿಹಾಸಿಕ ದಾಖಲೆಗಳ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ದಾಖಲೆಗಳು ಇತಿಹಾಸದ ಮೂಲಾಧಾರಗಳಾಗಿವೆ. ದಾಖಲೆಗಳು ನಾಡಿನ ಅಭಿವೃದ್ಧಿಗೆ ಪೂರಕವಾಗಿದ್ದು, ದಾಖಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.

1973 ರಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸ್ಥಾಪನೆಯಾಗಿದ್ದು, 200 ವರ್ಷಗಳಿಗೂ ಹಳೆಯ ಐತಿಹಾಸಿಕ ನಾಡಿನ ದಾಖಲೆಗಳನ್ನು ಸಂರಕ್ಷಿಸಿ, ದಾಖಲೆಗಳ ಸೇವಾ ಕಾರ್ಯವನ್ನು ಒದಗಿಸುತ್ತಿದೆ. ಮೈಸೂರು, ಕರ್ನಾಟಕ ಆಡಳಿತಾತ್ಮಕ ಮಾಹಿತಿಗಳು, ಸೆನ್ಸಸ್ ವರದಿಗಳು, ಪ್ರಜಾಪ್ರತಿನಿದಿ ಸಭೆಯ ನಡವಳಿಗಳು, ಮೈಸೂರು ಅರಮನೆ ಆಡಳಿತಕ್ಕೆ ಸಂಬoಧಿಸಿದoತೆ ಕಡತಗಳು ಹೀಗೆ ಅನೇಕ ದಾಖಲೆಗಳು, ಗಣ್ಯ ವ್ಯಕ್ತಿಗಳ ನೆನಪಿನ ಅನುಭವದ ಧ್ವನಿ ಸಂಗ್ರಹ ದಾಖಲೆಗಳಂತಹ ಸುಮಾರು 1780 ರಿಂದ 2019 ರವರೆಗೆ ವಿವಿಧ ದಾಖಲೆಗಳನ್ನು ಸಂರಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಇಲಾಖೆಯು ಸುಮಾರು 1.30 ಕೋಟಿ ದಾಖಲೆಗಳನ್ನು ಡಿಜಟಲೀಕರಣ ಮಾಡಿ ಇಲಾಖೆಯ ವೆಬ್ನಲ್ಲಿ ಅಳವಡಿಸಲಾಗಿದೆ. ಇದರ ಕುರಿತು www.kannadasiri.kar.nic.in ವೀಕ್ಷಣೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಾಗಾರ ಇಲಾಖೆಯಲ್ಲೇ ಹಳೆಯ ಪತ್ರವಾದ ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದ ಶ್ರೀರಂಗ ಪಟ್ಟಣ ಒಪ್ಪಂದ ಪ್ರತಿ, ಮೈಸೂರು ರಾಜರ ಮತ್ತು ದಿವಾನರ ಸಹಿಗಳು ಹೀಗೆ ಹಲವಾರು ಇಲಾಖೆಗಳ ದಾಖಲಾತಿಗಳು ಲಭ್ಯವಿದೆ.

ಛಾಯಾ ಚಿತ್ರಗಳ ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ ಆದೇಶಗಳು, ಪತ್ರ ವ್ಯವಹಾರಗಳು, ಸುತ್ತೋಲೆಗಳು, ಮೈಸೂರು ಮಹಾರಾಜರು ಮತ್ತು ದಿವಾನರ ಛಾಯಾ ಚಿತ್ರಗಳು, ಆಹ್ವಾನ ಪತ್ರಗಳು, ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಛಾಯಾ ಚಿತ್ರಗಳು ಸೇರಿದಂತೆ 120 ಕ್ಕೂ ಹೆಚ್ಚಿನ ದಾಖಲೆಗಳು ಮತ್ತು ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.

1399 ರಲ್ಲಿ ಪ್ರಾರಂಭವಾದ ಮೈಸೂರು ಸಂಸ್ಥಾನ, 25 ಮಹಾರಾಜರು ಆಳ್ವಿಕೆ ಮಾಡಿದ ರಾಜರ ದಾಖಲೆಗಳಿವೆ. ಮೈಸೂರು ಮಹಾರಾಜರ ವಂಶಾವಳಿಯ ಭಾಗ-1, ಭಾಗ-2 ರಾಜರ ಆಡಳಿತ,ಗಾoಧೀಜಿಯವರು ಮಹಾರಾಜರ ಆಡಳಿತ ಅವಧಿಯಲ್ಲಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರಿನ ಸರ್ವಾಂಗೀಣ ಬೆಳವಣಿಗೆಯ ಮಹಾಪೂರವೇ ಆಗುತ್ತಿದೆ ಎಂಬುದನ್ನ ಮನಗಂಡು ಮೈಸೂರನ್ನು ರಾಮರಾಜ್ಯ ಎಂದು ಕರೆದ ಬಗ್ಗೆ ಮಾಹಿತಿ ಸಹ ನಮ್ಮ ಇಲಾಖೆಯಲ್ಲಿ ಇದೆ ಎಂದು ಹೇಳಿದರು.

ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ರೈತರ ಭೂಮಿಗೆ ಸಂಬoಧ ಪಟ್ಟಂತೆ ಪಹಣಿ, ಆರ್.ಟಿ.ಸಿ ಮುಂತಾದವುಗಳ ಕುರಿತು ನಮ್ಮ ಮಾಹಿತಿ ಪಡೆಯಬಹುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಗವಿಸಿದ್ದಯ್ಯ ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರೀತಿ ಶುಭಚಂದ್ರ ಅವರು ಮಾತನಾಡಿ,ಜ್ಞಾನದ ಶಾಖೆಯನ್ನು ವಿಸ್ತರಿಸಿಕೊಳ್ಳಲು ಇತಿಹಾಸದ ಪ್ರಜ್ಞೆ ಪ್ರತಿಯೊಬ್ಬರಿಗೂ ಮುಖ್ಯ. ರಾಜ್ಯ ಪಾತ್ರಗಾರ ಇಲಾಖೆಯಲ್ಲಿ ನಾನಾ ಬಗೆಯ ಎಲ್ಲಾ ಮಾಹಿತಿಗಳು ಲಭ್ಯವಿದ್ದು, ಇವುಗಳು ಮುಂದಿನ ಫಿಳಿಗೆಯ ಚರಿತ್ರೆಯ ಆಕರಗಳಾಗುತ್ತವೆ ಎಂದು ತಿಳಿಸಿದರು.

ಎಂ.ಎo.ಕೆ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಭಾರತಿ ಎನ್. ಅವರು ಮಾತನಾಡಿ, ದಾಖಲೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಹೆಚ್.ಎಲ್., ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಯನ ಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ದಾಖಲೆಗಳ ಪರಂಪರೆ ಕೂಡಾ ಇತಿಹಾಸದ ಭಾಗ:ಡಾ. ಗವಿಸಿದ್ದಯ್ಯ Read More