ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಮನವಿ

ಹುಣಸೂರು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಬಡ ಜನರಿಗಾಗಿ ನಿರ್ಮಿಸಿದ್ದ ಹುಣಸೂರು ಸಾರ್ವಜನಿಕ ಆಸ್ಪತ್ರೆ ಬಡಜನರಿಗೆ ಅನುಕೂಲವಾಗಿದೆ.

ಈ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರು, ನರ್ಸ್ ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಉತ್ತಮವಾಗಿವೆ.

ಆದರೆ ಇತ್ತೀಚೆಗೆ ಇಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ಕ್ಯಾನಿಂಗ್ ಡಾ. ವೆಂಕಟರಮಣ, ನೇತ್ರ ವೈದ್ಯರಾದ ಡಾ. ಲತಾ ಮತ್ತು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ಟಾಫ್ ನರ್ಸ್ ಅವರುಗಳನ್ನು ದಿಢೀರನೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ.

ಹುಣಸೂರಿನ ಈ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಇನ್ನೂ ಹಲವು ವೈದ್ಯರು ಇದ್ದಾರೆ, ಆದರೆ ಅವರನ್ನು ಇನ್ನು ವರ್ಗಾವಣೆ ಮಾಡದೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ವೆಂಕಟರಮಣ ಡಾ. ಲತಾ ಮತ್ತು ಸ್ಟಾಫ್ ನರ್ಸ್ ಅವರುಗಳನ್ನು
ವರ್ಗಾವಣೆ ಮಾಡಲಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ವರ್ಷಿಣಿ ನ್ಯೂಸ್ ಪೋರ್ಟಲ್ ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮಾತನಾಡಿದ್ದು, ಡಾಕ್ಟರ್ ವೆಂಕಟರಮಣ, ಡಾಕ್ಟರ್ ಲತಾ ಅವರು ಯಾರೇ ಬಡ ಜನರು ಬಂದರು ಅವರಿಗೆ ಸ್ಪಂದಿಸಿ ಅವರಿಗೆ ಉತ್ತಮವಾಗಿ ಪರೀಕ್ಷಿಸಿ ವೈದ್ಯೋಪಚಾರ ಮಾಡುತ್ತಿದ್ದರು. ಇದೀಗ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದರಿಂದ ಹಣಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಬಹಳ ಬೇಸರವಾಗಿದೆ ಸರ್ಕಾರ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಡಾಕ್ಟರ್ ವೆಂಕಟರಮಣ ಮತ್ತು ಡಾಕ್ಟರ್ ಲತಾ ಅವರನ್ನು ಇದೇ ಆಸ್ಪತ್ರೆಯಲ್ಲಿ ಮುಂದುವರಿಸಬೇಕೆಂದು ಚೆಲುವುರಾಜು ಮನವಿ ಮಾಡಿದ್ದಾರೆ.

ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಮನವಿ Read More

ಸಿಬಿಐ ಅಧಿಕಾರಿ ಹೆಸರಲ್ಲಿ ವೈದ್ಧರೊಬ್ಬರಿಗೆ ಬೆದರಿಕೆ: 7 ಲಕ್ಷ ವಂಚನೆ

ಮೈಸೂರು,ಜು.2: ಅಪರಿಚಿತನೊಬ್ಬ ತಾನು ಸಿಬಿಐ ಅಧಿಕಾರಿ. ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿ ಮೈಸೂರಿನ ವೈದ್ಧರೊಬ್ಬರಿಗೆ 7 ಲಕ್ಷ ಪಂಗನಾಮ ಹಾಕಿದ ಪ್ರಕರಣ‌ ನಡೆದಿದೆ.

ಬನ್ನಿಮಂಟಪ ಲೇಔಟ್ ನಿವಾಸಿ ಡಾ.ನಜರುಲ್ಲಾ (72) ವಂಚನೆಗೆ ಒಳಗಾದವರು.

ಡಾ.ನಜರುಲ್ಲಾ ಅವರ ಫೋನ್ ಗೆ ಕರೆ ಮಾಡಿದ ವಂಚಕ ತಾನು ಸಿಬಿಐ ಅಧಿಕಾರಿ ಎಂದು ಬೆದರಿಸಿದ್ದಾನೆ.

ನಾವು ವ್ಯಕ್ತಿಯೊಬ್ಬನನ್ನ ಅರೆಸ್ಟ್ ಮಾಡಿ ಆತನ ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿದ್ದು ಮಾನವಕಳ್ಳಸಾಗಣೆ ಮಾಡುತ್ತಿರುವ ಆರೋಪ ಇದೆ ಎಂದು ಬೆದರಿಸಿದ್ದಾನೆ.

ಹಣ ಕೊಡದಿದ್ದರೆ ಬಂಧಿಸುತ್ತೇವೆ ಎಂದು ಬೆದರಿಸಿ 7 ಲಕ್ಷ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಈ ಸಂಭಂಧ ಡಾ.ನಜರುಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಬಿಐ ಅಧಿಕಾರಿ ಹೆಸರಲ್ಲಿ ವೈದ್ಧರೊಬ್ಬರಿಗೆ ಬೆದರಿಕೆ: 7 ಲಕ್ಷ ವಂಚನೆ Read More

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒತ್ತಿ 29.70 ಲಕ್ಷ ಕಳೆದುಕೊಂಡ ಡಾಕ್ಟರ್!

ಮೈಸೂರು: ಯಾವುದೇ ಮೆಸೇಜ್ ಗಳನ್ನ ನಂಬಿ ಮೋಸ ಹೋಗಬೇಡಿ ಎಂದು ಪದೇ,ಪದೇ ಪೊಲೀಸರು ಮನವಿ ಮಾಡುತ್ತಿದ್ದರೂ ವಿದ್ಯಾವಂತರೇ ಹೀಗೆ ಮೋಸ ಹೋಗುತ್ತಿರುವುದು ನಡೆಯುತ್ತಲೇ ಇದೆ.

ಇದಕ್ಕೊಂದು ಉದಾಹರಣೆ ಮೈಸೂರಿನಲ್ಲಿ ನಡೆದಿದೆ.

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒಂದರ ಮೆಸೇಜ್ ಫಾಲೋ ಮಾಡಿದ ಮೈಸೂರಿನ ವೈದ್ಯರೊಬ್ಬರು 29.71 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಶ್ರೀರಾಂಪುರ ನಿವಾಸಿ ಡಾ.ಪಿ.ಶ್ರೀನಿವಾಸ ಮೂರ್ತಿ ಹಣ ಕಳೆದುಕೊಂಡಿದ್ದು,ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್ ಒಂದು ಬಂದಿದೆ.ಇದನ್ನ ಓಪನ್ ಮಾಡಿದಾಗ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಕೇಳಿದ್ದಾರೆ.ಇದಕ್ಕೆ ಡಾ.ಶ್ರೀನಿವಾಸ ಮೂರ್ತಿ ಒಪ್ಪಿ ಅವರು ಹೇಳಿದಂತೆ ಕೆವೈಸಿ ಅಪ್ಡೇಟ್ ಮಾಡಿದ್ದಾರೆ.

ನಂತರ ಇನ್ವೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.ಅದಕ್ಕಾಗಿ ವಂಚಕ ಹೇಳಿದ್ದ ಆಪ್ ಒಂದನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ನಂತರ IPO ಅಕೌಂಟ್ ಕ್ರಿಯೇಟ್ ಮಾಡಿ ಇನ್ವೆಸ್ಟ್ ಮಾಡುವಂತೆ ಸೂಚಿಸಿ, 26 ಲಕ್ಷ ಮೊತ್ತದ ಟಾಸ್ಕ್ ನೀಡಿ ಕಂಪ್ಲೀಟ್ ಮಾಡುವಂತೆ ತಿಳಿಸಿದ್ದಾರೆ.

ತಮ್ಮ ಬಳಿ ಹಣ ಇಲ್ಲವೆಂದು ತಿಳಿಸಿದಾಗ ಖಾತೆಯಲ್ಲಿ 5 ಲಕ್ಷ ಇದೆ ಅಲ್ಲದೆ ಸಪೋರ್ಟಿಂಗ್ ಫಂಡ್ 10 ಲಕ್ಷ ಕಂಪನಿಯಿಂದ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ಡಾ.ಶ್ರೀನಿವಾಸ ಮೂರ್ತಿ ಹಣ ಹೂಡಲು ಮುಂದಾಗಿದ್ದಾರೆ.

ಈ ವೇಳೆ ಖಾತೆಯಲ್ಲಿ ಲಾಭಾಂಶ ತೋರಿಸಿದೆ.ಹಣ ವಿತ್ ಡ್ರಾ ಮಾಡಲು ಮುಂದಾದಾಗ ಸಪೋರ್ಟಿಂಗ್ ಫಂಡ್ ಹಿಂದಿರುಗಿಸುವಂತೆ ಸೂಚನೆ ನೀಡಿದ್ದಾರೆ.ಅಲ್ಲದೆ 3.06 ಲಕ್ಷ ಟ್ಯಾಕ್ಸ್ ಪೇ ಮಾಡುವಂತೆ ಸೂಚನೆ ನೀಡಿದ್ದಾರೆ.

ವಂಚಕರ ಮಾತು ನಂಬಿ ಶ್ರೀನಿವಾಸ ಮೂರ್ತಿ ಹಂತ ಹಂತವಾಗಿ 29,71.442 ರೂ ಗಳನ್ನ ವರ್ಗಾಯಿಸಿದ್ದಾರೆ.ಆದರೆ ಅತ್ತ ಕಡೆಯಿಂದ ಯಾವುದೇ ಮೆಸೇಜ್ ಬಂದಿಲ್ಲ.

ನಂತರ ತಾವು ಮೋಸ ಹೋಗಿರುವುದು ಗೊತ್ತಾಗಿ ಡಾ.ಶ್ರೀನಿವಾಸ ಮೂರ್ತಿ ಅವರು ತಕ್ಷಣ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒತ್ತಿ 29.70 ಲಕ್ಷ ಕಳೆದುಕೊಂಡ ಡಾಕ್ಟರ್! Read More