ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದಿಂದ‌ ಶಿಲ್ಪ ಶ್ರೀಗೆ ಪ್ರೋತ್ಸಾಹ ಧನ

ಮೈಸೂರು: ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ವತಿಯಿಂದ ಅತ್ಯಧಿಕ ಅಂಕ ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿವರ್ಷದಂತೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಪ್ರತಿವರ್ಷವೂ ಸಂಘದ ಸದಸ್ಯರಿಗೆ ನೀಡುವ ಪ್ರೋತ್ಸಾಹ ಧನ ದ ಚೆಕ್ ಅನ್ನು ಸಂಘದ ಸದಸ್ಯರಾದ ಶಿವರಾಮೇಗೌಡ ಅವರ ಪುತ್ರಿ ಶಿಲ್ಪ ಶ್ರೀ ಅವರಿಗೆ ವಿತರಣೆ ಮಾಡಲಾಯಿತು.

ಈಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅಧಿಕ ಅಂಕ ಗಳಿಸಿ ಪ್ರೋತ್ಸಾಹ ಧನಕ್ಕೆ ಅರ್ಹ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾರೆ.

ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹಿಳಾ ಘಟಕದ ಮುಖ್ಯಸ್ಥರಾದ ಸಂಗೀತ ಕೋಟೆಬಾಗಿ , ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅವಿನಾಶ್ ಗೌಡ, ಶಿವಣ್ಣ, ಮೈಸೂರು ಪದಾಧಿಕಾರಿಗಳು ಮತ್ತು ಹೋಟೆಲ್ ಕಾರ್ಮಿಕ ಮಿತ್ರರು ಚೆಕ್ಕನ್ನು ಹಸ್ತಾಂತರ ಮಾಡಿ ಮುಂದಿನ ವಿದ್ಯಾರ್ಥಿ ಜೀವನ ಉಜ್ವಲವಾಗಲಿ ಎಂದು ಶಿಲ್ಪ ಶ್ರೀ ಅವರಿಗೆ ಶುಭ ಹಾರೈಸಿದರು.

ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದಿಂದ‌ ಶಿಲ್ಪ ಶ್ರೀಗೆ ಪ್ರೋತ್ಸಾಹ ಧನ Read More

ಸರ್ಕಾರದ ಸವಲತ್ತುಗಳನ್ನು‌ ಸದುಪಯೋಗಪಡಿಸಿಕೊಳ್ಳಿ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಹನೂರು: ಗಂಗ ಕಲ್ಯಾಣ ಯೋಜನೆ ಫಲಾನುಭವಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾಗಿ ಕೊಳವೆ ಬಾವಿಯಲ್ಲಿ ನೀರು ಬಂದಿರುವ ಫಲಾನುಭವಿಗಳಿಗೆ ಮೋಟಾರ್  ಸ್ವಿಚ್ ಬೋರ್ಡ್, ಪೈಪ್, ಕೇಬಲ್ ಇನ್ನಿತರ ವಿಧ್ಯುತ್ ಪೂರಕ ಪರಿಕರ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕರು,
ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖುಷ್ಕಿ ಭೂಮಿಯಲ್ಲಿ ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ರೈತರು ಸರ್ಕಾರ ನೀಡುತ್ತಿರುವ ಇಂತಹ  ಉತ್ತಮ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರೖತರಿಗೆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಎಂ.ಆರ್.ಮಂಜುನಾಥ್
ಭರವಸೆ ನೀಡಿದರು.

ಈ ವೇಳೆ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಹರೀಶ್, ಚಾಮುಲ್, ಉದ್ದನೂರು ಪ್ರಸಾದ್, ಚಿನ್ನವೆಂಕಟ, ಗೋವಿಂದ, ವೆಂಕಟೇಶ, ಸಾವುಕಯ್ಯ, ಹನೂರು ಪ.ಪಂ.ಸದಸ್ಯರಾದ ಮಹೇಶ್, ಮಹೇಶ್ ನಾಯಕ ಹಾಗೂ ಫಲಾನುಭವಿಗಳು, ಮುಖಂಡರು ಹಾಜರಿದ್ದರು.

ಸರ್ಕಾರದ ಸವಲತ್ತುಗಳನ್ನು‌ ಸದುಪಯೋಗಪಡಿಸಿಕೊಳ್ಳಿ:ಮಂಜುನಾಥ್ Read More

ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಣೆ

ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಪುಸ್ತಕಂ ಶ್ರೀ ಸಂತಾನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಿಸಲಾಯಿತು.

ಪಂಚಾಂಗವನ್ನು ವಿತರಿಸಿದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ, ಯುಗಾದಿ ವರ್ಷಾಚರಣೆ ಬೇವು ಬೆಲ್ಲ ಕಹಿಸಿಹಿಯ ಸಂಕೇತ ಎಂದು ಹೇಳಿದರು.

ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂತಾನ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಆರಾಧಕರಾದ ರಾಮಾನುಜಂ, ಕಾಳಿದಾಸ ರಸ್ತೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಯೋಗ ನರಸಿಂಹನ್ (ಮುರುಳಿ), ವೀರ ರಾಘವನ್,ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ಮೂಡಾ ಮಾಜಿ ಸದಸ್ಯರಾದ ನವೀನ್ ಕುಮಾರ್, ಅಗಸ್ತ್ಯ ಸೊಸೈಟಿಯ ಕಲ್ಕೆರೆ ನಾಗರಾಜ್,ವಿಕ್ರಂ ಅಯ್ಯಂಗಾರ್ ,ಶ್ರೀ ರಾಮಾನುಜ ಸಹಕಾರ ಸಂಘದ ರಾಜಗೋಪಾಲ್, ಟಿ.ಎಸ್ ಅರುಣ್, ಚಕ್ರಪಾಣಿ, ಸುದರ್ಶನ್, ವಿಘ್ನೇಶ್ವರ ಭಟ್, ಚರಣ್, ಸತೀಶ್, ರಾಮು, ರಾಜೇಂದ್ರ, ರಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಣೆ Read More

ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಲೇಖನಿ,ದಿನಸಿ ವಿತರಣೆ

ಮೈಸೂರು: ಮೈಸೂರಿನ ‌ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ‌ ವತಿಯಿಂದ
ಎಂದಿನಂತೆ ಸಮಾಜಸೇವೆ ಮುಂದುವರಿದಿದ್ದು,ಹಣ್ಣುಹಂಪಲು, ಲೇಖನಿ ಹಾಗೂ ದಿನಸಿ ಸಾಮಗ್ರಿ ವಿತರಿಸಲಾಯಿತು.

ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್‌ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ಹಂಪಲು, ಲೇಖನಿ ಸಾಮಗ್ರಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕಿ ಗೀತಾ, ಕಾಂಗ್ರೆಸ್ ಮುಖಂಡ ಆನಂದ್, ಬಿ.ಜೆ.ಪಿ. ಮುಖಂಡ ಪುರುಷೋತ್ತಮ್,ವೀರಭದ್ರ ಸ್ವಾಮಿ, ಛಾಯಾ,ಯಶ್ವಂತ್ ಕುಮಾರ್,ಮಹದೇವ್,ಶ್ರೀಧರ್ ,ಮಹೇಶ್,ವಿನಯ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಲೇಖನಿ,ದಿನಸಿ ವಿತರಣೆ Read More

ಕೃಷ್ಣರಾಜ ಕ್ಷೇತ್ರದ ಪಲಾನುಭವಿಗಳಿಗೆ ವಿಕಲಚೇತನರ ವಾಹನ ವಿತರಣೆ

ಮೈಸೂರು: ಮೈಸೂರಿನ ಕೃಷ್ಷರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ವಿಕಲ ಚೇತನರಿಗೆ ಮೈಸೂರು ಮಹಾನಗರಪಾಲಿಕೆ ಯ ಶೇ 5 ರ ಅನುದಾನದಡಿಯಲ್ಲಿ ತ್ರಿಚಕ್ರ ಮೋಟಾರು ವಾಹನಗಳನ್ನು ನೀಡಲಾಯಿತು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀ ವತ್ಸ ರವರು ವಾಹನದ ಕೀ ನೀಡುವ ಮೂಲಕ ಅರ್ಹರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

ಕೃಷ್ಣರಾಜ ಕ್ಷೇತ್ರದ ಪಲಾನುಭವಿಗಳಿಗೆ ವಿಕಲಚೇತನರ ವಾಹನ ವಿತರಣೆ Read More