ವಿವಿಧೆಡೆ ದಾಳಿ‌ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ ಲೋಕಾ

ಬೆಳಗಾವಿ: ರಾಜ್ಯದ ವಿವಿಧೆಡೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಶಾಕ್​​ ಕೊಟ್ಟಿದ್ದಾರೆ.

ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು,ವಿಜಯನಗರ, ಬೆಂಗಳೂರು ಸೇರಿ ವಿವಿಧೆಡೆ ಲೋಕಾಯುಕ್ತರು ದಾಳಿ ನಡೆಸಿ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಸೇರಿ ವಿವಿಧೆಡೆ ಶೋಧ ನಡೆಸಿರುವ ಲೋಕಾಯುಕ್ತ ಸಿಬ್ಬಂದಿ ಕೆಲವೆಡೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಕೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ರಾಜಶೇಖರ್​​ಗೆ ಸೇರಿದ ಒಟ್ಟು ಮೂರು ಕಡೆ ರೇಡ್​​ ನಡೆದಿದೆ. ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್​ಗೆ ಸೇರಿದ ಖಾಸಗಿ ಕಚೇರಿ, ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ಮಾಡಲಾಗಿದೆ.

ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್ ಅವರು​​ ಸುಮಾರು 50 ಸಾವಿರ ರೂ. ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್​​ ಮಾಡಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಲೊಕಾಯುಕ್ತ ಪೊಲೀಸರನ್ನು ಮನೆ ಹೊರಗೆ ಕಾಯಿಸಿ ಬಳಿಕ ಬಾಗಿಲು ತೆಗೆದಿದ್ದಾರೆ ಎನ್ನಲಾಗಿದೆ.

ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಶಿವಮೊಗ್ಗ ನಗರದ ಬಸವನಗುಡಿ ಪ್ರದೇಶದಲ್ಲಿರುವ ರೂಪ್ಲಾ ನಾಯ್ಕ್ ಅವರ ನಿವಾಸ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸುದೀರ್ಘ ಪರಿಶೀಲಿಸಿದರು.

ಬೆಳಗ್ಗೆಯಿಂದಲೇ ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆಗಳು, ಆಸ್ತಿ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದರ ಜೊತೆಗೆ, ರೂಪ್ಲಾ ನಾಯ್ಕ್ ಅವರ ಕುಟುಂಬ ನೆಲೆಸಿರುವ ಬೆಂಗಳೂರಿನ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ವಿಜಯನಗರ ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರ ಮನೆ, ಕಚೇರಿ ಹಾಗೂ ಪತ್ನಿ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯ ಮೇಲೆ ರೇಡ್ ಮಾಡಲಾಗಿದೆ.
ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರು ತಮ್ಮ ಮನೆಯ ಸಮೀಪ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಅಲ್ಲಿಗೆ ಸಹ ತೆರಳಿ ಪರಿಶೀಲನೆ ನಡೆಸಿದರು.

ವಿವಿಧೆಡೆ ದಾಳಿ‌ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ ಲೋಕಾ Read More

ಕನ್ನಡ ರಾಜ್ಯೋತ್ಸವದಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಧಾರವಾಡ: ಧಾರವಾಡದ ರೈಲ್ವೇ ಕಾಲೋನಿ ಆವರಣದಲ್ಲಿ ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಹಮ್ನಿಕೊಂಡಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೋ ಕೆ ಎಸ್ ಕೌಜಲಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಧಾರವಾಡ ರೈಲ್ವೇ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವ್ಹಿ ಸಿ ಪಾಟೀಲ,ಕಚೇರಿ ಸೂಪರಿಂಟೆಂಡೆಂಟ್ ಮಂಜುನಾಥ ದ್ಯಾವಣ್ಣವರ ಹಾಗೂ ಪ್ರಕಾಶ ಬಾಗಳಿ ಪಾಲ್ಗೊಂಡಿದ್ದರು.

ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಮಹೇಶ ಎಸ್ ತಳವಾರ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುರೇಶ ಹೀರೆಣ್ಣವರ ಸವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಮಟ್ಟಿ ಕಾರ್ಯಕ್ರಮ ನಿರೂಪಿಸಿದರು.

ರೈಲ್ವೇ ಕಾಲೋನಿಯ ಮಕ್ಕಳು,ನೌಕರರು ಹಾಗೂ ಇನ್ನಿತರ ಕನ್ನಡ ಕಲಾಭಿಮಾನಿಗಳು ನೃತ್ಯ, ಹಾಡು,ಭಾಷಣ,ಏಕ ಪಾತ್ರಾಭಿನಯ,ಗೀತ ಗಾಯನ ನಡೆಸಿಕೊಟ್ಟು ಎಲ್ಲರನ್ನು ರಂಜಿಸಿದರು‌.

ಸಂಘದ ಎಲ್ಲಾ ಸದಸ್ಯರು,ಕನ್ನಡ ಪ್ರೇಮಿಗಳು,ರೈಲ್ವೇ ನೌಕರರು ಪಾಲ್ಗೊಂಡಿದ್ದರು.

ಕನ್ನಡ ರಾಜ್ಯೋತ್ಸವದಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು Read More

ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆಯಲ್ಲಿ ರಾಜ್ಯೋತ್ಸವ

ಧಾರವಾಡ: ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಧಾರವಾಡ ರೈಲು ನಿಲ್ದಾಣದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ,ಉಪಾಧ್ಯಕ್ಷ ಮಹೇಶ ಎಸ್ ತಳವಾರ,ಖಜಾಂಚಿ ಶಿವರಾಜ ಮರಿ ಉಜ್ಜಪ್ಪನವರ,ಎಸ್ ಎಸ್ ಇ ಶಿವಾಜಿ ಮಾಯೆಕರ್, ಸಂಘದ ಸದಸ್ಯರಾದ ಹನುಮಂತ ಅಡಗಲ್,ಮಂಜುನಾಥ ಮುತ್ತಣ್ಣವರ,ಸುಬ್ಬಣ್ಣ ಬಳ್ಳಾರಿ,ಪ್ರದೀಪ್ ಕಾಂಬ್ಳೆ ಸೇರಿದಂತೆ ಅನೇಕ ಕನ್ನಡ ಪ್ರೇಮಿಗಳು, ಹಿರಿಯರು ಉಪಸ್ಥಿತರಿದ್ದರು.

ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆಯಲ್ಲಿ ರಾಜ್ಯೋತ್ಸವ Read More

ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಕಜಾಪ ಒತ್ತು:ಡಾ.ಜಾನಪದ ಬಾಲಾಜಿ.

ಧಾರವಾಡ: ಕನ್ನಡ ಜಾನಪದ ಪರಿಷತ್ ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಅಧ್ಯಕ್ಷ ಡಾ.ಜಾನಪದ ಬಾಲಾಜಿ ತಿಳಿಸಿದರು.

ಜಾನಪದ ಯುವ ಬ್ರಿಗೇಡ್ ವತಿಯಿಂದ ಶ್ರೀ ರಾ.ಹ.ಕೊಂಡಕೇರ ಅವರ ನಿವಾಸದಲ್ಲಿ ನಡೆದ ಮನ – ಮನೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ.ಜಾ.ಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕ.ಸಾ.ಪ ಧಾರವಾಡ ಜಿಲ್ಲಾ ಅಧ್ಯಕ್ಷರು,ಕೋಶಾಧ್ಯಕ್ಷರು,
ಉದಯೋನ್ಮುಖ ಗಾಯಕ ಶ್ರೀ ನಿಜಗುಣಿ ಮಂಗಿ,ಹಾಗೂ ಜಾನಪದ ಕಲಾವಿದೆ,ಸೂಲಗಿತ್ತಿ ಚಂದ್ರವ್ವ .ದು.ಹಾದಿಮನಿ ಇವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಉಪಸ್ಥಿತರಿದ್ದ ಎಲ್ಲ ಗಣ್ಯರು ಜಾನಪದದ ಪ್ರಚಾರ ಮತ್ತು ಸಂರಕ್ಷಣೆ ಕೆಲಸವನ್ನು ಧಾರವಾಡ ಜಾನಪದ ಯುವ ಬ್ರಿಗೇಡ್ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಧಾರವಾಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ ಎಸ್ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸಹ ಸಂಚಾಲಕರು ಹಾಗೂ ಕಾರ್ಯಕ್ರಮ ಆತಿಥ್ಯ ವಹಿಸಿದ್ದ ಶ್ರೀ ರಾ.ಹ.ಕೊಂಡಕೇರ,ನೈ.ರೈ.ಕ.ಸಂಘದ ಕಾರ್ಯದರ್ಶಿ ಸುರೇಶ ಹೀರೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಕಜಾಪ ಒತ್ತು:ಡಾ.ಜಾನಪದ ಬಾಲಾಜಿ. Read More

ಬೆಳ್ಳಂಬೆಳಿಗ್ಗೆ ಮೈಸೂರು ಪಾಲಿಕೆ ಅಧಿಕಾರಿಗೆ ಲೋಕಾ ಶಾಕ್

ಮೈಸೂರು: ಮೈಸೂರು ನಗರ ಪಾಲಿಕೆ ವಲಯ ಆಯುಕ್ತ ನಾಗೇಶ್ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಮೈಸೂರು ಪಾಲಿಕೆ ವಲಯ ಆಯುಕ್ತ ನಾಗೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.

ಈ ಹಿಂದೆ ನಾಗೇಶ್ ಅವರು
ಚನ್ನಪಟ್ಟಣ ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.

ಶ್ರೀರಂಗಪಟ್ಟಣ ಹಾಗೂ ಶಿವಮೊಗ್ಗ ನಿವಾಸಗಳ ಮೇಲು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತಹಶೀಲ್ದಾರ್ ಆಗಿದ್ದ ವೇಳೆ ಡಾಲರ್ಸ್ ಕಾಲೋನಿಯಲ್ಲಿ ನಾಗೇಶ್ ಅಪಾರ್ಟ್ ಮೆಂಟ್ ನಿರ್ಮಿಸಿದ್ದರು.

ಮೈಸೂರು ನಗರ ಮೇಟಗಳ್ಳಿ ಬಸವನಗುಡಿ ವೃತ್ತದ ಬಳಿ ಇರುವ ವಲಯ ಕಚೇರಿ 5 ರ ಮೇಲೂ ಸಹ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೆಲವು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠಲ್ ಡವಳೇಶ್ವರ, ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದ ಭಜಂತ್ರಿ,
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಕಮಲ ರಾಜ್ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ಮೈಸೂರು ಪಾಲಿಕೆ ಅಧಿಕಾರಿಗೆ ಲೋಕಾ ಶಾಕ್ Read More