ಧರ್ಮಸ್ಥಳದ ಬಗ್ಗೆ ಅಪಪ್ರಚಾರ;ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಮೈಸೂರಿನಲ್ಲಿ ಸಹಿ ಸಂಗ್ರಹ ಚಳವಳಿ ಪ್ರಾರಂಭಿಸಲಾಯಿತು.

ಧರ್ಮಸ್ಥಳದ ವಿಚಾರವಾಗಿ ಅನೇಕ ಪ್ರಕರಣಗಳನ್ನು ಧರ್ಮಾಧಿಕಾರಿ ಹಾಗೂ ಅವರ ಕುಟುಂಬವನ್ನು ತಳುಕು ಹಾಕುತ್ತಾ ಅಪ ಪ್ರಚಾರ ಮಾಡಲಾಗುತ್ತಿದೆ.

ಈ ಅಪಪ್ರಚಾರವನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ವತಿಯಿಂದ ಮೈಸೂರಿನ ಚಿಕ್ಕ ಗಡಿಯಾರದ ವೃತ್ತದಲ್ಲಿ ಇಂದಿನಿಂದ ಸಹಿ ಸಂಗ್ರಹ ಚಳವಳಿಯನ್ನು ಆರಂಭಿಸಲಾಗಿದೆ.

ಈ ಚಳವಳಿಯನ್ನು ಹಿಂದೂ ಮುಖಂಡರಾದ ಮೈ.ಕಾ. ಪ್ರೇಮ್ ಕುಮಾರ್, ಸಂಜಯ್, ರಾಕೇಶ್ ಭಟ್, ಸಚಿನ್ ನಾಯಕ್, ಶ್ರೀಧರ್, ಚಿಕ್ಕವೆಂಕಟು, ಕುಮಾರ್, ಅನಿಲ್, ಪ್ರಮೋದ್ ಸೇರಿದಂತೆ ಹಲವರು ಆಯೋಜಿಸಿದ್ದಾರೆ.

ಇಂದಿನ ಸಹಿ ಸಂಗ್ರಹ ಚಳವಳಿಗೆ ಮಾಜಿ ಮಹಾಪೌರರಾದ ಶಿವಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವಕೀಲರಾದ ಸಿ.ವಿ. ಕೇಶವಮೂರ್ತಿ ಸೇರಿದಂತೆ ಸಾವಿರಾರು ಜನ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದರು.

ಮಾಧ್ಯಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಅಂಡ್ ರನ್ ರೀತಿ ಆಪಾದನೆ ಮಾಡಿ ಕೆಲವರು ಅಜ್ಞಾತ ಸ್ಥಳದಲ್ಲಿ ಕೂರುತ್ತಿದ್ದಾರೆ ಕಳೆದ ದಶಕದಿಂದ ಸೌಜನ್ಯ ಹತ್ಯೆ ಪ್ರಕರಣವಾಗಿ ಅನೇಕ ತನಿಖೆಗಳು ನಡೆದಿದೆ, ಆದರೆ ಎಲ್ಲಿಯೂ ಧರ್ಮಾ ಧಿಕಾರಿಗಳು ಹಾಗೂ ಅವರ ಕುಟುಂಬದ ಯಾರೊಬ್ಬರ ಪಾತ್ರದ ಬಗ್ಗೆ ಸಾಕ್ಷಿ ಲಭಿಸಿಲ್ಲ. ಹಾಗಿದ್ದಾರೂ ಹೊಸ ಹೊಸ ಆರೋಪಗಳನ್ನು ಸೃಷ್ಟಿಸಿ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಆಸ್ತಿಕರ ಭಾವನೆಗೆ ನೋವುಂಟಾಗಿದೆ, ಮೂಲಭೂತವಾದಿ ಮತೀಯ ಸಂಘಟನೆ ಎಸ್ ಡಿ ಪಿ ಐ ಪ್ರಕರಣದಲ್ಲಿ ತೆರೆಮರೆಯ ಹಿಂದೆ ಷಡ್ಯಂತ್ರ ರೂಪಿಸಿದೆ ಎಂದು ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯವರು ಗಂಭೀರ ಆರೋಪ ಮಾಡಿದರು.

ಈ ಹಿಂದೆ ಶ್ರೀರಾಮಚಂದ್ರಾಪುರ ಮಠ, ಪೇಜಾವರ ಮಠ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶಬರಿಮಲೆ ಸೇರಿದಂತೆ ಅನೇಕ ಆಸ್ತಿಕರ ನಂಬಿಕೆಯ ಕ್ಷೇತ್ರಗಳ ಮೇಲೆ ಅಪಪ್ರಚಾರ ನಡೆಸಲಾಗಿದೆ. ಈಗ ಧರ್ಮಸ್ಥಳದ ಮೇಲೆ ಮುಗಿ ಬೀಳಲಾಗುತ್ತಿದೆ ಈ ಅಪಪ್ರಚಾರವನ್ನು ಕೂಡಲೇ ತಡೆಯಬೇಕು ಎಂದು ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯವರು ಆಗ್ರಹಿಸಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ;ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ Read More

ಧರ್ಮಸ್ಥಳದಲ್ಲಿ ಗಲಾಟೆ;ಲಾಠಿ ಚಾರ್ಜ್

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಎಸ್ ಐಟಿ ತನಿಖೆ ತೀವ್ರಗೊಂಡ ಬೆನ್ನಲ್ಲೇ ಕಿರಿಕ್ ಗಳು ಪ್ರಾರಂಭವಾಗಿದ್ದು,ಈಗ ಈ ಗ್ರಾಮ ಪ್ರಕ್ಷುಬ್ಧ ವಾಗಿಬಿಟ್ಟಿದೆ.

ಇದಕ್ಕೆ ಕಾರಣ ಧರ್ಮಸ್ಥಳ ಪ್ರಕರಣಗಳ ಬಗ್ಗೆ ನಿರಂತರ ವರದಿ ಮಾಡುತ್ತಿರುವುದು.

ಬುಧವಾರ ಸಂಜೆ ಸುದ್ದಿ ಮಾಡಲು ಬಂದಿದ್ದ ಯೂಟ್ಯೂಬರ್ ಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.ಅಲ್ಲದೆ ಖಾಸಗಿ ವಾಹಿನಿಯೊಂದರ‌ ವರದಿಗಾರ ಮತ್ತು ಕ್ಯಾಮರಾಮನ್ ಮೇಲೂ ಹಲ್ಲೆ ಮಾಡಲಾಗಿದೆ.

ಗಲಾಟೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಎಸ್ ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.

ನೇತ್ರಾವತಿಯ ಪಾಂಗಳ ಕ್ರಾಸ್ ಬಳಿ ಯೂಟ್ಯೂಬರ್ ಗಳು,ವರದಿ ಮಾಡಲು ಹೋಗಿದ್ದ ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಲಾಗಿದೆ ಗಲಾಟೆ ಎಸ್ಟರಮಟ್ಟಿಗೆ ಇದೆ ಎಂದರೆ ಲಾಠಿ ಚಾರ್ಜ್ ಮಾಡುವ ಮಟ್ಟಕ್ಕೆ.

ಕಲ್ಲು ತೂರಾಟದಿಂದಾಗಿ ಎರಡು ವಾಹನಗಳು ಜಖಂಗೊಂಡಿದೆ ಎಂದು ಎಸ್ ಪಿ‌ ಸ್ಪಷ್ಟಪಡಿಸಿದ್ದಾರೆ.

ಆಗಿದ್ದಿಷ್ಟೆ.ಯೂಟ್ಯೂಬರ್ ಗಳು,
ಧರ್ಮಸ್ಥಳದ ದೇವಳಕ್ಕೆ ಧಕ್ಕೆಯಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ‌ ಸೌಜನ್ಯ ಕೇಸ್ ಗೆ ಸಂಬಂಧಪಟ್ಟಂತೆ ಕೆಲವರು ಸತ್ಯ ಹೊರ ಬರಬೇಕೆಂದು ಹೋರಾಟ ನಡೆಸುತ್ತಿರುವವರು ಇದೇ ವೇಳೆ ಆಗಮಿಸಿದ್ದರು ಆಗ‌ ಒಬ್ಬರಿಗೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಇದು ವಿಕೋಪಕ್ಕೆ ಹೋಗಿ ಇಂದು ಪ್ರಕ್ಷುಬ್ಧ ವಾತಾವರಣ ಉಂಟಾಗಿ ಕಲ್ಲುತೂರಾಟ ಪ್ರಾರಂಭವಾಗಿದೆ. ಆಗ ಧರ್ಮಸ್ಥಳ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.ಆದರೂ ಅಲ್ಲಿನ ಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್ ಕೂಡಾ ಧರ್ಮಸ್ಥಳ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಧರ್ಮಸ್ಥಳದಲ್ಲಿ ಗಲಾಟೆ;ಲಾಠಿ ಚಾರ್ಜ್ Read More