ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ-ಸಿಎಂ ಟಾಂಗ್

ಹಾಸನ: ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರಿಗಿಂತ ಹೆಚ್ಚು ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ,ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿಗಳು ಹಾಸನ ಮಹಾನಗರ ಪಾಲಿಕೆಗೆ ಇನ್ನೂ ಮೂರು ವರ್ಷ ಯಾವುದೇ ಅನುದಾನ ಅಥವಾ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಈ ಕುರಿತು ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ-ಸಿಎಂ ಟಾಂಗ್ Read More

30 ವರ್ಷಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ: ಕೆ. ಹರೀಶ್ ಗೌಡ

ಮೈಸೂರು: ಮುಂದಿನ 30 ವರ್ಷ ಮೂಲಭೂತ ಸೌಕರ್ಯಗಳಿಗೆ ಸಮಸ್ಯೆ ಆಗದಂತೆ ಅಭಿವೃದ್ಧಿ ಮಾಡುವುದೇ ನನ್ನ ಆದ್ಯತೆ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 21ನೇ ವಾರ್ಡ್ ವ್ಯಾಪ್ತಿಯ ಕುದುರೆಮಾಳ ಹಾಗೂ ಕುಕ್ಕರಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಮಳೆ ನೀರು ಚರಂಡಿ, ಸೋಲಾರ್ ಸ್ಟ್ರೀಟ್ ಲೈಟ್, ಚೈನ್ ಲಿಂಕ್ ಅಳವಡಿಕೆ, ಎಲ್ ಶೇಪ್ ಚರಂಡಿ, ರಸ್ತೆ ಅಭಿವೃದ್ದಿ, ಕುಕ್ಕರಹಳ್ಳಿಯಲ್ಲಿ ಒಳ ಚರಂಡಿ, ಕುಡಿಯುವ ನೀರಿನ ಪೈಪ್ ಅಳವಡಿಕೆ ಹಾಗೂ ಸಿ.ಸಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿದರು

ನಂತರ ಕುಕ್ಕರಹಳ್ಳಿಯಲ್ಲಿ ರಂಗಮಂಟಪ ಹಾಗೂ ಅಂಬೇಡ್ಕರ್ ಸಮುದಾಯ ಭವನದ ಒಂದನೇ ಮಹಡಿಯ ಕಟ್ಟಡದ ಉದ್ಘಾಟನೆ ನೆರೆವೇರಿಸಿ ಹರೀಶ್ ಗೌಡ ಮಾತನಾಡಿದರು.

ಅತಿಹೆಚ್ಚು ಮತಗಳನ್ನು ಈ ಭಾಗದ ಜನತೆ ನನಗೆ ನೀಡಿ ಆಶೀರ್ವದಿಸಿದ್ದಾರೆ, ಹಳೆಯದಾದ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕುಕ್ಕರಹಳ್ಳಿಯಲ್ಲಿ ನಿರ್ಮಿಸಲಾಗಿರುವ 13 ಮನೆಗಳಿಗೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರನ್ನೇ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದೇನೆ. ಒಂದು ತಿಂಗಳಲ್ಲಿ ಹಕ್ಕು ಪತ್ರ ಸಿಗಲಿದೆ ಎಂದು ಶಾಸಕರು ಭರವಸೆ ನೀಡಿದರು.

ನನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ‌ಹರೀಶ್ ಗೌಡ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ವಿಶ್ವನಾಥ್, ಸುಧೀರ್, ಮಂಚಯ್ಯ, ಪುರುಷೋತಮ್, ಸುಧೀರ್ ಮತ್ತಿತರರು ಹಾಜರಿದ್ದರು.

30 ವರ್ಷಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ: ಕೆ. ಹರೀಶ್ ಗೌಡ Read More