ಉಡುಗೊರೆ ವಿಚಾರಕ್ಕೆ ಜಗಳ‌:ಅತ್ತೆ,ಪತ್ನಿಯನ್ನು ಕೊಂದ ಕಿರಾತಕ

ನವದೆಹಲಿ: ಹುಟ್ಟುಹಬ್ಬದ ಉಡುಗೊರೆ ವಿಚಾರವಾಗಿ ಜಗಳ‌ ನಡೆದು ಪತಿ ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿ‌ದ ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ದೆಹಲಿಯ ರೋಹಿಣಿ‌ ಎಂಬಲ್ಲಿ ಈ ಘಟನೆ ನಡೆದಿದ್ದು, ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದ ಎರಡೂ ಕಡೆಯವರ ನಡುವೆ ಉಡುಗೊರೆಗಳು ಬಂದಿವೆ.ಇದೇ ವಿಚಾರಕ್ಕೆ ಜಗಳ ಪ್ರಾರಂಭವಾಗಿ ಇಬ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ.

ಕುಸುಮ್ ಸಿನ್ಹಾ (63) ಮತ್ತು ಅವರ ಮಗಳು ಪ್ರಿಯಾ ಸೆಹಗಲ್ (34) ಕೊಲೆಯಾದ ದುರ್ದೈವಿಗಳು

ಮಗು ಚಿರಾಗ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.ಈ ವೇಳೆ
ಉಡುಗೊರೆಗಳ ವಿಷಯದಲ್ಲಿ ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಜಗಳ ನಡೆದಿದೆ.

ಇದನ್ನು ಬಗೆಹರಿಸಲು ತಾಯಿ ಕುಸುಮ್ ಅವರು ಪ್ರಿಯಾ ಅವರ ನಿವಾಸದಲ್ಲಿಯೇ ಉಳಿದುಕೊಂಡಿದ್ದರು.ಆದರೆ ಜಗಳ ತಾರಕಕ್ಕೆ ಹೋಗಿ ಯೋಗೇಶ್ ಕತ್ತರಿ ಹಾಗೂ ಚಾಕುವಿನಿಂದ ಚುಚ್ಚಿ ಪತ್ನಿ ಮತ್ತು ಅತ್ತೆಯನ್ನು ಕೊಂದು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ನಿನ್ನೆ‌ ಪ್ರಿಯಾಳ ಸಹೋದರ‌ ತಾಯಿಗೆ ಕರೆ ಮಾಡಿದಾಗ ರಿಸೀವ್ ಮಾಡಿಲ್ಲ,ನಂತರ ಸಹೋದರಿ ಪ್ರಿಯಾಗೆ ಕರೆ ಮಾಡಿದ್ದಾರೆ,ಆದರೆ ಅವರೂ ಕರೆ‌ ಸ್ವೀಕರಿಸಿಲ್ಲ ಇದರಿಂದ ನೇರ ಪ್ರಿಯಾ ಮನೆಗೆ ಬಂದಿದ್ದಾರೆ.

ಪ್ರಿಯಾಳ ಮನೆಗೆ ಬಂದಾಗ ಫ್ಲಾಟ್ ಹೊರಗಿನಿಂದ ಲಾಕ್ ಆಗಿರುವುದನ್ನು ನೋಡಿದ್ದಾರೆ ಮತ್ತು ಬಾಗಿಲಿನ ಬಳಿ ರಕ್ತದ ಕಲೆಗಳು ಕಂಡುಬಂದಿದ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಅವರು ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಬೀಗ ಒಡೆದಾಗ, ಕೋಣೆಯೊಳಗೆ ತನ್ನ ತಾಯಿ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಬಂದಿದೆ.

ಪ್ರಿಯಾಳ ಪತಿ ಯೋಗೇಶ್ ಸೆಹಗಲ್ ತನ್ನ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಕೊಂದು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಕೆಎನ್ ಕೆ ಮಾರ್ಗ್ ಪೊಲೀಸರು
ಯೋಗೇಶ್ ನನ್ನು ಬಂಧಿಸಿದ್ದಾರೆ.

ಉಡುಗೊರೆ ವಿಚಾರಕ್ಕೆ ಜಗಳ‌:ಅತ್ತೆ,ಪತ್ನಿಯನ್ನು ಕೊಂದ ಕಿರಾತಕ Read More

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ!

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಸಾವಿರಾರು ಮೊಬೈಲ್ ಗಳನ್ನು ತುಂಬಿದ್ದ ಕಂಟೈನರ್‌ ಒಂದನ್ನ ಅಪಹರಿಸಿ ಮೊಬೈಲ್ ದೋಚಿರುವ ಘಟನೆ ನಡೆದಿದೆ.

ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳವು ಮಾಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ಬೆಂಗಳೂರನ್ನು ತಲುಪೆ ಇರಲಿಲ್ಲ. ಕಳೆದ ನ. 22ರಂದು ಈ ಘಟನೆ ನಡೆದಿದೆ. ಕಂಟೈನರ್ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಅನುಮಾನಗೊಂಡ ಕಂಪನಿಯವರು ಗಾಡಿಯ ಜಿಪಿಎಸ್‌ ಪರಿಶೀಲಿಸಿದ್ದಾರೆ.ಆಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿರುವುದು ಗೊತ್ತಾಗಿದೆ.

ಹೀಗಾಗಿ ಗಾಡಿಯ ಲೊಕೇಶನ್ ಮಾಹಿತಿಯನ್ನು ಪೆರೇಸಂದ್ರೆ ಠಾಣೆ ಪೊಲೀಸರಿಗೆ ಕಂಪನಿಯವರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ಕಂಟೈನ‌ರ್ ಅಲ್ಲಿ ನಿಲ್ಲಿಸಿ ಚಾಲಕ ನಾಪತ್ತೆಯಾಗಿರುವುದು ಗೊತಗತಾಗಿದೆ.

ಕಂಟೈನರ್ ನ ಚಾಲಕ ರಾಹುಲ್ ಕೋಟ್ಯಂತರ ರೂಪಾಯಿಗಳ ಮೊಬೈಲ್ ದೋಚಿ ಪರಾರಿಯಾಗಿದ್ದು,ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ! Read More