ಅನಾಥ ನಾಯಿಗೆ ಮುಕ್ತಿ ನೀಡಿ ಮೆಚ್ಚುಗೆಗೆ ಪಾತ್ರವಾದ ಯುವಕ

ಮೈಸೂರು: ಸಾಮಾನ್ಯವಾಗಿ ಯಾವುದಾದರೂ ಬೀದಿ ನಾಯಿ ರಸ್ತೆಯಲ್ಲಿ ಸತ್ತು ಬಿದ್ದಿದ್ದರೆ ಆ ಕಡೆ ನೋಡದೆ ಮೂಗು ಮುಚ್ಚಿಕೊಂಡು ಮುಂದೆ ಸಾಗುವವರೇ ಹೆಚ್ಚು.

ಅದು ಕೊಳೆತು ಹೋಗಿದ್ದರಂತು ಕೇಳುವಂತೆಯೇ ಇಲ್ಲ,ನಗರಪಾಲಿಕೆಗೆ ಹಿಡಿ ಶಾಪ ಹಾಕುತ್ತಾ ಮೂಗು ಮುಚ್ಚಿ ಮುಂದೆ ಸಾಗುವುದು ಸಾಮಾನ್ಯ.

ಆದರೆ ಸಾಂಸ್ಕೃತಿಕ ನಗರಿ ಮೈಸೂರಿನ ಗಗನ್ ಇದಕ್ಕೆ ವ್ಯತಿರಿಕ್ತ,ರಸ್ತೆಯಲ್ಲಿ ಅನಾಥವಾಗಿ ಸತ್ತ ನಾಯನ್ನು ಮಣ್ಣು ಮಾಡಿ, ಮುಕ್ತಿ ನೀಡುವ ಕೆಲಸವನ್ನು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸರ್ದಾರ್ ವಲ್ಲಭಾಯಿ ಪಟೇಲ್ ನಗರದ ನಾಲ್ಕನೇ ರಸ್ತೆ ಖಾಲಿ ನಿವೇಶನದಲ್ಲಿ ಹಲವಾರು ದಿನಗಳಿಂದ ಬೀದಿ ನಾಯಿ ಸತ್ತು ಕೊಳೆತು ಬಿದ್ದಿತು. ಸ್ಥಳೀಯರು ಈ ವಿಷಯವನ್ನು ಸಮಾಜ ಸೇವಕ ಗಗನ್ ರವರಿಗೆ ತಿಳಿಸಿದ್ದಾರೆ. ತಕ್ಷಣ ಗಗನ್ ಹಾಗೂ ಅವರ ಸ್ನೇಹಿತರು ನಿವೇಶನದ ಬಳಿ ಬಂದಿದ್ದಾರೆ.

ಸತ್ತು ಬಿದ್ದಿದ್ದ ನಾಯಿಯ ಕಳೇಬರವನ್ನು ಅಲ್ಲಿಂದ ತೆಗೆದು ಸೂಕ್ತ ರೀತಿಯಲ್ಲಿ ಮಣ್ಣು ಮಾಡಿ ಮುಕ್ತಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅನಾಥ ನಾಯಿಗೆ ಮುಕ್ತಿ ನೀಡಿ ಮೆಚ್ಚುಗೆಗೆ ಪಾತ್ರವಾದ ಯುವಕ Read More