ನದಿ ದಡದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೃತ ಮಹಿಳೆಯನ್ನು ಪಟ್ಟಣದ ಕೊಳ್ಳೇಗಾಲ ಮೋಳೆ (ಉಪ್ಪಾರ ಬಡಾವಣೆ)ಯ ವಿಜಯ್ ಕುಮಾರ್ ಎಂಬುವರ ಪತ್ನಿ ಸೋನಾಕ್ಷಿ (29) ಎಂದು ಗುರುತಿಸಲಾಗಿದೆ.

ಉಪ್ಪಾರ ಬಡಾವಣೆಯ ಕುಮಾರ್ ಎಂಬುವರ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು. ಗಂಡ ವಿಜಯ್ ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದು ಇವರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ.

ಸೋನಾಕ್ಷಿಗೆ ಬಡಾವಣೆಯ ಯುವಕನ ಜೊತೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗುತ್ತಿದ್ದು ಕಳೆದ ಫೆಬ್ರವರಿ ತಿಂಗಳಲ್ಲಿ ಕಾಣಿಯಾಗಿದ್ದಳು,ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.

ಸೋನಾಕ್ಷಿಯ ಮೃತದೇಹ ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.

ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಅರೆಬರೆ ಹೂತು ಹಾಕಿ ಪರಾರಿಯಾಗಿದ್ದರು.

ಮಣ್ಣಿನಿಂದ‌ ಮಹಿಳೆಯ ಕೈ ಕಾಣುತ್ತಿದ್ದು ಗ್ರಾಮದ ಜನತೆ ಭೀತರಾಗಿದ್ದರು. ಗುರುವಾರ ಗ್ರಾಮದ ಶಶಿಕುಮಾರ್( ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಾರೆ)
ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.

ಶಶಿಕುಮಾರ್ ಶವವನ್ನು ಕಂಡು ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು.

ನಂತರ ಪೊಲೀಸರು ರಾತ್ರಿ 11 ಗಂಟೆಯಲ್ಲಿ ಶವವನ್ನು ಮಣ್ಣಿನಿಂದ ಹೊರತೆಗೆಸಿ ನೋಡಿದಾಗ ದೇಹ ವಿವಾಹಿತ ಮಹಿಳೆಯಾಗಿದ್ದು ತಾಳಿ ಕಾಲುಂಗುರ ಹಾಗೂ ಚಿನ್ನದ ಬಣ್ಣದ ಬಳೆ ಧರಿಸಿರುವುದು ಕಂಡು ಬಂದಿತ್ತು.

ಶವ ಹೂಳಲಾಗಿದ್ದ ಸುಮಾರು 20 ಮೀಟರ್ ದೂರದಲ್ಲಿ ಒಂದು ದೀಪ, ಕುಡಿಯುವ ನೀರಿನ ಬಾಟಲಿ ಇನ್ನಿತರ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದು ಮಾಟ, ಮಂತ್ರ ವಾಮಾಚಾರ ಶಂಕೆ ವ್ಯಕ್ತವಾಗಿತ್ತು. ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಅತ್ಯಾಚಾರ ವ್ಯಸಗಿ ಕೊಲೆ ಮಾಡಿ ತಂದು ಹೂತು ಹಾಕಿರಬಹುದು ಎಂಬ ಅನುಮಾನವೂ ಕಾಡುತ್ತಿತ್ತು.

ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿಎಸ್ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಲಾಗಿತ್ತು.

ಮೃತಳ ತಾಯಿ ರಜನಿ ಮೃತ ದೇಹವನ್ನು ಗುರುತಿಸಿದ್ದು,ಆಕೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನಿಖೆಯ ನಂತರ ಯಾರು,ಯಾತಕ್ಕಾಗಿ ಕೊಲೆ ಮಾಡಿದ್ದಾರೆಂಬುದು ತಿಳಿಯಲಿದೆ.

ನದಿ ದಡದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು Read More

ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮಗಳು ಪತ್ತೆ

ಮೈಸೂರು: ತಾಯಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ

ಕೊತ್ತನಹಳ್ಳಿ ಗ್ರಾಮದ ಮಹದೇವಮ್ಮ( 38) ಮಗಳು ಸುಪ್ರಿಯ(20) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇವರ ಸಾವಿಗೆ ಮಹದೇವಮ್ಮನ ಪತಿ ಕಾರಣ ಎಂದು ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಮದುವೆ ಆಗಿ 22 ವರ್ಷವಾದರೂ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

22 ವರ್ಷಗಳ ಹಿಂದೆ ಮಹದೇವಮ್ಮಳನ್ನ ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಸುಪ್ರಿಯ ಎಂಬ ಮಗಳಿದ್ದಾಳೆ.

ಜಯರಾಮುಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ. ಈ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ. ಇದರಿಂದ ಮಗಳು ಸುಪ್ರಿಯ ನೊಂದಿದ್ದಳು.

ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದರು.

ಮಹದೇವಮ್ಮ ಹಾಗೂ ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ,ಇದು ಆತ್ಮಹತ್ಯೆ ಯೊ ಅಥವಾ ಕೊಲೆಯೊ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಬೇಕಿದೆ.

ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಮೃತ ಮಹಿಳೆ ಮಹದೇವಮ್ಮ ತವರು ಮನೆಯ ಸಂಬಂಧಿಕರು ಆರೋಪಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮಗಳು ಪತ್ತೆ Read More