ಹಾಸನ ಅಪಘಾತ:ಮೃತರ ಕುಟುಂಬಗಳಿಗೆ ತಲಾ‌ 2 ಲಕ್ಷ ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ಹಾಸನ ಜಿಲ್ಲೆ, ಮೊಸಳೆಹೊಸಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು 8 ಮಂದಿ ಮೃತಪಟ್ಟ ಘಟನೆಗೆ ಪ್ರಧಾನಿ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಧಾನಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ, ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಮೃತರ ಕುಟುಂಬಸ್ಥರಿಗಾಗಿ ಪಿಎಂಎನ್‌ಆರ್‌ಎಫ್ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಘೋಷಿಸಿದ್ದಾರೆ.

ಹಾಸನ ಅಪಘಾತ:ಮೃತರ ಕುಟುಂಬಗಳಿಗೆ ತಲಾ‌ 2 ಲಕ್ಷ ಪರಿಹಾರ ಘೋಷಿಸಿದ ಮೋದಿ Read More

ನಟಿ ಸೌಂದರ್ಯ ಸಾವು ಆಕಸ್ಮಿಕವಲ್ಲ! ನಟ ಮೋಹನ್ ಬಾಬು ವಿರುದ್ಧ ದೂರು

ಬೆಂಗಳೂರು,ಮಾ.12: ಕನ್ನಡದ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿ ಎರಡು ದಶಕಗಳು ಕಳೆದಿವೆ. ಆದರೆ, ಇದೀಗ ಹಿರಿಯ ತೆಲುಗು ನಟ ಮೋಹನ್ ಬಾಬು ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ನಟಿಯ ಅಕಾಲಿಕ ಸಾವು ಆಕಸ್ಮಿಕವಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಡಿರುವ ಕೊಲೆ ಎಂದು ದೂರು ನೀಡಲಾಗಿದೆ.

ಶಂಶಾಬಾದ್‌ನ ಹಳ್ಳಿಯೊಂದರಲ್ಲಿದ್ದ ಆರು ಎಕರೆ ಜಮೀನನ್ನು ಮಾರಾಟ ಮಾಡುವಂತೆ ಸೌಂದರ್ಯ ಮತ್ತು ಅವರ ಸಹೋದರನ ಮೇಲೆ ಮೋಹನ್ ಬಾಬು ಒತ್ತಡ ಹೇರಿದ್ದರು. ಆದರೆ, ಅವರು ಇದಕ್ಕೆ ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ಸಂಘರ್ಷ ಉಂಟಾಗಿತ್ತು. ಸೌಂದರ್ಯ ಅವರ ಮರಣದ ನಂತರ, ಮೋಹನ್ ಬಾಬು ಅವರು ಬಲವಂತವಾಗಿ ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರುದಾರ ಚಿಟ್ಟಿಮಲ್ಲು ಎಂಬವರು ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ದೂರುದಾರರು ಈ ಇಬ್ಬರು ನಟರೊಂದಿಗೆ ಹೇಗೆ ಸಂಬಂಧ ಎಂಬುದು ಕೂಡಾ ತಿಳಿದುಬಂದಿಲ್ಲ.

ಕನ್ನಡದ ಪ್ರಸಿದ್ದ ನಟಿ ಸೌಂದರ್ಯ, 1999ರಲ್ಲಿ ಬಾಲಿವುಡ್ ‌ಬಾದ್ ಶಾ ಅಮಿತಾಬ್ ಬಚ್ಚನ್ ಅಭಿನಯದ ‘ಸೂರ್ಯವಂಶಂ’ ಚಿತ್ರದಲ್ಲಿ ರಾಧಾ ಪಾತ್ರವನ್ನು ನಿರ್ವಹಿಸಿದ್ದರು.

ಅವರು ಮತ್ತು ಅವರ ಸಹೋದರ ಏಪ್ರಿಲ್ 17 ರಂದು ರಾಜಕೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೀಂನಗರಕ್ಕೆ ಹೋಗುತ್ತಿದ್ದಾಗ ಅವರ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ನಿಧನರಾಗಿದ್ದರು. ಅವರಿಗೆ ಆಗ 31 ವರ್ಷ ವಯಸ್ಸಾಗಿತ್ತು, ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರು. ಅಪಘಾತದ ಸ್ಥಳದಿಂದ ಅವರ ದೇಹವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

ಭೂಕಬಳಿಕೆಯಲ್ಲಿ ಮೋಹನ್ ಬಾಬು ಪಾತ್ರದ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕು ಹಾಗೂ ಅವರಿಂದ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ದೂರುದಾರ ಚಿಟ್ಟಿಮಲ್ಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಖಮ್ಮಂ ಸಹಾಯಕ ಪೊಲೀಸ್ ಆಯುಕ್ತ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತಮ್ಮ ಜೀವಕ್ಕೆ ಬೆದರಿಕೆ ಇದೆ ತಮಗೆ ಪೊಲೀಸ್ ರಕ್ಷಣೆ ಬೇಕೆಂದು ಅವರು ಮನವಿ ಮಾಡಿದ್ದಾರೆ.

ನಟಿ ಸೌಂದರ್ಯ ಸಾವು ಆಕಸ್ಮಿಕವಲ್ಲ! ನಟ ಮೋಹನ್ ಬಾಬು ವಿರುದ್ಧ ದೂರು Read More

ಕರಡಿಗಳ‌ ಸಾವಿಗೆ‌ ಅರಣ್ಯ ಇಲಾಖೆಯವರ ನಿರ್ಲಕ್ಷ್ಯಕಾರಣ‌:ತೇಜಸ್ವಿ

ಮೈಸೂರು: ಅರಸೀಕೆರೆಯ ಕಲ್ಲುಸದರ ಹಳ್ಳಿ ಬಳಿ ಕರೆಂಟ್ ತಗುಲಿ ಮೂರು ಕರಡಿಗಳು ಮೃತಪಟ್ಟಿರುವುದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯಕಾರಣ‌ ಎಂದು ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಆನೆ ಮೃತಪಟ್ಟಿತ್ತು, ಈ ಘಟನೆ ಮಾಸುವ ಮುನ್ನವೇ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಇದೇ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಲ್ಲುಸದರ ಹಳ್ಳಿಯ ಅರಣ್ಯ ಅಂಚಿನಲ್ಲಿ ಇಂದು ಬೆಳಿಗ್ಗೆ ವಿದ್ಯುತ್ ತಂತಿ ತಗುಲಿ ಮೂರು ಕರಡಿಗಳು ಸಾವನ್ನಪ್ಪಿವೆ.ವಿಷಯ ತಿಳಿದು ತೀವ್ರ ಬೇಸರ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಕರಡಿಗಳ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಹೊಣೆ,ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಂಚಿನ ಪ್ರದೇಶಗಳಲ್ಲಿ ಗಸ್ತು ತಿರುಗಿ ವಿದ್ಯುತ್ ತಂತಿ ಅಥವಾ ಕಂದಕ ಇದ್ದಲ್ಲಿ ಸಂಬಂಧ ಪಟ್ಟವರಿಗೆ ತಿಳಿಸಿ ಸರಿಪಡಿಸಬೇಕು ಎಂದು ತೇಜಸ್ವಿ ಒತ್ತಾಯಿಸಿದ್ದಾರೆ.

ಮೂರು ಕರಡಿಗಳ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವ್ದಾರಿ ಕಾರಣ,ಕೂಡಲೇ‌ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಕರಡಿಗಳ‌ ಸಾವಿಗೆ‌ ಅರಣ್ಯ ಇಲಾಖೆಯವರ ನಿರ್ಲಕ್ಷ್ಯಕಾರಣ‌:ತೇಜಸ್ವಿ Read More