ಮನೆಯ ಮುಂಬಾಗಿಲು ಮುರಿದು ೧ ಕೋಟಿ ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು,ನವೆಂಬರ್.೧: ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು ೧ ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ದಟ್ಟಗಳ್ಳಿ ೩ನೇ ಹಂತ, ಕನಕದಾಸನಗರ ’ಜೆ’ಬ್ಲಾಕ್‌ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಅ.೨೦ ರಂದು ವಿನಯ್ ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕಮಗಳೂರಿಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು.

ಅವರು ಅ.೨೧ ರಂದು ಮಧ್ಯಾಹ್ನ ೩ ಗಂಟೆಗೆ ಹಿಂತಿರುಗಿದ್ದಾರೆ.ಆಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ನೋಡಿ ವಿನಯ್ ಆತಂಕಗೊಂಡಿದ್ದಾರೆ.

ಮನೆಯೊಳಗೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ವಾರ್ಡ್ ರೋ ಬ್‌ನಲ್ಲಿ ಇಟ್ಟಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದನ್ನು ಗೊತ್ತಾಗಿದೆ.

ಕಳ್ಳರು ಸುಮಾರು ೭೦೦ ಗ್ರಾಂ ತೂಕದ ಚಿನ್ನದ ಆಭರಣಗಳು, ನಾಲ್ಕು ಸರಗಳು, ಮೂರು ಆಭರಣ ಸೆಟ್‌ಗಳು, ಐದು ಬಳೆಗಳು, ಎಂಟು ಕಿವಿಯ ವಾಲೆಗಳು, ೧೦ ಉಂಗುರಗಳು ಮತ್ತು ೩ ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ತಕ್ಷಣ, ವಿನಯ್ ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಬಂದು ಮಹಜರು ನಡೆಸಿದರು.

ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಯ ಮುಂಬಾಗಿಲು ಮುರಿದು ೧ ಕೋಟಿ ಚಿನ್ನಾಭರಣ ದೋಚಿದ ಕಳ್ಳರು Read More

ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು

ಮೈಸೂರು: ವಿವಾಹವಾಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಲ್ಲಾಟವಾಡಿ,ಕೊನೆಗೆ ಆಕೆಯನ್ನ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪ್ರಿಯಕರ ಆಲ್ಬರ್ಟ್, ಈತನ ತಮ್ಮ ಗೋಕುಲ್ ಹಾಗೂ ಪತ್ನಿ ಸುಭಿತ ಮೇಲೆ ಯುವತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಹಾಗೂ ಆಲ್ಬರ್ಟ್ ಬೆಂಗಳೂರಿನ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಒಂದು ವರ್ಷದ ಹಿಂದೆ ಆಲ್ಬರ್ಟ್ ಮೈಸೂರಿನಲ್ಲಿ ನೆಲೆಸಿದ್ದು ಖಾಸಗಿ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದೆ ಪ್ರೇಯಸಿಯನ್ನೂ ಸಹ ಮೈಸೂರಿಗೆ ಕರೆಸಿಕೊಂಡು ವಿಜಯನಗರದಲ್ಲಿ ಮನೆ ಮಾಡಿ ಇರಿಸಿದ್ದ.

ವಿವಾಹಿತನಾಗಿದ್ದ ಆಲ್ಬರ್ಟ್ ನನ್ನ ಹಾಗೂ ಪತ್ನಿ ನಡುವೆ ವೈವಾಹಿಕ ಜೀವನ ಸರಿ ಇಲ್ಲ, ಡೈವೋರ್ಸ್ ಕೊಡುತ್ತಿದ್ದೇನೆ ನಂತರ ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ್ದ.

ಕಳೆದ ನಾಲ್ಕಾರು ದಿನಗಳಿಂದ ಆಲ್ಬರ್ಟ್ ಮನೆಗೆ ಬಂದಿರಲಿಲ್ಲ.ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಕಾರ್ ಶೋರೂಂ ಗೆ ಹೋಗಿ ಪರಿಶೀಲಿಸಿದಾಗ ಅಲ್ಲೂ ಬಂದಿರಲಿಲ್ಲ.

ತಕ್ಷಣ ದಟ್ಟಗಳ್ಳಿಯಲ್ಲಿದ್ದ ಆಲ್ಬರ್ಟ್ ಮನೆಗೆ ಯುವತಿ ಹೋದಾಗ ಆತನ ಪತ್ನಿ ಸುಭಿತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನಂತರ ಆಲ್ಬರ್ಟ್ ತಮ್ಮ ಗೋಕುಲ್ ಕೂಡಾ ಯುವತಿಯನ್ನ ನಿಂದಿಸಿದ್ದಾರೆ.ಈ‌ ವೇಳೆ ಆಲ್ಬರ್ಟ್ ಬಂದು ಮಹಡಿಯಿಂದ ಕೆಳಗೆ ತಳ್ಳುವಂತೆ ಗೋಕುಲ್ ಗೆ ಸೂಚಿಸಿದ್ದಾನೆ.ನಂತರ ಆತನೂ ಎರಡನೇ ಮಹಡಿಗೆ ಹೋಗಿ ತಮ್ಮನೊಂದಿಗೆ ಸೇರಿ ಯುವತಿಯನ್ನ ಕೆಳಗೆ ತಳ್ಳಿದ್ದಾರೆ.

ಇದರಿಂದಾಗಿ ಯುವತಿ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಮಾಡಲೆಂದೇ ಮಹಡಿಯಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಆಲ್ಬರ್ಟ್ ಸೇರಿದಂತೆ ಮೂವರ ವಿರುದ್ದ ದೂರು ದಾಖಲಿಸಿದ್ದಾರೆ.

ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು Read More

ಡ್ಯುರೋ ಗಾರ್ಡ್ ನೂತನ ಶಾಖೆ ಉದ್ಘಾಟನೆ

ಮೈಸೂರು: ಮೈಸೂರಿನ ದಟಗಳ್ಳಿಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಡ್ಯುರೋ ಗಾರ್ಡ್ ನೂತನ ಶೋರೂಮ್ ಅನ್ನು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ನಜರ್ ಬಾದ್ ನಟರಾಜ್, ಮಾಲೀಕರು ಹಾಗೂ ಪ್ರೊಪರೈಟರ್ ಶಿವಕುಮಾರ್ ಎಂ ಕೆ ನೂತನವಾಗಿ ಪ್ರಾರಂಭಿಸಿರುವ ಡ್ಯುರೋ ಗಾರ್ಡ್ ಶಾಖೆಯು ಭಾರತದಲ್ಲಿ ಗ್ರಾಹಕರ ಅತ್ಯಂತ ನಂಬಿಕೆ ಉಳ್ಳ ಸ್ಟೀಲ್ ಡೋರ್ ಹಾಗೂ ಮನೆ ಕಟ್ಟಡಗಳಿಗೆ ಬೇಕಾದ ಎಲ್ಲಾ ರೀತಿಯ ಹಾರ್ಡ್ವೇರ್ ಸಾಮಗ್ರಿಗಳು ಸಿಗುವ ಒಂದು ಗುಣಮಟ್ಟ ಶಾಖೆಯಾಗಿದ್ದು ಯಶಸ್ವಿಯಾಗಿ ಶಾಖೆಯು ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ 47ನೇ ವಾರ್ಡ್ ರಾಮಪ್ಪ ರಮೇಶ್, ಮಾಜಿ ಕಾರ್ಪೊರೇಟರ್ ರಮೇಶ್, 23ನೇ ವಾರ್ಡ್ ಕಾಂಗ್ರೆಸ್ ಮುಖಂಡ ರವಿಚಂದ್ರ, ಮರಟಿಕ್ಯಾತನಹಳ್ಳಿ ಮಂಜುನಾಥ್ ಹಾಗೂ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಡ್ಯುರೋ ಗಾರ್ಡ್ ನೂತನ ಶಾಖೆ ಉದ್ಘಾಟನೆ Read More

ಬಿಇಎಂಎಲ್ ಮ್ಯಾನೇಜರ್ ಆತ್ಮಹತ್ಯೆ

ಮೈಸೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಇಎಂಎಲ್ ಮ್ಯಾನೇಜರ್ ಮೋಹನ್ (54) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.

ಮೈಸೂರಿನ ಬೋಗಾದಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿದ್ದ ಮೋಹನ್ ಪ್ರತಿದಿನದಂತೆ ಭಾನುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು.

ಅದೇನಾಯಿತೊ ತಿಳಿಯದು ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದ ವಾಚ್‌ಮ್ಯಾನ್ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುವೆಂಪುನಗರ ಪೋಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಿಇಎಂಎಲ್ ಮ್ಯಾನೇಜರ್ ಆತ್ಮಹತ್ಯೆ Read More