ಶ್ರೀ ದೊಡ್ಡಮ್ಮ ತಾಯಿ ಪೂಜಾ ಮಹೋತ್ಸವ;ಗಣಪತಿ ಶ್ರೀಗಳಿಗೆ ಆಹ್ವಾನ

ಮೈಸೂರು: ಮೈಸೂರಿನ ದತ್ತ ನಗರದಲ್ಲಿರುವ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದ ೨೬ನೇ ವರ್ಷದ ಪೂಜಾ ಮಹೋತ್ಸವ ನ. ೨೯/೩೦ ಅದ್ದೂರಿಯಾಗಿ ಜರುಗಲಿದೆ.

ಮಹೋತ್ಸವದ ಪ್ರಯುಕ್ತ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ದೇವಾಲಯದ ವತಿಯಿಂದ ಆಹ್ವಾನಿಸಲಾಯಿತು.

ಗಣಪತಿ ಶ್ರೀಗಳಿಗೆ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ವಿಜಯ್ ಕುಮಾರ್ ಅವರು ಆಹ್ವಾನ ಪತ್ರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಂಸಾಳೆ ರವಿ, ಇನ್ನಿತರರು ಹಾಜರಿದ್ದರು.

ಶ್ರೀ ದೊಡ್ಡಮ್ಮ ತಾಯಿ ಪೂಜಾ ಮಹೋತ್ಸವ;ಗಣಪತಿ ಶ್ರೀಗಳಿಗೆ ಆಹ್ವಾನ Read More