ಆನೆಗಳ ಎ ಐ ವಿಡಿಯೋಸ್ ಮೂಲಕಜನ ಮನ ವಿಚಲಿತಗೊಳಿಸದಿರಿ

ಮೈಸೂರು: ದಸರಾ ಆನೆಗಳ ಎ ಐ ವಿಡಿಯೋಸ್ ಗಳನ್ನು ಕ್ರಿಯೇಟ್ ಮಾಡಿ ಆನೆಗಳು ಓಡಾಡಿದೆ ಎಂದು ಜನರನ್ನು ವಿಚಲಿತಗೊಳಿಸುವ ಪ್ರಯತ್ನಗಳು ಕಂಡುಬಂದಿರುತ್ತಿದ್ದು,ಯಾರೂ ಹೀಗೆ ಮಾಡಬಾರದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

ದಸರಾ ಮಹೋತ್ಸವವು ಮೈಸೂರಿಗೆ ಒಂದು ಹೆಮ್ಮೆಯ ವಿಷಯವಾಗಿದ್ದು ಈ ಸಂದರ್ಭದಲ್ಲಿ ಜನರನ್ನು ವಿಚಲಿತಗೊಳಿಸಲು ಈ ರೀತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಆನೆಗಳು ಅನುಭವಿ ಆನೆಗಳಾಗಿದ್ದು ಯಾವುದೇ ಘಟನೆಗಳು ನಡೆಯುವುದಕ್ಕೆ ಅವಕಾಶ ಇರುವುದಿಲ್ಲ ಆದ್ದರಿಂದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಜನರ ಸುರಕ್ಷತೆಗಾಗಿ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ನಾಡಹಬ್ಬ ದಸರಾ ಮಹೋತ್ಸವಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಡೆಸಿಕೊಡುವುದು ಕೇವಲ ಅರಣ್ಯ ಇಲಾಖೆ ಅಲ್ಲದೆ ಎಲ್ಲರ ಸಹಕಾರ ಅಷ್ಟೇ ಮುಖ್ಯವಾಗಿರುತ್ತದೆ, ಜವಾಬ್ದಾರಿಯುತವಾಗಿ ನಾವೆಲ್ಲರೂ ನಾಡ ಹಬ್ಬ ದಸರಾ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದು
ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.

ಆನೆಗಳ ಎ ಐ ವಿಡಿಯೋಸ್ ಮೂಲಕಜನ ಮನ ವಿಚಲಿತಗೊಳಿಸದಿರಿ Read More