ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ!

ಮೈಸೂರು: ವಿಶ್ವ ವಿಖ್ಯಾತ ದಸರಾ‌ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳಿಗೆ ಭಾವುಕ ಬೀಳ್ಕೊಡುಗೆ ನೀಡಲಾಯಿತು.

ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆನೆಗಳಿಗೆ ಪೂಜೆ ಮಾಡಿ ನಂತರ ಬೀಳ್ಕೊಡಲಾಯಿತು.

ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ, ಶ್ರೀಕಂಠ,ಸುಗ್ರೀವ,ಏಕಲವ್ಯ, ಮಹೇಂದ್ರ, ಗೋಪಿ,ಕಂಜನ್,ಹೇಮಾವತಿ,ರೂಪ,ಕಾವೇರಿ,ಲಕ್ಷ್ಮಿ ಆನೆಗಳಿಗೆ ಅರಣ್ಯ ಇಲಾಖೆ‌ ಅಧಿಕಾರಿಗಳು ಪೂಜೆ ಸಲ್ಲಿಸಿದರು.

ದಸರಾ ಜಂಬೂಸವಾರಿ ಯಶಸ್ವಿ ಗೊಳಿಸಿ ಮರಳಿ ತನ್ನ ಶಿಬಿರಗಳಿಗೆ ತೆರಳಿದ
ಅಭಿಮನ್ಯು ನೇತೃತ್ವದ 14 ಆನೆಗಳನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಎಲ್ಲ ಆನೆಗಳನ್ನು ಖುಷಿಯಿಂದ ಕಣ್ ತುಂಬಿಕೊಂಡ‌ ಜನರು ಮೋಬೈಲ್ ಗಳಲ್ಲಿ ಫೋಟೊ ಕ್ಲಿಕ್ಕಿಸುವುದರಲ್ಲಿ ಮಗ್ನರಾದರು.

ಎಲ್ಲೆಲ್ಲೂ ಭೀಮಾ,ಅಭಿಮನ್ಯು ಎಂದು ಅಭಿಮಾನಿಗಳು ಕೂಗುತ್ತಿದ್ದರು,ಆಗ ಅಸನೆಗಳು ತಮ್ಮ ಸೊಂಡಿಲು ಎತ್ತಿ ನಮಸ್ಕರಿಸಿದವು.ಒಂದು ಕ್ಷಣ‌ ಎಲ್ಲರೂ ಭಾವುಕರಾದರು.

ಒಂದೂವರೆ ತಿಂಗಳಿನಿಂದ ಮೈಸೂರಿನಲ್ಲಿದ್ದ ಆನೆಗಳು ಲಾರಿಗಳ ಮೂಲಕ ತಮ್ಮ,ತಮ್ಮ ಶಿಬಿರಗಳಿಗೆ ತೆರಳಿದವು.

ಆನೆಗಳೊಂದಿಗೆ ಆಗಮಿಸಿದ್ದ ಮಾವುತ ಮತ್ತು ಕವಾಡಿಗಳ ಕುಟುಂಬಸ್ಥರು ವಾಪಸು ಊರಿಗೆ ಹೊರಟರು.ಎಲ್ಲರಿಗೂ ಟಾಟಾ ಮಾಡಿ ಹೊರಟರು.

ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ! Read More

ಜಂಬೂಸವಾರಿ ಯಶಸ್ವಿ:ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ಲಾಘನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೊಲೀಸರಿಗೆ ಬಹಳಷ್ಟು ಮಂದಿ ಹ್ಯಟ್ಸಪ್ ಹೇಳಿದ್ದಾರೆ.

ಚೆನ್ನೈನ ಕರೂರಿನಲ್ಲಿ ನಟ,ರಾಜಕಾರಣಿ ವಿಜಯ್ ಚುನಾವಣಾ ಮೆರವಣಿಗೆ ವೇಳೆ ಸುಮಾರು ಲಕ್ಷ ಜನ ಸೇರಿದ್ದಕ್ಕೇನೆ ನೂಕು ನುಗ್ಗಲು,ಕಾಳ್ತುಳಿತವಾಗಿ 40 ಜನ ಮೃತಪಟ್ಟಿದ್ದಾರೆ.ಆದರೆ ವಿಶ್ವ ವಿಖ್ಯಾತ ಮೈಸೂರು ದಸರಾ ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿಯನ್ನು ನೋಡಲು ಲಕ್ಷಾಂತರಕ್ಕೂ ಹೆಚ್ಚು ಜನ ಸೇರಿದ್ದರೂ‌ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೋಲೀಸರು ಶ್ಲಾಘನೀಯರು ಎಂದು ನಗರದ ಜನತೆ ಮತ್ತು EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಮೈಸೂರು ಪದಾಧಿಕಾರಿಗಳು ತಿಳಿಸಿದ್ದಾರೆ.

EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ವಾಮಿಶೆಟ್ಟಿ ಮತ್ತು ಪ್ರಧಾನ ಕಾರ್ಯ ದರ್ಶಿ ಮೋಹನ ಕೃಷ್ಣ ಅವರು
ದಸರಾ ಜಂಬುಸವಾರಿ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಲು ಶ್ರಮಿಸಿದ
ಸರ್ಕಾರ,ಮೈಸೂರು ಪೊಲೀಸರು,ನಗರ
ಆಯುಕ್ತರಾದ ಸೀಮಾಲಾಟ್ಕರ್ ಹಾಗೂ ಪೋಲಿಸ್ ಸೂಪರಿಟೆಂಡೆಂಟ್, ಇನ್ಸ್ಪೆಕ್ಟರ್‌ ಮತ್ತು ಶ್ರಮ ವಹಿಸಿದ ಎಲ್ಲ ಪೋಲಿಸರು, ಪೋಲಿಸ್ ಇಲಾಖೆಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು
ತಿಳಿಸಿದ್ದಾರೆ.

ಜಂಬೂಸವಾರಿ ಯಶಸ್ವಿ:ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ಲಾಘನೆ Read More

ವಿಶ್ವ ‌ವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ

ಮೈಸೂರು,ಅ.1: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

ಈ ಬಾರಿ 11ನೇ ದಿನ ವಿಜಯದಶಮಿ ಮೆರವಣಿಗೆ ನಡೆಯುತ್ತಿದೆ.

ಗುರುವಾರ ಮಧ್ಯಾಹ್ನ 1ರಿಂದ 1.18ರ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿದ್ವಜ ಪೂಜೆ ನೆರವೇರಿಸಲಿದ್ದಾರೆ.

ಮೆರವಣಿಗೆ ಸಾಗಿದ ನಂತರ ಸಂಜೆ 4.42 ರಿಂದ 5.06 ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ‌ ಬರುವ ಆನೆ ಅಭಿಮನ್ಯುವಿಗೆ ಸಿಎಂ ಸಿದ್ದರಾಮಯ್ಯನವರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧ ಚಿತ್ರಗಳು ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಸಾಗಿ ಬರಲಿವೆ.

ಮೊದಲು ಮೆರವಣಿಗೆಯಲ್ಲಿ ನಂದಿದ್ವಜ ಸಾಗಿದ ನಂತರ ನಿಶಾನೆ, ನೋಪತ್ ಆನೆಗಳು ಸಾಗಿ ಬರಲಿವೆ. ಇದರೊಂದಿಗೆ ಪೊಲೀಸ್ ಪಡೆ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಮಂಗಳ ವಾದ್ಯದೊಂದಿಗೆ ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಲಿದೆ.

ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆ ಆವರಣದಲ್ಲಿ 45,000 ಆಸನ ವ್ಯವಸ್ಥೆ ಮಾಡಲಾಗಿದೆ, ಗೋಲ್ಡ್ ಕಾರ್ಡ್ ಟಿಕೆಟ್ ಪಡೆದವರು ಹಾಗೂ ಫಾಸ್ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.ಭಾರೀ ಭದ್ರತಾ‌ ವ್ಯವಸ್ಥೆ ಮಾಡಿದ್ದಾರೆ.

ಈ ಬಾರಿ ಜಂಬುಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಹಳೆಯ ಹಾಗೂ ಶಿಥಿಲವಾದ ಕಟ್ಟಡಗಳು, ಮರಗಳ ಮೇಲೆ ಸಾರ್ವಜನಿಕರು ಏರಿ ವಿಜಯದಶಮಿ ಮೆರವಣಿಗೆ ವೀಕ್ಷಿಸುವುದನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

6384 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 35 ಕಡೆ ಕೆ ಎಸ್ ಆರ್ ಪಿ ತುಕುಡಿಗಳು 15 ಸಿ ಎ ಆರ್ ಮತ್ತು ಡಿ ಆರ್ ತುಕಡಿಗಳು, 29 ಎ ಎಸ್ ಸಿ ಒಂದು ಗರುಡ ಫೋರ್ಸ್ ಹಾಗೂ 1500 ಹೋಂ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇವರೊಂದಿಗೆ 35 ಡಿವೈಎಸ್ಪಿ 140 ಇನ್ಸ್ಪೆಕ್ಟರ್ ಗಳು ಸಹ ಭದ್ರತಾ ಕಾರ್ಯ ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ 220 ಸಿಸಿಟಿವಿ ಕ್ಯಾಮೆರಾಗಳನ್ನು ಜಂಬುಸವಾರಿ ಮಾರ್ಗದಾದ್ಯಂತ ಅಳವಡಿಸಲಾಗಿದೆ.

ವಿಶ್ವ ‌ವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ Read More

ಪೊಲೀಸ್ ಬ್ಯಾಂಡ್ ಗೆ ತಲೆ ದೂಗಿದ ಜನತೆ

ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಮಾಸ್ ಬ್ಯಾಂಡ್ ಹಲವಾರು ಬಗೆಯ ನಾದದ ಮೂಲಕ ಜನ ಮೈಮರೆತು ಆಲಿಸುವಂತೆ ಮಾಡಿತು.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಶುಕ್ರವಾರ ರಾಜ್ಯದ 30 ಜಿಲ್ಲೆಯಿಂದ 379 ಪೊಲೀಸರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂಗೀತ ನೀಡಿ ನೆರೆದಿದ್ದ ಪ್ರೇಕ್ಷಕರು ಮನಸೂರೆಗೊಂಡರು.

ಗೋಪಿನಾಥ್ ಅವರ ಮುಂದಾಳತ್ವದಲ್ಲಿ ಭಾರತ್ ಕೆ ಜವಾನ್, ವಿಜಯಭಾರತಿ ಮತ್ತು ಜಲಪಕ್ಷಿ ಸಂಗೀತವನ್ನು ಎಲ್ಲಾ ಪೊಲೀಸ್ ಬ್ಯಾಂಡ್ ತಂಡದವರು ನುಡಿಸಿದರು.

ಡಿಸಿಜಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಸ್ಟಿಕ್ ಮೇಜರ್ ಶೋ ಕ್ವಿನ್ ಕಲರ್ಸ್ ಮೂಲಕ ಪ್ರೇಕ್ಷಕರಿಗೆ ಮುದ ನೀಡಿದರು. ಇಂಗ್ಲೀಷ್ ಬ್ಯಾಂಡ್ ತಂಡದವರು ದೇಶಭಕ್ತಿ ಗೀತೆಗಳಾದ ಕದಂ ಕದಂ, ಒಂದೇ ಮಾತರಂ ಗೀತೆಗಳನ್ನು ನುಡಿಸಿದರು.

ಕುಮಾರ್ ರೆಡ್ಡಿ ಹಾಗೂ ಶ್ರೀಧರ್ ನೇತೃತ್ವದಲ್ಲಿ ಇಂಡಿಯಾ ಗೆಟ್ , ಪೈಪರ್ ರೈಫಲ್ಸ್, ಸ್ಕೈ ಬೋಟ್, ಸಾರೆ ಜಹಾಂಚೆ ಅಚ್ಚ ಸಂಗೀತ ಸುಧೆ ಹರಿಸಿದರು.

ಕರ್ನಾಟಿಕ್ ಹಾಗೂ ಇಂಗ್ಲಿಷ್ ಬ್ಯಾಂಡ್ ವಾದ್ಯ ವೃಂದ ತಂಡದಿಂದ ದುರ್ಗಾದೇವಿ ದುರಿತನಿವಾರಿಣಿ ಸಂಗೀತವನ್ನು ನವರಸ ಕನ್ನಡ ರಂಗದಲ್ಲಿ ನುಡಿಸಿದರು. ಲಯನಾದಮೃತವನ್ನು ಅಮೃತವರ್ಷಿಣಿ ರಾಗದಲ್ಲಿ ಹಾಗೂ ಶ್ರೀ ದುರ್ಗಾ ದೇವಕಾರ್ಯ ರಾಗದಲ್ಲಿ ನುಡಿಸಿ ಪ್ರೇಕ್ಷಕರಿಗೆ ಮುದ ನೀಡಿದರು.

ಬಾಲಿವುಡ್ ಮೆಲೋಡಿಯಲ್ಲಿ A.R ರೆಹಮಾನ್ ಕಂಪೋಸ್ ಮಾಡಿರುವ ಹಲವಾರು ಗೀತೆಗಳನ್ನು ಟೋನಿ ಮ್ಯಾಥ್ಯೂ ನೇತೃತ್ವದಲ್ಲಿ ಕೊಳಲು ಹಾಗೂ ಗಿಟಾರ್ ಮೂಲಕ ನುಡಿಸಿದರು. ಬ್ರಹ್ಮೋಸ್ ತಂಡದಿಂದ ಡ್ರಮ್ ವಾದನವನ್ನು ಚಂದ್ರು ಹಾಗೂ ಶಿವಕುಮಾರ್ ನೇತೃತ್ವದಲ್ಲಿ ಸಮೂಹವಾಗಿ ಎಲ್ಲಾ ತಂಡದವರು ನುಡಿಸಿ ಮೆಚ್ಚುಗೆ ಗಳಿಸಿದರು.

ನಂತರ ಎಲ್ಲಾ ತಂಡದವರು ಸಮ್ಮಾನ ಗಾರ್ಡ್ ಸ್ಲೋ ಮಾರ್ಚ್ ನಡೆಸಿದರು. ಬಳಿಕ ವಿಜೇತ ತಂಡಗಳಿಗೆ ಸಚಿವರುಗಳು ಬಹುಮಾನ ವಿತರಿಸಿದರು.

ಇದಕ್ಕೂ ಮುನ್ನ ಖ್ಯಾತ ಜಾನಪದ ಕಲಾವಿದ ಮಳವಳ್ಳಿ ಮಹಾದೇವಯ್ಯ ಅವರು ಮಹದೇಶ್ವರ ಕುರಿತ ಹಲವು ಜನಪದ ಗೀತೆಗಳನ್ನು ಹಾಡಿದರು.

ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ. ಟಿ. ದೇವೇಗೌಡ, ಶ್ರೀವತ್ಸ, ವಿಧಾನ ಪರಿಷತ್ ನ ಸದಸ್ಯ ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮತ್ತಿತರರು ಹಾಜರಿದ್ದರು.

ಪೊಲೀಸ್ ಬ್ಯಾಂಡ್ ಗೆ ತಲೆ ದೂಗಿದ ಜನತೆ Read More

ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳಬೇಕೆಂದು ಪ್ರಾಯೋಜಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಕರೆ ನೀಡಿದರು.

ನಗರದ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಬುಧವಾರ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತಿದ್ದು, ತಮ್ಮ ಉತ್ಪನ್ನಗಳು, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಲಿದ್ದು,ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ ಎಂದು ಹೇಳಿದರು.

ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ತಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ, ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ ಎಂದು ಮಹದೇವಪ್ಪ ಕರೆ ನೀಡಿದರು.

ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಮಾಡಲಾಗುತ್ತಿದೆ. ಅಂದು ಬೀದರ್‌ನಿಂದ
ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಈ ಮಾನವ ಸರಪಳಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಎಂದು ಸಚಿವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ತಾವು ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ತಿಳಿಸಬಹುದಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತ ಮಾತನಾಡಿ,ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್,ಜಿಪಂ ಸಿಇಒ ಗಾಯತ್ರಿ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ Read More