ನಂಜನಗೂಡಿನಲ್ಲೂ ಗೋವಿನ ಮೇಲೆ ಹಲ್ಲೆ

ಮೈಸೂರು: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ ಹಸಿರಾಗಿರುವಾಗಲೇ ಹಸುವಿನ ಮೇಲೆ ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಈ ಅಮಾನವೀಯ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಾಲಯ ಬಳಿ ನಡೆದಿದ್ದು,ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

ನಂಜನಗೂಡಿನ‌ ನಂಜುಡೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ಹಸುಗಳನ್ನ ಧಾನವಾಗಿ ಭಕ್ತರು ನೀಡುತ್ತಾರೆ.

ಅಂತಹ ಹಸುಗಳನ್ನು ಕಳ್ಳತನ ಮಾಡಲು ಯತ್ನಿಸಿರುವ ಗೋ ಕಳ್ಳರು ಈ ಸಂದರ್ಭದಲ್ಲಿ ಹಸುವಿನ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಅದರ ಬಾಲಕ್ಕೆ ತೀವ್ರ ಸ್ವರೂಪದ ಗಾಯ ಮಾಡಿದ್ದಾರೆ.ಇದರಿಂದ ಪಟ್ಟಣದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಹಸುವಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಹಸುವಿನ ಮೇಲೆ ದಾಳಿ ಮಾಡಿರುವ ಸಂಬಂಧ ನಂಜನಗೂಡು ಟೌನ್ ಪೊಲೀಸರು ದಾಖಲಿಸಿದ್ದಾರೆ.

ಡಿವೈಎಸ್ಪಿ ರಘು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂಜನಗೂಡಿನಲ್ಲೂ ಗೋವಿನ ಮೇಲೆ ಹಲ್ಲೆ Read More

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕುಯ್ದ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆ ಮೂಲದವನಾದ ಶೇಕ್ ನಸ್ರು ಎಂಬಾತನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಘಟನೆ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಸಹಾಯಕನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ, ಕಾಟನ್ ​ಪೇಟೆ ಪೊಲೀಸರು ಭಾನುವಾರ ರಾತ್ರಿ ಈತನನ್ನು ಬಂಧಿಸಿದ್ದಾರೆ.

ಈ ಕೃತ್ಯದಲ್ಲಿ ಬೇರೆ ಯಾರೂ ಭಾಗಿಯಾಗಿರುವುದು ಕಂಡುಬಂದಿಲ್ಲ, ಚಿಕಿತ್ಸೆ ಬಳಿಕ ಹಸುಗಳು ಅಪಾಯದಿಂದ ಪಾರಾಗಿವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿ ಬಂಧನ Read More