ಸಿ.ಟಿ ರವಿ ಅವರನ್ನ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು.

ಶುಕ್ರವಾರ 5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು.

ಕಲಂ 481 ಅಡಿ ವಕೀಲರು ಬೇಲ್‌ಗೆ ಅರ್ಜಿ ಸಲ್ಲಿಸಿದರು. ಕೋರ್ಟ್‌ಹಾಲ್‌ನಲ್ಲಿ ಸಿ.ಟಿ ರವಿ ಕಣ್ಣೀರು ಹಾಕಿದರು. ಈ‌ ವೇಳೆ ಅವರಿಗೆ ಆರ್‌. ಅಶೋಕ್‌, ಅಭಯ್‌ ಪಾಟೀಲ್‌ ಸಾಂತ್ವನ ಹೇಳಿದರು.

ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಮ್.ಬಿ ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು.

ಅದಕ್ಕೆ ನ್ಯಾಯಾಧೀಶರು ಎಲ್ಲಿ ಅರೆಸ್ಟ್ ಆಯ್ತು, ಎಷ್ಟು ಗಂಟೆಗೆ ಆಯ್ತು, ಎಲ್ಲೆಲ್ಲಿಗೆ ಕರೆದುಕೊಂಡಿ ಹೋಗಿದ್ದರು ಏನು ಮಾಡಿದರು, ತೊಂದರೆ ಕೊಟ್ರಾ ಎಂದೆಲ್ಲಾ ಪ್ರಶ್ನಿಸಿದರು.

ಕಟಕಟೆಯಲ್ಲಿ ನಿಂತು ಉತ್ತರಿಸಿದ ಸಿ.ಟಿ ರವಿ,ಗದಗ, ಧಾರವಾಡ, ಸವದತ್ತಿ, ರಾಮದುರ್ಗದಲ್ಲಿ ನನ್ನ ಸುತ್ತಾಡಿಸಿದರು. ಖಾನಾಪುರ ಪೊಲೀಸರು ನನ್ನನ್ನ ಹೊಡೆದರು, ಕಬ್ಬಿನ ಗದ್ದೆಯಲ್ಲಿ ನಿಲ್ಲಿಸಿದ್ದರು. ಪೊಲೀಸರು ನನಗೆ ಮಾನಸಿಕ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ, ಮೊಬೈಲ್ ಜೊತೆಗೆ ವಾಚ್ ಕೂಡ ಕಿತ್ತುಕೊಂಡರು ಎಂದು ಆರೋಪಿಸಿದರು.

ಪ್ರತಿ 10 ನಿಮಿಷಕ್ಕೆ ಪೊಲೀಸರಿಗೆ ಯಾರೋ ಫೋನ್ ಮಾಡುತ್ತಿದ್ದರು,ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ, ಅನ್ನೋ ಮಾಹಿತಿ ಕೂಡ ಕೊಡಲಿಲ್ಲ, ನನ್ನ ಕುಟುಂಬಕ್ಕೂ ಕೂಡ ಮಾಹಿತಿ ನೀಡಲಿಲ್ಲ ಎಂದು ಭಾವುಕರಾದರು.

ನನ್ನ ಮೇಲೆ ಮೂರು ಬಾರಿ ಅಟ್ಯಾಕ್ ಆಯಿತು. ಝಿರೋ ಎಫ್‌ಐಆರ್ ಮಾಡಿ ಎಂದು ಕೇಳಿದೆ ಅದನ್ನು ಮಾಡಲಿಲ್ಲ. ಮಿನಿಸ್ಟರ್ ವಿರುದ್ಧ ಕೇಸ್ ಮಾಡದೇ ಇರುವುದು ಅಪರಾಧ. ಎರಡೂವರೆ ಗಂಟೆ ಯಾವ ನಾಯಕರನ್ನು ಒಳಗಡೆ ಬಿಟ್ಟಿಲ್ಲ. ಮಧ್ಯಾಹ್ನ ಕಾರಿಡಾರ್‌ನಲ್ಲಿ ನಿನ್ನ ಹೆಣವೂ ಚಿಕ್ಕಮಗಳೂರಿಗೆ ಹೋಗಲ್ಲ ಅಂತ ಮಂತ್ರಿಯೊಬ್ಬರು ಧಮ್ಕಿ ಹಾಕಿದರು. ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಡಿ.ಕೆ ಶಿವಕುಮಾರ್ ನಿನ್ನನ್ನ ನೋಡಿ ಕೊಳ್ಳುತ್ತೇನೆ ಅಂದ್ರು. ಇದೆಲ್ಲವನ್ನೂ ನೋಡಿ ನಾನು ರಾತ್ರಿಯಿಡಿ ಆತಂಕದಲ್ಲಿದ್ದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.

ಇದಕ್ಕೆ ದನಿಗೂಡಿಸಿದ ವಕೀಲ ಜಿರಲಿ, ನ್ಯಾಯಾಂಗದ ಸಮಯ ವ್ಯರ್ಥವಾಗುತ್ತದೆ ಅಲ್ಲದೇ ನನ್ನ ಕಕ್ಷಿದಾರರ ಮಾನಸಿಕ ಹಾಗು ದೈಹಿಕ ಆರೋಗ್ಯ ಹಾಳಾಗಬಹುದು. ಸ್ಪೀಕರ್ ಸಾವಿಂಧಾನಿಕ ಹೆಡ್ ಇರುತ್ತಾರೆ, ಸ್ಪೀಕರ್‌ಗೆ ಎಲ್ಲವೂ ಗೊತ್ತಿದೆ, ಅಲ್ಲಿ ಯಾವುದೇ ಡಿಸಿಶನ್ ಸ್ಪೀಕರ್ ತೆಗೆದುಕೊಂಡಿಲ್ಲ. ಮೊದಲು ನನ್ನ ಕಕ್ಷಿದಾರನಿಗೆ ಮೆಡಿಕಲ್ ಟ್ರೀಟ್‌ಮೆಂಟ್ ಬೇಕಾಗಿದೆ, ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

ಸಿ.ಟಿ ರವಿ ಅವರನ್ನ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು Read More

ಚಾಮುಂಡೇಶ್ವರಿ ದೇವಾಲಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ:ಕೋರ್ಟ್ ಆದೇಶ

ಬೆಂಗಳೂರು: ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಮಾಡುವುದಾಗಲೀ ಹಾಗೂ ಹಸ್ತಕ್ಷೇಪವಾಗಲೀ ಯಾರೂ ಮಾಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ನಾಡ‌ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದ ನಿರ್ವಹಣೆಗಾಗಿ ರೂಪಿಸಲಾಗಿರುವ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ ಸೆಕ್ಷನ್‌ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ನ್ಯಾಯಾಲಯದ ಈ ಆದೇಶದಿಂದ‌ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೈ ಮೇಲಾದಂತಾಗಿದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ದಿವಂಗತ ಶ್ರೀಕಂಠ ದತ್ತ ಒಡೆಯರ್‌ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೇಮಂತ್‌ ಚಂದನ್‌ಗೌಡರ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡಬಾರದು, ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ಸೂಚಿಸಿದೆ.

ಪ್ರಾಧಿಕಾರ ಕಾಯಿದೆ ಸೆಕ್ಷನ್‌ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು. ಅರ್ಜಿ ವಿಲೇವಾರಿ ಬಾಕಿ ಇರುವಾಗ ರಾಜ್ಯ ಸರ್ಕಾರ ನಿಯಮ ರೂಪಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರ ನೋಟಿಸ್‌ ನೀಡಬೇಕು. ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್, ಪ್ರಾಧಿಕಾರದ ಸೆಕ್ಷನ್‌ 17ರ ಅನ್ವಯ ಯಾವುದೇ ರೀತಿಯಲ್ಲೂ ಅರ್ಜಿದಾರರ ಹಕ್ಕುಗಳಿಗೆ ಅಡ್ಡಿ ಮಾಡುವುದಿಲ್ಲ. ಸೆಕ್ಷನ್‌ 16ರ ಅನ್ವಯ ಎಲ್ಲರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ನೋಟಿಸ್‌ ನೀಡಲಾಗುತ್ತದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರು (ಮುಖ್ಯಮಂತ್ರಿ) ನಿರ್ಣಯ ಕೈಗೊಂಡರೂ ಅದು ಸಚಿವ ಸಂಪುಟದ ತೀರ್ಮಾನಕ್ಕೆ ಒಳಪಡುತ್ತದೆ. ಪ್ರಾಧಿಕಾರ ಅಥವಾ ಸಿಎಂ ಸೆಕ್ಷನ್‌ 17ರ ಅನ್ವಯ ಯಾವುದೇ ಅಧಿಕಾರ ಚಲಾಯಿಸಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಸಮಸ್ಯೆಯಾದರೆ ಅವರು ಅರ್ಜಿ ಸಲ್ಲಿಸಬಹುದು ಎಂದು ಪೀಠಕ್ಕೆ ವಿವರಿಸಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ. ಅಲ್ಲಿ ಯಾವುದೇ ಅಭಿಪ್ರಾಯಭೇದವಿದ್ದರೆ ಅದು ಸಂಪುಟಕ್ಕೆ ಹೋಗುತ್ತದೆ. ಒಂದೊಮ್ಮೆ ಪ್ರಾಧಿಕಾರದ ಸದಸ್ಯರ ನಡುವೆ ಅಭಿಪ್ರಾಯ ಭೇದ ಉಂಟಾದರೆ ಅದನ್ನು ಮುಖ್ಯಮಂತ್ರಿ ನಿರ್ಧರಿಸಬಾರದು ಎಂಬುದಾಗಿ ನ್ಯಾಯಪೀಠ ಆದೇಶಿಸಬೇಕು. ಅದಕ್ಕೆ ನ್ಯಾಯಪೀಠ, ಮುಖ್ಯಮಂತ್ರಿಯವರು ಸಂಪುಟದ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಲಾಗುವುದು ಎಂದಿತು.

ಇದಕ್ಕೊಪ್ಪಿದ ಅರ್ಜಿದಾರರ ಪರ ವಕೀಲರು, ದೇವಸ್ಥಾನದ ರಚನೆ ಮತ್ತು ಬೆಟ್ಟಕ್ಕೆ ಯಾವುದೇ ಪ್ರಮುಖವಾದ ರಚನಾತ್ಮಕ ಬದಲಾವಣೆ ಮಾಡಬಾರದು. ಏಕೆಂದರೆ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದೆ. ನೀತಿಯ ಬದಲಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಬರಲು ನಮಗೆ ಅನುಮತಿಸಬೇಕು. ಹಣಕಾಸಿನ ಹೊಣೆಗಾರಿಕೆಯ ಬಗ್ಗೆ ನಿಗದಿತವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.

ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಧಿಕಾರವನ್ನು ವಿಸರ್ಜಿಸಬಾರದು. ಒಮ್ಮೆ ಪ್ರಾಧಿಕಾರ ವಿಸರ್ಜನೆಯಾದರೆ ನಮ್ಮ ಸ್ಥಾನ ಹೋಗುತ್ತದೆ. ಸೆಕ್ಷನ್‌ 16ರ ಅನ್ವಯ ಪ್ರಾಧಿಕಾರದ ಸದಸ್ಯರ ನಡುವೆ ಒಮ್ಮತ ಮೂಡದಿದ್ದರೆ ನ್ಯಾಯಾಲಯದ ಅನುಮತಿ ಇಲ್ಲದೇ ನಿರ್ಧಾರ ಕೈಗೊಳ್ಳುವಂತಿಲ್ಲ. ದೇವಸ್ಥಾನ ಮತ್ತು ಬೆಟ್ಟದ ಸ್ಥಿರ ಮತ್ತು ಚರಾಸ್ತಿಯನ್ನು ಬದಲಾಯಿಸಬಾರದು. ಸೆಕ್ಷನ್‌ 40ರ ಅನ್ವಯ ಸಂಪ್ರದಾಯ ಮತ್ತು ವಿಧಿ-ವಿಧಾನಗಳಿಗೆ ಬದಲಾವಣೆ ಮಾಡಬಾರದು. ದೇವಸ್ಥಾನದ ಖರ್ಚು-ವೆಚ್ಚದ ದಾಖಲೆ ಪರಿಶೀಲಿಸಲು ಪ್ರಾಧಿಕಾರದ ಕಾಯಂ ಸದಸ್ಯರಿಗೆ ಅನುಮತಿಸಬೇಕು ಎಂದು ಮನವಿ ಮಾಡಿದರು.ವಾದ, ಪ್ರತಿವಾದ ಆಲಿಸಿದ ಬಳಿಕ ಪೀಠ ಮುಂದಿನ ವಿಚಾರಣೆಯನ್ನು ನವೆಂಬರ್‌ 22ಕ್ಕೆ ಮುಂದೂಡಿತು.

ಚಾಮುಂಡೇಶ್ವರಿ ದೇವಾಲಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ:ಕೋರ್ಟ್ ಆದೇಶ Read More

ಪೋಕ್ಸೋ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ

ಬೆಳಗಾವಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೋಕ್ಸೊ ಪ್ರಕರಣದಲ್ಲಿ ಬೆಳಗಾವಿಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಏಳು ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಹಾರೂಗೇರಿಯ 3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದಿದ್ದ ಪ್ರಕರಣಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

21.9.2017 ರಂದು ಸುಧಾ ಅಪ್ಪಾಸಾಬ ಸನ್ನಕ್ಕಿನವರ ಎಂಬವರು ತನ್ನ 3 ವರ್ಷದ ಮಗಳ ಅಪಹರಣ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

21-09-2017 ರಂದು ಉದ್ದಪ್ಪ ರಾಮಪ್ಪ ಗಾಣಿಗೇರ (32) ಎಂಬಾತ ನಮ್ಮ ಮನೆಯ ಮುಂದೆ ಮಗಳನ್ನು ಅಪಹರಣ ಮಾಡಿದ್ದ ಎಂದು ದೂರು ನೀಡಿದ್ದರು.

ಹಾರೂಗೇರಿ ಪೊಲೀಸ್ ಠಾಣೆ‌ಯ
ಪಿಎಸ್‌ಐ ದೂರು ಸ್ವೀಕರಿಸಿಕೊಂಡು ತನಿಖೆ ಕೈಕೊಂಡಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಮೂರು ವರ್ಷದ ಮಗುವನ್ನು ಅಪಹರಿಸಿ ಕುರಬಗೋಡಿಯಲ್ಲಿರುವ ಭೀಮಪ್ಪ ನೇಮಣ್ಣ ನಾಗನೂರ ಅವರ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮುಖದಿಂದ ಸೊಂಟದವರೆಗೆ ಮಣ್ಣು ಮುಚ್ಚಿಬಿಟ್ಟಿದ್ದ.

ತನಿಖಾಧಿಕಾರಿಯಾದ ಸಿಪಿಐ ಸುರೇಶ. ಪಿ. ಶಿಂಗಿ ಉದ್ದಪ್ಪ ಅವರು ರಾಮಪ್ಪ ಗಾಣಿಗೇರ ವಿರುದ್ಧ 8.12.2017 ರಂದು ದೋಷಾರೋಪಣ ಪಟ್ಟಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಕೊಂಡು ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕ
ಎಲ್. ಬಿ. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಅಪರಾಧಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ
ನ್ಯಾಯಾಲಯವು ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪೋಕ್ಸೋ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ Read More

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದ್ದು,ಅವರಿಗೆ ಬಳ್ಳಾರಿ ಜೈಲೇ ಗತಿಯಾಗಿದೆ.

ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು, ಆದರೆ ಯಾವುದೇ ವಾದ ಮಂಡನೆ ಮಾಡದೆ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಯಿತು.

ದರ್ಶನ್ ಪರ ವಕೀಲರು
ವಾದ ಮಂಡನೆಗೆ ಕಾಲಾವಕಾಶ ಕೇಳಿದ ಕಾರಣ ಪ್ರಕರಣದ ವಿಚಾರಣೆಯನ್ನು ಸೆ. 30ಕ್ಕೆ ಮುಂದೂಡಲಾಗಿದೆ.

ಈ ಹಿಂದೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಈಗ ಆಕ್ಷೇಪಣೆ ಸಲ್ಲಿಸಿದ ಮೇಲೆ ತಾವೇ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಂಡಿದ್ದಾರೆ.

ಎಸ್​ಪಿಪಿ ಪ್ರಸನ್ನಕುಮಾರ್ ಅವರು ಮಾತನಾಡಿ, ನಾವು ಆಕ್ಷೇಪಣೆ ಸಲ್ಲಿಸಿಲ್ಲವೆಂದು ದರ್ಶನ್ ವಕೀಲರು ತಕರಾರು ತೆಗೆಯುತ್ತಿದ್ದರು, ಈಗ ಆಕ್ಷೇಪಣೆ ಸಲ್ಲಿಸಿದ್ದೇವೆ ವಾದ ಮಂಡನೆಗೆ ಸಿದ್ದ ಇದ್ದೇವೆ ಎಂದು ಹೇಳಿದರು.

ಪ್ರಕರಣ ಸಂಬಂಧ‌ ವಾದ ಮಂಡನೆಗೆ ಖುದ್ದು ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಬರಬೇಕಿದೆ ಅವರು ಬಂದಿಲ್ಲ ಹಾಗಾಗಿ ಇನ್ನಷ್ಟು ದಿನದ ಕಾಲಾವಕಾಶ ಕೊಡಬೇಕೆಂದು ಅವರ ಸಹಾಯಕ ವಕೀಲರು ಕೇಳಿದರು.

ಹಾಗಾಗಿ ಸೆ. 30ಕ್ಕೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ Read More

ಸಿಎಂ ವಿರುದ್ಧ ಎಫ್ ಐ ಆರ್ ದಾಖಲಿಸಲು ಕೋರ್ಟ್‌ ಆದೇಶ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯಯ್ಯ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

ಮುಡಾ‌ ಹಗರಣ ಸಂಬಂಧ‌ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

6 ವಾರಗಳಲ್ಲಿ ತನಿಖೆ ನಡೆಸಬೇಕೆಂದು ಮೈಸೂರು ಲೋಕಾಯುಕ್ತ ಎಸ್‌ಪಿಗೆ ಕೋರ್ಟ್‌ ಆದೇಶಿಸಿದ್ದು,ವಿಚಾರಣೆಯನ್ನು ಡಿಸೆಂಬರ್ 24 ಕ್ಕೆ ಮುಂದೂಡಿತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಸೆ.26 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ.

ಮೂರು ತಿಂಗಳೊಳಗೆ‌ ವಿಚಾರಣೆ ನಡೆಸಿ ವರದಿ ನೀಡುವಂತೆಯೂ ಲೋಕಾಯುಕ್ತಕ್ಕೆ ಕೋರ್ಟ್ ಸೂಚಿಸಿದೆ.

ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ ಉದೇಶ್ ಸಿಎಂ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆ.

ಸಿಎಂ ವಿರುದ್ಧ ಎಫ್ ಐ ಆರ್ ದಾಖಲಿಸಲು ಕೋರ್ಟ್‌ ಆದೇಶ Read More

ಚಾರ್ಜ್‌ಶೀಟ್‌ನಲ್ಲಿನ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ದರ್ಶನ್‌ ಮನವಿ

ಬೆಂಗಳೂರು: ಚಾರ್ಜ್‌ಶೀಟ್‌ನಲ್ಲಿ ಇರುವ ಗೌಪ್ಯ ಮಾಹಿತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೊಲೆ ಆರೋಪಿ ದರ್ಶನ್‌ ಹೈಕೋರ್ಟ್‌ ಗೆ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಸಾವಿರ ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ.

ಆ ದೋಷಾರೋಪ ಪಟ್ಟಿಯಲ್ಲಿರುವ ಗೌಪ್ಯ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ದರ್ಶನ್‌ ಪರ ವಕೀಲರು ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳು ಏನು ಮಾಡಿದ್ದಾರೆ,ದರ್ಶನ್‌ ರೇಣಕಾಸ್ವಾಮಿಗೆ ಯಾವ ರೀತಿ ಟಾರ್ಚರ್‌ ನೀಡಿದ್ದಾರೆ, ಪವಿತ್ರಾ ಗೌಡ ಹೇಳಿದ್ದೇನು, ರೇಣುಕಾಸ್ವಾಮಿ ಹತ್ಯೆಯಲ್ಲಿ ಯಾರ ಪಾತ್ರ ಏನಿದೆ ಎನ್ನುವುದರ ಸಂಪೂರ್ಣವಾದ ವಿವರ ಚಾರ್ಜ್‌ಶೀಟ್‌ನಲ್ಲಿದೆ.

ಚಾರ್ಜ್‌ಶೀಟ್‌ನಲ್ಲಿನ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ದರ್ಶನ್‌ ಮನವಿ Read More

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಮತ್ತು ಗ್ಯಾಂಗ್‌ಗೆ ಕೋರ್ಟ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ದರ್ಶನ್ ಅಂಡ್ ಗ್ಯಾಂಗ್ ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಮಧ್ಯಾಹ್ನ 1.15ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ 17 ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸಲಾಯಿತು.

ಬಳ್ಳಾರಿ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್‌ಗೆ ಆರೋಪಿ ದರ್ಶನ್ ಬಂದಿದ್ದರು.

ಪ್ರಕರಣದ ಹಾರ್ಡ್ ಡಿಸ್ಕ್, ಪೆನ್‌ಡ್ರೈವ್ ಎಲ್ಲವನ್ನೂ ಕೋರ್ಟ್‌ಗೆ ಎಸ್‌ಪಿಪಿ ಪ್ರಸನ್ನಕುಮಾರ್ ಸಲ್ಲಿಕೆ ಮಾಡಿದರು. ಡಿಜಿಟಲ್ ಎವಿಡೆನ್ಸ್ 2 ವಾರದಲ್ಲಿ ಕೊಡುವುದಾಗಿ ತಿಳಿಸಿದರು.

ವಿಚಾರಣೆ ವೇಳೆ, ಜೈಲಿಗೆ ಚಾರ್ಜ್‌ಶೀಟ್‌ ಕಳಿಸುತ್ತೇವೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಧೀಶರು ಆರೋಪಿಗಳ ಬಳಿಯೇ ವಕೀಲರ ಹೆಸರು ಕೇಳಿದರು. ಸಿ.ವಿ.ನಾಗೇಶ್ ನನ್ನ ಪರ ಹಾಜರಾಗುತ್ತಿದ್ದಾರೆ ಎಂದು ದರ್ಶನ್ ತಿಳಿಸಿದರು.

ಉಳಿದ ಆರೋಪಿಗಳು ತಮ್ಮ ಪರ ವಾದ ಮಂಡಿಸುವ ವಕೀಲರ ಹೆಸರು ಹೇಳಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿತು.

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್ Read More

ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ.

ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಂತಾಗಿದೆ.

ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು ಸೋಮವಾರ ಕೂಡಾ ಎರಡು ಗಂಟೆಗಳ ಕಾಲ ಧೀರ್ಘ ವಿಚಾರಣೆ ನಡೆಸಲಾಯಿತು.

ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸಿಎಂ ಪರ ವಕೀಲರು ಮತ್ತು ಸಾಲಿಸಿಟರ್ ಜನರಲ್ ಸುದೀರ್ಘ ವಾದ ಮಂಡಿಸಿದ ಬಳಿಕ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ವಾದಮಂಡಿಸಿದರು.

ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ, ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅದು ಅಪರಾಧ. ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೂ ಅಪರಾಧ.

ವೈಯಕ್ತಿಕ ಪ್ರಭಾವ ಬಳಸಿದರೂ ಅದು ಸೆಕ್ಷನ್ 7 ಅಡಿ ಅಪರಾಧ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಸೆಕ್ಷನ್ 7ಸಿ ಜಾರಿಗೆ ತರಲಾಗಿದೆ ಎಂದು ವಾದಿಸಿದರು.

ಮುಡಾ ಪ್ರಕರಣದ ಬಗ್ಗೆ ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17ಎ ಅಡಿ ಅನುಮತಿ ನೀಡಿರುವುದು ಸರಿಯಾಗಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ಎಂದು ರಾಘವನ್ ಮನವಿ ಮಾಡಿದರು.

ರಾಘವನ್ ಅವರು ಸುದೀರ್ಘ ವಾದ ಮಂಡಿಸಿದ ಬಳಿಕ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ, ಆದರೆ ಈ ವಾರಾಂತ್ಯ ಹಬ್ಬದ ರಜೆಗಳಿವೆ, ಆದ್ದರಿಂದ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್​ಗೆ ಮನವಿ ಮಾಡಿದರು.

ಎಜಿ ಶಶಿಕಿರಣ್ ಶೆಟ್ಟಿ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ ಎಂದು ಹೇಳಿದರು.

ಆದರೆ ಅಡ್ವೊಕೆಟ್ ಜನರಲ್ ವಾದಿಸಿದ ಮೇಲೆ ನಾನು ವಾದಿಸುತ್ತೇನೆ. ಸೆಪ್ಟೆಂಬರ್ 9 ಅಥವಾ 21 ರಂದು ನಾನು ವಾದಿಸುತ್ತೇನೆ ಎಂದು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಅಷ್ಟು ದೂರದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿಗಳು, ನೀವು ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.

ನಂತರ ಸೆಪ್ಟೆಂಬರ್ 12ರಂದು ತಾವು ವಾದಿಸುವುದಾಗಿ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ತಿಳಿಸಿದರು.

ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ Read More