ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಎಂ. ಕಾರ್ತಿಕ್ ಅವರನ್ನು ಸರ್ಕಾರ ನೇಮಕ ಮಾಡಿದ್ದು,ಅವರು‌ ಅಧಿಕಾರ ಸ್ವೀಕರಿಸಿದ್ದಾರೆ.

ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಎಂ. ಕಾರ್ತಿಕ್ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು ಅವರು ಅಧಿಕಾರ ವಹಿಸಿಕೊಂಡರು.

ಕಾರ್ತಿಕ್ ಅವರು ಇದುವರೆಗೆ ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಳಗಾವಿ ಪಾಲಿಕೆ ಆಯುಕ್ತೆ ಶುಭಾ ಅವರನ್ನು‌ ಅವರ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ Read More

ಮೈಸೂರಿನ ರಸ್ತೆಗೆ ಸುನೀಲ್ ಕುಮಾರ್ ಹೆಸರಿಡಲು ತೇಜಸ್ವಿ ಮನವಿ

ಮೈಸೂರು: ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ದಿವಂಗತ ಎನ್ ಸುನೀಲ್ ಕುಮಾರ್ ಅವರ 43ನೇ ಸ್ಮರಣಾರ್ಥ ರಸ್ತೆಗೆ ಅವರ ಹೆಸರನ್ನು ಇಡುವಂತೆ ವೀರಶೈವ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ಮಹಾ ನಗರ ಪಾಲಿಕೆ ಸದಸ್ಯರಾಗಿದ್ದ ಹಾಗೂ ವೀರಶೈವ ಲಿಂಗಾಯತ ಸಮಾಜದ ನಾಯಕರಾಗಿದ್ದ ದಿವಂಗತ ಎನ್ ಸುನೀಲ್ ಕುಮಾರ್ ಅವರ 43ನೆ ಜನ್ಮ ದಿನ ಇಂದು.

ಹಾಗಾಗಿ ಸುನೀಲ್ ಕುಮಾರ್ ಅವರನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಸ್ಮರಣೆ ಮಾಡಿದ್ದು,ಪಾಲಿಕೆ ಸದಸ್ಯರಾಗಿದ್ದ ಸುನಿಲ್ ಅವರ ಅವಧಿಯಲ್ಲಿ ಅಗ್ರಹಾರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ತಿಳಿಸಿದ್ದಾರೆ.

ಈಗಾಗಲೇ ಸುನೀಲ್ ಕುಮಾರ್ ಅವರ ಹೆಸರನ್ನು ಅಗ್ರಹಾರ ವಾರ್ಡಿನ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದರೂ ಸಹ ಸಂಭಂದ ಪಟ್ಟ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಾದರೂ ಮೈಸೂರಿನ ರಸ್ತೆಯೊಂದಕ್ಕೆ ಎನ್, ಸುನೀಲ್ ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.

ಮೈಸೂರಿನ ರಸ್ತೆಗೆ ಸುನೀಲ್ ಕುಮಾರ್ ಹೆಸರಿಡಲು ತೇಜಸ್ವಿ ಮನವಿ Read More

ಮುಡಾ ಹಗರಣ:ಪಾಲಿಕೆ ನೌಕರ ಡಿಸ್ಮಿಸ್

ಮೈಸೂರು: ಮುಡಾ ಹಗರಣದಲ್ಲಿ ಭಾಗಿಯಾಗಿದ್ದ ಮಹಾನಗರ ಪಾಲಿಕೆಯ ನೌಕರನನ್ನು ಆಯುಕ್ತರು ಸೇವೆಯಿಂದ ವಜಾ ಮಾಡಿದ್ದಾರೆ.

ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ನೌಕರ ವಜಾಗೊಂಡಿದ್ದಾನೆ.

ಇಡಿ ಅಧಿಕಾರಿಗಳು ಮುಡಾ ಹಗರಣದ ಕಿಂಗ್‌ಪಿನ್ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.

ಇಡಿ ವಿಚಾರಣೆ ಬೆನ್ನಲ್ಲೇ ಕುಮಾರ್‌ನನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಕುಮಾರ್ ಪಾಲಿಕೆ ನೌಕರನಾಗಿ ಕೆಲಸ ಆರಂಭಿಸಿದ್ದ, ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದ. ಆದರೆ, ಈತ ಮುಡಾದಲ್ಲಿ ಕೆಲಸ ಮಾಡುತ್ತಲೆ ಮಹಾನಗರ ಪಾಲಿಕೆಯಿಂದಲೂ ವೇತನ ಪಡೆಯುತ್ತಿದ್ದ.

ನಾಲ್ಕು ದಿನಗಳ ಹಿಂದೆ ಬಿ.ಕೆ.ಕುಮಾರ್‌ಗೆ ಜಾರಿ ನಿರ್ದೇಶನಾಲಯ ಡ್ರಿಲ್ ಮಾಡಿತ್ತು. ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಲವು ಅಕ್ರಮಗಳಲ್ಲಿ ಭಾಗಿಯಾದ ಆರೋಪ ಈತನ ಮೇಲಿದೆ.

ಹಿಂದಿನ ಕಮಿಷನರ್‌ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ.

ಮುಡಾದಲ್ಲಿ ಸಂರಕ್ಷಿಸಿ ಇಡಲಾಗಿದ್ದ 8 ಸಾವಿರ ಸೈಟ್‌ಗಳ ಬಗ್ಗೆ ಅಧಿಕಾರಿ ಕುಮಾರ್ ಗೆ ಈತ ಮಾಹಿತಿ ನೀಡಿದ್ದ. ಈ ಸೈಟ್‌ಗಳನ್ನು 50-50 ನಿಯಮದಲ್ಲಿ ಆಯುಕ್ತರು ಮಂಜೂರು ಮಾಡಿದ್ದರು. ಹಿಂದಿನ ಆಯುಕ್ತರಾದ ನಟೇಶ್ ಹಾಗೂ ದಿನೇಶ್‌ಕುಮಾರ್‌ಗೆ ಅಕ್ರಮದಲ್ಲಿ ಸಹಾಯ ಮಾಡಿದ ಆರೋಪ ಈ ಅಧಿಕಾರಿ ಮೇಲಿದೆ.

ಮುಡಾ ಹಗರಣ:ಪಾಲಿಕೆ ನೌಕರ ಡಿಸ್ಮಿಸ್ Read More