ಕಾರಿನ ಮೇಲೆ‌ ಟ್ಯಾಂಕರ್ ಉರುಳಿ ಚಾಲಕ ಸಾ*ವು

ಮೈಸೂರು: ಮೈಸೂರಿನಿಂದ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುತ್ತಿದ್ದ ಕಾರಿನ ಮೇಲೆ ಟ್ಯಾಂಕರ್ ಲಾರಿ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ‌ ಘಟನೆ ಜಿಲ್ಲೆಯ ನಂಜನಗೂಡು ಬಳಿ ನಡೆದಿದೆ.

ನಂಜನಗೂಡು ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಸಿಂಧುವಳ್ಳಿಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು,
ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಸ್ಥರು ಮೈಸೂರಿನ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟಿರುವ ಕಾರಿನ ಚಾಲಕನ ಮೃತದೇಹವನ್ನು ನಂಜನಗೂಡಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ನಂಜನಗೂಡಿನ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು, ಮಾದೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಮತ್ತು ಜಖಂಗೊಂಡಿರುವ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರಿನ ಮೇಲೆ‌ ಟ್ಯಾಂಕರ್ ಉರುಳಿ ಚಾಲಕ ಸಾ*ವು Read More

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ!

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಸಾವಿರಾರು ಮೊಬೈಲ್ ಗಳನ್ನು ತುಂಬಿದ್ದ ಕಂಟೈನರ್‌ ಒಂದನ್ನ ಅಪಹರಿಸಿ ಮೊಬೈಲ್ ದೋಚಿರುವ ಘಟನೆ ನಡೆದಿದೆ.

ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳವು ಮಾಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ಬೆಂಗಳೂರನ್ನು ತಲುಪೆ ಇರಲಿಲ್ಲ. ಕಳೆದ ನ. 22ರಂದು ಈ ಘಟನೆ ನಡೆದಿದೆ. ಕಂಟೈನರ್ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಅನುಮಾನಗೊಂಡ ಕಂಪನಿಯವರು ಗಾಡಿಯ ಜಿಪಿಎಸ್‌ ಪರಿಶೀಲಿಸಿದ್ದಾರೆ.ಆಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿರುವುದು ಗೊತ್ತಾಗಿದೆ.

ಹೀಗಾಗಿ ಗಾಡಿಯ ಲೊಕೇಶನ್ ಮಾಹಿತಿಯನ್ನು ಪೆರೇಸಂದ್ರೆ ಠಾಣೆ ಪೊಲೀಸರಿಗೆ ಕಂಪನಿಯವರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ಕಂಟೈನ‌ರ್ ಅಲ್ಲಿ ನಿಲ್ಲಿಸಿ ಚಾಲಕ ನಾಪತ್ತೆಯಾಗಿರುವುದು ಗೊತಗತಾಗಿದೆ.

ಕಂಟೈನರ್ ನ ಚಾಲಕ ರಾಹುಲ್ ಕೋಟ್ಯಂತರ ರೂಪಾಯಿಗಳ ಮೊಬೈಲ್ ದೋಚಿ ಪರಾರಿಯಾಗಿದ್ದು,ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ! Read More