ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಎಂ. ಕಾರ್ತಿಕ್ ಅವರನ್ನು ಸರ್ಕಾರ ನೇಮಕ ಮಾಡಿದ್ದು,ಅವರು‌ ಅಧಿಕಾರ ಸ್ವೀಕರಿಸಿದ್ದಾರೆ.

ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಎಂ. ಕಾರ್ತಿಕ್ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು ಅವರು ಅಧಿಕಾರ ವಹಿಸಿಕೊಂಡರು.

ಕಾರ್ತಿಕ್ ಅವರು ಇದುವರೆಗೆ ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಳಗಾವಿ ಪಾಲಿಕೆ ಆಯುಕ್ತೆ ಶುಭಾ ಅವರನ್ನು‌ ಅವರ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ Read More

ಮೈ ಅ ಪ್ರಾ ಆಯುಕ್ತ ರಕ್ಷಿತ್ ಭೇಟಿ ಮಾಡಿದ ಪ್ರತಾಪ್ ಸಿಂಹ

ಮೈಸೂರು: ಜಾಗದ ವಿಚಾರ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು‌

ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 21 ಮಾನಸ ನಗರ ಕುದುರೆಮಾಳ ನಿವಾಸಿಗಳಿಗೆ ಅನುಮೋದನೆಗೊಂಡಿದ್ದ ಯೂತ್ ಹಾಸ್ಟೆಲ್ ಸಮೀಪದ ಜಾಗದ ವಿಚಾರವಾಗಿ ಪ್ರತಾಪ್ ಸಿಂಹ ಅವರು ರಕ್ಷಿತ್ ಅವರನ್ನು ಭೇಟಿ ಮಾಡಿದರು‌.

ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ , ಬಿಜೆಪಿ ಮುಖಂಡರಾದ ಬೊ.ಉಮೇಶ್ ಆರ್. ಪರಮೇಶ ಗೌಡ,ದೇವರಾಜ್, ನಂಜಪ್ಪ ಶ್ರವಣ್ ಮಾಲಿ, ಅಶೋಕ್, ಪ್ರಮೋದ್ ಹಾಗೂ ಮಾನಸ ನಗರ ಕುದುರೆಮಾಳ ಮುಖಂಡರಾದ ಮಹದೇವ್, ಮಹೇಂದ್ರ, ಕೃಷ್ಣ, ರಾಮು, ಗೌತಮ್ ಹಾಗೂ ಮುಖಂಡರು‌ ಹಾಜರಿದ್ದರು.

ಮೈ ಅ ಪ್ರಾ ಆಯುಕ್ತ ರಕ್ಷಿತ್ ಭೇಟಿ ಮಾಡಿದ ಪ್ರತಾಪ್ ಸಿಂಹ Read More