ನಿವೃತ್ತರಾದ ವಾಣಿಜ್ಯ ತೆರಿಗೆ ಅಧಿಕಾರಿ ಬಿ ಕೆ ರಮೇಶ್ ಅವರಿಗೆ ಬೀಳ್ಕೊಡುಗೆ
ಮೈಸೂರು: ನಾರಾಯಣ ಶಾಸ್ತಿ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ
ಕಳೆದ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ವಾಣಿಜ್ಯ ತೆರೆಗೆ ಅಧಿಕಾರಿ (ಜಾರಿ) ಬಿ ಕೆ ರಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಿ ಕೆ ರಮೇಶ್ ಅವರ ಕಾರ್ಯತತ್ಪರತೆ, ಶಿಸ್ತು, ಸಾಮಾಜಿಕ ಬದ್ಧತೆಯಿಂದ ಕೂಡಿದ್ದು, ಇಂದಿನ ಅಧಿಕಾರಿ, ನೌಕರರಿಗೆ ಆದರ್ಶವಾಗಿದೆ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ಮೈಸೂರು ವಿಭಾಗದ ಮುಖ್ಯಸ್ಥರಾದ ತೇಜಸ್ವಿನಿ ತಿಳಿಸಿದರು.
ಈ ವೇಳೆ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ಮೈಸೂರು ವಿಭಾಗದ ಉಪ ಆಯುಕ್ತರಾದ ಶಿವಣ್ಣ, ಹಾಗೂ ಹಸೀಬುಲ್ಲಾ ಬೇಗ್ ಆರ್ ಮತ್ತು ಅಧಿಕಾರಿಗಳು, ಸಿಬ್ಬಂದಿ ಜತೆಗೆ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಟ್ಟಿ ಹುಂಡಿ ಸುನಿಲ್, ರವಿಚಂದ್ರ, ನಂಜುಂಡಿ, ಅಮಿತ್, ಮಹಾನ್ ಶ್ರೇಯಸ್, ನಂದೀಶ್ ನಾಯಕ್ ಮತ್ತಿತರರು ಹಾಜರಿದ್ದರು.
ನಿವೃತ್ತರಾದ ವಾಣಿಜ್ಯ ತೆರಿಗೆ ಅಧಿಕಾರಿ ಬಿ ಕೆ ರಮೇಶ್ ಅವರಿಗೆ ಬೀಳ್ಕೊಡುಗೆ Read More