ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಟೀಕಾಪ್ರಹಾರ

ಬೆಂಗಳೂರು: ದಲಿತ ಸಮಾಜಕ್ಕೆ ಸೇರಿದ ನಿಂಗನಿಗೆ ಸಿಗಬೇಕಿದ್ದ ಬದಲಿ ನೀವೇಶನಗಳನ್ನು ಅಕ್ರಮವಾಗಿ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿ ಕಬಳಿಸಿದಾಗ ಅಹಿಂದ ನೆನಪಾಗಲಿಲ್ಲವೇ ಸಿದ್ದಹಸ್ತ ಸಿದ್ದರಾಮಯ್ಯ ನವರೇ ಎಂದು ಜೆಡಿಎಸ್ ಪ್ರಶ್ನಿಸಿದೆ.

ಮುಡಾ ಹಗರಣ ಬುಡಕ್ಕೆ ಬಂದಿರುವಾಗ ನಿಮಗೆ ಅಹಿಂದ ನೆನಪಾಗುತ್ತಿದೆ ಅಲ್ಲವೆ? ಮೆತ್ತಿಕೊಂಡಿರುವ ಕಪ್ಪುಮಸಿ ಅರ್ಥಾತ್ ವೈಟ್ನರ್ ಮರೆಮಾಚಲು ಸ್ವರಕ್ಷಣೆಗಾಗಿ ಹಾಸನದಲ್ಲಿ ಸಮಾವೇಶ ಮಾಡಿಕೊಂಡ ಡೋಂಗಿವಾದಿ ನೀವು ಎಂದು ಜೆಡಿಎಸ್ ಟ್ವೀಟ್ ಮಾಡಿ ಟೀಕಿಸಿದೆ.

ಅಂದು ಜೆಡಿಎಸ್ ವೇದಿಕೆಯಲ್ಲಿಯೇ ಅಹಿಂದ ಸಮಾವೇಶ ಮಾಡಿದ್ದರೇ ಹೆಚ್‌.ಡಿ.ದೇವೇಗೌಡರು ನಿಮ್ಮನ್ನು ಯಾಕೆ ಉಚ್ಛಾಟಿಸುತ್ತಿದ್ದರು ನಾನು ಎಂಬ ಅಹಂನಿಂದ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ನಡೆಸಿದ್ದಕ್ಕೆ ನಿಮ್ಮನ್ನು ಉಚ್ಛಾಟಿಸಲಾಯಿತು ತಿಳಿದುಕೊಳ್ಳಿ

ನಿವೃತ್ತಿಯಾಗಿದ್ದ ಸ್ವಜಾತಿ ಐಪಿಎಸ್ ಅಧಿಕಾರಿಯೊಬ್ಬರನ್ನು ಗೃಹ ಇಲಾಖೆ ಸಲಹೆಗಾರಾಗಿ ನೇಮಿಸಿಕೊಂಡು, ಆ ಇಲಾಖೆ ನಿರ್ವಹಿಸುತ್ತಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್‌ ಅವರನ್ನು ಹತ್ತಿಕ್ಕಿದಾಗ ಅಹಿಂದ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದೆ.

ದಲಿತ ಸಮಾಜದ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಮೇಲೆ ನಿಮ್ಮ ಆಪ್ತ ಮರೀಗೌಡ ಹಲ್ಲೆ ನಡೆಸಿದರೂ ಸ್ವಜಾತಿ ವ್ಯಾಮೋಹಕ್ಕೆ ಒಳಗಾಗಿ ಆತನನ್ನ ರಕ್ಷಣೆ ಮಾಡಿದಾಗ ಅಹಿಂದ ನೆನಪಾಗಲಿಲ್ಲ, ಕನಿಷ್ಠ ನಾಚಿಕೆಯೂ ಆಗಲಿಲ್ಲ ಅಲ್ಲವೆ

ಮುಡಾದಲ್ಲಿ ಮುಕ್ಕಿ ತಿಂದಿರುವ ಬೊಗಳೆ ಭಾಷಣಕಾರ ಜಾತಿವಾದಿ ಭ್ರಷ್ಟಾರಾಮಯ್ಯಗೆ ಅಹಿಂದ ಎಂಬುದು ಒಂದು ರಕ್ಷಾಕವಚ ಅಷ್ಟೇ.

ಅಹಿಂದ ಎಂಬ ಟ್ಯಾಗ್ ಇಟ್ಟುಕೊಂಡು ಇಷ್ಟೆಲ್ಲಾ ಮಾಡುತ್ತಿರುವ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು

ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ ಸಿದ್ದರಾಮಯ್ಯ

ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದಕುತಂತ್ರಿ ನೀವು.ಗುಂಪುಗಾರಿಕೆ ಷಡ್ಯಂತ್ರ ನಡೆಸಿ ರಾಜಕಾರಣದಿಂದ ಖರ್ಗೆಯವರನ್ನು ಬಲವಂತವಾಗಿ ದಿಲ್ಲಿ ರಾಜಕೀಯಕ್ಕೆ ತಳ್ಳಿದ ಪರಮ ಸ್ವಾರ್ಥಿ ನೀವು ಎಂದು ಜೆಡಿಎಸ್ ಸಿದ್ದರಾಮಯ್ಯ‌ ವಿರುದ್ದ ಟೀಕಿಸಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಸೋಲಿಸಿದಿರಿ.
ಸಿಎಂ ರೇಸ್‌ನಲ್ಲಿದ್ದ ಡಾ.ಪರಮೇಶ್ವರ್‌ ಅವರನ್ನು ಸ್ವಾರ್ಥಕ್ಕಾಗಿ ಸೋಲಿಸಿ ಮುಖ್ಯಮಂತ್ರಿ ಗಾದಿಗೇರಿದ ಕಪಟಿ ಎಂದು ತೀವ್ರವಾಗಿ‌‌ ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಟೀಕಾಪ್ರಹಾರ Read More

ಶಕ್ತಿ ಯೋಜನೆ ಪರಿಷ್ಕರಣೆ ಸರ್ಕಾರದ ಮುಂದಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮಾಡುವ ವಿಚಾರ ಸರ್ಕಾರದ ‌ಮುಂದೆ ಇಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಹರಿದಾಡುತ್ತಿದ್ದು,ಸ್ವತಃ ಸಿಎಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ನಿನ್ನೆಯ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು.

ಕೆಲ‌ ಮಹಿಳೆಯರು ಯೋಜನೆ ಸವಲತ್ತುಗಳು ಬೇಡ ಎಂಬಂತೆ ಹೇಳಿಕೆ ನೀಡಿದ್ದಾರೆ.ನಾನು ಆವಾಗ ಅಲ್ಲಿ ಇರಲಿಲ್ಲ‌. ರಾಜ್ಯದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾಪ ಇಲ್ಲ ಎಂದು ಪುನರುಚ್ಚರಿಸಿದರು.

ವಕ್ಫ್ ಆಸ್ತಿ ಗೊಂದಲವನ್ನು ಮುಂದಿಟ್ಟುಕೊಂಡು ನ.4ರಂದು ಬಿಜೆಪಿ ಪ್ರತಿಭಟನೆ ಮಾಡುತ್ತಿದೆಯಲ್ಲಾ‌ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಕಾಲದಲ್ಲೂ 200ಕ್ಕೂ ಹೆಚ್ಚು ನೋಟೀಸ್ ಕೊಟ್ಟಿದ್ದರು. ಈ ರೀತಿಯ ಇಬ್ಬಂದಿ ರಾಜಕೀಯ ಮಾಡಬಾರದು ಎಂದು ಸಿಎಂ ಕುಟುಕಿದರು.

ಶಕ್ತಿ ಯೋಜನೆ ಪರಿಷ್ಕರಣೆ ಸರ್ಕಾರದ ಮುಂದಿಲ್ಲ: ಸಿಎಂ ಸ್ಪಷ್ಟನೆ Read More

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಮುಖ್ಯ ಮಂತ್ರಿ‌ ಸಿದ್ದರಾಮಯ್ಯ ಅವರ‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮೈಸೂರಿನ ಬಿಜೆಪಿ ಕಚೇರಿ ಬಳಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ‌ವಿರುದ್ಧ ಘೋಷಣೆ ಕೂಗಿದರು.

ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ದ ತೀರ್ಪು ‌ಬಂದಿದೆ.ಜತೆಗೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಆದೇಶಿಸಲಾಗಿದೆ.ಆದರೂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೆ ಬಂಡತನ ತೋರುತ್ತಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು.

ಈ‌ ವೇಳೆ ಸಿದ್ದರಾಮಯ್ಯ ಅವರ ಚಿತ್ರಗಳನ್ನು ಪ್ರದರ್ಶಿಸಿ ಆಕ್ರೋಶ‌ ವ್ಯಕ್ತಪಡಿಸಿದರು.

ಈ‌ ಸಂದರ್ಭದಲ್ಲಿ ‌ಪೊಲೀಸರು ಹಲವಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ Read More

ಸಿಎಂ ಸಿದ್ದರಾಮಯ್ಯಗೆ ಅಮಂಗಳವಾರ:ಹೈಕೋರ್ಟ್ ನಲ್ಲಿ ಬಿಗ್ ಶಾಕ್

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ‌ ಹೈಕೋರ್ಟ್ ನಲ್ಲಿ ಬಿಗ್ ಶಾಕ್ ಉಂಟಾಗಿದ್ದು,ಮಂಗಳವಾರ ಅಮಂಗಳವಾಗಿದೆ.

ಮುಡಾ‌ ಹಗರಣದಲ್ಲಿ ರಾಜ್ಯಪಾಲರ‌ ಪ್ರಾಸಿಕ್ಯೂಶನ್ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿ ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ.

ಸಿದ್ದರಾಮಯ್ಯ ಅವರ‌‌ ವಿರುದ್ಧ ತನಿಖೆ ನಡೆಸಬಹುದು ಎಂದು ನ್ಯಾ. ನಾಗಪ್ರಸನ್ನ ಅವರು ಆದೇಶಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಅಮಂಗಳವಾರ:ಹೈಕೋರ್ಟ್ ನಲ್ಲಿ ಬಿಗ್ ಶಾಕ್ Read More

ಹಾಲಿನ ದರ ಹೆಚ್ಚಳ ಮಾಡಿದರೆ ಪೂರ್ಣವಾಗಿ ರೈತರಿಗೇ‌ ವರ್ಗಾವಣೆ:ಸಿಎಂ

ಕೊಪ್ಪಳ: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡಿದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೊಪ್ಪಳದ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಹಾಲಿನ ದರ‌ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ಬಂದಿದೆ,ಇನ್ನೂ ಈ ಬಗ್ಗೆ ‌ನಿರ್ಧಾರ ಮಾಡಿಲ್ಲ,ಒಂದು‌ ವೇಳೆ ದರ ಹೆಚ್ವಳ ಮಾಡಿದರೆ ಅದನ್ನೆಲ್ಲ ಪೂರ್ಣವಾಗಿ ರೈತರಿಗೇ ಕೊಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿದರು.

50 ವರ್ಷಕ್ಕೆ ಗೇಟ್ ಗಳನ್ನು ಬದಲಿಸಬೇಕು,70 ವರ್ಷಗಳಿಂದ ಗೇಟ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ,ಈಗಾಗಲೇ ತಜ್ಞರ ಸಮಿತಿ ರಚನೆಯಾಗಿದ್ದು ವರದಿ ನೀಡಬೇಕಿದೆ ಎಂದು ತಿಳಿಸಿದರು.

ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ ಎಂದು ಸಿಎಂ ತಿಳಿಸಿದರು.

ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್ ಗೇಟ್ ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ದುರಸ್ತಿ ಗೆ ಕ್ರಮ ವಹಿಸಿದರು ಎಂದು ಮೆಚ್ಚುಗೆ‌ ವ್ಯಕ್ತಪಡಿಸಿದರು.

ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್ ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು ಎಂದು ‌ಸಿದ್ದರಾಮಯ್ಯ ಈ ವೇಳೆ ಶ್ಲಾಘಿಸಿದರು.

ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಭವನದಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ರಾಜ್ಯಪಾಲರ ಕಛೇರಿಯಿಂದಲೇ ಸೋರಿಕೆಯಾಗಿರಬಹುದು ಈ ಬಗ್ಗೆ ತನಿಖೆಯಾಗಲಿ ಎಂದು ಸಿದ್ದು ಹೇಳಿದರು.

ಹಾಲಿನ ದರ ಹೆಚ್ಚಳ ಮಾಡಿದರೆ ಪೂರ್ಣವಾಗಿ ರೈತರಿಗೇ‌ ವರ್ಗಾವಣೆ:ಸಿಎಂ Read More

ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ:ಸಿಎಂ

ಮೈಸೂರು: ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ,
ಎಸ್ಐಟಿ ತನಿಖೆ ಮಾಡುವಂತೆ ಸಚಿವರು ಹಾಗೂ ಶಾಸಕರು ಪತ್ರ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,
ಸಚಿವರು ಹಾಗೂ ಶಾಸಕರು ಕೊಟ್ಟಿರುವ
ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಮುನಿರತ್ನ ವಿರುದ್ದ ಬಹಳಷ್ಟು ಗಂಭೀರ ಪ್ರಕರಣಗಳಿವೆ,ಹಾಗಾಗಿ ವಿಶೇಷ ತನಿಖಾ ತಂಡದ ಅಗತ್ಯ ಇದೆ ಎಂದು ಸಚಿವರು ಕೆಲ ಶಾಸಕರು ಕೇಳಿದ್ದಾರೆ,ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಗಣೇಶ ಮೂರ್ತಿ ಗಲಾಟೆಗಳು
ಪ್ರತಿ‌ನಿತ್ಯ ನಡೆದಿಲ್ಲ,
ಇದುವರೆಗೆ ಎರಡು ಪ್ರಕರಣ ನಡೆದಿವೆ,
ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲಾ ಕಡೆ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ತಿಳಿಸಿದ್ದೇನೆ,ಇನ್ನು
ನಾಗಮಂಗಲ ಪ್ರಕರಣದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ ಎಂದು ಮುಖ್ಯ ಮಂತ್ರಿ ಸಮರ್ಥಿಸಿಕೊಂಡರು.

ಎಚ್.ಡಿ ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ದಾಖಲೆಗಳನ್ನ ಸಚಿವರು ಬಿಡುಗಡೆ ಮಾಡಿದ್ದಾರೆ,ಆದರೆ ನಾನು ಆ ದಾಖಲೆಗಳನ್ನ ನೋಡಿಲ್ಲ,ನೋಡುತ್ತೇನೆ,ಆ ಭೂಮಿಯನ್ನ
ಕುಮಾರಸ್ವಾಮಿ ಅವರ ಭಾಮೈದನಿಗೆ ರಿಜಿಸ್ಟರ್ ಆಗಿದೆ,ಅತ್ತೆಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದು ಬಹಳ ಗಂಭೀರವಾದ ಪ್ರಕರಣ,
ನೋಡೊಣಾ ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ ಎಂದ ಸಿದ್ದು,
ಕುಮಾರಸ್ವಾಮಿಯವರದು ಯಾವಗಲೂ ಹಿಟ್ ಅಂಡ್ ರನ್ ಕೇಸ್.
ತಮ್ಮ ಮೇಲಿನ ಎಲ್ಲಾ ಆರೋಪಕ್ಕೂ ಕೂಡ ಹಿಟ್ ಅಂಡ್ ರನ್ ರೀತಿ ಮಾತನಾಡಿ ಹೋಗುತ್ತಾರೆ ಎಂದು ಹೇಳಿದರು.

ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ:ಸಿಎಂ Read More

ಕೊಲೆ ಪ್ರಕರಣದ ತನಿಖೆ ಪರಿಶೀಲಿಸಲು ಎಸ್ ಪಿಗೆ ಸಿಎಂ ಸೂಚನೆ

ಕಲಬುರಗಿ: ಕಳೆದ ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ರಾಯಚೂರು ಎಸ್‌ಪಿ ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕಲಬುರಗಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಕೊಲೆಯಾದ ಸಂಜಯ್ ಅವರ ಪತ್ನಿ ಶಾಂತಮ್ಮ ನ್ಯಾಯ ಕೊಡಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

ಶಾಂತಮ್ಮ ಅವರ ನೋವಿಗೆ ಮರುಗಿದ ಸಿಎಂ,ತಕ್ಷಣ ದೂರವಾಣಿ ಕರೆ ಮಾಡಿ ರಾಯಚೂರು ಎಸ್ ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ನೀಡುವಂತೆ ಸೂಚಿಸಿದರು,ಜತೆಗೆ ಖುದ್ದಾಗಿ ಪರಿಶೀಲಿಸುವಂತೆ ಸೂಚಿಸಿದರು.

ನಂತರ ಈ ಬಗ್ಗೆ ತಮಗೆ ವರದಿ ನೀಡಬೇಕು, ಪ್ರಕರಣದ ತನಿಖೆ ಏನಾಯಿತು ಎಂಬ ಬಗ್ಗೆ ವರದಿ ಮಾಡಬೇಕು ಎಂದು ಸೂಚಿಸಿದರು.

ಕೊಲೆ ಪ್ರಕರಣದ ತನಿಖೆ ಪರಿಶೀಲಿಸಲು ಎಸ್ ಪಿಗೆ ಸಿಎಂ ಸೂಚನೆ Read More

ಕೋವಿಡ್ ಹಗರಣದ ತನಿಖಾ ವರದಿ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ತೀರ್ಮಾನ:ಸಿಎಂ

ಮೈಸೂರು: ಕೋವಿಡ್ ಹಗರಣದ ತನಿಖಾ ವರದಿಯನ್ನು ಬುಧವಾರ ಸಚಿವ ಸಂಪುಟದ
ಮುಂದೆ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,
ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ ಎಂದು ತಿಳಿಸಿದರು.

ವರದಿಯಲ್ಲಿ ಏನಿದೆ ಎಂಬುದನ್ನ ನಾನು ನೋಡಿಲ್ಲ,ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಇನ್ನು ಗಮನಕ್ಕೆ ಬಂದಿಲ್ಲ,
ನನ್ನ ಗಮನಕ್ಕೆ ಬರದೆ ಡಿ.ಸುಧಾಕರ್ ಗೆ ಈ ಬಗ್ಗೆ ಯಾರು ಮಾಹಿತಿ ಕೊಟ್ಟರು ಎಂದು ಪ್ರಶ್ನಿಸಿದ ಮುಖ್ಯ ಮಂತ್ರಿಗಳು, ಕುಂಬಳಕಾಯಿ ಕಳ್ಳ ಅಂದ್ರೆ ಆತ ಯಾಕೆ ಹೆಗಲು ಮುಟ್ಟಿ ನೋಡಿ ಕೊಳ್ಳಬೇಕು ಎಂದು ಕೇಳಿದರು.

ಅವರಿಗೆ ಇದು ಸುಳ್ಳು ವರದಿ ಎಂದು ಹೇಗೆ ಗೊತ್ತಾಗುತ್ತೆ ಎಂದ ಸಿಎಂ, ಸುಧಾಕರ್ ತಪ್ಪು ಮಾಡಿರುವುದು ಆತನಿಗೆ ಮಾನಸಿಕವಾಗಿ ಗೊತ್ತಿದೆ, ಹಾಗಾಗಿ ಆ ರೀತಿ ಮಾತನಾಡುತ್ತಿದ್ದಾನೆ ಎಂದು ಟಾಂಗ್ ನೀಡಿದರು.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ‌ ಎಂದು ಇದೇ‌ ವೇಳೆ ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2009ರ ಹಿಂದಿನ ಬಡವಾಣೆಗೆ 50:50 ಅನ್ವಯ ಆಗುವುದಿಲ್ಲ ಎಂಬ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ, ಮೊದಲು ಆದೇಶ ನೋಡುತ್ತೇನೆ ಎಂದರು.

ಮಂಗಳವಾರ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿದ್ದೀರ ಏನಾದರೂ ವಿಶೇಷವೆ ಎಂಬ ಪ್ರಶ್ನೆಗೆ,ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ದೇವಿಯ ದರ್ಶನ ಮಾಡಬೇಕು, ಇದರಲ್ಲಿ ಏನು ವಿಶೇಷ ಎಂದು ಸಭೆಗೆ ಹೋಗುತ್ತಿದ್ದೇನೆ ಹಾಗಾಗಿ ದರ್ಶನ ಮಾಡಿದ್ದೇನೆ‌ ಅಷ್ಟೇ ಎಂದು ಹೇಳಿದರು.

ನನಗೆ ಯಾವ ಟೆಂಕ್ಷನ್ ಇಲ್ಲಾ,ಆತಂಕಾನೂ ಇಲ್ಲ,ನನ್ನ ನೋಡಿದರೆ ಟೆಂಕ್ಷನ್ ಇರೋ ರೀತಿ ಕಾಣುತ್ತೀನಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿ,ನಾನು ಯಾವಾಗಲೂ ಹೀಗೆ ಇರುತ್ತೇನೆ, ಇವತ್ತು ಏನು ಸ್ಪೆಷಲ್ ಇಲ್ಲ ಎಂದು ಹೇಳಿದರು.

ಬಿಜೆಪಿಯವರು ಹೇಳಬಾರದಷ್ಟು ಸುಳ್ಳನ್ನ ನನ್ನ ಮೇಲೆ ಹೇಳಿದ್ದಾರೆ.
ಹೀಗಾಗಿ ನಾನು ಟೆಂಕ್ಷನ್ ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಮುಕ್ಯಮಂತ್ರಿಗಳು ತಿಳಿಸಿದರು.

ಸಿದ್ದರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಮಾಡುವುದು ಶಾಸಕರು ಹಾಗೂ ಹೈ ಕಮಾಂಡ್. ಅವರೇ ಅದನ್ನ ತೀರ್ಮಾನ ಮಾಡುತ್ತಾರೆ,ನಾನು ಹೇಗೆ ಮಾಡಲಿ ಎಂದು ಹೇಳಿದರು.

ಕೋವಿಡ್ ಹಗರಣದ ತನಿಖಾ ವರದಿ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ತೀರ್ಮಾನ:ಸಿಎಂ Read More