ಎಲ್ಲಾ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ: ಸಿಎಂ

ಬೆಳಗಾವಿ: ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೆಳಗಾವಿಯ ಟಿಳಕವಾಡಿಯಲ್ಲಿ ಆಧುನಿಕ‌ ಸೌಲಭ್ಯಗಳುಳ್ಳ ಬಹುಮಹಡಿ ಕಲಾ ಮಂದಿರವನ್ನು ಲೋಕಾರ್ಪಣೆಗೊಳಿಸಿದ ವೇಳೆ ಸಿಎಂ ಮಾತನಾಡಿದರು.

ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಕಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದು ಭರವಸೆ ನೀಡಿದರು.

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 150 ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇದರಲ್ಲಿ 102 ಪೂರ್ಣಗೊಂಡಿವೆ. ಉಳಿದವು ಸದ್ಯದಲ್ಲೇ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 6928 ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ ಎಂದು ಸಿಎಂ ತಿಳಿಸಿದರು ‌

ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲಾ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ: ಸಿಎಂ Read More

ಪೌರಕಾರ್ಮಿಕರ ಜೊತೆ ಹೋಳಿಗೆ ಊಟ ಸವಿದು ಯುಗಾದಿ ಆಚರಿಸಿದ ಹರೀಶ್ ಗೌಡ

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರು ಪೌರಕಾರ್ಮಿಕರಿಗೆ ಹೋಳಿಗೆ ಊಟ ಉಣಬಡಿಸಿ ಅವರೊಂದಿಗೆ ಊಟ ಸವಿದು ಯುಗಾದಿ ಹಬ್ಬ ಆಚರಿಸಿ ಮಾದರಿಯಾಗಿದ್ದಾರೆ.

ನಾರಾಯಣ ಶಾಸ್ತ್ರಿ ರಸ್ತೆ, 23ನೇ ವಾರ್ಡಿನಲ್ಲಿ ಯುಗಾದಿ ಹಬ್ಬದ ಅಂಗವಾಗಿ ಹರೀಶ್ ಗೌಡ ನಮ್ಮ ಸಮಾಜದ ಸ್ವಾಸ್ಥವನ್ನು
ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಸಾರಿದರು.

ಪೌರಕಾರ್ಮಿಕರೊಂದಿಗೆ ಬೆರತು ಅವರ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಹೋಳಿಗೆ ಊಟದ ಆತಿಥ್ಯ ನೀಡಿ ಅವರ ಜೊತೆ ಕುಳಿತು ಉಪಹಾರ ಸೇವಿಸಿದರು.ಅದಕ್ಕೂ ಮುನ್ನ ಪೌರಕಾರ್ಮಿಕರಿಗೆ ಬೇವುಬೆಲ್ಲ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕಾ ಪ್ರೇಮ್ ಕುಮಾರ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಮಹದೇವ್,ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ನವೀನ್, ಸಂದೀಪ್,ಹರೀಶ್ ಗೌಡ, ರವಿಚಂದ್ರ, ನೀತು,ಶಿವು, ರವಿ, ಎಸ್ ಎನ್ ರಾಜೇಶ್, ಸಂತೋಷ್, ಮಂಜು, ಜಗದೀಶ್
ಮತ್ತಿತರರು ಹಾಜರಿದ್ದರು.

ಪೌರಕಾರ್ಮಿಕರ ಜೊತೆ ಹೋಳಿಗೆ ಊಟ ಸವಿದು ಯುಗಾದಿ ಆಚರಿಸಿದ ಹರೀಶ್ ಗೌಡ Read More

ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ, ಕಾಳಿ ಬೀರೇಶ್ವರ ಟ್ರಸ್ಟ್ ನಿಂದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಮೈಸೂರಿನ ಕಡಕೋಳ ಗ್ರಾಮದ ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ ಹಾಗೂ ಕಾಳಿ ಬೀರೇಶ್ವರ ಟ್ರಸ್ಟ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡಕೋಳ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಕಾಳಿ ಬೀರೇಶ್ವರ ಟ್ರಸ್ಟ್‌ ಅಧ್ಯಕ್ಷ ಬಿ ನಾಗರಾಜ್ ಅವರು, ನಮ್ಮ ಗ್ರಾಮಗಳ ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರನ್ನು ವಿಶ್ವಾಸ ಮತ್ತು ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.

ಪ್ರತಿವರ್ಷದಂತೆ ಈ ವರ್ಷವೂ ಸಹ ಪೌರಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ಪುರುಷರಿಗೆ ಹೊಸ ಬಟ್ಟೆ ಮಹಿಳಾ ಪೌರಕಾರ್ಮಿಕರಿಗೆ ಹೊಸ ಸೀರೆ ಬಟ್ಟೆಗಳನ್ನು ವಿತರಿಸಿ ಗೌರವಿಸಿ ಸನ್ಮಾನ ಮಾಡುವುದರಿಂದ ಇದು ಅವರ ಸೇವೆಗೆ ಸಂದ ಗೌರವ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆಂಪೇಗೌಡ, 33 ಹಳ್ಳಿ ಯಜಮಾನರಾದ ಸಿದ್ದರಾಮೇಗೌಡ, ನಂಜುಂಡೇಗೌಡ ಖಜಾಂಚಿ ಶ್ರೀ ಕೃಷ್ಣ, ಕೆ. ಟಿ ಶಿವಣ್ಣ, ಟ್ರಸ್ಟಿನ ಸದಸ್ಯರಾದ ಶಿವಬೀರ, ಸಿದ್ದಪ್ಪ, ಹುಚ್ಚೇಗೌಡ, ಕಾಳೇಗೌಡ, ಮಾಲೆಗೌಡ,ಮಾದೇಗೌಡ, ಶಿವ ಬೇರ, ಶಿವಕುಮಾರ್, ಮಹದೇವ, ಕರ್ನಾಟಕ ರಕ್ಷಣಾ ವೇದಿಕೆಯ ರಾಕೇಶ, ವೀರೇಶ, ಮಾಲೆಗೌಡ, ಚಿಕ್ ಪುಟ್ಟಯ್ಯ, ಶಂಭುಲಿಂಗು, ಚನ್ನಬಸವ, ಸುಬ್ಬೇಗೌಡ, ನಾರಾಯಣ ನಾಯ್ಕ, ಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಾದ ಎಂ ಕುಮಾರಸ್ವಾಮಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಹಾಗೂ ಪೌರಕಾರ್ಮಿಕರು ಗ್ರಾಮಸ್ಥರು ಹಾಜರಿದ್ದರು.

ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ, ಕಾಳಿ ಬೀರೇಶ್ವರ ಟ್ರಸ್ಟ್ ನಿಂದ ಪೌರಕಾರ್ಮಿಕರಿಗೆ ಸನ್ಮಾನ Read More

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ- ಜಿ ಟಿ ಡಿ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದ ಹೂಟಗಳ್ಳಿ ನಗರ ಸಭೆ ಆವರಣದಲ್ಲಿ
ಸಮೃದ್ಧಿ ಟ್ರಸ್ಟ್ , ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಎನ್ ಪಿ ಆಸ್ಪತ್ರೆ ಹಾಗೂ ಬಯೋ ಸ್ನೇಹಿ ಅವರ ಸಹಯೋಗದಲ್ಲಿ ಆಯೋಜಿಸಿದ್ದ
ಪೌರ ಕಾರ್ಮಿಕರಿಗೆ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಜಿಟಿಡಿ ಮಾತನಾಡಿದರು.

ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುತ್ತಿರುವುದರಿಂದ ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದೆ. ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ, ಕೆಲಸದ ಒತ್ತಡ ದಲ್ಲಿ ಮಾಡುವ ಕೆಲವೊಂದು ನಿರ್ಲಕ್ಷ್ಯತನದಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ. ಪೌರಕಾರ್ಮಿಕರು ಆರೋಗ್ಯ ತಪಾ ಸಣೆ ಶಿಬಿರ ಗಳಿಗೆ ಸೀಮಿತವಾಗದೇ ನಿತ್ಯ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹೇಳಿದರು.

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ ವಾಗಿರುತ್ತದೆ. ಪೌರಕಾರ್ಮಿಕರು ಆರೋಗ್ಯವಂತರಾಗಿದ್ದರೆ ನಗರದ ಸ್ವಚ್ಛತೆಯನ್ನು ಕಾಪಾಡಿ ಎಲ್ಲರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಆದುದರಿಂದ ಅವರು ಇಂತಹ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡೆದು ಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ನಗರಸಭೆ ಆಯುಕ್ತ ಚಂದ್ರಶೇಖರ್. B.N, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಾ, ಸಮೃದ್ಧಿ ವಾರ್ತೆ ಪತ್ರಿಕೆಯ ಸಂಪಾದಕಿ ಸಹನಗೌಡ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಎಂಡಿ ಅಶ್ವತ್ ಕುಮಾರ್,ಎನ್‌.ಪಿ ಆಸ್ಪತ್ರೆಯ ವಿರಪ್ಪ, ಹೆಲ್ತ್ ಇನ್ಸ್ಪೆಕ್ಟರ್ ಗಳಾದ ಶಂಕರ್ ಲಿಂಗೇಗೌಡರು, ಶಿವಪ್ರಸಾದ್, ನೇತ್ರಾವತಿ, ಪುಷ್ಪಲತಾ ಹಾಗೂ ಬಯೋಸ್ನೇಹಿ ಮನು
ಮತ್ತಿತರರು ಹಾಜರಿದ್ದರು.

ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯ- ಜಿ ಟಿ ಡಿ Read More