ತಾತ್ಕಾಲಿಕ ಶಾಲೆಗೆ ಖುಷಿಯಿಂದ ಬಂದ ಮಾವುತ,ಕಾವಾಡಿಗಳ ಮಕ್ಕಳು

ಮೈಸೂರು: ದಸರಾ ಮಹೋತ್ಸವದ ಗಜಪಡೆ ಜತೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತ,ಕಾವಾಡಿಗಳ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆ ಪ್ರಾರಂಭವಾಗಿದ್ದು,ಖುಷಿಯಿಂದಲೇ ಮಕ್ಕಳು ಬಂದಿದ್ದರು.

ಮೊದಲ ದಿನವೇ ೨೦ ಮಕ್ಕಳು ಶಾಲೆಗೆ ಖುಷಿಯಿಂದ ಹಾಜರಾಗಿದ್ದರು.

ಆ.೪ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಮೊದಲ ತಂಡದ ೯ ಆನೆಗಳ ಮಾವುತ, ಕಾವಾಡಿಗಳ ಮಕ್ಕಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.

ಶಾಲೆ ಬಿಟ್ಟು ಪೋಷಕರೊಂದಿಗೆ ಬಂದಿರುವ ಮಕ್ಕಳಿಗೆ ಪಠ್ಯಕ್ರಮದ ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸುವ ಕಾರ್ಯ ಚಾಲ್ತಿಗೆ ಬಂದಿತು.

ಆದರೆ,ಕಳೆದ ನಾಲ್ಕೈದು ವರ್ಷದಿಂದ ಟೆಂಟ್ ಶಾಲೆ ಪದ್ದತಿ ಪರಿವರ್ತನೆಯಾಗಿ ತಾತ್ಕಾಲಿಕ ಶಾಲೆ ಎಂದು ಮಾರ್ಪಟ್ಟಿದೆ.

ಈ ಬಾರಿ ತಾತ್ಕಾಲಿಕ ಶಾಲೆ ಔಪಚಾರಿಕವಾಗಿ ಆರಂಭಿಸಲಾಗಿದೆ.ಸಾಮಾನ್ಯವಾಗಿ ದಸರಾ ಗಜಪಡೆ ಮಾವುತ, ಕಾವಾಡಿಗಳ ಮಕ್ಕಳು ನಾಚಿಕೆ ಸ್ವಭಾವದವರಾಗಿದ್ದು, ನಗರ ವಾಸಿಗಳು, ಅಪರಿಚಿತರೊಂದಿಗೆ ಬೆರೆಯುವುದಿಲ್ಲ.

ಅದರಲ್ಲೂ ಟೆಂಟ್ ಶಾಲೆಗೆ ಕಲಿಯಲು ಬನ್ನಿ ಎಂದರೂ ಮಕ್ಕಳು ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವುತ, ಕಾವಾಡಿ ಮಕ್ಕಳು ತಾತ್ಕಾಲಿಕ ಶಾಲೆಗೆ ಬರಲು ಆಸಕ್ತಿ ತೋರುತ್ತಿದ್ದಾರೆ.

ಈ ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಜವರೇಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್‌ಸಿ ಎಂ.ಬಿ.ಶ್ರೀಕಂಠಸ್ವಾಮಿ ನೇತೃತ್ವದಲ್ಲಿ ತಾತ್ಕಾಲಿಕ ಶಾಲೆ ನಡೆಯಲಿದೆ.

ಅದಕ್ಕಾಗಿ ದಕ್ಷಿಣ ಬಿಇಒ ಕಚೇರಿ ವತಿಯಿಂದ ವಿದ್ಯಾರಣ್ಯಪುರಂ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್‌ಫಾತಿಮ, ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಈ ಬಾರಿ ತಾತ್ಕಾಲಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಯೋಜಿಸಲಾಗಿದೆ.

ಕಾಡಿನ ಸುಂದರ ಪರಿಸರದಲ್ಲಿರುವ ಮಾವುತ, ಕಾವಾಡಿಗಳ ಮಕ್ಕಳಿಗೆ ಸಾಮಾನ್ಯ ಶೈಲಿಯಂತೆ ಪಾಠ ಮಾಡಿದರೆ ಮನಮುಟ್ಟುವುದಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆಯಲ್ಲಿ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ(ಚಾರ್ಟ್) ಪ್ರದರ್ಶಿಸಿ, ಅಕ್ಷರ ಕಲಿಸಲಾಗುತ್ತಿದೆ.

ತಾತ್ಕಾಲಿಕ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ಮಾವುತ, ಕಾವಾಡಿಗಳ ಮಕ್ಕಳಿಗೂ ಸರಬರಾಜು ಮಾಡಲಾಗುತ್ತದೆ.

ಗಜಪಡೆಯ ಎರಡನೇ ತಂಡ ಆ.೨೫ರಂದು ಆಗಮಿಸಲಿದ್ದು, ೫ ಆನೆಗಳ ಮಾವುತ, ಕಾವಾಡಿಗಳ ಮಕ್ಕಳೂ ಸೇರಿದಂತೆ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದಾರೆ, ಈ ಭಾರಿ ೪೦ ಮಕ್ಕಳು ತಾತ್ಕಾಲಿಕ ಶಾಲೆಯಲ್ಲಿ ಕಲಿಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಪ್ರಾರಂಭವಾಗಿದೆ.

ತಾತ್ಕಾಲಿಕ ಶಾಲೆಗೆ ಖುಷಿಯಿಂದ ಬಂದ ಮಾವುತ,ಕಾವಾಡಿಗಳ ಮಕ್ಕಳು Read More

ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸಿ: ಲಕ್ಷ್ಮೀದೇವಿ

ಮೈಸೂರು: ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ ಎಂದು ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ ಹೇಳಿದರು.

ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು ‌

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಜೊತೆ ಫೋಟೋ ಆನ್ಲೈನ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು,ಅಲ್ಲದೆ ನಮ್ಮ ಧರ್ಮದ
ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು

ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು,ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದು ಲಕ್ಷ್ಮೀದೇವಿ ಕರೆ ನೀಡಿದರು.

ಆನ್ಲೈನ್ ಮೂಲಕ 500ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ತಮ್ಮ ಮನೆಯಲ್ಲಿ ಅಲಂಕರಿಸಿ ಕೂರಿಸಿದ ಶ್ರೀ ವರಮಹಾಲಕ್ಷ್ಮಿ ಜೊತೆ ಫೋಟೋವನ್ನು ಆನ್ಲೈನ್ ಮೂಲಕ ಕಳಿಸಿದ್ದರು.

ವರಮಹಾಲಕ್ಷ್ಮಿ ಫೋಟೋ ಸ್ಪರ್ಧೆಯಲ್ಲಿ 10 ಅತ್ಯುತ್ತಮ ಅಲಂಕರಿಸಿದ ಚಿತ್ರಗಳ ವಿಜೇತರಾದ

ಲತಾ ಹೆಗಡೆ,
ಚೈತ್ರ B,
ರಕ್ಷಿತಾ,
ಹೇಮಂತ್ ಕುಮಾರ್ ,ಚಂದನ್,
ಸುನೀತಾ, ಪ್ರೀತಿ .ಕೆ.ಮಂಜುಳ,ರೀಶು ಪುರುಷೋತ್ತಮ್ ,ಜ್ಯೋತಿ
ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ಆನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು

ಕಾರ್ಯಕ್ರಮ ದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,
ಸಂದ್ಯಾರಾಣಿ, ಕಾವ್ಯ, ಸಹನಾ, ತಾರಾ, ಜ್ಯೋತಿ , ಸವಿತಾ ಘಾಟ್ಕೆ, ಜಯಶ್ರೀ, ಶೃತಿ, ರಾಘವೇಂದ್ರ ಮತ್ತಿತರು ಉಪಸ್ಥಿತರಿದ್ದರು.

ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸಿ: ಲಕ್ಷ್ಮೀದೇವಿ Read More