ಚನ್ನರಾಯಪಟ್ಟಣದಲ್ಲಿ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ

ಚನ್ನರಾಯಪಟ್ಟಣ : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಪಟ್ಟಣದ ಮೈಸೂರು ರಸ್ತೆಯ ಮಹಾಲಕ್ಷ್ಮಿ ಲೇಔಟ್ ನ ಟಿವಿಎಸ್ ಶೋರೂಮ್ ಮುಂಭಾಗ ಅರ್ಥಪೂರ್ಣವಾಗಿ
ಆಚರಿಸಲಾಯಿತು.

ಪುನೀತ್ ರಾಜಕುಮಾರ್ ಅವರ ಅಭಿಮಾನಿ ಹಾಗೂ ಜನಸೇವಕ ಟಿವಿಎಸ್ ಶಶಿಧರ್ ಅವರು ಆಯೋಜಿಸಿದ್ದ ಈ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಪುನೀತ್ ಅವರು ಸದ್ದಿಲ್ಲದಂತೆ ಎಲೆಮರೆಕಾಯಿಯಂತೆ ಮಾಡಿದ ಸೇವೆಯನ್ನು ಕೊಂಡಾಡಿದರು.

ಪುನೀತ್ ರವರ ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಶಿಧರ್ ಅವರು ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟೈಮ್ಸ್ ಗಂಗಾಧರ್, ಹಗಲಿರಳು ಸೇವೆ ಮಾಡಿದ ಆಂಬುಲೆನ್ಸ್ ಚಾಲಕರು, ಕೆಇಬಿ ಲೈನ್ ಮ್ಯಾನ್ ಗಳು ಹಾಗೂ ಮಹಿಳಾ ಆಟೋ ಚಾಲಕಿ ಅವರನ್ನು ಗೌರವಿಸಿ ಹಣ್ಣಿನ ಗಿಡಗಳ ನೀಡುವ ಮೂಲಕ ಸನ್ಮಾನಿಸಿದರು.

ಚನ್ನರಾಯಪಟ್ಟಣದಲ್ಲಿ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ Read More

ಜೆಡಿಎಸ್ ಮುಖಂಡ ಪುಟ್ಟೇಗೌಡ ನಿಧನ

ಚನ್ನರಾಯಪಟ್ಟಣ : ಜೆಡಿಎಸ್ ನ ಹಿರಿಯ ಮುಖಂಡರೂ ದಳದ ನಿಷ್ಠಾವಂತ ಕಾರ್ಯಕರ್ತರಾದ ಪುಟ್ಟೇಗೌಡ ಅವರು ನಿಧನ ಹೊಂದಿದ್ದಾರೆ.

ಅಪಘಾತಕ್ಕೀಡಾಗಿ ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.

ಅವರಿಗೆ 63 ವರ್ಷ ಗಳಾಗಿತ್ತು.ಪುಟ್ಟೇಗೌಡ ಅವರು ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ಚನ್ನೇ ನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು.

ಅವರು ಇಬ್ಬರು ಪುತ್ರರು, ಪುತ್ರಿ, ಅಳಿಯ ಸೊಸೆಯಂದಿರು ಹಾಗೂ ಅಪಾರ ಬಂಧು ಬಾಂಧವರು, ಗ್ರಾಮಸ್ಥರನ್ನು ಅಗಲಿದ್ದಾರೆ.

ಜೆಡಿಎಸ್ ಮುಖಂಡ ಪುಟ್ಟೇಗೌಡರ ನಿಧನಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಪಾರ ಬಂಧು ಬಳಗ,ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಂಜೆ ಅವರ ಹುಟ್ಟೂರು ಚನ್ನೇನಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಜೆಡಿಎಸ್ ಮುಖಂಡ ಪುಟ್ಟೇಗೌಡ ನಿಧನ Read More

ಮಟ್ಟನವಿಲೆ ಸರ್ಕಾರಿ ಪ್ರೌಢಶಾಲೆಗೆಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿಗಳು ಭೇಟಿ

ಚನ್ನರಾಯಪಟ್ಟಣ,ಅ.1:ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಸರ್ಕಾರಿ ಪ್ರೌಢಶಾಲೆಗೆ ಚನ್ನರಾಯಪಟ್ಟಣ ತಾಲೂಕಿನ ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕು ಅಧಿಕಾರಿಗಳಾದ ಉಮಾಶಂಕರ್ ಭೇಟಿ ನೀಡಿ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ವೀಕ್ಷಿಸಿದರು.

ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಯೋಜನೆ, ವಾರದಲ್ಲಿ 6 ದಿನಗಳು ಮೊಟ್ಟೆ ನೀಡುವ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಜತೆಗೆ ಮಕ್ಕಳಿಂದ ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆದುಕೊಂಡರು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಭಾಗ್ಯಲಕ್ಷ್ಮಿ ಕೆ. ಕೆ. ಶಾಲಾ ಸಿಬ್ಬಂದಿ ವರ್ಗ, ಅಡುಗೆ ಸಿಬ್ಬಂದಿ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.

ಮಟ್ಟನವಿಲೆ ಸರ್ಕಾರಿ ಪ್ರೌಢಶಾಲೆಗೆಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿಗಳು ಭೇಟಿ Read More