ಚೆನ್ನೈನ ವಿದ್ಯುತ್ ಸ್ಥಾವರ ಬಳಿ ನಿರ್ಮಾಣಹಂತದ ಕಟ್ಟಡ ಕುಸಿತ:9 ಮಂದಿ ಸಾ*ವು

ಚೆನ್ನೈ: ಚೆನ್ನೈ ಸಮೀಪದ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಹತ್ತು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತ ಒಂಬತ್ತು ಮಂದಿ ಕಾರ್ಮಿಕರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಲವು ಕಾರ್ಮಿಕರು ಗಾಯಗೊಂಡಿದ್ದು ಸ್ಟಾನ್ಲೀ ಆಸ್ಪತ್ರೆಗೆ ಸಾಗಿಸಲಾಗಿದೆ.

ಎಣ್ಣಾರ್ ಥರ್ಮಲ್ ಪವರ್ ಸ್ಟೇಷನ್ ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಮೀಂಜೂರು ಬಳಿಯ ಊರನಂಪೆಡು ಗ್ರಾಮದಲ್ಲಿದೆ. ಈ ವಿದ್ಯುತ್ ಸ್ಥಾವರದ ನಾಲ್ಕನೇ ಹಂತದ ವಿಸ್ತರಣಾ ಕಾಮಗಾರಿ ಕೆಲವು ವರ್ಷಗಳಿಂದಲೂ ನಡೆಯುತ್ತಿದೆ. ಉತ್ತರ ಭಾರತ ಮೂಲದ ಬಹಳಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಇಂದು ಮಂಗಳವಾರ ಬಾಯ್ಲರ್ ವಿಭಾಗದಲ್ಲಿ ಬೃಹತ್ ಕಮಾನು ನಿರ್ಮಾಣ ಕಾರ್ಯದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ನಿರತರಾಗಿದ್ದರು. ಮುಂಗಾಗದಲ್ಲಿ ನಿರ್ಮಿಸಲಾಗಿದ್ದ ಸ್ಕಫೋಲ್ಡ್ ಕಳಚಿ ಬಿದ್ದು ಈ ಅವಘಡ ಸಂಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ‌ ವ್ಯಕ್ತಪಡಿಸಿದ್ದಾರೆ.ಮೃತರ ಕುಟುಂಬಗಳಿಗೆ ತಲಾ‌ 2‌ ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.ಗಾಯಾಳುಗಳ ಚಿಕಿತ್ಸೆಗೆ 50 ಸಾವಿರ ಘೋಷಿಸಿದ್ದಾರೆ.

ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು ಇಂದು ಕಟ್ಟಡ‌ ಕುಸಿತವಾಗಿದೆ

ಚೆನ್ನೈನ ವಿದ್ಯುತ್ ಸ್ಥಾವರ ಬಳಿ ನಿರ್ಮಾಣಹಂತದ ಕಟ್ಟಡ ಕುಸಿತ:9 ಮಂದಿ ಸಾ*ವು Read More

ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಖ್ಯಾತ ಸಂಗೀತ ಸಂಯೋಜಕರೂ ನಿರ್ದೇಶಕರೂ ಆದ ಎ.ಆರ್.ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ವೈದ್ಯರು ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಕೆಲ ಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅವರು ಆಂಜಿಯೋಗ್ರಾಮ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಅವರಿಗೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು Read More

ಚಾಟಿ ಏಟು ಹಾಕಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದ ಅಣ್ಣಾಮಲೈ

ಚೆನ್ನೈ: ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟು ಕೊಟ್ಟುಕೊಂಡು ವಿಶಿಷ್ಟ ಪ್ರತಿಭಟಿಸಿದರು.

ಹಸಿರು ಧೋತಿ ಧರಿಸಿ, ಶರ್ಟ್ ಧರಿಸದೇ ಮನೆಯಿಂದ ಹೊರಬಂದ ಅಣ್ಣಾಮಲೈ, ಹಗ್ಗದಿಂದ ಮಾಡಿದ ಚಾಟಿಯಿಂದ ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿದರು.

ಅನೇಕ ಬಾರಿ ಚಾಟಿ ಬೀಸಿಕೊಂಡು ತಮ್ಮ ದೇಹವನ್ನು ದಂಡನೆಗೆ ಒಳಪಡಿಸಿಕೊಂಡರು.ಮತ್ತೆ ಚಾಟಿ ಬೀಸ ಹೊರಟಾಗ ಬಿಜೆಪಿ ಸದಸ್ಯರು ತಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಮಲೈ, ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಸೋರಿಕೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ಈ ಚಾಟಿ ಬೀಸುವ ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದರು.

ನಾನು ನಿನ್ನೆ ನನ್ನ ಪಾದಗಳಿಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಹೇಳಿದ್ದೇನೆ ಅದರಂತೆ ಅವುಗಳನ್ನು ತೆಗೆದಿದ್ದೇನೆ ಎಂದು ತಿಳಿಸಿದರು.

ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ಶೂ ಧರಿಸುವುದಿಲ್ಲ ಎಂದು ಘೊಷಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಣ್ಣಾಮಲೈ ತಿಳಿಸಿದರು.

ಚಾಟಿ ಏಟು ಹಾಕಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದ ಅಣ್ಣಾಮಲೈ Read More

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು

: ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು ನಿನ್ನೆ ಮಧ್ಯ ರಾತ್ರಿ ದಿಢೀರನೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ರಜನಿಕಾಂತ್ ಆರೋಗ್ಯದಲ್ಲಿ ದಿಢೀರನೇ ಏರುಪೇರಾದ ಕಾರಣ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು,ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಅಭಯ ನೀಡಿದ್ದಾರೆ.

ಮಧ್ಯ ರಾತ್ರಿ ರಜನಿಕಾಂತ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅವರನ್ನು ಕೂಡಲೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ವೈದ್ಯರು ರಜನಿಕಾಂತ್ ಅವರಿಗೆ ಚಿಕಿತ್ಸೆ ಮಾಡುತ್ತಿದ್ದು, ತೀವ್ರ ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ಧೇಶಕ ಡಾ.ಆರ್.ಕೆ.ವೆಂಕಟಸಲಮ್‌ ತಿಳಿಸಿದ್ದರೆ.ರಜಿನಿ ಒಂದೆರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದೂ ಅಭಯ ನೀಡಿದ್ದಾರೆ.

ಇದೇ ವೇಳೆ ರಜನಿಕಾಂತ್ ಪತ್ನಿ ಲತಾ ಕೂಡ ಇದು ರೆಗ್ಯೂಲರ್ ಚೆಕಪ್ ಅಷ್ಟೇ ಎಂದು ಹೇಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು Read More