ಚಾಮುಂಡಿ ಬೆಟ್ಟದಲ್ಲಿ ಸೇವೆಗಳ ಶುಲ್ಕ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಚಾಮುಂಡೇಶ್ವರಿ ಬೆಟ್ಟದ ದರ್ಶನ ಹಾಗೂ ಸೇವೆಗಳ ಶುಲ್ಕ ಏರಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಪ್ರತಿನಿತ್ಯ ಒಂದಲ್ಲ ಒಂದು ದಿನನಿತ್ಯ ಪದಾರ್ಥಗಳ ಬೆಲೆಗಳನ್ನು ಏರಿಕೆ ಮಾಡಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಕೋಟ್ಯಂತರ ಆದಾಯವಿರುವ ಚಾಮುಂಡಿ ಬೆಟ್ಟದಲ್ಲಿ, ಸರ್ಕಾರ ಭಕ್ತಾದಿಗಳಿಗೆ ಅನುಕೂಲಗಳನ್ನು ಮಾಡಿಕೊಡದೆ, ಅವರನ್ನೇ ಲೂಟಿ ಮಾಡಲು ಹೊರಟಿರುವುದು ಖಂಡನೀಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.

ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು 15 ರೂಪಾಯಿಯಿಂದ 25 ರೂಪಾಯಿಗೆ ಏಕಾಏಕಿ ಹೆಚ್ಚಿಸಿರುವುದು ದೇವಿ ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ.

ದೇವಿ ದರ್ಶನಕ್ಕೆ ಪ್ರವೇಶ ದರ 30 ರೂ. ನಿಂದ 50 ರೂ. ಗೆ ಹಾಗೂ 100 ರೂ. ನಿಂದ 200 ರೂ. ಗೆ ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿದೆ
ಚಾಮುಂಡಿ ಬೆಟ್ಟದಲ್ಲಿ, ನಾಮಪಲಕದಲ್ಲಿ 20 ರೂ ನಿಂದ 15 ಸಾವಿರದ ತನಕ ವಿಶೇಷ ಸೇವೆಗಳಿವೆ. ಅದರಲ್ಲಿ 220 ಹಾಗೂ 300 ರೂಗಳ ಅಭಿಷೇಕ ಸೇವೆ ಯನ್ನು ಬಹಳ ಭಕ್ತಾದಿಗಳು ಪ್ರತಿದಿನ ಮಾಡಿಸುತ್ತಿದ್ದು, ಅದನ್ನು ಪ್ರಾಧಿಕಾರ ಈಗ ಅನಧಿಕೃತವಾಗಿ ತೆಗೆದುಹಾಕಿ ಬರಿ 550 ರೂಗಳನ್ನು ಅಭಿಷೇಕಕ್ಕಾಗಿ ಜನರಿಂದ, ಭಕ್ತಾದಿಗಳಿಂದ ವಸೂಲಿ ಮಾಡಲಾಗುತ್ತಿದೆ.

ಭಕ್ತಾದಿಗಳ ಮೇಲೆ ಸರ್ಕಾರ ಹೊರೆಹಾಕಲು ಹೊರಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಈ ವೇಳೆ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ ಹಾಗೂ ಆಯಾಸವನ್ನು ತಣಿಸಿಕೊಳ್ಳಲು ಸಮರ್ಪಕ ತಂಗುಧಾಣದ ವ್ಯವಸ್ಥೆಗಳನ್ನು ಮೊದಲು ಸರ್ಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಚಾಮುಂಡೇಶ್ವರಿ ಬೆಟ್ಟದಲ್ಲಿ ಹಸಿದು ದೇವಿಯ ದರ್ಶನ ಮಾಡಲು ಬರುವ ಭಕ್ತಾದಿಗಳಿಗೆ, ನಮ್ಮ ರಾಜ್ಯದ ಧರ್ಮಸ್ಥಳ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀಡುವಂತಹ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಶೀಘ್ರ ಸಭೆ ನಡೆಸಿ ಇದಕ್ಕೆಲ್ಲಾ ಕಡಿವಾಣ ಹಾಕಿ ಎಲ್ಲಾ ದರ್ಶನ ಸೇವೆಗಳನ್ನು ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು, ಸುರೇಶ್ ಗೋಲ್ಡ್, ಪ್ರಭುಶಂಕರ, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಮಂಜುಳಾ, ಮಧುವನ ಚಂದ್ರು, ಹೊನ್ನೇಗೌಡ, ತಾಯೂರು ಗಣೇಶ್, ಡಾ.ನರಸಿಂಹೇಗೌಡ, ಬಸವರಾಜು , ಭಾಗ್ಯಮ್ಮ, ಸುಜಾತಾ , ಪ್ರಭಾಕರ್, ಡಾ. ಶಾಂತರಾಜೇಅರಸ್, ರಾಧಾಕೃಷ್ಣ , ನಂದಕುಮಾರ್, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಶಿವರಾಂ, ಗಣೇಶ್ ಪ್ರಸಾದ್, ಚಂದ್ರಶೇಖರ್, ರವೀಶ್, ರವಿ ನಾಯಕ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು..

ಚಾಮುಂಡಿ ಬೆಟ್ಟದಲ್ಲಿ ಸೇವೆಗಳ ಶುಲ್ಕ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More

ಡಿ.ಕೆ ಶಿ ಸಿಎಂ ಆಗುವಂತೆ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ಅಭಿಮಾನಿಗಳ ವಿಶೇಷ ಸೇವೆ

ಮೈಸೂರು: ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಯಾಗಬೇಕೆಂದು ಹಾರೈಸಿ, ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದವರು ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ವಿಶೇಷ ಸೇವೆ ಸಲ್ಲಿಸಿದರು.

ಅಭಿಮಾನಿಗಳು ಡಿ.ಕೆ ಶಿವಕುಮಾರ್ ಅವರ ಭಾವಚಿತ್ರವನ್ನು ರಥದ ಮುಂಭಾಗದಲ್ಲಿ ಇರಿಸಿ, ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ. ಶ್ರೀನಾಥ್ ಬಾಬು ಅವರು,ರಾಜ್ಯದಲ್ಲಿ
ಡಿ.ಕೆ. ಶಿವಕುಮಾರ್ ಅವರ ಆಡಳಿತ ವೈಖರಿ, ಅಭಿವೃದ್ಧಿ ದೃಷ್ಟಿಕೋನ ಮತ್ತು ಜನಪರ ಕೆಲಸಗಳು ಅವರನ್ನು ಪರಿಣಾಮಕಾರಿ ನಾಯಕನನ್ನಾಗಿ ಬಿಂಬಿಸಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳಿಂದ ಗೆಲ್ಲಲು ಅವರ ಪರಿಶ್ರಮ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಸಿಎಂ ಬದಲಾವಣೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿಯಾಗಿ ನೇಮಿಸಬೇಕು. ಸಿದ್ದರಾಮಯ್ಯ ಅವರು ಸರ್ಕಾರವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ, ಆದರೆ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಅವಕಾಶ ನೀಡಬೇಕೆಂಬುದು ನಮ್ಮ ಮನವಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಜಿ. ರಾಘವೇಂದ್ರ,ಹರೀಶ್ ಗೌಡ, ಎಸ್.ಎನ್. ರಾಜೇಶ್, ಶಶಾಂಕ್ ಗೌಡ, ಚಂದ್ರು, ಕಿರಣ್, ಪ್ರಸನ್ನ ಕುಮಾರ್ (ಅಪ್ಪಿ), ದಿನೇಶ್, ವಿನೋದ್, ಮ್ಯಾತ್ಯುಸ್, ಹರೀಶ್ ನಾಯ್ಡು, ಶೈಲಾ, ಶೋಭಾ ರಾವ್, ಸುಜಾತ ಭಟ್, ಆಶಾ, ಸುಂದರಿ, ರವಿ ಕಲಾ, ಸಂಗೀತಾ, ದೀಪ ಸೇರಿದಂತೆ ಅಭಿಮಾನಿಗಳು ಪಾಲಗೊಂಡಿದ್ದರು.

ಡಿ.ಕೆ ಶಿ ಸಿಎಂ ಆಗುವಂತೆ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ಅಭಿಮಾನಿಗಳ ವಿಶೇಷ ಸೇವೆ Read More

ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಮನೆಗಳ ತೆರವಿಗೆ ತೇಜಸ್ವಿ ಆಗ್ರಹ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಗಂಭೀರ ಆರೋಪ ಮಾಡಿದರು.

ವಿವಿಧ ಸಂಘಟನೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,ಚಾಮುಂಡಿ ಬೆಟ್ಟದಲ್ಲಿ
ಯಾವುದೇ ಹೊಸ ಮನೆಗಳನ್ನು ನಿರ್ಮಾಣ ಮಾಡದಂತೆ ಆದೇಶ ಇದ್ದರು ಕೂಡ ಚಾಮುಂಡಿ ಬೆಟ್ಟದ ನಿವಾಸಗಳು ಹಾಗೂ ಬೆಟ್ಟಕ್ಕೆ ಬಂದಿರುವ ವಲಸಿಗರು ಅಲ್ಲಿನ ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಹಾಗೂ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿ ಬೆಟ್ಟದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಇದರ ಬಗ್ಗೆ ಗಮನ ಹರಿಸಬೇಕಾದ ಆ ಭಾಗದ ಶಾಸಕರಾದ ಜಿ ಟಿ ದೇವೇಗೌಡರು ಮೌನವಾಗಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಹಸಿಲ್ದಾರ್ ಹಾಗೂ ಅರಣ್ಯ ಅಧಿಕಾರಿಗಳು ಇದು ತಮ್ಮ ಕೆಲಸವಲ್ಲ ಎಂದು ಬೇಜವಾಬ್ದಾರಿಯಿಂದ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ತೇಜಸ್ವಿ ಕಿಡಿಕಾರಿದರು.

ಈಗಾಗಲೇ ನಂದಿ ಹತ್ತಿರ ರಸ್ತೆ ಕುಸಿದು ಮೂರು ನಾಲ್ಕು ವರ್ಷಗಳು ಕಳೆದರೂ ಇನ್ನೂ ಸರಿಪಡಿಸಲಾಗಿಲ್ಲ ಮುಂದಿನ ದಿನದಲ್ಲಿ ಮಡಕೇರಿ ರೀತಿಯಲ್ಲಿ ಚಾಮುಂಡಿ ಬೆಟ್ಟವೂ ಕೂಡ ಕುಸಿಯುವುದನ್ನು ನಾವು ನೋಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಟ್ಟದಲ್ಲಿ ಅಕ್ರಮವಾಗಿ ಮನೆ ಕಟ್ಟುವ ಮಾಲೀಕರುಗಳಿಗೆ ಎಇಇ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ ಇದರ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಹಾಗೂ ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅನಧಿಕೃತವಾಗಿ ಕಟ್ಟಿರುವ ಹಾಗೂ ಕಟ್ಟುತ್ತಿರುವ ಮನೆಗಳನ್ನು ತೆರವುಗೊಳಿಸಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಮತ್ತಿತರರು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಯಾರೇ ಕಾಮಗಾರಿ ಮಾಡಲು ಮುಂದಾದರೆ ಅಂತಹ ಮನೆಗಳನ್ನು ಹಾಗೂ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ , ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ, ಕರ್ನಾಟಕ ಯುವ ಸೇನೆ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ವೇದಿಕೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಯುವ ಹೋರಾಟಗಾರ ನಾಗರಾಜ್ ಮದಕರಿ, ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಜಗದೀಶ್, ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರುಣ್, ಮಹಿಳಾ ಹೋರಾಟಗಾರ್ತಿ ಕಲಾಧನು ಉಪಸ್ಥಿತರಿದ್ದರು.

ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಮನೆಗಳ ತೆರವಿಗೆ ತೇಜಸ್ವಿ ಆಗ್ರಹ Read More

ಚಾಮುಂಡಿ ಬೆಟ್ಟ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಅಗ್ರಹಿಸಿ ಅಂಚೆ ಕಾರ್ಡ್ ಚಳವಳಿ

ಮೈಸೂರು: ಮೈಸೂರಿನ ಪುರಾಣ ಪ್ರಸಿದ್ಧ
ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ವತಿಯಿಂದ ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಯಿತು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅಂಚೆ ಕಾರ್ಡ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಅಂಚೆಕಾರ್ಡ್ ಕಳುಹಿಸಿ ಶೀಘ್ರವಾಗಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಒತ್ತಾಯಿಸಲಾಯಿತು.

ಈಗಾಗಲೇ ದೇಶದ ಹಾಗೂ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ, ಪ್ರವಾಸಿ ಸ್ಥಳ ಹಾಗೂ ಧಾರ್ಮಿಕ ಸ್ಥಳಗಳಿಗೆ ವ್ಯತ್ಯಾಸವಿದೆ.

ಈಗ ಹಾಸನಾಂಬೆ ದೇಗುಲ ಪ್ರವೇಶಕ್ಕೂ ವಸ್ತ್ರ ಸಂಹಿತೆ ಜಾರಿಯಾಗಿದೆ, ಆದರೆ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ಜಾರಿಯಾಗಿಲ್ಲ ಎಂದು ಒತ್ತಾಯಿಸಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅಂಚೆ ಕಾರ್ಡುಗಳನ್ನು ಕಳುಹಿಸಲಾಯಿತು.

ಇದೇ ವೇಳೆ ಅರಮನೆ ಆವರಣದಲ್ಲಿರುವ ಮುಜರಾಯಿ ಇಲಾಖೆಯ ಕಚೇರಿಗೂ ಸಹ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಮೈಕಾ ಪ್ರೇಮ್ ಕುಮಾರ್, ಸಹ ಸಂಚಾಲಕರುಗಳಾದ ಸಂಜಯ್ ಮತ್ತು ರಾಕೇಶ್ ಭಟ್, ಮುಖಂಡರಾದ ಶಿವು ಪಟೇಲ್, ಜೀವನ್ ಕುಮಾರ್, ಸಚಿನ್ ನಾಯಕ್, ಪ್ರಜ್ವಲ್ ಮತ್ತಿತರರು ಭಾಗವಹಿಸಿದ್ದರು.

ಚಾಮುಂಡಿ ಬೆಟ್ಟ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಅಗ್ರಹಿಸಿ ಅಂಚೆ ಕಾರ್ಡ್ ಚಳವಳಿ Read More

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ

ಮೈಸೂರು: ದಸರಾ ಉದ್ಘಾಟನೆಗೆ‌ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ‌ ಸ್ವಾಗತಿಸಿ‌ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ‌ ನೀಡಲಿಲ್ಲ.

ದಲಿತ ಮಹಾಸಭಾ ದಿಂದ ನೂರಾರು ಮಂದಿ ಚಾಮುಂಡಿ ನಡಿಗೆ ಹೆಸರಲ್ಲಿ ಬೆಟ್ಟದ ಕಡೆಗೆ ಹೊರಟಿದ್ದರು.

ದಸರಾ ಮಹೋತ್ಸವ ವೇಳೆ ಪರ-ವಿರೋಧ ಮೆರವಣಿಗೆಯಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆಯವರನ್ನು ತಡೆದಂತೆಯೇ ಪೊಲೀಸರು ದಲಿತ ಮಹಾಸಭಾದವರನ್ನೂ ವಶಕ್ಕೆ ಪಡೆದರು.

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ Read More

ನಟ ವಸಿಷ್ಠ ಸಿಂಹರಿಂದ ಮಹಿಳೆಯರಿಗೆ ಬಾಗಿನ ಅರ್ಪಣೆ

ಮೈಸೂರು: ಆಷಾಡ ಮಾಸದ ಮೂರನೇ ಶುಕ್ರವಾರವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ
ಚಲನಚಿತ್ರ ನಟ ವಸಿಷ್ಟ ಸಿಂಹ ಅವರು
ವಿಶೇಷ ಪೂಜೆ ಸಲ್ಲಿಸಿದರು.

ಇದೇವೇಳೆ ನಟ ವಸಿಷ್ಟ ಸಿಂಹ ಅವರು ಮಹಿಳೆಯರಿಗೆ ಬಾಗಿನ ವಿತರಿಸಿದ್ದು‌ ವಿಶೇಷವಾಗಿತ್ತು.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಯುವ ಮುಖಂಡ ಬೈರತಿ ಲಿಂಗರಾಜು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವಿಭಾಗದ ರೇಖಾ ಶ್ರೀನಿವಾಸ್, ಕೆಪಿಸಿಸಿ ಸಂಯೋಜಕ ಚಂದ್ರು, ಪಂಚಾಯತ್ ಕಾರ್ಯದರ್ಶಿ ಲೋಕೇಶ್, ಚಾಮುಂಡೇಶ್ವರಿ ಪ್ಲೈವುಡ್ ಮಾಲೀಕ ಮಹದೇವ್ ಮತ್ತು ದೇವಸ್ಥಾನದ ಸಿಬ್ಬಂದಿ ಹಾಜರಿದ್ದರು.

ನಟ ವಸಿಷ್ಠ ಸಿಂಹರಿಂದ ಮಹಿಳೆಯರಿಗೆ ಬಾಗಿನ ಅರ್ಪಣೆ Read More

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ

ಮೈಸೂರು: ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ವಿತರಿಸಿ ಶ್ರೀ ದುರ್ಗಾ ಫೌಂಡೇಶನ್ ಮಾದರಿಯಾಗಿದೆ.

ಶ್ರೀದುರ್ಗಾ ಫೌಂಡೇಶನ್ ವತಿಯಿಂದ ಆಷಾಡ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ಸಮರ್ಪಣೆ ಮಾಡಲಾಯಿತು,

ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್
ಮಾತನಾಡಿ, ಪುರಾಣಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಡ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ ಸ್ವಚ್ಛತಾ ಸಿಬ್ಬಂದಿಗಳನ್ನ ಗೌರವಿಸಿ ಬಾಗಿನ ಸಮರ್ಪಣೆ ಮಾಡುತ್ತಿರುವುದು ಅರ್ಥಪೂರ್ಣವಾದುದು ಎಂದು ಹೇಳಿದರು.

ಬೆಟ್ಟಕ್ಕೆ ಬರುವ ಭಕ್ತಧಿಗಳು ಭಕ್ತಿಯ ಜೊತೆಯಲ್ಲೆ ಪ್ಲಾಸ್ಟಿಕ್ ತರದ ಹಾಗೇ ಪರಿಸರ ಸಂರಕ್ಷಣೆ ಕಾಳಜಿ ಸಂಕಲ್ಪ ತೊಡಬೇಕು, ಧಾರ್ಮಿಕ ಪರಂಪರೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆಯೂ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಬಾಗಿನ ಅರ್ಪಣೆ ಆಯೋಜಿಸುತ್ತಾ ಬಂದಿದ್ದಿದೇವೆ ಮುಂದಿನ ದಿನದಲ್ಲಿ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಮಹಿಳಾ ಕಾರ್ಮಿಕರಲ್ಲಿ ಅರಿಶಿನ ಕುಂಕುಮದ ಮಹತ್ವ ಮತ್ತು ಪುರಾಣ ಪ್ರಸಿದ್ಧ ಹಬ್ಬಗಳ ಪರಂಪರೆ ಮತ್ತು ಆಚರಣೆಯ ಮಹತ್ವ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಪರಿಸರ ಸೌಂದರ್ಯ ಕಾಪಾಡಲು ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣ ನಿಷೇಧಿಸಿದೆ ಅದರ ನಿಯಮಗಳನ್ನ ಸಾರ್ವಜನಿಕರು ಪಾಲಿಸಿ ಕೈಜೋಡಿಸಿದರೇ ಮಾತ್ರ ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ವಲಯವಾಗುತ್ತದೆ ಎಂದು ರೇಖಾ ಶ್ರೀನಿವಾಸ್ ತಿಳಿಸಿದರು.

ಈ ಸಂದರ್ಭದಲ್ಲಿ ಕೆ ವಿ ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್,ರೂಪ, ವಿದ್ಯಾ, ಸಮಾಜ ಸೇವಕರಾದ ಶಾಂತಮ್ಮ ಮತ್ತಿತರರು ಹಾಜರಿದ್ದರು.

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ Read More

ಆಷಾಢ ಶುಕ್ರವಾರ ಪೂರ್ಣ ಸಜ್ಜಾಗಿವೆ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ

ಮೈಸೂರು: ಇದೇ 27ರಿಂದ ಪ್ರಾರಂಭವಾಗುವ ಆಶಾಡ ಶುಕ್ರವಾರಕ್ಕೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು
ಮುಕ್ತಾಯ ಹಂತಕ್ಕೆ ಬಂದಿದೆ.

ಚಾಮುಂಡೇಶ್ವರಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಭರದಿಂದ ಮಾಡುತ್ತಿವೆ.

ಚಾಮುಂಡೇಶ್ವರಿ ದೇವಾಲಯ,
ನಗರ ಬಸ್ ನಿಲ್ದಾಣದಿಂದ ಎರಡು ಬಸ್ ಬೇಗಳನ್ನು ನಿರ್ಮಾಣ ಮಾಡಿ ಎರಡು ಕೌಂಟರ್ ಗಳಲ್ಲಿ 300 ರೂ ಟಿಕೆಟ್ ಕೊಡಲು ವ್ಯವಸ್ಥೆ ಮಾಡಲಾಗಿದೆ.

300 ರೂ ಟಿಕೆಟ್ ಪಡೆಯುವವರು ನಗರ ಬಸ್ ನಿಲ್ದಾಣದಲ್ಲಿ ಪಡೆಯಬೇಕು. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಕೊಡಲಾಗುವುದಿಲ್ಲ.

ಬಸ್ ನಿಲ್ದಾಣದ ಕೌಂಟರ್ ಗಳಲ್ಲಿ ಟಿಕೆಟ್ ಗಳನ್ನು ತೆಗೆದುಕೊಳ್ಳಬೇಕು. ಹಾಗೂ ಲಲಿತ ಮಹಲ್ ಪಾರ್ಕಿಂಗ್ ಲಾಟ್ ನಲ್ಲಿ ಮೂರು ಕೌಂಟರ್ ಬಸ್ ಬೇ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಜನರಲ್ ಹಾಗೂ 300ರೂ ಹಾಗೂ 2000ರೂ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ.

ಲಲಿತ ಮಹಲ್ ಹೆಲಿಪಾಡ್ ನಲ್ಲಿ ಹತ್ತರಿಂದ ಹದಿನೈದು ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. UPI, ಫೋನ್ ಪೇ ಗೂಗಲ್ ಪೇ. ಗಳಿಗಾಗಿ ಸಪರೇಟ್ ಕ್ಯು ಮಾಡಲಾಗಿದೆ.

ಎಐ ಕ್ಯಾಮೆರಾ ಗಳು ಲೈಟ್, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇರುತ್ತದೆ ಜನರಲ್ ಬಸ್ ಕ್ಯೂ ಬೇರೆ ಇರುತ್ತದೆ ಹಾಗೂ 2,000ರೂ. ವೋಲ್ವೋ ಬಸ್ ಕ್ಯೂ, ಬೇರೆ ಇರುತ್ತದೆ.

ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ಶೌಚಾಲಯ ದೀಪದ ವ್ಯವಸ್ಥೆ ಮಾಡಲಾತ್ತಿದೆ. ಭಕ್ತಾದಿಗಳು ತಂದ ಪ್ರಸಾದಗಳನ್ನು ಹಂಚಲು ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಖಾಸಗಿ ವಾಹನಗಳು ಕಾರು, ಬಸ್, ದ್ವಿಚಕ್ರ ವಾಹನಗಳನ್ನು ಬೆಟ್ಟದ ಮೇಲೆ ಬಿಡುವುದಿಲ್ಲ. 300 ರೂಪಾಯಿ ಕೊಟ್ಟು ಟಿಕೆಟ್ ತೆಗೆದುಕೊಂಡವರಿಗೆ ಸರದಿ ಸಾಲಿನಲ್ಲಿ ನಿಂತವರಿಗೆ ಡ್ರೈ ಫ್ರೂಟ್ ಪಾಕೆಟ್ ಗಳನ್ನು ಹಂಚಲಾಗುತ್ತದೆ.

ವಿಶೇಷ ಚೇತನರಿಗೆ ವೀಲ್ ಚೇರ್, ಮೆಡಿಕಲ್ ವ್ಯವಸ್ಥೆ ಕೂಡಾ ಇರುತ್ತದೆ ಹಾಗೂ ಸದಾ ಚಾಮುಂಡಿ ಬೆಟ್ಟದ ದೇವಸ್ಥಾನದ ಬಳಿ ಅಂಬುಲೆನ್ಸ್ ವ್ಯವಸ್ಥೆ ಇರುತ್ತದೆ.

300 ರೂಪಾಯಿ ಕೊಟ್ಟು ಬಂದ ಭಕ್ತಾದಿಗಳಿಗೆ ಮೂವತ್ತು ರೂಪಾಯಿ ಟಿಕೆಟ್ ಕೌಂಟರ್ ಬಳಿ ಸೇರಿಸಲಾಗುತ್ತದೆ. ಅಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಿರುತ್ತದೆ.

ಧರ್ಮದರ್ಶನದ ಕ್ಯೂ ಬೇರೆ ಇರುತ್ತದೆ. ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗಾಗಿ ವಾಟರ್ ಬಾಟಲ್, ಶೌಚಾಲಯದ ವ್ಯವಸ್ಥೆಯನ್ನು ಚಾಮುಂಡಿ ಬೆಟ್ಟದಲ್ಲಿ ಮಾಡಲಾಗಿದೆ.

300 ರೂ ಟಿಕೆಟ್ ಕೊಟ್ಟು ಬಂದವರಿಗಾಗಿ ಬಾದಾಮಿ ಹಾಲು ವಿತರಿಸಲಾಗುತ್ತದೆ.3 ವಲಯಗಳನ್ನಾಗಿ ಮಾಡಲಾಗಿರುತ್ತದೆ ಎಲ್ಲಾ ವಲಯಗಳಲ್ಲೂ ಬಾದಾಮಿ ಹಾಲು ವಿತರಣೆ ಮಾಡಲಾಗುತ್ತದೆ.

ಚಾಮುಂಡಿ ಬೆಟ್ಟದಲ್ಲಿ ಸರದಿ ನಿಂತವರಿಗೆ ಐದು ಕಡೆಗಳಲ್ಲಿ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ದರ್ಶನ ಪಡೆದು ಹೊರಬರುವವರಿಗೆ ಒಂದೇ ಗೇಟ್ ನಲ್ಲಿ ಬರಬೇಕು, 2000 ಹಾಗೂ ವಿವಿಐಪಿ ಸಾಲಲ್ಲಿ ಬಂದವರು ಮಹಿಷಾಸುರ ಪ್ರತಿಮೆ ಬಳಿ ಇಳಿದುಕೊಂಡು ಬರಬೇಕು.

ಅಲ್ಲಿಂದ ರೆವಿನ್ಯು ಡಿಪಾರ್ಟ್ಮೆಂಟ್ ಹಾಗೂ ಪ್ರತಿ ಪಾಯಿಂಟ್ ನಲ್ಲೂ ಇನ್ಸ್ ಪೆಕ್ಟರ್ ಗಳು,ಅಧಿಕಾರಿಗಳು ಇರುತ್ತಾರೆ. ಅವರು ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ.

2000 ರೂ ಟಿಕೆಟ್ ತೆಗೆದುಕೊಂಡವರಿಗೆ ಬೇರೆಯದೆ ಸರದಿ ಸಾಲುಗಳು ಇರುತ್ತವೆ. ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಯಾವುದೇ ರೀತಿಯ ಗರ್ಭಗುಡಿ ಗೇಟ್ ತೆಗೆದು ಪ್ರವೇಶ ಇರುವುದಿಲ್ಲ.

ಚಾಮುಂಡಿ ಬೆಟ್ಟ ಹತ್ತುವವರಿಗೆ ನಮ್ಮ ಮೈಸೂರು ಫೌಂಡೇಶನ್ ವತಿಯಿಂದ ಸಹಾಯವಾಣಿ ಇರುತ್ತದೆ.

ನಮ್ಮ ಮೈಸೂರು ಫೌಂಡೇಶನ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ನವರು ಚಾಮುಂಡಿ ಬೆಟ್ಟದಲ್ಲಿ ಬರುವ ವೆಸ್ಟೇಜ್ ಗಳನ್ನು ಶುಚಿ ಮಾಡುವ ಹೊಣೆ ಹೊತ್ತಿದ್ದಾರೆ.

ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತಿ ಬರುವ ಭಕ್ತರನ್ನು 30 ರೂಪಾಯಿ ಟಿಕೆಟ್ ಕೌಂಟರ್ ಬಳಿ ಸೇರಿಸಲಾಗುತ್ತದೆ ಅವರನ್ನು ಜನರಲ್ ಕ್ಯೂ ಮುಂದೆ ಬಂದು ಕನೆಕ್ಟ್ ಆದಾಗ ಅಲ್ಲಿಂದ ಅವರು ದರ್ಶನ ಪಡೆಯಬಹುದು.

ಹಾಗೂ ಈ ಬಾರಿಯ ವಿಶೇಷವೆಂದರೆ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗಾಗಿ ಕುಂಕುಮ ಬಳೆ ಹಾಗೂ ಮಡಲಕ್ಕಿ ಪಾಕೆಟ್ ಗಳನ್ನು ಕೊಡಲಾಗುತ್ತದೆ.

2000 ರೂ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಒಂದು ಲೀಟರ್ ನೀರಿನ ಬಾಟಲ್, ಲಾಡು, ಕುಂಕುಮ ಕೊಡಲಾಗುತ್ತದೆ.

ವಿಶೇಷವಾಗಿ ತಯಾರಿಸಿದ ಶ್ರೀಚಕ್ರ, ಕುಂಕುಮ, ಒಂದು ಗಂಡುಬೇರುಂಡ ಕೈಗೆ ಕಟ್ಟುವ ರಕ್ಷಾ ದಾರ ಹಾಗೂ ಬಾಕ್ಸ್ ಗಳನ್ನು ಮಾರಲಾಗುತ್ತದೆ, ಇನ್ನೂ ದರ ಫಿಕ್ಸ್ ಆಗಿಲ್ಲ.

ಭಕ್ತಾದಿಗಳು ದರ್ಶನ ಮಾಡಿಕೊಂಡು ವಾಪಸ್ ಬಸ್ ಹತ್ತುವಾಗ ಎರಡು ಕಡೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಬಸ್ಟ್ಯಾಂಡ್ ಒಳಗಡೆ ಏರ್ಪಾಡು ಊಟದ ವ್ಯವಸ್ಥೆ ಇರುತ್ತದೆ ಹಾಗೂ ದಾಸೋಹ ಭವನದಲ್ಲೂ ಊಟದ ವ್ಯವಸ್ಥೆ ಇರುತ್ತದೆ. ಎಲ್ಲಾ ಕಡೆ ನೀರು ಕರೆಂಟು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ದಿನ ನಂದಿನಿ ಹಾಲಿನ ಡೈರಿ ಕಡೆಯಿಂದ ಗೋದಿ ಲಡ್ಡುಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಾರೆ
ಪಿಡಬ್ಲ್ಯು ವತಿಯಿಂದ ಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ಹೊಸ ಬ್ಯಾರಿಕೆಡ್ ಹಾಗೂ ಸಿಮೆಂಟು ಕಾಮಗಾರಿಗಳನ್ನು ನಡೆಸಲಾಗುತ್ತಿದೆ,ಇನ್ನೆರಡು ದಿನದಲ್ಲಿ ಅದು ಮುಕ್ತಾಯವಾಗುತ್ತದೆ.

ಆಷಾಢ ಶುಕ್ರವಾರಗಳಿಗಾಗಿಯೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ,ಪೊಲೀಸ್ ಆಯುಕ್ತರಾದ ಸೀಮ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್ ಹಾಗು ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ. ಐದು ಬಾರಿ ಚಾಮುಂಡಿ ಬೆಟ್ಟದಲ್ಲಿ ಸಭೆಗಳನ್ನು ಮಾಡಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸಜ್ಜಾಗಿದೆ ಎಂದು ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿಗಳಾದ ಜೆ. ಎ. ರೂಪಾ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾಧಿಕಾರವು ಭಕ್ತಾದಿಗಳಿಗೆ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಚಾಮುಂಡಿ ಬೆಟ್ಟಕ್ಕೆ ತರಬಾರದು, ಚಾಮುಂಡಿ ಬೆಟ್ಟದ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಷಾಢ ಶುಕ್ರವಾರ ಪೂರ್ಣ ಸಜ್ಜಾಗಿವೆ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ Read More

ಚಾಮುಂಡಿ ಬೆಟ್ಟದಲ್ಲಿಯೋಗ ಚಾರಣ ದುರ್ಗ ನಮಸ್ಕಾರ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಯೋಗ ದಸರಾ ಉಪ ಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣದಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯರು, ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಯೋಗ ದಸರಾಗೆ ಮತ್ತಷ್ಟು ಮೆರುಗು ತಂದಿತು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪ , ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ರವಿಕುಮಾರ್ ವೈ ಎಸ್ ಮತ್ತಿತರರು ಉಪಸ್ಥಿತರಿದ್ದರು.

ಚಾಮುಂಡಿ ಬೆಟ್ಟದಲ್ಲಿಯೋಗ ಚಾರಣ ದುರ್ಗ ನಮಸ್ಕಾರ Read More

ಸಿದ್ದು ಪರ ‌ಜಿ.ಟಿ.ದೇವೇಗೌಡ ಬ್ಯಾಟಿಂಗ್

ಮೈಸೂರು: ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಜೆಡಿಎಸ್ ಶಾಸಕ‌ ಜಿ.ಟಿ.ದೇವೇಗೌಡ ಅವರು‌ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸುವ ಮೂಲಕ ದೋಸ್ತಿಗಳಿಗೆ ಟಾಂಗ್ ನೀಡಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ, ಜೆಡಿಎಸ್ ದೋಸ್ತಿ ನಾಯಕರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆಗಿರುವ ಜಿ.ಟಿ ದೇವೇಗೌಡ ನೇರ ಶಾಕ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೋಡೋದೆ ಆದರೆ ಎಫ್ಐಆರ್ ಆಗಿರೋ ಎಲ್ಲಾ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೂ ಕೊಡಲಿ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ
ರಾಜೀನಾಮೆ ಕೊಡಿ,ರಾಜೀನಾಮೆ ಕೊಡಿ ಎಂದು ಒಂದೇ‌ ಸಮನೆ ಕೇಳುತ್ತಿದ್ದಾರಲ್ಲಾ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ, ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ, ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಕಾರವಾಗಿಯೇ ಪ್ರಶ್ನಿಸಿದರು.

136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ,ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ಕೊಡೋದಕ್ಕೆ ಸಾದ್ಯಾನಾ, ಒಂದು ಅತ್ಯಾಚಾರ, ಕೊಲೆ ಮೂರು ತಿಂಗಳು ಮಾಧ್ಯಮ ತೋರಿಸುತ್ತೆ, ಒಂದು ಎಫ್ ಐ ಆರ್ ನಾ ಎಷ್ಟು ದಿನ ತೋರಿಸುತ್ತಿರಾ, ಯಾರ ಯಾರ ಮೇಲೆ ಎಫ್ ಐ ಆರ್ ಆಗಿದೆ ಎಲ್ಲರೂ ರಾಜೀನಾಮೆ ಕೊಡಿ ಎಂದು ಜಿಟಿಡಿ ಸವಾಲು ಹಾಕಿದರು.

ಶಾಸಕ ಜಿ ಟಿ ದೇವೇಗೌಡ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸಚಿವರು ಶಾಸಕರು ಫುಲ್ ಖುಷ್.

ಭಾಷಣ ಮುಗಿಸಿ ಬಂದ ಜಿ.ಟಿ ದೇವೇಗೌಡರಿಗೆ ಶಾಸಕರಾದ ರಮೇಶ್ ಬಂಡೀಸಿದ್ದೇಗೌಡ, ತನ್ವೀರ್ ಸೇಠ್‌ ಎದ್ದು ನಿಂತು ಗೌರವ ಸಲ್ಲಿಸಿದರೆ, ಸಚಿವ ಹೆಚ್. ಕೆ ಪಾಟೀಲ್, ವೆಂಕಟೇಶ್‌ ಹಸ್ತಲಾಘವ ಕೊಟ್ಟು ಅಭಿನಂದನೆ ಸಲ್ಲಿಸಿದ್ದು ವಿಶೇಷ.

ಸಿದ್ದು ಪರ ‌ಜಿ.ಟಿ.ದೇವೇಗೌಡ ಬ್ಯಾಟಿಂಗ್ Read More