ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಜಿ.ಟಿ.ದೇವೇಗೌಡ

ಮೈಸೂರು, ಏ.4: ಕಳೆದ ನಾಲ್ಕೈದು ದಶಕಗಳಿಂದ ಸಾಗುವಳಿ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ಕೊಡಿಸುವ ತನಕ ನೆಮ್ಮದಿ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕಿನ ಗುಮಚನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೯೪-ಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,ಹಕ್ಕುಪತ್ರ ಕೊಡುವ ಕುರಿತು ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ,ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ‌ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಂದು ಹಳ್ಳಿ ನನ್ನ ಊರು ಇದ್ದಂತೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೨೫ ವರ್ಷಗಳ ಕಾಲ ಸಿದ್ದರಾಮಯ್ಯ ಶಾಸಕರಾಗಿದ್ದರೆ,ಮೂರು ಬಾರಿಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಜಯಪುರ,ಗುಮಚನಹಳ್ಳಿ,ಹಾರೋಹಳ್ಳಿ,ಚಿಕ್ಕನಹಳ್ಳಿ ಮೊದಲಾದ ಊರುಗಳು ನಮ್ಮ ಊರಿನಂತೆ ಇವೆ. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರೇ ಆಗಿದ್ದಾರೆ,ನಮ್ಮ ಮನೆಗೆ ದಾಖಲೆ ಇಲ್ಲವೆಂದು ಅನೇಕರು ಬರುತ್ತಿದ್ದರು. ದಾಖಲೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗೋದಿಲ್ಲ. ಮಾರಾಟಕ್ಕೆ ಅನಾನುಕೂಲವಾಗುತ್ತಿತ್ತು.ಅದನ್ನು ಮನಗಂಡು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಜಿಟಿಡಿ ನುಡಿದರು.

ಸಾಗುವಳಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದರೂ ಮತ್ತು ದಾಖಲೆಯಲ್ಲಿ ಹೆಸರು ಇದ್ದರೂ ಅರಣ್ಯಭೂಮಿ ಎನ್ನುವುದನ್ನು ತೋರಿಸಲಾಗಿದೆ. ಇದರಿಂದಾಗಿ ಹಕ್ಕು ಪತ್ರ ಕೊಡಲು ಕೆಲವು ಕಡೆ ಸಮಸ್ಯೆಯಾಗಿದೆ. ಇದು ಬರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸಮಸ್ಯೆಯಾಗಿಲ್ಲ ಅನೇಕ ಕ್ಷೇತ್ರಗಳಲ್ಲಿ ಉಂಟಾಗಿದೆ, ಹಾಗಾಗಿ, ಅರಣ್ಯ ಇಲಾಖೆ ಭೂಮಿ ಅಂತ ತೋರಿಸಿರುವ ಜಮೀನಿನಲ್ಲಿ ರೈತರು ಉಳುಮೆ ಮಾಡಿಕೊಂಡು ಬಂದಿದ್ದರೆ ಹಕ್ಕುಪತ್ರ ಕೊಡಿಸುವುದಕ್ಕೆ ತೀರ್ಮಾನ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಜಯಪುರ ಹೋಬಳಿಯ ಕೆಲವು ಗ್ರಾಮಗಳ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ.ಅವರಿಗೆ ಸಾಗುವಳಿ ಚೀಟಿ ಇದ್ದರೂ ಅರಣ್ಯ ಇಲಾಖೆ ಭೂಮಿಯಾಗಿ ಬಿಟ್ಟಿದೆ. ಇಂತಹದನ್ನು ಸರಿಪಡಿಸಿ ಹಕ್ಕುಪತ್ರ ನೀಡಬೇಕೆಂದು ತೀರ್ಮಾನಿಸಿ ಅನೇಕ ತಿಂಗಳಿಂದ ಶ್ರಮ ಪಟ್ಟಿದ್ದೇನೆ ಒಂದು ಒಳ್ಳೆಯ ಕೆಲಸಕ್ಕೆ ನಾನಾ ವಿಘ್ಞಗಳು ಎದುರಾದರೂ ಕೊನೆಗೂ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ಹಕ್ಕುಪತ್ರ ವಿತರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಸಂತಸ ಪಟ್ಟರು ಶಾಸಕರು.

ತಹಸಿಲ್ದಾರ್ ಮಹೇಶ್ ಕುಮಾರ್ ಅವರು ಒಂದು ವರ್ಷದಿಂದ ಶ್ರಮಪಟ್ಟು ಹಕ್ಕುಪತ್ರ ಕೊಡಲು ರೆಡಿಮಾಡಿದ್ದರು. ಆದರೆ,ಕೋರ್ಟ್ ಇರುವುದರಿಂದ ಮುಂದೊಂದು ದಿನ ಮಾಡುವಂತೆ ಹೇಳಿದರು. ಆದರೆ, ಒಂದಲ್ಲಾ ಒಂದು ಕಾರಣಕ್ಕಾಗಿ ವಿಳಂಬವಾಗುತ್ತಿದೆ. ನಿಮ್ಮ ಬದಲಿಗೆ ಉಪ ತಹಸಿಲ್ದಾರ್ ಅವರನ್ನೇ ಕಳುಹಿಸುವಂತೆ ಹೇಳಿದ್ದೆ.ಅದೇ ರೀತಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ವಿಡೀಯೋ ಕಾನ್ಫರೆನ್ಸ್ ಇದ್ದ ಕಾರಣಕ್ಕಾಗಿ ಬರಲು ಸಾಧ್ಯವಾಗಿಲ್ಲ.ಆದರೆ, ಉಳಿದ ಅಧಿಕಾರಿಗಳ ಸಮ್ಮುಖದಲ್ಲೇ ಕಾರ್ಯಕ್ರಮ ಮಾಡಿ ಹಕ್ಕುಪತ್ರ ನೀಡಲಾಗಿದೆ ಎಂದು ನುಡಿದರು.

ಉದ್ಬೂರು,ಗುಮಚನಹಳ್ಳಿ ಮೊದಲಾದ ಗ್ರಾಮಗಳಿಗೆ ಕುಡಿಯುವ ನೀರು,ರಸ್ತೆ,ಚರಂಡಿ,ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗಿದೆ. ಆಶ್ರಯ ಬಡಾವಣೆಗಾಗಿ ಇದ್ದ ತೊಡಕುಗಳನ್ನು ನಿವಾರಿಸಲು ಗಮನಹರಿಸಿದ್ದೇನೆ. ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸಲ್ಲಿಸಿದರೆ ತಕ್ಷಣವೇ ಮಂಜೂರಾತಿ ದೊರೆಯಲಿದೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ ಮಂಡನಹಳ್ಳಿ ಗ್ರಾಮದಲ್ಲಿ ೩೮ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ, ಶಾಸಕರ ವಿಶೇಷ ಅನುದಾನದಲ್ಲಿ ಮಂಡನಹಳ್ಳಿ-ಕಾಡನಹಳ್ಳಿ ರಸ್ತೆ ಕಾಮಗಾರಿ,ಶಾಲಾ ಕೊಠಡಿಗಳನ್ನು ಉದ್ಘಾಟನೆಯನ್ನು ಜಿ.ಟಿ.ದೇವೇಗೌಡ ನೆರವೇರಿಸಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಜಿ.ಟಿ.ದೇವೇಗೌಡ Read More

ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರು ಹೆಚ್ಚಾಗಿ ಬಳಸಿಕೊಳ್ಳಿ:ಯದುವೀರ್

ಮೈಸೂರು: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.

ಚಾಮುಂಡೇಶ್ವರಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಯುವಕರಿಂದ ಹಿರಿಯರಿಗೆ ನಮನ ಕಾರ್ಯಕ್ರಮವನ್ನು ರಾಮಕೃಷ್ಣನಗರದ ಲಿಂಗಾಂಬುದಿ ಕೆರೆಯ ಬಳಿ ಹಮ್ಮಿಕೊಂಡಿದ್ದ ವೇಳೆ ಯದುವೀರ್ ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಬಿ. ಎಂ. ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿ ಈರೇಗೌಡ, ಉಪಾಧ್ಯಕ್ಷರಾದ ಹೆಚ್ ಜಿ ರಾಜಮಣಿ, ಮೃಗಲಾಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್, ಯುವ ಮೋರ್ಚಾ ಮಂಡಲದ ಅಧ್ಯಕ್ಷ ಮಧು ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್, ಉಪಾಧ್ಯಕ್ಷರಾದ ರಾಘವೇಂದ್ರ, ಸೂರ್ಯಪ್ರಕಾಶ್, ಮಧು, ಸಂಜಯ್ ಪ್ರಸನ್ನ, ಅವಿನಾಶ್, ಮಂಡಲದ ಪ್ರಮುಖರಾದ ಶಶಿಕಾಂತ್, ರಾಘವೇಂದ್ರ, ಪ್ರತಾಪ್, ವಿನುತಾ, ಕಲಾವತಿ, ತುಳಸಿ, ರಮಾಬಾಯಿ, ಶುಭಶ್ರೀ, ಪುಟ್ಟಮ್ಮಣ್ಣಿ, ಮಂಜುಳಾ, ನಾಗರಾಜ್ ಜನ್ನು, ಕಾಂತರಾಜ ಅರಸ್, ದೇವರಾಜು, ಶ್ರೀನಿವಾಸ್ ಪ್ರಸಾದ್, ರಂಗೇಶ್, ರವಿ ಉತ್ತಪ್ಪ, ರಾಧಾ ಮುತಾಲಿಕ್, ಸುಬ್ರಮಣ್ಯ ರಾಜು, ಪ್ರಭಾಕರ್ ಮತ್ತಿತರರು ಹಾಜರಿದ್ದರು.

ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರು ಹೆಚ್ಚಾಗಿ ಬಳಸಿಕೊಳ್ಳಿ:ಯದುವೀರ್ Read More

ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ:ಬಿ ಎಂ ರಘು

ಮೈಸೂರು: ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ ಎಂದು ಬಿಜೆಪಿ ಮೈಸೂರು ನಗರ(ಜಿಲ್ಲೆ) ಪ್ರಧಾನ ಕಾರ್ಯದರ್ಶಿ ಬಿ ಎಂ ರಘು ತಿಳಿಸಿದರು.

ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ಕುವೆಂಪುನಗರದಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಯುವ ಜನತೆ ಹೆಚ್ಚಾಗಿ ಕುವೆಂಪು ಅವರ ಸಾಹಿತ್ಯವನ್ನು ಓದಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಕವಿತೆಗಳು ಕನ್ನಡಿಗರ ಅಸ್ಮಿತೆ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ, ಕನ್ನಡಿಗರ ಮನದಲ್ಲಿ ಅವರು ಎಂದಿಗೂ ಚಿರಸ್ಥಾಯಿ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಈರೇಗೌಡ, ಉಪಾಧ್ಯಕ್ಷೆ ಹೆಚ್ ಜಿ ರಾಜಮಣಿ, ಮುಖಂಡರಾದ ಈ.ಸಿ. ನಿಂಗರಾಜ ಗೌಡ, ಡಾ. ಭಾನುಪ್ರಕಾಶ್, ಶಿವಕುಮಾರ್, ಮಧು ಸೋಮಶೇಖರ್, ಚಂದನ್ ಗೌಡ, ಸಾಗರ್ ಸಿಂಗ್, ರಾಘವೇಂದ್ರ, ಶ್ರೀನಿವಾಸ್ ಪ್ರಸಾದ್, ಶುಭಶ್ರೀ, ಪುಟ್ಟಮ್ಮಣ್ಣಿ, ದೇವರಾಜ್, ಕಲಾವತಿ, ರಮಾಬಾಯಿ, ರಾಧಾ ಮುತಾಲಿಕ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ:ಬಿ ಎಂ ರಘು Read More

ಬಿಜೆಪಿ ಮಹಿಳಾ ಮೋರ್ಚಾದಿಂದಯೋಗ ಉದ್ಯಾನವನದಲ್ಲಿ ರಾಜ್ಯೋತ್ಸವ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಮಕೃಷ್ಣನಗರದ ಯೋಗ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲುಸಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ನಂತರ ಮಹಿಳೆಯರಿಗಾಗಿ ಗಾಯನ ಮತ್ತು ಅಭಿನಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರೇಣುಕಾ ರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಕಾರ್ಯದರ್ಶಿ ವಿಜಯಾ ಮಂಜುನಾಥ್, ಮಂಡಲದ ಅಧ್ಯಕ್ಷೆ ಲಕ್ಷ್ಮಿ ಜಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುಳಾ, ಪುಟ್ಟಾಮ್ಮಣ್ಣಿ, 58ನೇ ವಾರ್ಡ್ ಅಧ್ಯಕ್ಷ ಸುಬ್ರಹ್ಮಣ್ಯ ರಾಜು, ಮುಖಂಡರಾದ ಸುಜಾತ, ಬಿ. ಸಿ. ಶಶಿಕಾಂತ್, ಹಿರಿಯಣ್ಣ, ಮಧು ಸೋಮಶೇಖರ್, ರಾಘವೇಂದ್ರ, ಚಂದನ್ ಗೌಡ, ಕಾಂತರಾಜ ಅರಸ್, ನಾಗರಾಜ್ ಜನ್ನು, ದೇವರಾಜು ಮತ್ತಿತರರು ಹಾಜರಿದ್ದರು.

ಬಿಜೆಪಿ ಮಹಿಳಾ ಮೋರ್ಚಾದಿಂದಯೋಗ ಉದ್ಯಾನವನದಲ್ಲಿ ರಾಜ್ಯೋತ್ಸವ Read More

ಸೇವಾ ಕಾರ್ಯಗಳ ಮೂಲಕ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಬಿ.ವೈ. ವಿಜಯೇಂದ್ರ ರವರ 49ನೇ ಹುಟ್ಟುಹಬ್ಬವನ್ನು ಸೇವಾ ಕಾರ್ಯಗಳ ಮೂಲಕ ಆಚರಣೆ ಮಾಡಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಬೋಗಾದಿಯ ಶ್ರೀದೇವಿ ನರ್ಸಿಂಗ್ ಹೋಮ್ ನಲ್ಲಿನ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.

ಮಹಿಳಾ ಮೋರ್ಚಾ ವತಿಯಿಂದ ರಾಮಕೃಷ್ಣ ನಗರದ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಗಿಡ ನೆಟ್ಟು ನೀರು ಹಾಕಲಾಯಿತು.

ಈ ವೇಳೆ ನಗರ ಪ್ರಧಾನ ಕಾರ್ಯದರ್ಶಿ ಬಿ. ಎಂ. ರಘು, ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಲೋಹಿತ್, ಯುವ ಮೋರ್ಚಾ ಪ್ರಭಾರಿ ರುದ್ರಮೂರ್ತಿ, ಮಂಡಲ ಉಪಾಧ್ಯಕ್ಷೆ ಹೆಚ್.ಜಿ.ರಾಜಮಣಿ, ಎಸ್ ಸಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎನ್. ಪ್ರತಾಪ್, ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ ಮತ್ತು ಸಾಗರ್ ಸಿಂಗ್, ಉಪಾಧ್ಯಕ್ಷರುಗಳಾದ ರಾಘವೇಂದ್ರ ಸಿ, ಸೂರ್ಯಪ್ರಕಾಶ್ ಪಿ, ಮಧು ಸಿ ಎಸ್, ಶಿವು,
ಮಹಿಳಾ ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಿ ಜಯಶಂಕರ್, ಪ್ರದಾನ ಕಾರ್ಯದರ್ಶಿಗಳಾದ ಪುಟ್ಟಮ್ಮಣ್ಣಿ, ಮಂಜುಳಾ, ಉಪಾಧ್ಯಕ್ಷರಾದ ರಮಾಭಾಯಿ, ರಾಧಾ ಮುತಾಲಿಕ್,
ಮುಖಂಡರಾದ ಶುಭಶ್ರೀ, ಬಸವಣ್ಣ, ಸ್ವಾಮಿಗೌಡ, ವಿನುತಾ, ತುಳಸಿ, ಗಿರೀಶ್ ಹಾಗೂ ಆಸ್ಪತ್ರೆ ಸಿಬ್ಬಂದಿ ನಾಗರಾಜ್ ಭಾಗವಹಿಸಿದ್ದರು.

ಸೇವಾ ಕಾರ್ಯಗಳ ಮೂಲಕ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ Read More

ಬಿಜೆಪಿ ಮಹಿಳಾ ಮೋರ್ಚಾದಿಂದ ರಂಗೋಲಿ ಸ್ಪರ್ಧೆ

ಮೈಸೂರು: ಬಿಜೆಪಿ ಮಹಿಳಾ ಮೋರ್ಚ ಚಾಮುಂಡೇಶ್ವರಿ ಗ್ರಾಮಾಂತರ ವತಿಯಿಂದ ಬೋಗಾದಿ ಬಸವೇಶ್ವರ ಸಮುದಾಯ ಭವನದ ಬಳಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ಇದೇ‌ ವೇಳೆ‌ ಗಿಡ ನೆಡುವ ಕಾರ್ಯವನ್ನೂ ನೆರವೇರಿಸಲಾಯಿತು. ಇದಕ್ಕೆ ಪಕ್ಷದ ಹಿರಿಯರಾದ ಗೋಪಾಲ್ ರಾವ್,ಕವೀಶ್ ಗೌಡ, ಮಂಡಲ ಅಧ್ಯಕ್ಷ ಪೈಲ್ವಾನ್ ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿಎಮ್ ರಘು. ಮಹೇಶ್, ಅರುಣ್ ಕುಮಾರ್, ನಂದೀಶ್ ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಚಾಮುಂಡೇಶ್ವರಿ ಗ್ರಾಮಾಂತರ ಅಧ್ಯಕ್ಷೆ ಸವಿತಾ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಯಮುನಾ ಕೃಷ್ಣಮೂರ್ತಿ, ಇಂದಿರಾ, ಉಪಾಧ್ಯಕ್ಷರುಗಳಾದ ಕೃಷ್ಣವೇಣಿ, ಗೀತಾ ಪ್ರಮೋದ್, ಪದಾಧಿಕಾರಿಗಳಾದ ರೇಖಾ, ಶಾಲಿನಿ, ಶ್ರುತಿ, ಮಾಯಾ, ರಾಧಾ, ಸಂಚಾಲಕರಾದ ಝಾನ್ಸಿ ರಾಣಿ, ಪ್ರಮೀಳಾ ನಾಯಕ್, ಅನಿತಾ ಮತ್ತಿತರರು ಹಾಜರಿದ್ದರು.

ಬಿಜೆಪಿ ಮಹಿಳಾ ಮೋರ್ಚಾದಿಂದ ರಂಗೋಲಿ ಸ್ಪರ್ಧೆ Read More