ಚಾಮುಂಡೇಶ್ವರಿ ಬಳಗದಿಂದ ಶಾಮನೂರು ನಿಧನಕ್ಕೆ ಸಂತಾಪ

ಮೈಸೂರು: ಮೈಸೂರಿನ ಶಿವರಾಮಪೇಟೆ ಯಲ್ಲಿ ಚಾಮುಂಡೇಶ್ವರಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ಮುತ್ಸದಿ ರಾಜಕಾರಣಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ನವರಿಗೆ ಸಂತಾಪ ಸೂಚಿಸಲಾಯಿತು.

ಶಾಮನೂರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಅವರು ಶಾಮನೂರು ಶಿವಶಂಕರಪ್ಪ ನವರ ನಿಧನದ ಸುದ್ದಿ ತಿಳಿದು ಆಘಾತವಾಯಿತು ಹಾಗೂ ತೀವ್ರ ದುಃಖವನುಂಟು ಮಾಡಿದೆ ಎಂದು ಹೇಳಿದರು.

ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅಮೂಲ್ಯ,ದೀರ್ಘಕಾಲದ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ಶಿಸ್ತಿನ ರಾಜಕಾರಣ ಮಾಡಿದ್ದರು.
ಅವರ ಅಗಲಿಕೆ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ರಾಜಕೀಯ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ, ಅವರ ಆದರ್ಶಗಳು ಹಾಗೂ ಸೇವಾ ಮನೋಭಾವ ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿದೆ ಎಂದು ನಜರ್ಬಾದ್ ನಟರಾಜ್ ತಿಳಿಸಿದರು.

ಎಸ್ ಎನ್ ರಾಜೇಶ್, ಕಡಕೋಳ ಶಿವಲಿಂಗು, ದಿನೇಶ್, ಮೊಹಮ್ಮದ್, ನಂಜುಂಡಸ್ವಾಮಿ,ರವಿಚಂದ್ರ, ದೀಪಕ್, ಹರೀಶ್ ನಾಯ್ಡು, ಲೋಕೇಶ್ ಮತ್ತುತರರು ಹಾಜರಿದ್ದರು.

ಚಾಮುಂಡೇಶ್ವರಿ ಬಳಗದಿಂದ ಶಾಮನೂರು ನಿಧನಕ್ಕೆ ಸಂತಾಪ Read More

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಪಾಲಿಸಿ-ನಜರ್ಬಾದ್ ನಟರಾಜ್

ಮೈಸೂರು: ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಜನತೆ ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಕರೆ ನೀಡಿದರು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ
ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ‌ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶಗಳು ಬದುಕಿಗೆ ಪ್ರೇರಣಾತ್ಮಕ ಮತ್ತು ಪ್ರಭಾವಶಾಲಿಯಾಗಿದ್ದು,ಅವುಗಳನ್ನು ಸಣ್ಣ ಕೈಪಿಡಿಗಳ ರೂಪದಲ್ಲಿ ಪ್ರಕಟಿಸಿ ಜನಾಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಡಿ‌.ಕೆ ಶಿವಕುಮಾರ್ ಅಭಿಮಾನಿ ಬಳಗದ ಜಿ ರಾಘವೇಂದ್ರ, ಪಾಂಡವಪುರ ದಿನೇಶ್, ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ್, ಲೋಕೇಶ್, ಸೇವಾದಳ ಮೋಹನ್ ಕುಮಾರ್, ದಿನೇಶ್, ಪರಿಸರ ಬಳಗದ ಕೃಷ್ಣಪ್ಪ (ಗಂಟಯ್ಯ), ಎಸ್.ಎನ್ ರಾಜೇಶ್,ರವಿಚಂದ್ರ, ನಿತೀಶ್, ಕೆ ಜಿ ಕೊಪ್ಪಲ್ ಗುಂಡಪ್ಪ ಮತ್ತಿತರರು ಹಾಜರಿದ್ದರು.

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಪಾಲಿಸಿ-ನಜರ್ಬಾದ್ ನಟರಾಜ್ Read More

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ

ಮೈಸೂರು: ಚಾಮುಂಡೇಶ್ವರಿ ಯುವ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಸದ ಸುನಿಲ್ ಬೋಸ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸುನಿಲ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಿಹಿ ವಿತರಿಸಿ ಜನುಮದಿನದ ಶುಭಕೋರಿದರು

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಲೋಕೇಶ್ ಕುಮಾರ್ ಮಾದಾಪುರ, ಜಿ. ರಾಘವೇಂದ್ರ, ರಾಜಶೇಖರ್, ಸೇವಾದಳ ಮೋಹನ್ ಕುಮಾರ್, ರವಿಚಂದ್ರ, ಲೋಕೇಶ್,ದಿನೇಶ್, ಡೈರಿ ವೆಂಕಟೇಶ್, ಗಂಟಯ್ಯ ಕೃಷ್ಣಪ್ಪ, ಎಸ್ ಎನ್ ರಾಜೇಶ್, ಮಲ್ಲೇಶ್, ಜಯರಾಮ,ಪುನೀತ್ ರಾಜ್, ಗೌರಿಶಂಕರ್ ನಗರ ಶಿವು, ಮೈಸೂರು ಬಸವಣ್ಣ,
ಮತ್ತಿತರರು ಸುನಿಲ್ ಬೋಸ್ ಹೆಸರಿನಲ್ಲಿ ಸಿಹಿ ವಿತರಿಸಿದರು.

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ Read More

ದೇವರಾಜ ಮಾರುಕಟ್ಟೆಯಲ್ಲಿ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ

ಮೈಸೂರು: ಹಬ್ಬಗಳ ಹಿನ್ನೆಲೆಯಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಹಾಗೂ ಚಾಮುಂಡೇಶ್ವರಿ ಬಳಗದ ವತಿಯಿಂದ ನಗರದ ದೇವರಾಜ ಮಾರುಕಟ್ಟೆ ಮುಂಭಾಗ
ಬಟ್ಟೆ‌ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಹಬ್ಬಗಳನ್ನು ಆಚರಿಸಲು ಮಾರ್ಕೆಟ್ ನಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು
ಬರುವಾಗ ಪ್ಲಾಸ್ಟಿಕ್ ಕವರ್ ತೊರೆದು ಬಟ್ಟೆ ಬ್ಯಾಗನ್ನು ಬಳಸುವಂತೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷ ನಜರ್ಬಾದ್ ನಟರಾಜ್,
ಹಿಂದಿನ ಕಾಲದಂತೆ ಈ ಕಾಲದಲ್ಲೂ ನಾವು ಬಟ್ಟೆಯಲ್ಲಿ ಹೆಣೆದ ಅಥವಾ ಬಟ್ಟೆಯ ಕೈ ಚೀಲಗಳನ್ನು ಹಿಡಿದು ಮಾರುಕಟ್ಟೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿಷಾದಿಸಿದರು.

ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿವೆ,ಆದ್ದರಿಂದ ಬಟ್ಟೆ ಕೈ ಚೀಲಗಳನ್ನು ಬಳಕೆ ಮಾಡಿ ಪರಿಸರದ ಜತೆ ಜೀವ ವೈವಿದ್ಯತೆ ಸಂರಕ್ಷಿಸಲು ಜನರು ಮುಂದಾಗಬೇಕು ಎಂದು ನಜರ್ಬಾದ್ ನಟರಾಜ್ ಮನವಿ ಮಾಡಿದರು.

ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಎಸ್ ಎನ್ ರಾಜೇಶ್, ಗುರುರಾಜ್ ಶೆಟ್ಟಿ, ರವಿಚಂದ್ರ ಮತ್ತಿತರರು ಹಾಜರಿದ್ದರು.

ದೇವರಾಜ ಮಾರುಕಟ್ಟೆಯಲ್ಲಿ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ Read More

ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದ ಯುವಕರು

ಮೈಸೂರು: ಶ್ರಾವಣ ಮಾಸದವಿಪರೀತ
ಚಳಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬಳಗದ
ಯುವಕರು ನಗರದ ರೈಲ್ವೆ ನಿಲ್ದಾಣ ಮತ್ತಿತರೆಡೆ ನಿರಾಶ್ರಿತರಿಗೆ ಕಂಬಳಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ರೈಲು ನಿಲ್ದಾಣ, ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ ಸುತ್ತಮುತ್ತ, ರಸ್ತೆ ಬದಿಯಲ್ಲಿ ಮಲಗಿದ್ದ ನಿರಾಶ್ರಿತರು ಹಾಗೂ ಬಡವರಿಗೆ
ಉಚಿತವಾಗಿ ಹೊದಿಕೆ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.ಈ ಸೇವಾ ಕಾರ್ಯಕ್ಕೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು
ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋದಕ್ಕೂ ಆಗುವುದಿಲ್ಲ, ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ರಮೇಶ್ ರಾಮಪ್ಪ, ಜಿ ರಾಘವೇಂದ್ರ, ದಿನೇಶ್, ಎಸ್ ಎನ್ ರಾಜೇಶ್,ರವಿಚಂದ್ರ, ಮೊಹನ್,ಬೈರತಿ ಲಿಂಗರಾಜು, ಅಮಿತ್ ಮತ್ತಿತರರು ಹಾಜರಿದ್ದರು.

ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದ ಯುವಕರು Read More

ಚಾಮರಾಜ ಒಡೆಯರ್ ಮೈಸೂರಿಗರ ಮನದಲ್ಲಿ ಸದಾ ಜೀವಂತ- ನಜರ್ ಬಾದ್ ನಟರಾಜ್

ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಮೈಸೂರಿಗರ ಮನದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಹೇಳಿದರು.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರ
156ನೇ ಜಯಂತಿ ಪ್ರಯುಕ್ತ ಚಾಮುಂಡೇಶ್ವರಿ ಬಳಗದ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇಳೆ ಅವರು ಮಾತನಾಡಿದರು.

ಮೈಸೂರು ಇಂದು ಸಾಂಸ್ಕೃತಿಕ ನಗರಿ, ಮಲ್ಲಿಗೆ ನಗರಿ ಎಂದು ನಾನಾ ಹೆಸರುಗಳನ್ನು ಪಡೆಯಲು ಚಾಮರಾಜ ಒಡೆಯರ್ ಕೊಡುಗೆ ಅಪಾರವಾದದ್ದು ಹಾಗಾಗಿ ಮೈಸೂರಿನ ಜನತೆ ಮನದಲ್ಲಿ ಇಂದಿಗೂ ಅವರು ಜೀವಂತವಾಗಿದ್ದಾರೆ ಎಂದು ಹೇಳಿದರು.

ಅವರ ಕೊಟ್ಟಂತಹ ದಕ್ಷ ಆಡಳಿತದಿಂದ ವ್ಯಾಪಾರ, ಉದ್ಯಮ, ಕಲೆ ಸಾಹಿತ್ಯ ವಾಸ್ತು ಶಿಲ್ಪ, ವ್ಯವಸಾಯ,ಕೆರೆ,ಕಟ್ಟೆ ಕಾಲುವೆ ಆಸ್ಪತ್ರೆ ಮತ್ತು ಶಾಲಾ-ಕಾಲೇಜುಗಳ ಕಟ್ಟಡಗಳನ್ನು ಪ್ರೋತ್ಸಾಹಿಸಿ ಕಟ್ಟಿ ಬೆಳೆಸಿದ ರೀತಿ ವಿಶ್ವಕ್ಕೆ ಮಾದರಿ ಎಂದು ಹೇಳಿದರು.

ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮಪ್ಪ ರಮೇಶ್ ಮಾತನಾಡಿ,ಚಾಮರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಕರ್ನಾಟಕದಲ್ಲಿ ಅರಮನೆಗಳು ಮೃಗಾಲಯಗಳನ್ನು ನಿರ್ಮಿಸಿ ಇಡೀ ವಿಶ್ವವೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ನುಡಿದರು.

ಈ ವೇಳೆ ರಾಜೀವ್ ಗಾಂಧಿ ಪಂಚಾಯತ್ ಕಾಂಗ್ರೆಸ್ ನ ಕಾರ್ಯದರ್ಶಿ ಲೋಕೇಶ್, ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಫ್ರಾನ್ಸಿಸ್, ಚಾಮುಂಡೇಶ್ವರಿ ಬಳಗದ ಮಂಜುನಾಥ್,ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡೈರಿ ವೆಂಕಟೇಶ್, ಸೇವಾದಾಳ ಮೋಹನ್, ಕಡಕೋಳ ಶಿವಲಿಂಗ,ರಾಮಚಂದ್ರು, ರಾಕೇಹ್, ನವೀನ್ ಉಪಸ್ಥಿತರಿದ್ದರು.

ಚಾಮರಾಜ ಒಡೆಯರ್ ಮೈಸೂರಿಗರ ಮನದಲ್ಲಿ ಸದಾ ಜೀವಂತ- ನಜರ್ ಬಾದ್ ನಟರಾಜ್ Read More

ರಾಮಕೃಷ್ಣ ಪರಮಹಂಸರು ಭಾರತ ಕಂಡ ಶ್ರೇಷ್ಠ ಯೋಗಿ-ನಜರ್ ಬಾದ್ ನಟರಾಜ್

ಮೈಸೂರು: ರಾಮಕೃಷ್ಣ ಪರಮಹಂಸರು ಭಾರತ ದೇಶ ಕಂಡ ಯೋಗಿಯೂ ಹೌದು ಸಂತರು ಕೂಡ ಹೌದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಬಣ್ಣಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಆಂದೋಲನ ಸರ್ಕಲ್ ಬಳಿ ಚಾಮುಂಡೇಶ್ವರಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ರಾಮಕೃಷ್ಣ ಪರಮಹಂಸರ 187ನೇ ಜಯಂತಿ ವೇಳೆ ಪರಮಹಂಸರ ಪ್ರತಿಮೆಗೆ ಮಾಲರ್ಪಣೆ ಮಾಡಿದ ವೇಳೆ ಅವರು ಮಾತನಾಡಿದರು.

ಸರ್ವ ಧರ್ಮ ಸಮಾನತೆಗೆ ಹೆಚ್ಚು ಒತ್ತು ನೀಡಿದ್ದ ಪರಮಹಂಸರು ಎಲ್ಲಾ ಧರ್ಮಗಳು ಒಂದೇ ಎಂಬ ಸಾರವನ್ನು ಸಮಾಜಕ್ಕೆ ತಿಳಿಸಲು ಮುಂದಾದರು. ಇಂತಹ ಮಹಾನ್‌ ವ್ಯಕ್ತಿಯನ್ನು ಅವರ ಜನ್ಮದಿನದಂದು ನೆನೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಕರ್ತವ್ಯ ಎಂದು ಹೇಳಿದರು.

ಕಾಳಿ ದೇವಿಯ ಮಹಾನ್ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ನಮ್ಮಲ್ಲಿರುವ ಭ್ರಮೆಯನ್ನು ನಾವು ಮೊದಲು ತೊಡೆದು ಹಾಕಬೇಕು ಆಗ ಮಾತ್ರ ನಾವು ಜ್ಞಾನವನ್ನು ಪಡೆಯಬಹುದು ಎಂದು ಜ್ಞಾನೋದಯದ ಮಾರ್ಗವನ್ನು ನೀಡಿದ ಮಹಾನ್ ಚೇತನ ಎಂದು ನಜರ್ ಬಾದ್ ನಟರಾಜ್ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಳನಿ, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮಾರಾಟಿ ಖ್ಯಾತನಹಳ್ಳಿ,ಲೋಕೇಶ್,ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ ರಾಮಪ್ಪ, ಕಾಂಗ್ರೆಸ್ ಮುಖಂಡರಾದ ಕಡಕೋಳ ಶಿವಲಿಂಗ, ಡೈರಿ ವೆಂಕಟೇಶ್, ರಾಕೇಶ್, ಮತ್ತು ಮಹಿಳಾ ಮುಖಂಡರಾದ ಲಕ್ಷ್ಮಿ ಕಿರಣ ಮಾದೇಗೌಡ,ರಶ್ಮಿ, ರಾಧಿಕಾ ಮತ್ತಿತರರು ಪಾಲ್ಗೊಂಡಿದ್ದರು.

ರಾಮಕೃಷ್ಣ ಪರಮಹಂಸರು ಭಾರತ ಕಂಡ ಶ್ರೇಷ್ಠ ಯೋಗಿ-ನಜರ್ ಬಾದ್ ನಟರಾಜ್ Read More

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಸ್ಮರಣೀಯ:ನಜರಬಾದ್ ನಟರಾಜ್

ಮೈಸೂರು: ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೇವೆ ಎಂದಿಗೂ ಸ್ಮರಣೀಯ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹೇಳಿದರು.

ಶನಿವಾರ ಮೈಸೂರಿನ ನಜರಬಾದ್ ಚಾಮುಂಡೇಶ್ವರಿ ಬಳಗದ ಕಚೇರಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿ ಅತಿ ಕಡಿಮೆ ಸಮಯದಲ್ಲಿ ತಮ್ಮ ಉದಾತ್ತ ನೀತಿಗಳು ಮತ್ತು ಪ್ರಭಾವಶಾಲಿ ಘೋಷಣೆಗಳಿಂದ ರಾಷ್ಟ್ರದ ಆಕಾರವನ್ನು ಬದಲಾಯಿಸಿದರು ಎಂದು ಹೇಳಿದರು.

1965 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಜೈ ಜವಾನ್, ಜೈ ಕಿಸಾನ್ ಎಂಬ ಜನಪ್ರಿಯ ಘೋಷಣೆ ಮಾಡಿದರು ಎಂದು ನಜರಬಾದ್ ನಟರಾಜ್ ಸ್ಮರಿಸಿದರು.

ಹೊಯ್ಸಳ ಟ್ರಸ್ಟ್ ಸಂಸ್ಥಾಪಕ ರಾಜೇಶ್ ಪಳನಿ ಮಾತನಾಡಿ,ಶಾಸ್ತ್ರೀ ಜೀ ಅವರು ಯಾವುದೇ ಸಂದರ್ಭದಲ್ಲೂ ಶಾಂತಿ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ನಂಬಿಕೆಯ ಮಂತ್ರ ಎಂದು ನಂಬಿ ನಮಗಾಗಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಿಗೆ ಶಾಂತಿಯ ಸಂದೇಶ ಸಾರಿದ ಮಹಾನ್ ಚೇತನ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ಕಾಂಗ್ರೆಸ್ ಹಿಂದುಳಿದ ವರ್ಗದ ರಮೇಶ ರಾಮಪ್ಪ, ವರುಣ ಪ್ರಕಾಶ್, ಅಂಬಾ ಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ, ಚಾಮುಂಡೇಶ್ವರಿ ಬಳಗದ ಲೋಕೇಶ್, ಮಂಜುನಾಥ್ ಗೌಡ ಮರಟಿಕ್ಯಾತನಹಳ್ಳಿ ಮತ್ತು ಸುನಿಲ್ ನಾರಾಯಣ್,ಸೇವಾ ದಾಳ ಮೋಹನ್, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಸ್ಮರಣೀಯ:ನಜರಬಾದ್ ನಟರಾಜ್ Read More