ಪ್ರತಿಭಟನೆಗೆ ಮುಂದಾದ ಬಿಜೆಪಿಗರ ಬಂಧನ; ಬಿಡುಗಡೆ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ವಿವಿದ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ಬಂದಿಸಿ ಬಿಡುಗಡೆಗೊಳಿಸಿದ್ದಾರೆ.

ಚಾಮರಾಜನಗರದ ಕೊಳದ ಬೀದಿ ಮಂಟೇಸ್ವಾಮಿ ದೇವಸ್ಥಾನ ಹಾಗೂ ಸ್ಟೇಡಿಯಂ ಪಕ್ಕ ಸಂಚಾರಿ ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ದಿಕ್ಕಾರದ ಘೋಷಣೆಗಳನ್ನ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಬಂದಿಸಿ ನಂತರ ಬಿಡುಗಡೆಗೊಳಿಸಿದ್ದಾರೆ‌.

ಬಿಜೆಪಿ ಕಾರ್ಯಕರ್ತರಾದ ಶಿವರಾಜ್,
ಸೂರ್ಯ ಕುಮಾರ್,ಸುಂದರ್ ರಾಜ್,
ಹೌಸಿಂಗ್ ಬೋರ್ಡ್ ರಾಜು, ಮಣಿ ಕಂಠ,
ರಾಜೇಂದ್ರ, ನಂಜುಂಡ ನಾಯಕ,ಭಾಸ್ಕರ್ ,
ಕುಶಣ್ಣ,ಬುಲೆಟ್ ಚಂದ್ರು, ಕೂಡ್ಲೂರು ಶ್ರೀಧರ್ ಮೂರ್ತಿ ಮತ್ತಿತರರು ಪ್ರತಿಭಟನೆಗೆ ಮುಂದಾಗಿದ್ದರು.

ಪ್ರತಿಭಟನೆಗೆ ಮುಂದಾದ ಬಿಜೆಪಿಗರ ಬಂಧನ; ಬಿಡುಗಡೆ Read More

ಮಾಹಿತಿ ಹಕ್ಕಿನಡಿ ಕೇಳುವ ಅರ್ಜಿ ನಿರ್ಲಕ್ಷ್ಯ ಸಲ್ಲದು-ಮಾಹಿತಿ ಆಯುಕ್ತರು

ಚಾಮರಾಜನಗರ: ಉನ್ನತ ಅಧಿಕಾರಸ್ಥರಿಂದ ಹಿಡಿದು ಗ್ರಾಮ ಪಂಚಾಯಿತಿ ವರೆಗಿನ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಮಾಹಿತಿ ಹಕ್ಕಿನಡಿ ಕೇಳಲಾಗುವ ಯಾವುದೇ ಅರ್ಜಿಯನ್ನು ನಿರ್ಲಕ್ಷ್ಯ ಮಾಡದೆ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಹಾಗೂ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತನ್ನದೇ ಆದ ಕರ್ತವ್ಯಗಳನ್ನು ನಿರ್ವಹಿಸಲಿದೆ. ಕಾರ್ಯಕ್ರಮಗಳು, ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಾಶ್ವತ ಕಾರ್ಯಾಂಗವೆಂದರೆ ನೌಕರ ಶಾಹಿಗಳು. ಅಧಿಕಾರಿ, ನೌಕರರಿಗೆ ಗುರುತರ ಜವಾಬ್ದಾರಿ ಇರುತ್ತದೆ, ಜನರು ಮಾಹಿತಿ ಹಕ್ಕಿನಡಿ ಕೇಳುವ ಮಾಹಿತಿಯನ್ನು ಉದಾಸೀನ ಮಾಡದೇ ನೀಡಬೇಕು ಎಂದು ಸೂಚಿಸಿದರು.

ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಉದ್ದೇಶದೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ವ್ಯವಸ್ಥೆಯ ಲೋಪದೋಷಗಳನ್ನು ಕೇಳುವ ಹಕ್ಕು ಪ್ರಜೆಗಳಿಗಿದೆ. ಸ್ವಾತಂತ್ರ್ಯದ ಹಕ್ಕಿನಷ್ಟೇ ಮಹತ್ವ ಮಾಹಿತಿ ಹಕ್ಕಿಗೂ ಇದೆ. ನೀತಿ ನಿರೂಪಣೆ ಅನುಷ್ಠಾನ ಮಾಡುವ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮಾಹಿತಿ ಹಕ್ಕಿನ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕಿನಡಿ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಅನಗತ್ಯ ಆತಂಕ ಬೇಡ. ಕಾಯ್ದೆ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿದುಕೊಂಡರೆ ಅರ್ಜಿಯಲ್ಲಿ ಕೋರುವ ಮಾಹಿತಿಯನ್ನು ಸಮರ್ಪಕವಾಗಿ ನೀಡಬಹುದು. ಮಾಹಿತಿ ಹಕ್ಕು ಅಧಿನಿಯಮದ ಅಧ್ಯಾಯಗಳು, ಕಲಂಗಳನ್ನು ಓದಿ ಮನನ ಮಾಡಿಕೊಂಡಿರಬೇಕು. ಮಾಹಿತಿ ಆಯೋಗ, ನ್ಯಾಯಾಲಯಗಳು ನೀಡಿರುವ ಆದೇಶ ತೀರ್ಪುಗಳ ಬಗ್ಗೆ ತಿಳಿದುಕೊಂಡಿರಬೇಕು. ಇದರಿಂದ ಮಾಹಿತಿ ದಾಖಲೆಗಳನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿವೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಉತ್ಸಾಹದಿಂದ ಮುಂದಾಗಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕರ ದೂರುಗಳಿಗೆ ಆದ್ಯತೆ ಕೊಡಬೇಕು. ಕಡತಗಳ ನಿರ್ವಹಣೆ ಸಮರ್ಪಕವಾಗಿ ಇರಬೇಕು. ವಿಳಂಬ ಧೋರಣೆ ತೋರಬಾರದು ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಅವರು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗುವ ಅರ್ಜಿಗಳಿಗೆ ಸಕಾಲದಲ್ಲಿ ಅಧಿಕಾರಿಗಳು ದಾಖಲೆ, ಮಾಹಿತಿಯನ್ನ ನೀಡಬೇಕು. ಮಾಹಿತಿ ಹಕ್ಕು ಕಾರ್ಯಾಗಾರಗಳಲ್ಲಿ ಸಲಹೆ ಮಾರ್ಗದರ್ಶನ ಪಡೆದು ಅರ್ಜಿ ವಿಲೇವಾರಿಯಲ್ಲಿ ಸಮರ್ಪಕ ಕ್ರಮಗಳಿಗೆ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ಹಕ್ಕಿನಡಿ ಕೇಳುವ ಅರ್ಜಿ ನಿರ್ಲಕ್ಷ್ಯ ಸಲ್ಲದು-ಮಾಹಿತಿ ಆಯುಕ್ತರು Read More

ಚಾ.ನಗರದಲ್ಲಿ ನಾಯಕ ಸಮುದಾಯದಿಂದ ಭಾರೀ ಪ್ರತಿಭಟನೆ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಜ್ಯೋತಿಗೌಡನ ಪುರ ಗ್ರಾಮದಲ್ಲಿ ಅಂಬೇಡ್ಕ‌ರ್ ಭಾವಚಿತ್ರವಿರುವ ಪ್ಲೆಕ್ಸ್ ಹಾಗೂ ಬುದ್ಧನ ಮೂರ್ತಿ ವಿರೂಪಗೊಳಿಸಿ ದವರನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಭಾರೀ ಪ್ರತಿಭಟನೆ ನಡೆಯಿತು.

ಅಂಬೇಡ್ಕ‌ರ್ ಭಾವಚಿತ್ರವಿರುವ ಪ್ಲೆಕ್ಸ್ ಹಾಗೂ ಬುದ್ಧನ ಮೂರ್ತಿ ವಿರೂಪ ಗೊಳಿರುವ ನೈಜ ಅಪರಾಧಿಗಳನ್ನು ಬಂಧಿಸಿ ನಿರಪರಾಧಿಗಳನ್ನು ಬಿಡುಗಡೆಗೊಳಿ ಸಬೇಕೆಂದು ಆಗ್ರಹಿಸಿ ಜಿಲ್ಲಾ ನಾಯಕ ಸಮುದಾಯದ ವತಿಯಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ನಗರದ ಮಾರಿಗುಡಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಚಾ.ನಗರದಲ್ಲಿ ನಾಯಕ ಸಮುದಾಯದಿಂದ ಭಾರೀ ಪ್ರತಿಭಟನೆ Read More

ಅಂಬೇಡ್ಕರ್ ಪ್ಲೆಕ್ಸ್ ವಿರೂಪ, ಬುದ್ದನ ಪ್ರತಿಮೆ ದ್ವಂಸ: ಆರೋಪಿ ಬಂಧನ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮದಲ್ಲಿರುವ ಲುಂಬಿಣಿ ಬುದ್ಧ ವಿಹಾರದಲ್ಲಿದ್ದ ಬುದ್ಧ ವಿಗ್ರಹ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಗ್ರಹ ಒಡೆದು ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಪ್ಲೆಕ್ಸ್ ಹರಿದುಹಾಕಿದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಜ್ಯೋತಿಗೌಡನಪುರ ಗ್ರಾಮದ ಮುಖಂಡರಾದ ಜೆ.ಸಿ.ರಾಘವೇಂದ್ರ ಪ್ರಸನ್ನ‌ ಅವರು ನೀಡಿದ ದೂರಿನ ಮೇರೆಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಪ್ರಾರಂಭಿಸಿದ ಪೊಲೀಸರು ಅದೇ ಗ್ರಾಮದ ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಸಾಕ್ಷ್ಯ ಕಲೆ ಹಾಕಿ ಬಂದಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧೀಕ್ಷಕರಾದ
ಡಾ. ಬಿ.ಟಿ. ಕವಿತಾ ತಿಳಿಸಿದರು.

ಪ್ರಕರಣ ಅತೀಸೂಕ್ಷ್ಮವಾಗಿದ್ದರಿಂದ ಆರೋಪಿಗಳ ಪತ್ತೆಗೆ ಡಾ. ಬಿ.ಟಿ. ಕವಿತಾ, ಅವರ ಮಾರ್ಗದರ್ಶನದಲ್ಲಿ ಒಟ್ಟು 7 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಜ್ಯೋತಿಗೌಡನಪುರ ಹಾಗೂ ಸುತ್ತ ಮುತ್ತಲ ವ್ಯಾಪ್ತಿಯಲ್ಲಿ 86 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಿ, ಒಟ್ಟು 1877 ಕಾಲ್‌ಡೀಟೇಲ್ಸ್ ರೆಕಾರ್ಡ್ಸ್‌ಗಳು ಹಾಗೂ 24 ಸ್ಥಳಗಳ ಸೆಲ್ ಐ.ಡಿ. ಟವರ್‌ಡಂಪ್ ವಿವರಗಳನ್ನು ಪಡೆದು ಪರಿಶೀಲಿಸಲಾಯಿತು.

ಇತರೆ ತಾಂತ್ರಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ತನಿಖೆಯಲ್ಲಿ ಅಳವಡಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಯಿತು.

ಚಾಮರಾಜನಗರ ಟೌನ್‌ ಸುತ್ತಮುತ್ತಲ ಲಾಡ್ಜ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತಪಾಸಣೆ ಮಾಡಿ ಮಾಹಿತಿ ಕಲೆಹಾಕಿದ ಸ್ಥಳೀಯ ಬೀಟ್ ಸಿಬ್ಬಂದಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು, ಸ್ಥಳೀಯ ಬಾತ್ಮೀದಾರರುಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಯಿತು ಎಂದು ‌ವಿವರಿಸಿದರು.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸುಮಾರು 2 ತಿಂಗಳ ಹಿಂದೆ ಮದ್ಯಪಾನ ಮಾಡಿ ಗ್ರಾಮದ ರಮೇಶಣ್ಣ ಅವರ ಅಂಗಡಿ ಬಳಿ ಪರಿಶಿಷ್ಟ ಜನಾಂಗದ ಮಹಿಳೆಯರೊಂದಿಗೆ ಜಗಳ ಮಾಡಿಕೊಂಡಿದ್ದ, ಆ ಸಮಯದಲ್ಲಿ ಆರೋಪಿತ ತನ್ನ ಚಪ್ಪಲಿಯಿಂದ ಮಹಿಳೆಗೆ ಹೊಡೆದಿದ್ದಾನೆ.

ಈ ಘಟನೆಗೆ ಸಂಬಂದಿಸಿದಂತೆ ಗ್ರಾಮದ ಬಸವನಕಟ್ಟಿ ದೇವಸ್ಥಾನದಲ್ಲಿ ಊರಿನ ಯಜಮಾನರು ನ್ಯಾಯ ಪಂಚಾಯಿತಿ ಸೇರಿಸಿ, ಆತನಿಗೆ 60,000 ರೂ. ದಂಡ ಹಾಕಿದ್ದಾರೆ, ಅದಕ್ಕೆ ಆರೋಪಿ ಹಾಗೂ ಆತನ ಮನೆಯವರು ಒಪ್ಪಿಕೊಂಡು, ತನ್ನ ಮನೆಯಲ್ಲಿ ಇದ್ದ ಚಿನ್ನವನ್ನು ಗಿರವಿ ಇಟ್ಟು 30.000 ರೂ ದಂಡ ಪಾವತಿಸಿದ್ದಾರೆ.

ಉಳಿದ ದಂಡದ ಹಣವನ್ನು ತನ್ನ ಹೋಂಡಾ ಶೈನ್ ಮೋಟಾರ್ ಬೈಕನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ದಂಡ ಕಟ್ಟಿದ್ದಾನೆ.

ಇದೇ ವೈಷಮ್ಯದಿಂದ ಆರೋಪಿಯು 23/10/2025 ರಂದು ರಾತ್ರಿ ಮದ್ಯಪಾನ ಮಾಡಿ ಮೇಲಿನ ಕೃತ್ಯವನ್ನು ಎಸಗಿರುವುದು ಖಚಿತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೃಢಪಟ್ಟಿದೆ.ಹಾಗಾಗಿ ಆರೋಪಿಯನ್ನು ಬಂಧುಸಿ ಮುಂದಿನ ಕಾನೂನುಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕಿ ಡಾ. ಬಿ.ಟಿ. ಕವಿತ ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ, ಶಶಿಧರ್ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಸ್ನೇಹರಾಜ್, ಕೊಳ್ಳೇಗಾಲ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಧರ್ಮೇಂದ್ರ ಅವರ ನೇತೃತ್ವದಲ್ಲಿ .ಶ್ರೀಕಾಂತ್, (ಸಿಪಿಐ ಯಳಂದೂರು ವೃತ್ತ,) ಸಿ.ಪಿ.ನವೀನ್, (ಪಿ.ಐ., ಪೂರ್ವ ಠಾಣೆ, ಚಾಮರಾಜನಗರ,) ಚಿಕ್ಕರಾಜಶೆಟ್ಟಿ, (ಪಿ.ಐ., ರಾಮಾಪುರ ಠಾಣೆ,) ಎಸ್.ಎಲ್.ಸಾಗರ್, (ಸಿಪಿಐ ಸಂತೇಮರಹಳ್ಳಿ ವೃತ್ತ, ) ಸಿ.ಆನಂದಮೂರ್ತಿ, (ಪಿಐ, ಹನೂರು ಠಾಣೆ,) ತಾಜುದ್ದಿನ್, (ಪಿಎಸ್‌ಐ ಸಂತೇಮರಹಳ್ಳಿ ಠಾಣೆ,)
ಮಂಜುನಾಥ್, (ಪಿಎಸ್‌ಐ, ಮಹಿಳಾ ಠಾಣೆ,) ಆರ್.ವೆಂಕಟೇಶ್, (ಪೂರ್ವ ಠಾಣೆ, ಚಾಮರಾಜನಗರ,) ಮಹೇಶ್, (ಪಿಎಸ್‌ಐ, ತೆರಕಣಾಂಬಿ ಠಾಣೆ) ಹಾಗೂ ಚಾಮರಾಜನಗರ ಉಪವಿಭಾಗ ಹಾಗೂ ಕೊಳ್ಳೇಗಾಲ ಉಪವಿಭಾಗದ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಮೈಸೂರು ಜಿಲ್ಲೆಯ ತಾಂತ್ರಿಕ ವಿಭಾಗದ ಸಿಬ್ಬಂದಿ,ಎಸ್ಒಸಿಒ ತಂಡ, ಶ್ವಾನದಳ, ಬೆರಳುಮುದ್ರೆ ಘಟಕ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು ಅಲ್ಲದೆ ೪೫ ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗವಹಿಸಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ ಎಂದು ವಿವರಿಸಿದರು.

ಅಂಬೇಡ್ಕರ್ ಪ್ಲೆಕ್ಸ್ ವಿರೂಪ, ಬುದ್ದನ ಪ್ರತಿಮೆ ದ್ವಂಸ: ಆರೋಪಿ ಬಂಧನ Read More

ಮಾನವ-ವನ್ಯಜೀವಿ ಸಂಘರ್ಷ ತಹಬಂದಿಗೆ ಬಾರದಿದ್ದರೆ ಸಫಾರಿ ಬಂದ್: ಈಶ್ವರ ಖಂಡ್ರೆ

ಚಾಮರಾಜನಗರ, ನ.2: ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬಂದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವನ್ಯಜೀವಿ- ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಬೇಕಾಗುತ್ತದೆ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಂದಾಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯದ ಕೊರತೆ, ಪರಸ್ಪರ ದೋಷಾರೋಪವನ್ನು ಸರ್ಕಾರ ಕ್ಷಮಿಸುವುದಿಲ್ಲ ಸಬೂಬುಗಳಿಗೆ ಅವಕಾಶವಿಲ್ಲ ಎಂದು ಕಠಿಣವಾಗಿ ಹೇಳಿದರು.

ಆನೆ, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ನಿಮಗೂ ತಿಳಿದಿದೆ. ಹೆಚ್ಚುತ್ತಿರುವ ಪ್ರಾಣಿಗಳಿಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ ಇರುವ ಕಾಡಿನಲ್ಲೇ ವನ್ಯಜೀವಿಗಳಿಗೆ ಸೂಕ್ತ ಆಹಾರ ಸಿಗುವಂತೆ ಮಾಡಲು ಕಾರ್ಯಯೋಜನೆ ರೂಪಿಸಿ ಎಂದು ಆದೇಶಿಸಿದರು.

ಮಾಂಸಹಾರಿ ಕಾಡು ಪ್ರಾಣಿಗಳಿಗೆ ಕಾಡಿನೊಳಗೆ ಜಿಂಕೆ, ಕಡವೆ ಇತ್ಯಾದಿ ಲಭಿಸಬೇಕಾದರೆ, ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು, ಸೊಪ್ಪು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಲಾಂಟನಾ, ಸನ್ನಾ ಇತ್ಯಾದಿ ಕಳೆ ತೆಗೆದು ಹೆಚ್ಚು ಸೊಪ್ಪು, ಹುಲ್ಲು ಲಭಿಸುವಂತೆ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಇತ್ತೀಚೆಗೆ ಸರಗೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಸರಗೂರು ಅಥವಾ ಎಚ್.ಡಿ.ಕೋಟೆ ಇಲ್ಲವೆ ನಂಜನಗೂಡಿನಲ್ಲಿ ಮಾಡಿಸಬಹುದಾಗಿತ್ತು. ಮೈಸೂರಿಗೆ ತರುವ ಅಗತ್ಯವೇನಿತ್ತು. ಅನಗತ್ಯವಾಗಿ ಸರ್ಕಾರದ ಮೇಲೆ ಸಚಿವರ ಮೇಲೆ ಆರೋಪ ಬರುವಂತೆ ಮಾಡಬೇಡಿ. ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದು ಕಡಕ್ಕಾಗಿ ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಯಾರೂ ಮೃತಪಡುವುದು ಬೇಡ. ಒಂದೊಮ್ಮೆ ಯಾರಾದರೂ ಮೃತಪಟ್ಟರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ತ್ವರಿತವಾಗಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಆದಷ್ಟು ಶೀಘ್ರ ಪಾರ್ಥಿವ ಶರೀರ ಒಪ್ಪಿಸಿ, ಅಂತ್ಯಕ್ರಿಯೆ ಆಗುವವರೆಗೂ ಇದ್ದು ಪರಿಸ್ಥಿತಿ ನಿಯಂತ್ರಣದಲ್ಲಿಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಕೆ. ವೆಂಕಟೇಶ್, ಡಾ. ಎಚ್.ಸಿ. ಮಹದೇವಪ್ಪ, ಲೋಕಸಭಾ ಸದಸ್ಯರಾದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವ ನಾರಾಯಣ್, ಅನಿಲ್ ಚಿಕ್ಕಮಾದು,ಸಿ.ಎನ್.ಮಂಜೇಗೌಡ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ಮೈಸೂರು, ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

ಮಾನವ-ವನ್ಯಜೀವಿ ಸಂಘರ್ಷ ತಹಬಂದಿಗೆ ಬಾರದಿದ್ದರೆ ಸಫಾರಿ ಬಂದ್: ಈಶ್ವರ ಖಂಡ್ರೆ Read More

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ/ಕೊಳ್ಳೇಗಾಲ: ವಿವಾಹಿತೆ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಆತನ ಜತೆ‌ ಸೇರಿ ಪತಿಯನ್ನು ಕೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ
ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಕೊಲೆಯಾದ ದುರ್ದೈವಿ.

ಆರೋಪಿಗಳಾದ ರಾಜಶೇಖರ್ ಅವರ ಪತ್ನಿ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರನಿಗೆ ಅಪರ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯದ ನ್ಯಾಧೀಶರಾದ‌ ಟಿ.ಸಿ.ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ವಿವರ:
ರಾಜಶೇಖರಮೂರ್ತಿ ಅವರೊಂದಿಗೆ ನಂದಿನಿ ಮದುವೆಯಾಗಿ ಕಳೆದ 13 ವರ್ಷಗಳಿಂದ ಸಂಸಾರ ನಡೆಸುತ್ತಾ ಪ್ರಾರಂಭದಲ್ಲಿ ಅನ್ನೋನ್ಯವಾಗಿದ್ದಳು.

ನಂತರ ದಿನಕರನೊಂದಿಗೆ ಆಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಗ್ರಾಮದ ಮುಖಂಡರ ಸಮಕ್ಷಮದಲ್ಲಿ 2-2-2021 ಮತ್ತು 20-4-2021 ರಂದು ನ್ಯಾಯ ಪಂಚಾಯ್ತಿ ಸೇರಿಸಿ ಪ್ರತ್ಯೇಕ ಒಪ್ಪಂದ ಮಾಡಿಸಿ ಒಟ್ಟು 3 ಒಪ್ಪಂದ ಪತ್ರಗಳನ್ನು ಮಾಡಿಸಲಾಗಿತ್ತು.

ಆದರೂ ನಂದಿನಿ ಮತ್ತು ದಿನಕರ ಪುನಃ ಸಂಪರ್ಕದಲ್ಲಿದ್ದರು.23-06-2021 ರಂದು ರಾಜಶೇಖರಮೂರ್ತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಕರ ಮನೆಗೆ ಬಂದಿದ್ದಾನೆ.

ಸ್ವಲ್ಪ ಹೊತ್ತಿನಲ್ಲೇ ರಾಜಶೇಖರಮೂರ್ತಿ ಕೂಡಾ ಮನೆಗೆ ಬಂದಿದ್ದಾರೆ. ಆಗ ನಂದಿನಿ ಮತ್ತು ದಿನಕರ ಜೊತೆಯಲ್ಲಿ ಇದ್ದುದ್ದನ್ನು ನೋಡಿ ಆಕ್ರೋಶಗೊಂಡು ದಿನಕರನ ಮೇಲೆ ಗಲಾಟೆ ಮಾಡಿದ್ದಾರೆ.

ಆಗ ನಂದಿನಿ ಮನೆಯಲ್ಲಿದ್ದ ಖಾರದ ಪುಡಿಯನ್ನು ಗಂಡನ ಕಣ್ಣಿಗೆ ಎರಚಿ ಮಮ್ಮಟ್ಟಿಗೆ ಹಾಕುವ ಕಾವಿನಿಂದ ರಾಜಶೇಖರಮೂರ್ತಿ ಅವರ ತಲೆಗೆ ಹೊಡೆದಿದ್ದಾಳೆ. ನಂತರ ದಿನಕರ ಕೂಡಾ ಅದೇ‌ ಕಾವು ಪಡೆದು ರಾಜಶೇಖರಮೂರ್ತಿ ಅವರ ಮುಖಕ್ಕೆ ಹೊಡೆದಾಗ ಆತ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.ಅವರ ಮೂಗಿನಿಂದ ರಕ್ತ ಬಂದುದನ್ನು ಕಂಡು ಆರೋಪಿಗಳಿಬ್ಬರೂ ಈ ಕೃತ್ಯವನ್ನು ಮರೆಮಾಚುವ ಸಲುವಾಗಿ ರಾಜಶೇಖರಮೂರ್ತಿಯ ಕೈ ಕಾಲು ಹಿಡಿದು ವಾಸದ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆ ಕೆಳಗಾಗಿ ಹಾಕಿ ಟಾಯ್ಲೆಟ್ ಗುಂಡಿಯ ಸಿಮೆಂಟ್ ಪ್ಲೇಟನ್ನು ಮುಚ್ಚಿಬಿಟ್ಟಿದ್ದಾರೆ.

ಜತೆಗೆ ರಾಜಶೇಖರಮೂರ್ತಿಯ ಬಟ್ಟೆಗಳು, ಹಲ್ಲೆಗೆ ಉಪಯೋಗಿಸಿದ ಕಾವು ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಶ್ಯಾಂಪು ಪ್ಯಾಟ್ ಬಳಸಿ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

ನಂತರ ನಂದಿನಿ ಧರಿಸಿದ್ದ ನೈಟಿಯನ್ನು ಒಗೆದು ಸಾಕ್ಷಿ ನಾಶಪಡಿಸಿ ಮಾರನೇ ದಿನ ಏನೂ ತಿಳಿಯದವಳಂತೆ ರಾಜಶೇಖರಮೂರ್ತಿ ಕೆಲಸಕ್ಕೆ ಹೋಗಿದ್ದಾನೆಂದು ಆತನ ತಂದೆ ತಾಯಿಗೆ ತಿಳಿಸಿದ್ದಾಳೆ.

ರಾಜಶೇಖರಮೂರ್ತಿ ಅವರ ಸಹೋದರಿಯ ಮಕ್ಕಳನ್ನು ಬಳಸಿಕೊಂಡು ಟಾಯ್ಲೆಟ್ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ.

ಒಂದೆರಡು ದಿನವಾದರೂ ಮಗ ಕಾಣದೆ ಹೋದಾಗ ರಾಜಶೇಖರಮೂರ್ತಿ ಅವರ ತಂದೆ ಮಗ ಕಾಣೆಯಾದ ಬಗ್ಗೆ ಠಾಣೆಗೆ ದೂರನ್ನು ನೀಡಿದ್ದಾರೆ.

ನಂತರ ಮನೆಯ ಹಿಂಭಾಗ ಟಾಯ್ಲೆಟ್ ಗೊಂಡಿಯ ಸುತ್ತ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಅನುಮಾನದಿಂದ ಗುಂಡಿಯ ಸಿಮೆಂಟ್ ಪ್ಲೇಟನ್ನು ಗ್ರಾಮಸ್ಥರ ಸಮ್ಮುಖದಲ್ಲಿ ತೆಗೆಸಿ ನೋಡಿದಾಗ ರಾಜಶೇಖರಮೂರ್ತಿಯ ಶವ ಕೊಳೆತ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ.

ನಂತರ ಮಗನ ಕೊಲೆಯಾದ ಬಗ್ಗೆ ತಂದೆ ನೀಡಿದ ದೂರಿನ ಆಧಾರದಲ್ಲಿ ತನಿಖಾಧಿಕಾರಿ ಸಂತೋಷ್ ಕಶ್ಯಪ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರ ರಣದಲ್ಲಿ ಎ 1 ಆರೋಪಿ ನಂದಿನಿ,ಎ2 ಆರೋಪಿ ದಿನಕರ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಸಿ.ಡಿ ಗಿರೀಶ್, ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಳ್ಳೇಗಾಲ ಇವರು ಸರ್ಕಾರದ ಪರವಾಗಿ, ವಾದ ಮಂಡಿಸಿದರು.

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ Read More

ಪ್ಲೆಕ್ಸ್ ಹರಿದ ಕಿಡಿಗೇಡಿಗಳು: ಗ್ರಾಮಸ್ಥರ ಪ್ರತಿಭಟನೆ

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಪ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ
ನಡೆದಿದೆ.

ಗುರುವಾರ ರಾತ್ರಿ ಗ್ರಾಮದಲ್ಲಿ ಅವಳಡಿಸಿದ್ದ ಅಂಬೇಡ್ಕ‌ರ್ ಪ್ಲೆಕ್ಸ್ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ದ ಗ್ರಾಮಸ್ಥರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಅವರ ಪ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಅವಮಾನಿಸಿದ್ದಲ್ಲದೆ ಗ್ರಾಮದಲ್ಲಿರುವ ಲುಂಬಿನಿ ಬುದ್ಧವಿಹಾರದಲ್ಲಿ ಬುದ್ಧ ಪ್ರತಿಮೆಯನ್ನೂ ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹಾಗೂ ಪೂರ್ವ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳಲಾಗವುದು ಎಂದು ಎಸ್ಪಿ ಕವಿತಾರವರು ತಿಳಿಸಿದ್ದಾರೆ.

ಪ್ಲೆಕ್ಸ್ ಹರಿದ ಕಿಡಿಗೇಡಿಗಳು: ಗ್ರಾಮಸ್ಥರ ಪ್ರತಿಭಟನೆ Read More

ಸುಳ್ಳು ಪ್ರಕರಣ ದಾಖಲಿಸಿದ್ದರ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು! ಎಸ್ಪಿ ಕಚೇರಿ ಮುತ್ತಿಗೆ ಯತ್ನ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವೀರನಪುರ ಗ್ರಾಮ ಸಭೆಯಲ್ಲಿ ಅಶಾಂತಿ ಮೂಡಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ 17 ಮಂದಿಯ ಮೇಲೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಎಲ್ಲ ಸಮುದಾಯದವರು ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ
ನಡೆದಿದೆ‌.

ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಶಿವಕುಮಾರ್ ನೀಡಿದ ದೂರಿನನ್ವಯ ಗುಂಡ್ಲುಪೇಟೆ ಪೊಲೀಸರು ವೀರನಪುರ ಗ್ರಾಮದ 17 ಮಂದಿ ಮೇಲೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿದ್ದರು.

ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಸಿದ್ದಪ್ಪಾಜಿ ಹಾಗೂ ಶ್ರೀ ಮಾರಮ್ಮ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ನೀಡದೇ ಇರುವ ಬಗ್ಗೆ ಹಾಗೂ ದೇವಾಲಯಗಳ ಆಸ್ತಿಗಳ ಹರಾಜು ಹಾಕದೇ ಕೇವಲ ಒಂದು ಸಮುದಾಯದವರು ಅದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮದ 17 ಮಂದಿ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಠಾಣೆಯಲ್ಲಿ ದಾಖಲಾದ ಜಾತಿ ನಿಂದನೆ ಹಾಗೂ ಪ್ರಾಣ ಬೆದರಿಕೆ ಸುಳ್ಳು ಪ್ರಕರಣ ದಾಖಲಾಗುತ್ತಿದ್ದಂತೆ ವೀರನಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಗ್ರಾಮದಲ್ಲಿ ಎಲ್ಲ ಜಾತಿಯವರು ಅನ್ಯೋನವಾಗಿದ್ದಾರೆ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡಲು ಕೆಲವರು ಪಿತೂರಿ ನಡೆಸಿದ್ದಾರೆ. ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಜರುಗಿಸಿದರೆ ನಾವು ಬದ್ದ..ಒಂದು ವೇಳೆ ಸುಳ್ಳು ಪ್ರಕರಣ ದಾಖಲಿಸಿದ್ದೆ ಆದರೆ ಅವರ ಮೇಲೂ ಇಲಾಖಾವಾರು ಕ್ರಮ ಜರುಗಿಸಿ ಎಂದು ಪಟ್ಟಣ ಠಾಣಾ ಮುತ್ತಿಗೆ ಹಾಕಿ ಜನರು ಆಗ್ರಹಿಸಿದರು.

ಕೆಲ ದಲಿತ ಸಮುದಾಯದವರು , ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ವಾದಿಸಿ, ನ್ಯಾಯ ಸಿಗದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಬಂದಾಗ ಕಚೇರಿ ಮುಂಭಾಗ ಪೊಲಿಸರನ್ನು ನಿಯೋಜಿಸಿ ನಂತರ ಪಟ್ಟಣ ಠಾಣೆಗೆ ಮಾರ್ಗ ಬದಲಿಸಿ, ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಸುಳ್ಳು ಪ್ರಕರಣ ದಾಖಲಿಸಿದ್ದರ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು! ಎಸ್ಪಿ ಕಚೇರಿ ಮುತ್ತಿಗೆ ಯತ್ನ Read More

ರಾಷ್ಟ್ರೀಯ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಶನಿವಾರ ಸಂಜೆ ಜರುಗಿತು.

ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವೃತ್ತಗಳಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆಯಿತು.

ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಕಟ್ಟಿದ್ದ ಭಗವಧ್ವಜ, ಕೇಸರಿ ತೋರಣಗಳು ಹಾಗೂ ವಿಶೆಷವಾಗಿ ಮನೆಗಳ ಮುಂದೆ ಪಥ ಸಂಚಲನಕ್ಕಾಗಿ ಹಾಕಲಾಗಿದ್ದ ರಂಗೋಲಿಗಳು ಜನರನ್ನು ಮತ್ತಷ್ಟು ಆಕರ್ಷಿಸುತ್ತಿದ್ದವು.

450ಕ್ಕೂ ಹೆಚ್ಚು ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಈ‌ ವೇಳೆ ಸ್ವಯಂ ಸೇವಕರಿಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವರ್ತಕರು ಹೂಮಳೆ ಸುರಿಸಿ ಭಾರತ ಮಾತೆಗೆ ಜೈಕಾರ ಹಾಕಿದರು.

ಎಸ್ಪಿ ಕವಿತಾ, ಡಿವೈಎಸ್ಪಿ ಸ್ನೇಹರಾಜ್ ಹಾಗೂ ಇನ್ಸ್ ಪೆಕ್ಟರ್ ಅವರು ಗಳು ಸೂಕ್ತ ಬಂದೂಬಸ್ತ್ ಮಾಡಿದ್ದರು.

ರಾಷ್ಟ್ರೀಯ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ Read More

ಗಣಪತಿ ವಿಸರ್ಜನೆ: ವ್ಯಾಪಕ ಬಂದೂಬಸ್ತ್;ಪಥಸಂಚಲನ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪಟ್ಟಣದಲ್ಲಿ ಪ್ರತಿಷ್ಟಾಪಿಸಲಾದ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥಸಂಚಲನ ನಡಸಿದರು.

ಚಾಮರಾಜನಗರ ಎಸ್ಪಿ ಬಿಟಿ ಕವಿತಾ ಅವರ ನೇತೃತ್ವದಲ್ಲಿ ಎಸ್ಪಿ, 5 ಡಿವೈಸ್ಪಿ,14ಪಿಐ, 36ಪಿಎಸ್ಐ, 58 ಎ ಎಸ್ಐ,362 ಪೇದೆ,ಮುಖ್ಯಪೇದೆ, 22 ಮಹಿಳಾ ಸಿಬ್ಬಂದಿ, 11 ವಿಡಿಯೋಗ್ರಾಪರ್, 200 ಗೃಹರಕ್ಷಕ ಸಿಬ್ಬಂದಿ, 5 ಕೆಎಸ್ಆರ್ ಪಿ ಪಾರ್ಟಿ,6 ಡಿಎಆರ್ ಸೇರಿದಂತೆ ಒಟ್ಟು 709 ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಗಣಪತಿ ವಿಸರ್ಜನಾ ಮಹೋತ್ಸದ ಮೆರವಣಿಗೆ ಬೀದಿಗಳಲ್ಲಿ ಎರಡು ಡ್ರೋನ್ ಬಳಸುವುದರ ಜೊತೆಗೆ ವಿವಿದೆಡೆ ಗಗನ ಪಹರೆಗಳನ್ನು ನಿಯೋಜಿಸಲಾಗಿದೆ.

ಗಣಪತಿ ವಿಸರ್ಜನೆ: ವ್ಯಾಪಕ ಬಂದೂಬಸ್ತ್;ಪಥಸಂಚಲನ Read More