ಚಾಮರಾಜ ಡಬಲ್ ರೋಡ್ ನಲ್ಲಿ ಕಾಣಸಿಕ್ಕ ಗೂಬೆ!

ಮೈಸೂರು: ಪಾಪದ ಗೂಬೆಯೊಂದು ಚಾಮರಾಜ ಜೋಡಿ ರಸ್ತೆಯಲ್ಲಿ ಕಣಿಸಿಕೊಂಡು ಕೆಲ ಸಮಯ ಕುಳಿತಲ್ಲೇ ಕುಳಿತು ಜನರ ಮಾತಿಗೆ ಸಿಲುಕಿ ಗಾಬರಿಯಿಂದ ಪರದಾಡಿತು.

ಪಾಪ‌ ಅದಕ್ಕೇನು ಗೊತ್ತಿತ್ತು.ತಾನೇನೊ ನಿಶಾಚರಿ.ಯಾರೂ ಇರಲ್ಲ ಅಂದುಕೊಂಡು ಚಾಮರಾಜ ಡಬಲ್‌ ರೋಡ್ ನಲ್ಲೆ ಗೋಡೆ ಮೇಲೆ ಕುಳಿತಿದೆ.ಆದರೆ ಇನ್ನೂ ಜನ ಸಂಚಾರ ನೋಡಿ ಗಾಬರಿಗೊಂಡು ಗೋಡೆ ಮೇಲೆ ಕುಳಿತು ಏನು ಮಾಡುವುದೆಂದು ತೋಚದೆ ಅತ್ತಿತ್ತ ಕತ್ತು ಕೊಂಕಿಸಿ ನೋಡುತ್ತಾ ಇತ್ತು.

ಗೂಬೇನಾ ನೋಡಿದ ಯಾರೋ ಕೆಲವರು ಅದಕ್ಕೆ ಹಾರಕ್ಕಾಗಲ್ಲ,ಸುಸ್ತಾಗಿದೆ ಬಾಯಿಗೆ ನೀರು ಬಿಡಬೇಕು ಎಂದೆಲ್ಲಾ ಮಾತನಾಡಿದಾರೆ.

ಗೂಬೆ ಇದೆಲ್ಲ ಕೇಳಿಸಿಕೊಂಡಿತೇನೊ ಎಂಬಂತೆ ಅವರೆಲ್ಲರ ಮುಂದೆಯೇ ಹಾರಿ ಅಲ್ಲೇ ಜಗಲಿಯ ಮೇಲೆ ಕುಳಿತು ಸುತ್ತಾ,ಮುತ್ತಾ ನೋಡ್ತಾ ತನಗೇನೂ ಆಗಿಲ್ಲ ನೋಡಿ ಅಂತಾ ಹಾಗೇನೆ ಹಾರಿ ಹೋಯಿತು.

ಚಾಮರಾಜ ಡಬಲ್ ರೋಡ್ ನಲ್ಲಿ ಕಾಣಸಿಕ್ಕ ಗೂಬೆ! Read More