ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ

ಮೈಸೂರು: ಸಾಮಾನ್ಯವಾಗಿ ಬೈಕ್ ನಲ್ಲಿ ಬಂದು ಕಳ್ಳರು ಚೈನ್ ಸ್ನ್ಯಾಚ್ ಮಾಡಿರೋದನ್ನ ಕೇಳಿದ್ದೇವೆ,ಆದರೆ ಮೈಸೂರಿನಲ್ಲಿ ಮಹಳೆಯೊಬ್ಬಳು ಚಿನ್ನದ ಸರ ದೋಚಿರುವ ಹೇಯ ಘಟನೆ ನಡೆದಿದೆ.

ನಗರ ಬಸ್ ನಿಲ್ದಾಣದಲ್ಲಿ
ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು 40 ಗ್ರಾಂ ಚಿನ್ನದ ಸರವನ್ನು ಮಹಿಳೆ ಕಿತ್ತು ಪರಾರಿಯಾಗಿದ್ದಾಳೆ.

ಕುವೆಂಪುನಗರ ನಿವಾಸಿ ಜ್ಯೋತಿ ಎಂಬುವರು ಚಿನ್ನದ ಸರ ಕಳೆದುಕೊಂಡಿದ್ದಾರೆ.ಈಕೆ ತಮ್ಮ ತಾಯಿ ಮನೆಗೆ ಹೋಗಿ ಹಿಂದಿರುಗುವಾಗ ನಗರ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಒಬ್ಬಳು ಚಿಲ್ಲರೆ ಕಾಸನ್ನ ಕೆಳಗೆ ಬೀಳಿಸಿದ್ದಾಳೆ.

ನಂತರ ಬಿದ್ದಿದ್ದ ಕಾಸನ್ನು ಎತ್ತಿಕೊಡುವಂತೆ ಜ್ಯೋತಿ ಅವರಿಗೆ ಕೇಳಿದ್ದಾಳೆ.ಜ್ಯೋತಿ ಕೆಳಗೆ ಬಿದ್ದ ಚಿಲ್ಲರೆ ಹಣ ತೆಗೆದುಕೊಡುವಾಗ ಕಳ್ಳ ಮಹಿಳೆ ಅದು ಹೇಗೋ 40 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾಳೆ.

ಈ ಸಂಬಂಧ ಜ್ಯೋತಿ ಅವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ Read More