ಎಸೆನ್ಸ್ ಸೇವಿಸಿ ಮೂವರು ಖೈದಿಗಳು ಸಾವು

ಮೈಸೂರು: ಬೇಕರಿ ಎಸೆನ್ಸ್ ಸೇವಿಸಿ ಆಸ್ಪತ್ರೆ ಸೇರಿದ್ದ ಮೂವರು ಖೈದಿಗಳು ಮೃತಪಟ್ಟಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಬೇಕರಿಯಲ್ಲಿ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಅನ್ನು ಖೈದಿಗಳು ಸೇವಿಸಿದ್ದರು.

ತಕ್ಷಣ ಕಾರಾಗೃಹ ಅಧಿಕಾರಿಗಳು ಮೂವರು ಖೈದಿಗಳನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು.ಅದರಲ್ಲಿ ಮಂಗಳವಾರ ಒಬ್ಬ ಖೈದಿ ಸಾವನ್ನಪ್ಪಿದ್ದ.ಬುಧವಾರ ಮತ್ತಿಬ್ಬರು ಖೈದಿಗಳು ಕೂಡಾ ಮೃತಪಟ್ಟಿದ್ದಾರೆ.

ಚಾಮರಾಜನಗರದ ನಾಗರಾಜು,
ಮೈಸೂರಿನ ಸಾತಗಳ್ಳಿಯ ಮಾದೇಶ್,ರಮೇಶ ಮೃತಪಟ್ಟ ಖೈದಿಗಳು.

ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ಅನ್ನು‌ ಡಿ. 28ರಂದು ಕಿಕ್ ಗಾಗಿ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು.

ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆಗಲೂ ಈ ಮೂವರು ವಿಷಯ ಮುಚ್ಚಿಟ್ಟಿದ್ದರು. ವೈದ್ಯರು ಈ ಬಗ್ಗೆ ಮತ್ತೆ,ಮತ್ತೆ ಪ್ರಶ್ನಿಸಿದಾಗ ಸತ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ ಸಾಕಷ್ಟು ವಿಳಂಬವಾಗಿದ್ದರಿಂದ
ಚಿಕಿತ್ಸೆ ಫಲಿಸದೆ ಮಾದೇಶ, ನಾಗರಾಜು ರಮೇಶ್ ಮೃತಪಟ್ಟಿದ್ದಾರೆ.

ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಸೆನ್ಸ್ ಸೇವಿಸಿ ಮೂವರು ಖೈದಿಗಳು ಸಾವು Read More

ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆ

ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದೆ.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಪ್ಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಪ್ಯಾಕೆಟ್ ಕಂಡು ಬಂದಿದೆ.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಪ್ಯಾಕೆಟ್ ನಲ್ಲಿ ಒಂದು ಮೊಬೈಲ್, ಬ್ಯಾಟರಿ‌ ಹಾಗೂ ಗಾಂಜಾ ಕಂಡು ಬಂದಿದೆ.

ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಕಾರಾಗೃಹದ ಗೋಡೆ ಒಳಗೆ ವಸ್ತುಗಳು ಪತ್ತೆಯಾಗಿದ್ದು,ಹೊರಗಿನಿಂದ ಅನಾಮಧೇಯ ವ್ಯಕ್ತಿಗಳು ಕಾರಾಗೃಹದ ಒಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.

ಮಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆ Read More